ಚಿಕ್ಕಬಳ್ಳಾಪುರದಲ್ಲಿ ಜಿಲ್ಲಾ ಮಟ್ಟದ ಸಿರಿಧಾನ್ಯ ಖ್ಯಾದ್ಯಗಳ ಸ್ಪರ್ಧೆ
1 min readಚಿಕ್ಕಬಳ್ಳಾಪುರದಲ್ಲಿ ಜಿಲ್ಲಾ ಮಟ್ಟದ ಸಿರಿಧಾನ್ಯ ಖ್ಯಾದ್ಯಗಳ ಸ್ಪರ್ಧೆ
ಫಿಜ್ಜಾ, ಬರ್ಗರ್, ಬ್ರೆಡ್ ಜಾಮ್‌ಗೆ ಸೆಡ್ಡು ಹೊಡೆದ ಸಿರಿಧನ್ಯ ಖಾದ್ಯಗಳು
ಸ್ಪರ್ಧೆಗಳಂದ್ರೆ ಮಹಿಳೆಯರಿಗೆ ಎತ್ತಿದ ಕೈ. ಕಾಂಪಿಟೇಷನ್‌ನಲ್ಲಿ ಫ್ರೆಸ್ ಗೆಲ್ಲಲು ರಾತ್ರಿಯಿಂದಲೇ ಸಾಕಷ್ಟು ತಯಾರಿ ನಡೆಸುತ್ತಾರೆ. ಹಾಗಂಥ ವೈರೈಟಿಯೊಂದಿಗೆ, ವೈರೆಟಿ ತಿಂಡಿಗಳನ್ನು ತಯಾರು ಮಾಡಿ, ಮಹಿಳೆಯರ ದಂಡು ಸ್ಪರ್ಧೆಗೆ ಇಳಿದಿದ್ರು, ಆ ಸ್ಪರ್ಧೆ ಏನು ಅಂತೀರಾ, ಈ ಸ್ಟೋರಿ ನೋಡಿ.
ಬಾಯಲ್ಲಿ ನೀರೂರಿಸೋ ವೈರೆಟಿ ವೈರೆಟಿ ತಿಂಡಿಗಳು. ಒಂದಕ್ಕಿ0ತ ಮತ್ತೊಂದು ಡಿರೆಂಟ್ ಟೇಸ್ಟ್. ಒಂದೊ0ದಾಗಿ ಚಪ್ಪರಿಸುತ್ತಿರುವ ಕೃಷಿ ಇಲಾಖೆ ಅಧಿಕಾರಿಗಳು. ಇವೆಲ್ಲ ಕಂಡು ಬಂದಿದ್ದು ಚಿಕ್ಕಬಳ್ಳಾಪುರ ಜಿ¯್ಲೆಯ ಸಮಗ್ರ ಕೃಷಿ ಶ್ರೇಷ್ಠತಾ ಕೇಂದ್ರದಲ್ಲಿ . ಜಿಲ್ಲಾ ಕೃಷಿ ಇಲಾಖೆಯಿಂದ ಏರ್ಪಡಿಸಿದ್ದ 2024- 25ನೇ ಸಾಲಿನ ಆತ್ಮ ಯೋಜನೆ, ಆಹಾರ ಮತ್ತು ಪೌಷ್ಠಿಕ ಭದ್ರತಾ ಯೋಜನೆ ಅಡಿಯಲ್ಲಿ ಅಂತಾರಾಷ್ಟಿಯ ಮಟ್ಟದ ಸಿರಿಧಾನ್ಯ ಸಾವಯವ ಮೇಳದ ಅಂಗವಾಗಿ ಚಿಕ್ಕಬಳ್ಳಾಪುರಲ್ಲಿ ಸಿರಿಧಾನ್ಯಗಳ ಪಾಕ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಜಿಲ್ಲಾಯ ಎಲ್ಲಾ ತಾಲ್ಲೂಕುಗಳಿಂದ ಮಹಿಳೆಯರು ಭಾಗವಹಿಸಿದ್ದರು. ರಾಗಿ, ನವಣೆ, ಸಜ್ಜೆ, ಸಾಮೆ, ಕೊರಲು, ಹಾರಕ ಇತ್ಯಾದಿ ಸಿರಿಧಾನ್ಯಗಳಿಂದ ತಯಾರು ಮಾಡಿದ ರುಚಿ ರುಚಿಯಾದ ಖಾದ್ಯಗಳು ಬಾಯಲ್ಲಿ ನೀರೂರಿಸುವಂತಿತ್ತು.
ಇತ್ತೀಚಿನ ದಿನಗಳಲ್ಲಿ, ಪಿಜ್ಜಾ, ಬರ್ಗರ್, ಬ್ರೆಡ್ ಜಾಮ್ ಜೀವನದ ಅಂಗವಾಗಿದೆ. ಸಾಲದೆಂಬ0ತೆ ಸ್ವಿಗ್ಗಿಯಂತಹ ಫುಡ್ ಡೆಲಿವರಿ ಸಂಸ್ಥೆಗಳೂ ಪೈಪೋಟಿಗೆ ಇಳಿದಿವೆ. ಪ್ರತಿನಿತ್ಯ ಕೆಲಸದ ಒತ್ತಡದಲ್ಲಿ ಇವುಗಳನ್ನು ಸೇವಿಸುವುದರಿಂದ ಬಿಪಿ, ಶುಗರ್, ಥೈರಾಯಿಡ್ ನಂತರ ಮಾರಕ ಕಾಯಿಲೆಗಳಿಗೆ ಜನ ತುತ್ತಾಗುತಿದ್ದಾರೆ. ಈ ಸ್ಙರ್ಧೆಯಲ್ಲಿ ಭಾಗವಹಿಸಿ ಬಹುಮಾನ ಗೆಲ್ಲುವುದು ಮುಖ್ಯವಲ್ಲ ಸಿರಿಧಾನ್ಯಗಳ ಬಳಕೆ ಎಷ್ಟು ಮುಖ್ಯ ಎಂಬುದನ್ನು ಅರಿವು ಮೂಡಿಸುವುದೇ ನಮ್ಮ ಗುರಿ ಎಂದು ಸ್ಪರ್ಧಿಗಳು ಹೇಳ್ತಾರೆ.
ರಾಜ್ಯ ಮಟ್ಟದಲ್ಲಿ ರೈತ ದಿನಾಚರಣೆ ನಡೆಯಲಿದ್ದು , ಜಿಲ್ಲಾ ಮಟ್ಟದಲ್ಲಿ ಮೊದಲ ಬಹುಮಾನ ಪಡೆದ ಮಹಿಳೆಯರಿಗೆ ಅಂತಾರಾಷ್ಟಿಯ ಮಟ್ಟದ ಸಿರಿಧಾನ್ಯ ಸಾವಯವ ಮೇಳದ ಸರ್ಧೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಇಂದಿನ ಪೀಳಿಗೆಗೆ ಸಿರಿಧಾನ್ಯಗಳ ಮಹತ್ವ ತಿಳಿಸುವ ಉಧ್ದೇಶದಿಂದ ಆತ್ಮ ಯೋಜನೆ, ಆಹಾರ ಮತ್ತು ಪೌಷ್ಠಿಕ ಭದ್ರತಾ ಯೋಜನೆ ಅಡಿಯಲ್ಲಿ ಸಿರಿಧಾನ್ಯ ಖಾದ್ಯಗಳ ಪಾಕ ಸ್ಪರ್ಧೆ ಏರ್ಪಡಿಸಿದ್ದು, ಈ ಸ್ಪರ್ಧೆಯಲ್ಲಿ ೪೫ ಮಂದಿ ಮಹಿಳೆಯರು ಭಾಗವಹಿಸಿದ್ದರು. ವಿಜೇತರಾದವರಿಗೆ ಬಹುಮಾನ ನೀಡಲಾಗುತ್ತೆ.
ಒಟ್ಟಿನಲ್ಲಿ ಫಿಜಾ, ಬರ್ಗರ್, ಬ್ರೆಡ್ ಜಾಮ್ ಗೆ ಜೋತು ಬಿದ್ದು ರೋಗ ರುಜುನುಗಳಿಗೆ ತುತ್ತಾಗುವ ಬದಲು ಕಡಿಮೆ ಖರ್ಚು ಅಧಿಕ ಪೌಷ್ಠಿಕ ಆಹಾರವಾದ ಸಿರಿಧಾನ್ಯಗಳಿಂದ ತಯಾರಿಸಿದ ತಿಂಡಿ ತಿನಿಸುಗಳ ಸೇವನೆ ರೋಗಗಳಿಗೆ ಮುಕ್ತಿ ಎಂಬ0ತಾಗಿದೆ ಈಗಿನ ಪರಿಸ್ಥಿತಿ. ಇದಕ್ಕೇ ಇರಬೇಕು ಕಾಲ ಚಕ್ರ ಉರುಳುತ್ತೆ ಅನ್ನೋದು. ಯಾಕೆ ಅಂತೀರಾ, ನಾಲ್ಕು ದಶಕಗಳ ಹಿಂದೆ ನಮ್ಮ ಪೂರ್ವಿಕರೆಲ್ಲ ಸೇವಿಸುತ್ತಿದ್ದ ಏಕೈಕ ಆಹಾರ ಪದಾರ್ಥಗಳೆಂದರೆ ಅವು ಸಿರಿಧಾನ್ಯಗಳು ಮಾತ್ರ. ಆದರೆ ಜಾಗತೀಕರಣ ಮತ್ತು ಕೈಗಾರಕೀಕರಣದ ಪ್ರಭಾವದಲ್ಲಿ ನಮ್ಮ ಪುರಾತನ ತಿನಿಸುಗಳಿಗೆ ತಿಲಾಂಜಲಿ ಇಟ್ಟಿದ್ದ ನಾವು ಇದೀಗ ಮತ್ತೆ ಅದೇ ಸಿರಿಧಾನ್ಯಗಳತ್ತ ಮುಖ ಮಾಡುವ ಪರಿಸ್ಥಿತಿ ಬಪಂದಿದೆಯಲ್ಲಾ, ಅದಕ್ಕೆ ಕಾಲ ಚಕ್ರ ಉರುಳುತ್ತೆ ಎಂದು ಹೇಳಬೇಕಾಯಿತು. ಏನೇ ಆಗಲೀ, ನಮ್ಮ ದೇಶ, ನಮ್ಮ ದೇಶೀ ತಿನಿಸು ನಮಗೆ ಮುಖ್ಯ ಅಲ್ಲವೇ.