ಉಚಿತ ಜಾನುವಾರು ಮೇವು ವಿತರಣೆ

ವಿಶ್ವ ಪ್ರಸಿದ್ಧ ನಂದಿ ಗಿರಿಧಾಮಕ್ಕೆ ಪ್ರವಾಸಿಗರ ದಂಡು

ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಶ್ರೀನಿವಾಸಪುರದಲ್ಲಿ ಪ್ರತಿಭಟನೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಖಂಡನೆ

December 23, 2024

Ctv News Kannada

Chikkaballapura

ಜಿಲ್ಲಾ ಉಸ್ತುವಾರಿ ಸಚಿವ ಸಚಿವ ಡಾ ಎಂ ಸಿ ಸುಧಾಕರ್ ಸ್ಪಷ್ಟನೆ

1 min read

ಆಶೋಕ್, ಕುಮಾರಸ್ವಾಮಿ ಹೇಳಿದಂತೆ ಸಿದ್ದರಾಮಯ್ಯ ಕಳ್ಳ ಅಲ್ಲ
ಜಿಲ್ಲಾ ಉಸ್ತುವಾರಿ ಸಚಿವ ಸಚಿವ ಡಾ ಎಂ ಸಿ ಸುಧಾಕರ್ ಸ್ಪಷ್ಟನೆ

ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ವಿಪಕ್ಷನಾಯಕ ಅಶೋಕ್ ಹೇಳಿದ ಹಾಗೆ ಸಿದ್ದರಾಮಯ್ಯ ಕಳ್ಳ ಅಲ್ಲ. ಕಳ್ಳ ಅನ್ನಬೇಕಾದರೇ ಮೊದಲು ಸಾಬೀತಾಗಬೇಕು ಎಂದು ಸಚಿವ ಡಾ ಎಂ ಸಿ ಸುಧಾಕರ್ ಆಕ್ರೋಶ ವ್ಯಕ್ತಪಡಿಸಿದರು.

ಚಿಕ್ಕಬಳ್ಳಾಪುರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ ಸಿ ಸುಧಾಕರ್, ಮುಡಾ ವಿಚಾರದಲ್ಲಿ ಸಿದ್ದರಾಮಯ್ಯ ನನ್ನ ಪ್ರಕಾರ ಯಾವುದೇ ತಪ್ಪು ಮಾಡಿಲ್ಲ. ಜಮೀನು ಸ್ವಾಧೀನ ಆದ ಕಾರಣ ನಿವೇಶನ ಪಡೆದುಕೊಂಡಿದ್ದಾರೆ. ಆದರೆ ಕುಮಾರಸ್ವಾಮಿಯವರದ್ದು ಯಾವ ಜಮೀನು ಇತ್ತು, ಹೇಗೆ ಅವರ ಸಹೋದರಿಯರು, ಭಾವಂದಿರು, ಸಂಬ0ಧಿಕರಿಗೆ ಮೈಸೂರಿನಲ್ಲಿ ನಿವೇಶನ ಮಂಜೂರು ಮಾಡಿಸಿಕೊಂಡರು, ಅಧಿಕಾರ ದುರಪಯೋಗ ಮಾಡಿಕೊಂಡು ಮಾಡಿಸಿಕೊಂಡಿಲ್ವಾ, ಅದಕ್ಕೆ ಎಚ್ ಡಿ ಕೆ ಉತ್ತರ ಕೊಡಲಿ ಎಂದು ತಿರುಗೇಟು ನೀಡಿದರು.

ಎಚ್ ಡಿ ಕೆ ಕಳ್ಳ ಅಂದರೆ ನೀವು ಒಪ್ಪಿಕೊಳ್ಳುವಿರಾ, ಇದು ನೈತಿಕತೆಯ ವಿಚಾರ, ರಾಜಕಾರಣದಲ್ಲಿ ತಪ್ಪು ಮಾಡದವರಿಗೂ ಕಿರುಕುಳದಿಂದ ಮಾನಸಿಕವಾಗಿ ನೋವಾಗಿದೆ. 40 ವರ್ಷ ಕಳಂಕರಹಿತ ರಾಜಕಾರಣ ಮಾಡಿರೋರು ಸಿದ್ದರಾಮಯ್ಯ. ತನ್ನ ಪತಿಗೆ ಕೆಟ್ಟ ಹೆಸರು ಬಂತು ಅಂತ ಪತ್ನಿಯವರು ಸೈಟ್ ವಾಪಾಸ್ ಮಾಡಿದ್ದಾರೆ. ಮೈಸೂರಲ್ಲಿ ಅವರ ಕುಟುಂಬ ಸದಸ್ಯರ ೪೩ ಸೈಟ್ ಇದೆ. 1984 ರಲ್ಲಿ ಯಾವ ಅಧಾರದ ಮೇಲೆ ಸೈಟ್ ಪಡೆದುಕೊಂಡಿರಿ, ಮೈಸೂರ ಲ್ಲಿ ವಾಸ ಇರುವುದಾಗಿ ಸಹೋದರಿಯರು, ಭಾವಂದಿರು, ಸಂಬ0ಧಿಕರ ಹೆಸರಿದೆ. ಕುಮಾರಸ್ವಾಮಿ ಯವರು ಪಡೆದಿರುವ ಸೈಟ್ ಗಳನ್ನ ವಾಪಾಸ್ ಕೊಡಲಿ ಎಂದು ಟಾಂಗ್ ನೀಡಿದರು.

ಬಿಜೆಪಿಯವರಿಗೆ ಮಾನವೀಯತೆ ಇದೆಯಾ, ಫೋಕ್ಸೋ ಪ್ರಕರಣದಲ್ಲಿ ಯಡಿಯೂರಪ್ಪ ಯಾಕೆ ಅರೆಸ್ಟ್ ಆಗಲಿಲ್ಲ, ಬಂಧ0ನದಿ0ದ ತಪ್ಪಿಸಿದವರು ಯಾರು, ದ್ವೇಷದ ರಾಜಕಾರಣ ಮಾಡಿದರೆ ಯಡಿಯೂರಪ್ಪ ಅರೆಸ್ಟ್ ಮಾಡಬಹುದಿತ್ತಲ್ವಾ, ಮನೆಯಿಂದ ಹೊರಗೆ ಬಾರದ ಮಹಿಳೆಗೆ ಕಿರುಕುಳ ಕೊಡ್ತಿದ್ದೀರಲ್ಲಾ, ಸಿದ್ದರಾಮಯ್ಯ ನವರಾದ್ರೂ ಬದಲಿ ತಗೊಂಡಿದ್ದಾರೆ, ಕುಮಾರಸ್ವಾಮಿಯವರಿಗೆ ಮಂಜೂರು ಆದಾಗ ಯಾವ ಸರ್ಕಾರ ಇತ್ತು ಎಂದು ಸಚಿವ ಡಾ ಎಂ ಸಿ ಸುಧಾಕರ್ ಆಕ್ರೋಶ ಹೊರಹಾಕಿದರು.

ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೇಂದ್ರದಲ್ಲಿ ಕೆಲಸ ಮಾಡಲು ಆಗ್ತಿಲ್ಲ, ಹಾಗಾಗಿ ರಾಜ್ಯಕ್ಕೆ ಬರಲು ಸರ್ಕಾರ ಬೀಳಿಸುವ ಕುತಂತ್ರ ಮಾಡ್ತಿದ್ದಾರೆ ಎಂದು ಸಚಿವ ಎಂ ಸಿ ಸುಧಾಕರ್ ಆರೋಪ ಮಾಡಿದರು. ರಾಜ್ಯ ಸರ್ಕಾರ ಬೀಳಿಸಬೇಕು ಎಂಬ ಅಧಿಕಾರ ದಾಹದಿಂದ ಮುಡಾ ಕುತಂತ್ರ ಮಾಡ್ತಿದ್ದಾರೆ. ಕುಮಾರಸ್ವಾಮಿ ಗೆ ಕೇಂದ್ರದಲ್ಲಿ ಕೆಲಸ ಮಾಡಲು ಕಷ್ಟ ಆಗ್ತಿರಬಹುದು. ಇಂಗ್ಲಿಷ್ ಹಾಗೂ ಹಿಂದಿ ಭಾಷೆ ಅಷ್ಟೊಂದು ಸುಲಲಿತವಾಗಿ ಮಾತನಾಡಲು ಕಷ್ಟ ಆಗ್ತಿರಬಹುದು. ರಾಜ್ಯಕ್ಕೆ ಮರಳಿ ಬರೋದಕ್ಕೆ ಕುಮಾರಸ್ವಾಮಿ ಒದ್ದಾಡ್ತಿದ್ದಾರೆ ಎಂದು ಸಚಿವರು ಲೇವಡಿ ಮಾಡಿದರು.

ಕುಮಾರಸ್ವಾಮಿದು ಯಾವಾಗಲೂ ಅರ್ಧೆಗರ್ಬಿತ ಮಾತು. ಕುಮಾರಸ್ವಾಮಿ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ ಅದನ್ನ ನೋಡ್ಕೊಳ್ಳಿ. ಇ ಡಿ ಗಳ ಮೂಲಕ ನವೀನ್ ಜಿಂದಾಲ್ ಇತರರಿಗೆ ಹೆದರಿಸುತ್ತಿದ್ದಾರೆ. ಒತ್ತಡ ಹಾಕಿ ವಾಷಿಂಗ್ ಮಿಷನ್‌ನಲ್ಲಿ ತೊಳೆದು ತಗೋತಾರಂತೆ. ಚಿಕ್ಕಬಳ್ಳಾಪುರದಲ್ಲಿ ತೊಳೆದು ತಗೊಂಡ್ರೇನೋ, ಅದು ಮತ್ತೆ ಕೆಟ್ಟೋಗಿಬಿಡ್ತು ಅಂತ ಟಾಂಗ್ ನೀಡಿದರು. ಮುಡಾ ಹಗರದ ಕುರಿತು ಇಡಿ ಪ್ರಕರಣ ದಾಖಲು ವಿಚಾರಕ್ಕೆ ಪ್ರತಿಕ್ರಿಯಿಸಿ, ಮುಡಾದಲ್ಲಿ ಯಾವುದೇ ಹಣ ಡೈವರ್ಟ್ ಆಗಿಲ್ಲ. ಹಿಂದಿನ ಸರ್ಕಾರ 310 ಕೋಟಿ ಖರ್ಚು ಮಾಡಿದೆ. ಸಿದ್ದರಾಮಯ್ಯ ಬಂದ ಮೇಲೆ 60 ಕೋಟಿ ಖರ್ಚು ಆಗಿರಬಹುದು. ಮುಡಾ ಶ್ರೀರಂಗಪಟ್ಟಣ ಹಾಗೂ ವರುಣಾ ಕ್ಷೇತ್ರ ವ್ಯಾಪ್ತಿಗೆ ಬರಲಿದೆ. ಏನು ಡೈವರ್ಟ್ ಆಗಿದೆ, ಹಿಂದಿನ ಸರ್ಕಾರ ಮಾಡಿರುವುದು ತಪ್ಪಾ, ನಿಯಮಗಳಲ್ಲಿ ಅವಕಾಶ ಇದ್ದು ಅಭಿವೃದ್ಧಿ ಗೆ ಕೊಟ್ಟಿರೋದು ತಪ್ಪಾ ಎಂದು ಪ್ರಶ್ನೆ ಮಾಡಿದರು.

ಚಿಕ್ಕಬಳ್ಳಾಪುರ ಜಿ¯್ಲೆಯಾದ್ಯಂತ ಸರ್ಕಾರಿ ಕಾರ್ಯಕ್ರಮಗಳಲ್ಲಿ ಇನ್ನು ಮುಂದೆ ಯಾವುದೇ ರೀತಿಯ ಆಡಂಬರ ಶಾಲು ಸನ್ಮಾನ, ಉಡುಗೊರೆಗಳನ್ನ ನೀಡುವ ಮೂಲಕ ಗಣ್ಯರಿಗೆ ಸನ್ಮಾನ ಮಾಡುವುದು ಬೇಡ, ಕೇವಲ ಒಂದು ಗುಲಾಬಿ ಹೂ ನೀಡಿ ಸ್ವಾಗತ ಮಾಡಿ, ಹಿಂಗ0ತ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ ಎಂ ಸಿ ಸುಧಾಕರ್ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳಿಗೆ ಖಡಕ್ ಆದೇಶ ಮಾಡಿದರು.

ಅಂದಹಾಗೆ ಇಂದು ಗಾಂಧಿಜಯ0ತಿ ಅಂಗವಾಗಿ ಗಾಂದಿಭವನದ ಲೋಕಾರ್ಪಣೆಯಲ್ಲಿ ಸಚಿವರು ಶಾಸಕರು ಸೇರಿದಂತೆ ಗಣ್ಯರಿಗೆ ಚರಕದ ಪ್ರತಿಮೆ ಹಾಗೂ ಶಾಲು ಹೊದಿಸಿ ಹಾರ ಹಾಕಿ ಸ್ವಾಗತ ಕೋರಲಾಗಿತ್ತು. ನಂತರ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆ ಆವರಣದಲ್ಲಿ ನಡೆದ ರೇಡಿಯಾಲಜಿ ಬ್ಲಾಕ್‌ನ ಭೂಮಿ ಪೂಜೆ ಕಾರ್ಯಕ್ರಮದಲ್ಲೂ ಶಾಸಕರು-ಸಚಿವರು, ಗಣ್ಯರಿಗೆ ಹಾರ ಹಾಕಿ ಶಾಲು ಹೊದಿಸಿ, ನಂದಿ ವಿಗ್ರಹಗಳನ್ನ ನೀಡಿ ಗೌರವಿಸಲಾಗಿತ್ತು. ಇತ್ತೀಚೆಗೆ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲೂ ಬೃಹತ್ ಕೃಷ್ಣನ ವಿಗ್ರಹ ನೀಡಿ ಗೌರವಿಸಲಾಗಿತ್ತು.

ಈ ಎಲ್ಲಾ ಘಟನೆಗಳಿಂದ ಇರುಸು ಮುರುಸಾಗಿರೋ ಸಚಿವರು ಇನ್ನು ಮುಂದೆ ಸರ್ಕಾರಿ ಕಾರ್ಯಕ್ರಮಗಳಲ್ಲಿ ಕೇವಲ ಒಂದು ಗುಲಾಬಿ ನೀಡಿ, ಅದು ಬಿಟ್ಟು ದುಬಾರಿ ಬೆಲೆಯ ಉಡುಗೊರೆಗಳು ಬೇಡ, ಹಾರ, ಶಾಲು ಬೇಡ ಅಂತ ಎಲ್ಲಾ ಅಧಿಕಾರಿಗಳಿಗೂ ಆದೇಶ ಪತ್ರ ಬರೆಯುವಂತೆ ಜಿಲ್ಲಾಧಿಕಾರಿಗಳಿಗೆ ವೇದಿಕೆಯಲ್ಲೆ  ಸೂಚಿಸಿದರು. ಸಚಿವರ ಈ ನಡೆಗೆ ಜನರಿಂದಲೂ ಮೆಚ್ಚುಗೆ ವ್ಯಕ್ತವಾಯಿತು.

About The Author

Leave a Reply

Your email address will not be published. Required fields are marked *