ಅಂಗನವಾಡಿ ಮಕ್ಕಳಿಗೆ ಉಚಿತ ಟ್ರಾಕ್ ಸೂಟ್ ವಿತರಣೆ
1 min read
ಅಂಗನವಾಡಿ ಮಕ್ಕಳಿಗೆ ಉಚಿತ ಟ್ರಾಕ್ ಸೂಟ್ ವಿತರಣೆ
ದಾನಿಗಳ ಕೊಡುಗೆ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕ
ಚಿಕ್ಕಬಳ್ಳಾಪುರ ಸಿಡಿಪಿಒ ಗಂಗಾದರಯ್ಯ ಬಣ್ಣನೆ
ತಾವು ಕಷ್ಟದ ಜೀವನದಲ್ಲಿ ಓದಿ ಬೆಳೆದು ಸಂಪಾದಿಸುವ ಹಂತಕ್ಕೆ ತಲುಪಿದ ಮೇಲೆ ಇತರರಿಗೆ ಸಹಾಯ ಮಾಡುವ ಮನಸ್ಸು ಎಲ್ಲರಿಗೂ ಬರಲ್ಲ, ಗಳಿಸಿದ ಎಲ್ಲವೂ ಸ್ವಾರ್ಥಕ್ಕೆ ಬಳಸಿಕೊಳ್ಳುವ ಸಮಾಜದಲ್ಲಿ ಕೆಲವೆ ಮಂದಿ ಮಾತ್ರ ತಮ್ಮ ಸಂಪಾದನೆಯಲ್ಲಿ ಸಮಾಜಸೇವೆಗೂ ವ್ಯಯ ಮಾಡುತ್ತಾರೆ ಎಂದು ಶಿಶು ಅಭಿವೃದ್ದಿ ಯೋಜನಾಧಿಕಾರಿ ಗಂಗಾದರಯ್ಯ ಹೇಳಿದರು.
ಅಂಗನವಾಡಿ ಮಕ್ಕಳಿಗೆ ಟ್ರಾಕ್ ಸೂಟ್ ಕೊಟ್ಟು, ಕೇಂದ್ರಕ್ಕೆ ಕಪಾಟು ದಾನ ಮಾಡಿರುವ ನಂಜಮ್ಮ ದೊಡ್ಡಚನ್ನಪ್ಪ ಚಾರಿಟಬಲ್ ಟ್ರಸ್ಟ್ ಮಾದರಿಯಾಗಿದ್ದಾರೆ ಎಂದು ಶಿಶು ಅಭಿವೃದ್ದಿ ಯೋಜನಾಧಿಕಾರಿ ಗಂಗಾದರಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು. ಚಿಕ್ಕಬಳ್ಳಾಪುರ ತಾಲ್ಲೂಕು ಕಣಜೇನಹಳ್ಳಿ ಅಂಗನವಾಡಿ ಕೇಂದ್ರಕ್ಕೆ ಹೊನ್ನೇನಹಳ್ಳಿ ನಂಜಮ್ಮ ದೊಡ್ಡಚೆನ್ನಪ್ಪ ಚಾರಿಟಬಲ್ ಟ್ರಸ್ಟ್ ನಿಂದ ಮಕ್ಕಳಿಗೆ ಟ್ರಾಕ್ ಶೂಟ್ ಮತ್ತು ಪುಸ್ತಕ ಇಡುವ ಕಪಾಟು ನೀಡಿದರು.
ಟ್ರಾಕ್ ಸೂಟ್ ವಿತರಣಾ ಸಮಾರಂಭ ಉದ್ಘಾಟಿಸಿದ ಸಿಡಿಪಿಒ ಗಂಗಾದರಯ್ಯ ಮಾತನಾಡಿ, ತಾನು ಗಳಸಿದ್ದು ಮಾತ್ರವಲ್ಲದೆ ಮತ್ತೊಬ್ಬರ ಸಂಪಾದನೆಯನ್ನೂ ತನ್ನದಾಗಿಸಿಕೊಳ್ಳುವ ಸಮಾಜದಲ್ಲಿ ಇಂತಹ ಕೊಡುಗೈ ದಾನಿಗಳಿರುವುದು ಸರ್ಕಾರಿ ಶಾಲೆಗಳ ಅಭಿವೃದ್ದಿಗೆ ಪೂರಕ. ಇಂತಹವರಿ0ದ ಸರ್ಕಾರಿ ಶಾಲೆಗಳಿಗೆ ಬರುವ ಬಡ ಮಕ್ಕಳಿಗೂ ಅನುಕೂಲವಾಗುತ್ತದೆ. ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಶ್ರೀದರ್ ಮತ್ತು ಅವರ ಕುಟುಂಬದ ಸೇವೆ ಇತರರಿಗೂ ಸ್ಪೂರ್ತಿಯಾಗಲಿ ಎಂದು ಶ್ಲಾಘನೆ ವ್ಯಕ್ತಪಡಿಸಿದರು.
ಮಕ್ಕಳಿಗೆ ಟ್ರಾಕ್ ಸೂಟ್ ವಿತರಿಸಿ ಮಾತನಾಡಿದ ನಂಜಮ್ಮ ದೊಡ್ಡಚೆನ್ನಪ್ಪ ಚಾರಿಟಬಲ್ ಟ್ರಸ್ಟ್ ಕಾರ್ಯದರ್ಶಿ ಶ್ರೀದರ್, ನಾನು ಕೂಡ ಸರ್ಕಾರಿ ಶಾಲೆಯಲ್ಲೆ ಓದಿದವನು. ನನ್ನ ವಿದ್ಯಾಬ್ಯಾಸದ ಸಂಧರ್ಭದಲ್ಲಿ ಅನುಭವಿಸಿದ ಕಷ್ಟ ನನಗೆ ಸಮಾಜ ಸೇವೆ ಮಾಡುವ ಮನಸು ನೀಡಿದೆ. ಅದಕ್ಕಾಗಿ ಈ ಸಣ್ಣ ಅಳಿಲು ಸೇವೆ ಮಾಡುತಿದ್ದಾನೆ ಎಂದರು.
ಈ ವೇಳೆ ಸೂಪರ್ ವೈಸರ್ ಮಂಜುಳ, ಗ್ರಾಮದ ಪದ್ಮ, ಅಂಗನವಾಡಿ ಕಾರ್ಯಕರ್ತೆ ಅನಿತ ಮತ್ತು ಪೋಷಕರು ಹಾಜರಿದ್ದರು.