2ನೇ ದಿನದ ಕಾರ್ಯಕ್ರಮದಲ್ಲಿ ಕಂಪ್ಯೂಟರ್ ವಿತರಣೆ
1 min readಮುಂದುವರಿದ ನವೀನ್ ಕಿರಣ್ ಪರಿಸರ ಸಾಪ್ತಾಹ
2ನೇ ದಿನದ ಕಾರ್ಯಕ್ರಮದಲ್ಲಿ ಕಂಪ್ಯೂಟರ್ ವಿತರಣೆ
ಕಂದವಾರಪೇಟೆಯ ಗುರುಕುಲಾಶ್ರಮದಲ್ಲಿ ಕಂಪ್ಯೂಟರ್ ವಿತರಣೆ
ಚಿಕ್ಕಬಳ್ಳಾಪುರದ ಶಿಕ್ಷಣ ದಾನಿ ಕೆ.ವಿ. ನವೀನ್ ಕಿರಣ್ ಅವರ ಹುಟ್ಟುಹಬ್ಬದ ಪ್ರಯುಕ್ತ ಅವರ ಅಭಿಮಾನಿಗಳು ಹಮ್ಮಿಕೊಂಡಿರುವ ನವೀನ್ ಕಿರಣ್ ಸಾಮಾಜಿಕ ಸಾಪ್ತಾಹ ಕಾರ್ಯಕ್ರಮ ಮುಂದುವರಿದಿದ್ದು, ಎರಡನೇ ದಿನವಾದ ಇಂದು ಚಿಕ್ಕಬಳ್ಳಾಪುರದ ಕಂದವಾರ ಪೇಟೆಯ ಗುರುಕುಲಾಶ್ರಮದಲ್ಲಿ ಕಂಪ್ಯೂಟರ್ ವಿತರಣೆ ಮೂಲಕ ಆಚರಿಸಲಾಯಿತು.
ಹೌದು, ನವೀನ್ ಕಿರಣ್ ಅವರ ಹುಟ್ಟುಹಬ್ಬವನ್ನು ಒಂದು ದಿನಕ್ಕೆ ಸೀಮಿತಗೊಳಿಸಲು ಇಷ್ಟವಿಲ್ಲದ ಅವರ ಅಭಿಮಾನಿಗಳು ಒಂದು ವಾರದ ಕಾಲ ವಿವಿದ ಸಾಮಾಜಿಕ ಮತ್ತು ಪರಿಸರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಹುಟ್ಟುಹಬ್ಬ ಆಚರಿಸಲು ಮುಂದಾಗಿದ್ದಾರೆ. ಅದರ ಭಾಗವಾಗಿ ನೆನ್ನೆ ಗುಡಿಬಂಡೆಯಲ್ಲಿ ಆರಂಭವಾಗಿರುವ ನವೀನ್ ಕಿರಣ್ ಸಾಮಾಜಿಕ ಸಾಪ್ತಾಹ ಕಾರ್ಯಕ್ರಮ ಇಂದೂ ಮುಂದುವರಿಯಿತು. ಸಾಪ್ತಾಹದ ಎರಡನೇ ದಿನವಾದ ಇಂದು ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರದ ಕಂದವಾರಪೇಟೆಯ ಶ್ರೀಮತಿ ವೆಂಕಟನರಸಮ್ಮ ಗುರುಕುಲ ಆಶ್ರಮಕ್ಕೆ ಉಚಿತ ಕಂಪ್ಯೂಟರ್ ನೀಡಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಕೆವಿ ಪಂಚಗಿರಿ ದತ್ತಿ ವ್ಯವಸ್ಥಾಪಕ ಕೆ.ಆರ್. ಲಕ್ಷಣಸ್ವಾಮಿ ನೆರೆವೇರಿಸಿದರು. ಸಮಾನ ಮನಸ್ಕರ ಪರಿಸರ ವೇದಿಕೆ ಸದಸ್ಯ ಹೆನ್ರಿ ಪ್ರಸನ್ನ ಕುಮಾರ್ ಮಾತನಾಡಿ, ನವೀನ್ ಕಿರಣ್ ಅವರ 46ನೇ ಹುಟ್ಟುಹಬ್ಬವನ್ನು ೭ ದಿನಗಳ ಕಾಲ ಸತತವಾಗಿ ಆಚರಣೆ ಮಾಡುತ್ತಿದ್ದು, ಇಂದು ಗುರುಕುಲ ಆಶ್ರಮದಲ್ಲಿ ಕಂಪ್ಯೂಟರ್‌ಗಳು ವಿತರಣೆ ಮಾಡಿ ಅವರ ಹುಟ್ಟುಹಬ್ಬವನ್ನು ಆಚರಿಸುವುದು ಸಂತಸದ ಸಂಗತಿಯಾಗಿದೆ ಎಂದರು.
ನವೀನ್ ಕಿರಣ್ ಅವರು ಸರಳ ವ್ಯಕ್ತಿ, ರಕ್ತದಾನಿ, ಸಮಾಜಮುಖಿ ಕಾರ್ಯಗಳನ್ನು ಚಿಕ್ಕಬಳ್ಳಾಪುರ ಜಿ¯್ಲೆಯಲ್ಲಿ ಮಾಡುತ್ತಿದ್ದು, ಅಂಥವರ ಗುಣಗಳನ್ನು ಪ್ರತಿಯೊಬ್ಬರು ಪಾಲಿಸಬೇಕು, ಆ ಮೂಲಕ ಸಮಾಜದಲ್ಲಿ ಗೌರವ ಸಿಗಲಿದೆ ಎಂದು ಹೇಳಿದರು. ನವೀನ್ ಕಿರಣ್ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ ಗುಂಪು ಮರದ ಆನಂದ್ ಮಾತನಾಡಿ, ನವೀನ್ ಕಿರಣ್ ಅವರು ಒಬ್ಬ ವ್ಯಕ್ತಿಯಲ್ಲ ಅವರು ಶಕ್ತಿ, ದಾನ ಮಾಡುವುದರಲ್ಲಿ ಅವರು ಚಿಕ್ಕಬಳ್ಳಾಪುರದ ಕರ್ಣ, ಅವರ ಸೇವಾ ಗುಣಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.
ಗುರುಕುಲ ಆಶ್ರಮದ ಮೇಲ್ವಿಚಾರಕ ನಾರಾಯಣಸ್ವಾಮಿ, ಸಮಾನ ಮನಸ್ಕರ ಪ್ರಕೃತಿ ವೇದಿಕೆ ಸದಸ್ಯ ಕೆ ಎಸ್ ನಾರಾಯಣಸ್ವಾಮಿ, ಖಲೀಲ್, ಹೋಟೆಲ್ ರಾಮಣ್ಣ, ವೆಂಕಟಪತಪ್ಪ ಕನ್ನಡ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಈಶ್ವರ್ ಇದ್ದರು.