ವಿಶ್ವ ಹಿಂದೂ ಪರಿಷತ್ ಮಹಾ ಗಣಪತಿ ವಿಸರ್ಜನೆ
1 min readವಿಶ್ವ ಹಿಂದೂ ಪರಿಷತ್ ಮಹಾ ಗಣಪತಿ ವಿಸರ್ಜನೆ
ವಿಶ್ವ ಹಿಂದೂ ಪರಿಷತ್, ಬಜರಂಗದಳದಿ0ದ ಶೋಭಾ ಯಾತ್ರೆ
ಬೃಹತ್ ಮೆರವಣಿಗೆ ಮೂಲಕ ಗಣೇಶ ವಿಸರ್ಜನೆ ಅದ್ಧೂರಿ
ಏಷ್ಯಾ ಖಂಡದಲ್ಲಿಯೇ ಅತಿ ದೊಡ್ಡ ಬೆಳಕು ನೀಡುವ ನಾಡು ಅಥವಾ ಸೋಲಾರ್ ನಾಡು ಎಂದು ಖ್ಯಾತಿ ಪಡೆದಿರುವ ಪಾವಗಡದಲ್ಲಿ ವಿಶ್ವ ಹಿಂದೂ ಪರಿಷತ್ ಮಹಾಗಣಪತಿ ವಿಸರ್ಜನಾ ಅದ್ಧೂರಿಯಾಗಿ ನೆರವೇರಿತು.
ಪಾವಗಡದಲ್ಲಿ ಪ್ರತಿಷ್ಠಾಪಿಸಿದ್ದ ಹಿಂದೂ ಮಹಾ ಗಣಪತಿ ವಿಸರ್ಜನೆ ಇಂದು ಅದ್ಧೂರಿಯಾಗಿ ನೆರವೇರಿತು. ಶೋಭಾಯಾತ್ರೆ ವಿಜೃಂಭಣೆಯಿ0ದ ಆರಂಭವಾಗಿದೆ.
ಪಾವಗಡ ಪಟ್ಟಣದ ಮಧುಗಿರಿ ಊರು ಬಾಗಿಲಿನ ಅರಳಿ ಕಟ್ಟೆ ಮೇಲೆ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದಿ0ದ ಗಣಪತಿಯನ್ನು ಪ್ರತಿಷ್ಠಾಪಿಸಿದ್ದು, 30 ದಿನಗಳ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನೆರವೇರಿಸಲಾಯಿತು. ಇಂದು ಅಂತಿಮ ದಿನವಾಗಿದ್ದರಿಂದ ವಿಶ್ವ ಹಿಂದೂ ಮಹಾಗಣಪತಿ ವಿಸರ್ಜನೆಯ ಬೃಹತ್ ಶೋಭಾಯಾತ್ರೆಗೆ ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ವಿವಿಧ ಹಿಂದೂ ಧಾರ್ಮಿಕ ಮುಖಂಡರು, ಚಾಲನೆ ನೀಡಿದರು.
ಬೆಳಗ್ಗೆ 12.30ಕ್ಕೆ ವೇದಿಕೆ ಕಾರ್ಯಕ್ರಮ ಮುಗಿದ ನಂತರ ಪಟ್ಟಣದ ಮಧುಗಿರಿ ಊರು ಬಾಗಿಲ ಮುಂಭಾಗದಿ0ದ ಶುರುವಾದ ಗಣಪತಿ ವಿಸರ್ಜನಾ ಶೋಭಾಯಾತ್ರೆ ಎರಡು ಕಿಲೋಮೀಟರ್ ಸಾಗಿ, ಕಣಿವೆ ಲಕ್ಷ್ಮಿ ನರಸಿಂಹ ದೇವಸ್ಥಾನದ ಪಕ್ಕದಲ್ಲಿ ಕಲ್ಯಾಣಿಯಲ್ಲಿ ವಿಸರ್ಜನೆ ಮಾಡಲಾಯಿತು.
ಈ ಮೆರವಣಿಗೆ ನಿರೀಕ್ಷೆಗೂ ಮೀರಿ ಜನರು ಬಂದಿದ್ದರು. ಜಾತಿ, ಮತ, ಪಂಥ ಹಾಗೂ ಬೇಧ ಮರೆತು ಸೋದರತ್ವದ ಮನೋಭಾವನೆಯಿಂದ ಎಲ್ಲರೂ ಪಾಲ್ಗೊಂಡು ಬಿಸಿಲನ್ನು ಲೆಕ್ಕಿಸದೆ ಜನರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಪ್ರತಿಷ್ಠಾಪನ ಸ್ಥಳದಿಂದ ಗಣಪತಿ ಮೆರವಣಿಗೆ ಹೊರಟು ಶನಿಮಹಾತ್ಮ ಸರ್ಕಲ್ ವೃತ್ತ, ಟೋಲ್ ಗೇಟ್ ಅಂಬೇಡ್ಕರ್ ವೃತ್ತ, ಕನಕದಾಸ ವೃತ ಮೂಲಕ ಶೋಭಾಯಾತ್ರೆ ಸಾಗಿತು. ಈ ಮೆರವಣಿಗೆಯಲ್ಲಿ ಡಿಜೆ, ವಾದ್ಯ ಗೋಷ್ಠಿ, ತಮಟೆ, ಡೋಲು, ಗೊಂಬೆ ಕುಣಿತ, ವೀರಗಾಸೆ ಈಗೆ ವಿವಿಧ ಸಾಂಸ್ಕೃತಿಕ ಕಲಾತಂಡಗಳು ಮೆರುಗು ನೀಡಿದವು.
ಸಾಗರೋಪಾದಿಯಲ್ಲಿ ಜನರು ಕಿಕ್ಕಿರಿದು ಮೆರವಣಿಗೆಯಲ್ಲಿ ಸೇರಿದ್ದರು. ಶನಿಮಾತ್ಮ ವೃತ್ತದ ಬಳಿ ಮೆರವಣಿಗೆ ಮುಂದೆ ಬರುತ್ತಿದ್ದಂತೆ ಕಟ್ಟಡಗಳ ಮೇಲಿದ್ದ ಜನರ ಸಂಭ್ರಮ ಮುಗಿಲು ಮುಟ್ಟಿತ್ತು. ಎತ್ತ ತಿರುಗಿದರು ಸಹ ಜನವೋ, ಜನ. ಗಣಪತಿ ಮೆರವಣಿಗೆ ತಾಲೂಕಿನಲ್ಲಿ ಒಂದನೇ ಸ್ಥಾನ ಪಡೆದಿದೆ. ಶೋಭಾಯಾತ್ರೆಯಲ್ಲಿ ಪೊಲೀಸ್ ಬಿಗಿ ಭದ್ರತೆ ಯುವಕ, ಯುವತಿಯರು, ಮಕ್ಕಳು, ಹಿರಿಯರು ಹೀಗೆ ಎಲ್ಲರೂ ಭವ್ಯ ಮೆರವಣಿಗೆಗೆ ಸಾಕ್ಷಿಯಾದರು. ಸಿ ಪಿ ಐ ಸುರೇಶ್ ಹಾಗೂ ಗ್ರಾಮೀಣ ಭಾಗದ ಸಿ ಪಿ ಐ ಗಿರೀಶ್ ತಂಡದವರು ರಸ್ತೆ ಯೂದಕ್ಕೂ ಪೊಲೀಸರು ಬಿಗಿ ಬಂದೋಬಸ್ತ್ ಕಲ್ಪಿಸಿದ್ದರು.