ಉಚಿತ ಜಾನುವಾರು ಮೇವು ವಿತರಣೆ

ವಿಶ್ವ ಪ್ರಸಿದ್ಧ ನಂದಿ ಗಿರಿಧಾಮಕ್ಕೆ ಪ್ರವಾಸಿಗರ ದಂಡು

ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಶ್ರೀನಿವಾಸಪುರದಲ್ಲಿ ಪ್ರತಿಭಟನೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಖಂಡನೆ

December 23, 2024

Ctv News Kannada

Chikkaballapura

ಚಿಕ್ಕಬಳ್ಳಾಪುರದಲ್ಲಿ ದಿಡೀರ್ ಸುದ್ದಿಗೋಷ್ಠಿ ನಡೆಸಿದ ರೀಲ್ಸ್ ರಾಣಿ

1 min read

ಮೂವರಿಗೆ ವಂಚಿಸಿದ್ದ ರೀಲ್ಸ್ ರಾಣಿ ಅರೆಸ್ಟ್ ಪ್ರಕರಣ
ಚಿಕ್ಕಬಳ್ಳಾಪುರದಲ್ಲಿ ದಿಡೀರ್ ಸುದ್ದಿಗೋಷ್ಠಿ ನಡೆಸಿದ ರೀಲ್ಸ್ ರಾಣಿ
ತನಗೆ ಹಲವು ಪುರುಷರಿಂದ ವಂಚನೆ ಆರೋಪ ಮಾಡಿದ ಕೋಮಲ
ವಂಚನೆ ಬಗ್ಗೆ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾದ ಕೋಮಲಾ

ಬೆಂಗಳೂರಿನ ಮಹಿಳೆಯೊಬ್ಬರು ಹಲವು ಪುರುಷರೊಂದಿಗೆ ಮದುವೆ ನಾಟಕವಾಡಿ ವಂಚಿಸಿ ಬಂಧನವಾಗಿದ್ದ ಕೋಮಲ ಟಿ.ಗೌಡ, ಇಂದು ಚಿಕ್ಕಬಳ್ಳಾಪುರ ನಗರದಲ್ಲಿ ಪ್ರತ್ಯಕ್ಷವಾಗಿ ಸುದ್ದಿಗೋಷ್ಟಿ ನಡೆಸಿದ್ದಾರೆ. ತನಗೆ ಹಲವು ಪುರುಷರಿಂದ ವಂಚನೆಯಾಗಿದೆ ಅಂತ ಸುದ್ದಿಗೋಷ್ಠಿಯಲ್ಲಿ ಅವರು ಆರೋಪಿಸಿದರು. ಹಾಗಾದರೆ ಕೋಮಲಾ ಭಅವರು ಹೇಳಿದ್ದೇನು ಅನ್ನೋದನ್ನ ನೋಡೋಣ ಬನ್ನಿ.

ಬೆಂಗಳೂರು ಮೂಲದ ಕೋಮಲ ಶಿವಮೊಗ್ಗದ ರಮೇಶ್ ಎಂಬುವರ ಜೊತೆ ಮದುವೆಯಾಗಿ ಇಬ್ಬರು ಮಕ್ಕಳ ತಾಯಿ. 7 ವರ್ಷಗಳ ಹಿಂದೆ ಕೆಪಿಟಿಸಿಎಲ್ ನೌಕರನಾಗಿದ್ದ ರಮೇಶ್ 2017 ರಲ್ಲಿ ಮೃತಪಟ್ಟಿದ್ದಾನೆ. ನಂತರ ಐಶಾರಾಮಿ ಜೀವನ ನಡೆಸಲು ಬೆಂಗಳೂರಿನಲ್ಲಿ ಬಂದು ನೆಲೆಸಿದ್ದಳು, ರೀಲ್ಸ್ ಮೂಲಕವೇ ಪುರುಷರನ್ನ ಆಕರ್ಷಿಸುತ್ತಿದ್ದ ಕೋಮಲಾ ಟಿ.ಗೌಡ, ಜಿಲ್ಲೆಯ ಗೌರೀಬಿದನೂರು ನಗರದ ರಾಘವೇಂದ್ರ ಎಂಬುವರನ್ನು ಎರಡನೇ ಮದುವೆಯಾಗಲು ಕಲ್ಯಾಣ್ ಮ್ಯಾಟ್ರಿಮೋನಿಯಲ್ಲಿ ನೊಂದಾಯಿಸಿಕೊ0ಡಿದ್ದ, ಕಳೆದ ಆಗಸ್ಟ್ 7  ರಂದು ಇದೇ ಮ್ಯಾಟ್ರಿಮೋನಿಯಲ್ಲಿ ನೊಂದಾಯಿಸಿಕೊ0ಡಿದ್ದ ಕೋಮಲ ರಾಘವೇಂದ್ರ ರಿಕ್ವೆಸ್ಟ್ ಕಳಿಸಿ ಪರಿಚಯ ಮಾಡಿಕೊಳ್ಳುತ್ತಾಳೆ.

ಆರಂಭದಲ್ಲಿ ತಾನು ಸಭ್ಯಸ್ತ ಸಂಪ್ರದಾಯಸ್ಥ ಹೆಣ್ಣುಮಗಳು ಅಂತ ಬಿಂಬಿಸಿಕೊ0ಡಿದ್ದಳು. ನಂತರ ತನ್ನ ಮೃತ ಗಂಡನಿಗೆ 6 ಕೋಟಿ ಹಣ ಬರಬೇಕಿದೆ ಅದಕ್ಕೆ 48 ಲಕ್ಷ ಹಣ ಟ್ಯಾಕ್ಸ್ ಕಟ್ಟಬೇಕು, ಆದರೆ ನನ್ನ ಅಕೌಂಟ್ ಬ್ಲಾಕ್ ಆಗಿದೆ, ಸಹಾಯ ಮಾಡಿ ಅಂತ ಕೇಳಿಕೊಂಡಿದ್ದಳು. ನಿಜ ಅಂತ ನಂಬಿದ್ದ ರಾಘವೇಂದ್ರ ಆಕೆ ನೀಡಿದ್ದ ಆಕೆಯ ತಾಯಿ ರಾಧಾ ಅವರ ಖಾತೆಗೆ 7.40 ಲಕ್ಷ ಹಣ ಜಮೆ ಮಾಡಿದ್ದ, ಆಕೆಯ ಚಲನವಲಗಳ ಬಗ್ಗೆ ಅನುಮಾನಗೊಂಡ ಗೌರಿಬಿದನೂರಿನ ರಾಘವೇಂದ್ರ ಕೋಮಲ ಫೆಸ್ ಬುಕ್, ಇನ್ಸಾಗ್ರಾಮ್ ಅಕೌಂಟ್ ಗಳ ಮೇಲೆ ನಿಗಾವಹಿಸಿದಾಗ ಆಕೆ ಹೇಳಿರೋದೆಲ್ಲೇ ಸುಳ್ಳು ತಾನು ಮೋಸಹೋಗಿದ್ದೇನೆ ಅಂತ ಗೊತ್ತಾಗಿದೆ.

ನಂತರ ರಾಘವೇಂದ್ರ ಚಿಕ್ಕಬಳ್ಳಾಪುರ ನಗರದ ಸಿಇಎನ್ ಸೈಬರ್ ಪೊಲೀಸ್ ಠಾಣೆಗೆ ಹೋಗಿ ಕೋಮಲ ವಿರುದ್ದ ದೂರು ನೀಡಿದ್ದ. ಈ ಬಗ್ಗೆ ದೂರು ಪಡೆದಿದ್ದ ಚಿಕ್ಕಬಳ್ಳಾಪುರ ನಗರದ ಸೈಬರ್ ಠಾಣೆ ಪೊಲೀಸರು 20 ದಿನಗಳ ಹಿಂದೆ ಕೋಮಲಾರ0ನ್ನ ಬಂಧಿಸಿ ಜೈಲಿಗೆ ಕಳಿಸಿದ್ದರು. ನಂತರ ಕೋಮಲ ಇತ್ತೀಚೆಗೆ ಜಾಮೀನು ಪಡೆದು ಹೊರಗೆ ಬಂದಿದ್ದಳು, ಇಂದು ಚಿಕ್ಕಬಳ್ಳಾಪುರ ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ತನಗೆ ರಾಘವೇಂದ್ರ, ನಾಗರಾಜು ಸೇರಿದಂತೆ ಹಲವರು ತನ್ನನ್ನ ಲೈಂಗಿಕವಾಗಿ ಬಳಸಿಕೊಂಡು ತನಗೆ ಮೋಸ ಮಾಡಿದ್ದಾರೆ ಅಂತ ಆರೋಪಿಸಿದ್ದಾಳೆ.

About The Author

Leave a Reply

Your email address will not be published. Required fields are marked *