ಬಿಜೆಪಿ ತಂತ್ರಕ್ಕೆ ಕಾಂಗ್ರೆಸ್ ಪ್ರತಿತಂತ್ರ ಹೂಡಿತೇ?
1 min readಬಿಜೆಪಿ ತಂತ್ರಕ್ಕೆ ಕಾಂಗ್ರೆಸ್ ಪ್ರತಿತಂತ್ರ ಹೂಡಿತೇ?
ಬಿಜೆಪಿ ಬೆನ್ನಲ್ಲಿಯೇ ಕಾಂಗ್ರೆಸ್ ಸದಸ್ಯರಿಂದಲೂ ಪ್ರವಾಸ
ಮಂಗಳವಾರ ರಾತ್ರಿ ಪ್ರವಾಸಕ್ಕೆ ತೆರಳಿರುವ ಕಾಂಗ್ರೆಸ್ ಸದಸ್ಯರು
ಕಾಂಗ್ರೆಸ್‌ಗೆ ಬೆಂಬಲ ನೀಡಲು ಮುಂದಾಯಿತೇ ಜೆಡಿಸ್?
ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷ ಚುನಾವಣೆ ಇದೀಗ ಕಾವೇರತೊಡಗಿದೆ. ಮೊನ್ನೆ ತಾನೇ 18 ಮಂದಿ ಬಿಜೆಪಿ ಬೆಂಬಲಿತ ಸದಸ್ಯರ ತಂಡ ಡಾರ್ಜಲಿಂಗ್‌ಗೆ ಪ್ರವಾಸ ತೆರಳಿದ್ದು ನೆನಪಿದೆ ಅಲ್ಲವೇ, ಅಂದು ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ಸದಸ್ಯರಿಂದ ಗಲುಬೆ ಸೃಷಿಸಿದ ಬಗ್ಗೆಯೂ ಸಿಟಿವಿ ಹೇಳಿದೆ. ಈ ಎಲ್ಲ ಬೆಳವಣಿಗೆಗಳ ನಡುವೆ ಇದೀಗ ಕಾಂಗ್ರೆಸ್ ಸದಸ್ಯರು ಕೂಡಾ ಪ್ರವಾಸಕ್ಕೆ ತೆರಳಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಬಿಜೆಪಿಗೆ ಟಾಂಗ್ ನೀಡುವ ರೀತಿಯಲ್ಲಿ ಜೆಡಿಎಸ್ ಸದಸ್ಯರೂ ಪ್ರವಾಸಕ್ಕೆ ತೆರಳಿದ್ದಾರೆಂಬ ಗುಸುಗುಸು ಇದೀಗ ಬಿಜೆಪಿ ವಲಯದಲ್ಲಿ ಆತಂಕಕ್ಕೆ ಕಾರಣವಾಗಿದೆ.
ಹೌದು, ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷೆ, ಉಪಾಧ್ಯಕ್ಷರ ಆಯ್ಕೆ ಎಂಬುದು ಈಗ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿಗೆ ಪ್ರತಿಷ್ಠೆಯಾಗಿ ಪರಿಣಮಿಸಿದೆ. ಕಾಂಗ್ರೆಸ್ ಪಕ್ಷಕ್ಕೆ ಸೆಡ್ಡು ಹೊಡೆದು ಬಿಜೆಪಿಯ 18 ಮಂದಿ ಸದಸ್ಯರು ಮೂರು ದಿನಗಳ ಹಿಂದೆ ಈಶಾನ್ಯ ರಾಜ್ಯಗಳತ್ತ ಪ್ರವಾಸಕ್ಕೆ ತೆರಳಿದ್ದಾರೆ. ಅಲ್ಲದೆ, ಕಾಂಗ್ರೆಸ್‌ನ 6 ಮಂದಿ ಸದಸ್ಯರು ಬಿಜೆಪಿ ಬೆಂಬಲಿಸಲು ಮುಂದಾದ ಕಾರಣ ಕಾಂಗ್ರೆಸ್‌ನಲ್ಲಿ ತೀವ್ರ ಕಳವಳ ವ್ಯಕ್ತವಾಗಿತ್ತು. ಈವರೆಗಿನ ಲೆಕ್ಕಾಚಾರಗಳಂತೆ ಬಿಜೆಪಿ ಪರ ಬಹುಮತಕ್ಕೆ ಅಗತ್ಯವಿರುವ ಸದಸ್ಯರಿದ್ದಾರೆ ಎಂಬುದು ದೃಢವಾಗಿತ್ತು. ಆದರೆ ಇದೀಗ ಲೆಕ್ಕಾಚಾರಗಳು ಸ್ವಲ್ಪ ಮಟ್ಟಿಗೆ ಏರುಪೇರಾಗುವ ಸೂಚನೆಗಳು ಗೋಚರಿಸತೊಡಗಿವೆ.
ಇದಕ್ಕೆ ಕಾರಣ ಈವರೆಗೂ ಬಿಜೆಪಿ ಬೆಂಬಲಕ್ಕೆ ಇದ್ದ ಜೆಡಿಎಸ್ ಸದಸ್ಯರೊಬ್ಬರು ಆರೋಗ್ಯದ ನೆಪ ಹೇಳಿ ಡಾರ್ಜಲಿಂಗ್ ಪ್ರಾವಸದಿಂದ ದೂರ ಉಳಿದಿದ್ದರು. ಇವರೊಂದಿಗೆ 27ನೇ ವಾರ್ಡಿನ ಸದಸ್ಯೆ ನೇತ್ರಾವತಿ ಅವರೂ ಪ್ರವಾಸಕ್ಕೆ ತೆರಳದೆ ಉಳಿದಿದ್ದರು. ಇದೀಗ ಕಾಂಗ್ರೆಸ್ ಪ್ರವಾಸಕ್ಕೆ ತೆರಳಿದ್ದು, ಈ ಪ್ರವಾಸಕ್ಕೆ ಜೆಡಿಎಸ್ ಸದಸ್ಯರೂ ತೆರಳಿರುವ ಬಗ್ಗೆ ಮೂಲಗಳು ದೃಢಪಡಿಸಿವೆ. ಇದರಿಂದ ಕಾಂಗ್ರೆಸ್ ವಲಯದಲ್ಲಿ ಸಂಖ್ಯಾಬಲ ಏರತೊಡಗಿದ್ದು, 13ನೇ ವಾರ್ಡಿನ ಸದಸ್ಯರಾದ ನಿರ್ಮಲಾಪ್ರಭು ಮತ್ತು 27ನೇ ವಾರ್ಡಿನ ನೇತ್ರಾವತಿ ಅವರು ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪ್ರವಾಸಗಳಿಗೂ ತೆರಳದ ಸದಸ್ಯರಾಗಿರುವುದು ವಿಶೇಷವಾಗಿದೆ.
ಪ್ರಸ್ತುತ ಕಾಂಗ್ರೆಸ್‌ನಲ್ಲಿ 10ಮಂದಿ ಸದಸ್ಯರು ಪಕ್ಷದ ಪರ ಇದ್ದು, ಇವರೊಂದಿಗೆ 12ನೇ ವಾರ್ಡಿನ ಪಕ್ಷೇತರ ಸದಸ್ಯ ರ್ಜಾಜ್ ಅವರು ಕಾಂಗ್ರೆಸ್ ಬೆಂಬಲಕ್ಕೆ ನಿಂತಿದ್ದಾರೆ. ಅಳ್ಲದೆ ಈಗ ಕಾಂಗ್ರೆಸ್ ಹೇಳುತ್ತಿರುವಂತೆ ಜೆಡಿಎಸ್‌ನ ಇಬ್ಬರು ಸದಸ್ಯರೂ ಕಾಂಗ್ರೆಸ್ ಬೆಬಂಲಿಸಿದರೂ ಕಾಂಗ್ರೆಸ್ ಬಲ 12ಕ್ಕೆ ಏರಿದೆ. ಪ್ರಸ್ತುತ ನಗರಸಭೆಯಲ್ಲಿ ಒಟ್ಟು 21 ಸದಸ್ಯರಿದ್ದು, ಇವರೊಂದಿಗೆ ಇಬ್ಬರು ವಿಧಾನಪರಿಷತ್ ಸದಸ್ಯರು, ಒಬ್ಬ ಸಂಸದ, ಒಬ್ಬ ಶಾಸಕ ಸೇರಿ ಹೆಚ್ಚುವರಿಯಾಗಿ ೪ ಮತಗಳಿದ್ದು, ಇದರಿಂದ ನಗರಸಭೆ ಮತದಾರರ ಸಂಖ್ಯೆ 35ಕ್ಕೆ ಏರಲಿದೆ. ಹಾಗಾಗಿ ನಗರಸಭೆ ಅಧ್ಯಕ್ಷರಾಗಲು ಸರಳ ಬಹುಮತಕ್ಕೆ 18 ಮತಗಳ ಅಗತ್ಯವಿದೆ.
ಈಗಾಗಲೇ ಬಿಜೆಪಿಗೆ 19 ಮಂದಿ ಸದಸಯ್ರಿರುವ ಕಾರಣ ಸುಲಭವಾಗಿಯೇ ಬಿಜೆಪಿ ಅಧಿಕಾರಕ್ಕೆ ಏರಲಿದೆ ಎಂಬ ಲೆಕ್ಕಾಚಾರಗಳಿವೆ. ಆದರೆ ಬಿಜೆಪಿಯ ಈ ತಂತ್ರಕ್ಕೆ ಕಾಂಗ್ರೆಸ್ ಪ್ರತಿತಂತ್ರ ರೂಪಿಸುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ನಗರಸಭೆ ಸದಸ್ಯರು ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಹಿಂಬಾಗಿಲ ಮೂಲಕ ರಾಜಕೀಯ ಮಾಡಲು ಯತ್ನಿಸುತ್ತಿದೆ ಎನ್ನಲಾಗಿದೆ. ವಿಧಾನಪರಿಷತ್‌ನ ಹಲವು ಸದಸ್ಯರನ್ನು ಚಿಕ್ಕಬಳ್ಳಾಪುರ ವ್ಯಾಪ್ತಿಯಲ್ಲಿ ಸೇರಿಸಿ, ಅವರ ಮತ ಪಡೆಯುವ ಮೂಲಕ ಅಧಿಕಾರ ಹಿಡಿಯಲು ಪ್ರಯತ್ನಿಸುತ್ತಿದೆ ಎನ್ನಲಾಗಿದೆ. ಈ ಬಗ್ಗೆ ಸುಳಿವು ದೊರೆತ ಕಾರಣದಿಂದಲೇ ಬಿಜೆಪಿ ನಿಯೋಗ ಇತ್ತೀಚಿಗೆ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಇಂತಹ ಕೆಲಸಗಳಿಗೆ ಅವಕಾಶ ನೀಡದಂತೆ ಮನವಿ ಮಡಿತ್ತು.
ಆದರೂ ಪ್ರಸ್ತುತ ಚಿಕ್ಕಬಳ್ಳಾಪುರ ವ್ಯಾಪ್ತಿಯಲ್ಲಿರುವ ಇಬ್ಬರು ನಗರಸಭಾ ಸದಸ್ಯರ ಜೊತೆಗೆ ಇನ್ನೂ ಮೂವರು ಸದಸ್ಯರನ್ನು ಸೇರಿಸಿ, ಮತ ಪಡೆಯಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎನ್ನಲಾಗಿದೆ. ವಿಧಾನಪರಿಷತ್ ಸದಸ್ಯರಾದ ಗೋವಿಂದರಾಜು, ಉಮಾಶ್ರೀ ಮತ್ತು ಎಂ.ಆರ್. ಸೀತಾರಾಂ ಅವರ ಮತಗಳನ್ನು ಚಿಕ್ಕಬಳ್ಳಾಪುರ ವ್ಯಾಪ್ತಿಯಲ್ಲಿ ಸೇರಿಸಿ, ನಗರಸಬೆ ಅಧ್ಯಕ್ಷ ಚುನಾವಣಯೆಲ್ಲಿ ಅವರ ಮತ ಪಡೆದು ಅಧಿಕಾರ ಹಿಡಿಯಲು ಯತ್ನಿಸುತ್ತಿದೆ ಎಂಬುದು ವಿರೋಧಿ ಬಣದ ಆರೋಪವಾಗಿದೆ. ಆದರೆ ಈ ಲೆಕ್ಕಾಚಾರದಲ್ಲಿ ಇನ್ನೂ ಮೂವರು ಮತದಾರರು ಸೇರ್ಪಜೆಯಾದರೆ ಆಗ ನಗರಸಭೆ ಅಧ್ಯಕ್ಷ ಚುನಾವಣೆಯ ಮತದಾರರ ಸಂಖ್ಯೆ ೩೮ಕ್ಕೆ ಏರಲಿದ್ದು, ಆಗ ಸರಳ ಬಹುಮತಕ್ಕೆ ೨೦ ಮತಗಳ ಅಗತ್ಯವಾಗಲಿದೆ.
ಆದರೂ ಪ್ರಸ್ತುತ ಪ್ರವಾಸಕ್ಕೆ ತೆರಳಿರುವ 18 ಮಂದಿ ಸದಸ್ಯರು ಮತ್ತು ಪ್ರವಾಸಕ್ಕೆ ತೆರಳದೆ ಚಿಕ್ಕಬಳ್ಳಾಪುರದಲ್ಲಿಯೇ ಉಳಿದಿರುವ ಇಬ್ಬರ ಮತ ಮತ್ತು ಸಂಸದರ ಮತ ಸೇರಿ ಬಿಜೆಪಿಗೆ 12 ಮತಗಳ ಬೆಂಬಲವಿದೆ. ಹಾಗಾಗಿ ಬಿಜೆಪಿಗೆ ಆಗಲೂ ಸ್ಪಷ್ಟ ಬಹುಮತ ದೊರೆಯಲಿದೆ. ಹಾಗಾಗಿ ಅಧಿಕಾರ ಬಿಜೆಪಿ ಹಿಡಿಯುವುದು ಸುಲಭವಾಗಿಯೇ ಇದೆ. ಆದರೆ ಪ್ರಸ್ತುತ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಆಡಳಿತದಲ್ಲಿದ್ದು, ಬಿಜೆಪಿ ಬೆಂಬಲಿಸುವ ಕಾಂಗ್ರೆಸ್ ಸದಸ್ಯರು ಅನರ್ಹತೆಯ ಇಕ್ಕಳದಲ್ಲಿ ಸಿಕ್ಕುವ ಆತಂಕ ಎದುರಾಗಿದೆ.
ಈ ಹಿಂದೆ ಚಿಂತಾಮಣಿ ನಗರಸಭೆ ಅಧ್ಯಕ್ಷ ಚುನಾವಣೆಯಲ್ಲಿ ಷಪೀಕ್ ಅಹ್ಮದ್ ಎಂಬ ಜೆಡಿಎಸ್ ನಗರಸಭಾ ಸದಸ್ಯ ಆಗಿನ ಮಾಜಿ ಶಾಸಕರಾಗಿದ್ದ ಡಾ.ಎಂ.ಸಿ. ಸುಧಾಕರ್ ಅವರ ಬಣವನ್ನು ಬೆಂಬಲಿಸಿದ ಕಾರಣ ಅನರ್ಹರಾಗಿದ್ದರು. ನಂತರ ಅವರು ಉಪ ಚುನಾವಣಯೆಲ್ಲಿ ಸದಸ್ಯರಾಗಿ ಆಯ್ಕೆಯಾಗಿದ್ದರು. ಇದೀಗ ಚಿಕ್ಕಬಳ್ಳಾಪುರ ನಗರಸಭೆ ಸದಸ್ಯರಿಗೂ ಅದೇ ಆತಂಕ ಎದುರಾಗಿದೆ. ಯಾಕೆಂದರೆ ಪ್ರಸ್ತುತ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದು, ಅನರ್ಹಗೊಳಿಸಿದರೆ ಹೇಗೆ ಎಂಬ ಆತಂಕ ಕಾಡುತ್ತಿದೆ. ಆದರೆ ಅದು ಅಷ್ಟು ಸುಲಭ ಎಂಬ ಪ್ರಶ್ನೆಗೆ ಉತ್ತರ ಇನ್ನೂ ಸಿಕ್ಕಿಲ್ಲ.
ಇನ್ನು ಪ್ರಸ್ತುತ ಗೌರಿ ಗಣೇಶ ಹಬ್ಬ ಸಮೀಪಿಸಿದೆ. ಸೆಪ್ಟೆಂಬರ್ 70ರದು ಗೌರಿಗಣೇಶ ಹಬ್ಬ ಇದ್ದು, ನಗರಸಭೆಯ 29 ಸದಸ್ಯರು ಇದೀಗ ಪ್ರವಾಸದ ನಿಮಿತ್ತ ಹೊರ ರಾಜ್ಯಗಳಲ್ಲಿದ್ದಾರೆ. ಇಂತಹ ಸಮಯದಲ್ಲಿ ಪ್ರವಾಸದ ಅಗತ್ಯ ಏನಿತ್ತು ಎಂಬುದು ನಾಗರಿಕರ ಪ್ರಶ್ನೆಯಾಗಿದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಪ್ರಸ್ತುತ ನಗರಸಭೆ ಅವಧಿ ಉಳಿದಿರುವುದು ಕೇವಲ 13 ತಿಂಗಳು ಮಾತ್ರ. ಈ ಅಲ್ಪಾವಧಿಗೆ ರಾಷ್ಟಿಯ ಪಕ್ಷಗಳ ನಡುವೆ ಇಷ್ಟೊಂದು ಪ್ರತಿಷ್ಠೆಯ ಅಗತ್ಯ ಏನಿತ್ತು ಎಂಬುದು ಪ್ರಜ್ಞಾವಂತರ ಪ್ರಶ್ನೆಯಾಗಿದೆ. ಯಾಕೆಂದರೆ ಪ್ರವಾಸ ಎಂದರೆ ಸಾಮಾನ್ಯ ಮಾತಲ್ಲ.
ಈಗಾಗಲೇ ವಿಮಾನಗಳ ಮೂಲಕ ಸದಸ್ಯರು ಪ್ರವಾಸಕ್ಕೆ ತೆರಳಿದ್ದು, ಬಹುತೇಕ ಪಂಚತಾರಾ ಹೋಟೆಲ್‌ಗಳು ಇಲ್ಲವೇ ರೆಸಾರ್ಟ್ಗಳಲ್ಲಿ ವಾಸ್ತವ್ಯ ಹೂಡಿದ್ದಾರೆ. ವಿಮಾನ ಟಿಕೆಟ್‌ನಿಂದ ಹೋಟೆಲ್ ವೆಚ್ಚದವರೆಗೂ ಪ್ರತಿನಿತ್ಯ ಲಕ್ಷಗಳಲ್ಲಿಯೇ ವೆಚ್ಚ ಮಾಡಬೇಕಿದೆ. ಜೊತೆಗೆ ಸದಸ್ಯರಿಗೂ ಹಣ ನೀಡದೆ ಬೆಂಬಲ ನೀಡಲು ಸಾಧ್ಯವಿಲ್ಲ ಎಂಬುದು ಬಹಿರಂಗ ಸತ್ಯ, ಅದೂ ಲಕ್ಷಗಳಲ್ಲಿಯೇ ಎಂಬುದು ವಿಶೇಷ. ಈ ಎಲ್ಲ ವೆಚ್ಚಗಳನ್ನು ಗಮನಿಸಿದರೆ ಕನಿಷ್ಠ ಎರಡು ಕೋಟಿಗೂ ಹೆಚ್ಚು ವೆಚ್ಚವಾಗಲಿದೆ. ಅಂದರೆ ಪ್ರಸ್ತುತ ನಗರಸಭೆ ಅಧ್ಯಕ್ಷರಾಗಲು ಕನಿಷ್ಠ 2 ಕೋಟಿಯಾದರು ಖರ್ಚು ಮಾಡಲೇಬೇಕಿದೆ. ಇರುವ 13 ತಿಂಗಳ ಅವಧಿಗೆ ಈ ಪ್ರಮಾಣದ ವೆಚ್ಚ ಮಾಡಿ ಅಧ್ಯಕ್ಷರಾಗುವವರು ನಗರ ಮತ್ತು ನಗರಸಭೆ ಅಭಿವೃದ್ಧಿಗೆ ಯಾವ ರೀತಿಯ ಕಾಳಜಿ ತೋರಲಿದ್ದಾರೆ ಎಂಬ ಸಾರ್ವಜನಿಕರ ಪ್ರಶ್ನೆಗೆ ಉತ್ತರ ನೀಡುವವರು ಇಲ್ಲವಾಗಿದ್ದಾರೆ.
ಇನ್ನು ಬಿಜೆಪಿಗೆ ಪ್ರಸ್ತುತ ಲೆಕ್ಕಾಚಾರದಲ್ಲಿ ಸ್ಪಷ್ಟ ಬಹುಮತ ಇದೆಯಾದರೂ ಅದು ಅಧ್ಯಕ್ಷ ಅಭ್ಯರ್ಥಿ ಯಾರು ಎಂಬುದರ ಮೇಲೆ ಸದಸ್ಯರ ಬೆಂಬಲ ನಿರ್ಧಾರವಾಗಲಿದೆ ಎಂಬುದು ವಿಶೇಷ. ಪ್ರಸ್ತುತ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳಲ್ಲಿಯೂ ಈವರೆಗೆ ಅಧ್ಯಕ್ಷ ಅಭ್ಯರ್ಥಿ ಯಾರು ಎಂಬುದನ್ನು ಅಧಿಕೃತವಾಗಿ ಪ್ರಕಟಿಸಿಲ್ಲ. ಹಾಗಾಗಿ ಉಭಯ ಪಕ್ಷಗಳಲ್ಲಿಯೂ ಅಧ್ಯಕ್ಷ ಅಭ್ಯರ್ಥಿ ಯಾರು ಎಂಬುದರ ಮೇಲೆ ಬೆಂಬಲ ನಿರ್ಧರಿಸುವ ಸದಸ್ಯರೂ ಪ್ರಸ್ತುತ ಇರುವುದು ವಿಶೇಷ.
ಇನ್ನು ಬಿಜೆಪಿಯಲ್ಲಿ ಗಜೇಂದ್ರ ಅಭ್ಯರ್ಥಿಯಾದಲ್ಲಿ ತಮ್ಮ ಬೆಂಬಲ ಇಲ್ಲ ಎಂದು ಹೆಸರು ಬಹಿರಂಗ ಪಡಿಸಿಲು ಇಚ್ಚಿಸದ ಸದಸ್ಯರೊಬ್ಬರು ಸಿಟಿವಿ ನ್ಯೂಸ್‌ಗೆ ಸ್ಪಷ್ಟಪಡಿಸಿದ್ದು, ಕಾಂಗ್ರೆಸ್‌ನಲ್ಲಿ ಅಂಬರೀಷ್ ಅಭ್ಯರ್ಥಿಯಾದಲ್ಲಿ ಅವರನ್ನು ಬೆಂಬಲಿಸಲೂ ಸಿದ್ಧ ಎಂದು ಅವರು ಹೇಳಿದ್ದಾರೆ. ಇದಕ್ಕೆ ಕಾರಣ ಕಷ್ಟಕಾಲದಲ್ಲಿ ನೆರವಾಗಿರುವ ಕೃತಜ್ಞತೆ ಮಾತ್ರವಾಗಿದೆ. ಹಾಗಾಗಿ ಬಿಜೆಪಿಯಲ್ಲಿ ಸ್ಪಷ್ಟ ಬಹುಮತ ಇದ್ದರೂ ಗಜೇಂದ್ರ ಅವರು ಅಧ್ಯಕ್ಷರಾಗಲು ಎಷ್ಟು ಮಂದಿ ಸದಸ್ಯರು ಸಹಕಾರ ನೀಡಲಿದ್ದಾರೆ ಎಂಬ ಪ್ರಶ್ನೆ ಎದುರಾಗಿದೆ.
ಒಟ್ಟಿನಲ್ಲಿ ಗೌರಿ ಗಣೇಶ ಹಬ್ಬಕ್ಕೆ ತಮ್ಮ ಮನೆಗಳಿಗೆ ಗೈರು ಹಾಜರಾಗಿರುವ ನಗರಸಭಾ ಸದಸ್ಯರು, ಅಂತಿಮವಾಗಿ ಯಾರನ್ನು ಪುರಪಿಕೃವಾಗಿ ಆಯ್ಕೆ ಮಾಡಲಿದ್ದಾರೆ ಎಂಬ ಕುತೂಹಲ ಕಾಂಗ್ರೆಸ್ ಪ್ರವಾಸದ ನಂತರ ತೀವ್ರವಾಗಿದ್ದು, ಅದು ಸ್ಪಷ್ಟವಾಗಲು ಸೆಪ್ಟೆಂಬರ್ 12ರ ವರೆಗೆ ಕಾಯದೆ ವಿಧಿಯಿಲ್ಲ ಎಂಬುದು ಸತ್ಯ.