ದೇವರಮಳ್ಳೂರು ಹಾಲು ಉತ್ಪಾದಕರ ಸಂಘದ ವಾರ್ಷಿಕ ಸಭೆ
1 min readದೇವರಮಳ್ಳೂರು ಹಾಲು ಉತ್ಪಾದಕರ ಸಂಘದ ವಾರ್ಷಿಕ ಸಭೆ
ಎಎಂಸಿಎಸ್ ತಂತ್ರಾ0ಶದಲ್ಲಿ ಹಾಲಿನ ಗುಣಮಟ್ಟ ಖಾತ್ರಿ
ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಎಎಂಸಿಎಸ್ ರೈತರ ಆಪ್ ಅನುಷ್ಠಾನ ಮಾಡಿದ್ದು, ಇದರಲ್ಲಿ ರೈತರಿಗೆ ತಾವು ಪ್ರತಿ ದಿನ ಹಾಕುವ ಹಾಲಿನ ಪ್ರಮಾಣ, ಅದರ ಗುಣಮಟ್ಟದ ಪ್ರಮಾಣ, ಸಿಗುವ ಹಣದ ಪ್ರಮಾಣದ ಮಾಹಿತಿ ಸಿಗಲಿದೆ ಎಂದು ಕೆಎಂಎï ನಿರ್ದೇಶಕ ಆರ್.ಶ್ರೀನಿವಾಸ್ ರಾಮಯ್ಯ ತಿಳಿಸಿದರು.
ಶಿಡ್ಲಘಟ್ಟ ತಾಲೂಕಿನ ದೇವರಮಳ್ಳೂರು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ನಡೆದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಭು ಕೆಎಂಎಫ್ ನಿರ್ದೇಶಕ ಆರ್.ಶ್ರೀನಿವಾಸ್ ರಾಮಯ್ಯ, ಡೇರಿಗಳಲ್ಲಿ ಎಎಂಸಿಎಸ್ ರೈತರ ಆಪ್ ತಂತ್ರಾAಶ ಅಳವಡಿಸಿದ್ದು, ರೈತರ ಮೊಬೈಲ್‌ಗಳಲ್ಲೂ ಆಪ್ ಅಳವಡಿಸಿಕೊಳ್ಳಬಹುದು. ಅದರಲ್ಲಿ ರೈತರು ತಾವು ಹಾಕುವ ಹಾಲಿನ ಪ್ರಮಾಣ, ಗುಣಮಟ್ಟ, ಸಿಗುವ ಬೆಲೆಯ ವಿವರವನ್ನು ಆಯಾ ದಿನವೇ ಸಿಗಲಿದೆ ಎಂದರು.
ಇದರಿ0ದ ಹಾಲಿನ ಗುಣಮಟ್ಟಕ್ಕೆ ತಕ್ಕ ಬೆಲೆ ಸಿಗಲಿದೆ. ಎಲ್ಲ ಡೇರಿಗಳಲ್ಲೂ ಈ ತಂತ್ರಾ0ಶ ಅಳವಡಿಕೆ ಆಗಬೇಕು, ಆದರೆ ಇನ್ನೂ ಸಾಕಷ್ಟು ಡೇರಿಗಳಲ್ಲಿ ಈ ತಂತ್ರಾAಶ ಅಳವಡಿಸಿಕೊಳ್ಳುವ ಕೆಲಸ ಮುಂದಿನ ದಿನಗಳಲ್ಲಿ ಆಗಲಿದೆ, ಇದರಿಂದ ಎಲ್ಲ ರೈತರಿಗೆ ಗುಣಮಟ್ಟದ ಆಧಾರದಲ್ಲಿ ಹಾಲಿಗೆ ಬೆಲೆ ಸಿಗಲಿದೆ ಎಂದು ಹೇಳಿದರು. ಸಹಕಾರ ಸಂಘಗಳ ನಿರ್ದೇಶಕರು ತಮ್ಮ ಸ್ವಾರ್ಥ, ತನ್ನವರು ಎನ್ನುವ ಭಾವನೆ ಬಿಟ್ಟು ಸಹಕಾರ ಸಂಘದ ಏಳಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾರ್ಯನಿರ್ವಹಿಸುವಂತೆ ಮನವಿ ಮಾಡಿದರು.
ಡೇರಿ ಅಧ್ಯಕ್ಷ ಎಂ.ದೇವರಾಜ್ ಅಧ್ಯಕ್ಷತೆ ವಹಿಸಿದ್ದರು. ವಿಸ್ತರಣಾಕಾರಿ ವಿ.ಶ್ರೀನಿವಾಸ್ ವಾರ್ಷಿಕ ಲೆಕ್ಕಪತ್ರ ಮಂಡಿಸಿ ಸಭೆಯಲ್ಲಿ ಅನುಮೋದನೆ ಪಡೆದುಕೊಂಡರು. ಉಪಾಧ್ಯಕ್ಷ ಎಂ.ಕೇಶವರೆಡ್ಡಿ, ನಿರ್ದೇಶಕ ಕೃಷ್ಣಪ್ಪ, ಬಿ.ಎಲ್.ನಂಜು0ಡಪ್ಪ, ಎಂ.ಆನ0ದ್, ಮುನಿರೆಡ್ಡಿ, ಲಿಂಗಪ್ಪ, ಶಶಿಕುಮಾರ್, ಅಶೋಕ್ ಕುಮಾರ್, ವೆಂಕಟೇಶ್, ಗೌರಮ್ಮ, ರಾಧಮ್ಮ, ಬೈರಮ್ಮ ಇದ್ದರು.