ಪ್ರಮುಖ ಆರೋಪಿಗಳ ಬಂಧಿಸುವ0ತೆ ಆಗ್ರಹ
1 min readಪ್ರಮುಖ ಆರೋಪಿಗಳ ಬಂಧಿಸುವ0ತೆ ಆಗ್ರಹ
ಗ್ರಾಪಂ ಸದಸ್ಯೆ ಪತಿ ಕೊಲೆ ಪ್ರಕರಣದ ಆರೋಪಿಗಳು
ನಂಜನಗೂಡು ಉಪ್ಪಾರ ಸಂಘದಿ0ದ ಧರಣಿ
ನ0ಜನಗೂಡು ತಾಲ್ಲೂಕಿನ ದೇವರಸನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನದ ವಿಚಾರವಾಗಿ ಕೆಬ್ಬೇಪುರ ಗ್ರಾಮದ ದೇವರಸನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯೆ ಸೌಭಾಗ್ಯ ಎಂಬವರ ಪತಿ ನಂಜು0ಡಸ್ವಾಮಿ ಎಂಬುವರನ್ನು ಕೊಲೆ ಮಾಡಲಾಗಿತ್ತು. ಕೊಲೆಗೆ ಸಂಬ0ಧಿಸಿ ಐದು ಜನ ಆರೋಪಿಗಳನ್ನು ಬಂಧಿಸಲಾಗಿದ್ದು, ಮತ್ತಿಬ್ಬರು ಆರೋಪಿಗಳಾದ ಬಾಲಚಂದ್ರ ಮತ್ತು ಗೋಳೂರು ಮಂಜು ಎಂಬವರನ್ನು ಬಂಧಿಸಲು ಒತ್ತಾಯಿಸಲಾಗಿದೆ.
ನಂಜನಗೂಡು ನಗರದ ತಾಲ್ಲೂಕು ಆಡಳಿತ ಭವನದ ಮುಂಭಾಗದಲ್ಲಿ ಜಮಾಯಿಸಿದ ಉಪ್ಪಾರ ಸಂಘದ ಪದಾಧಿಕಾರಿಗಳು ಮತ್ತು ಮುಖಂಡರು ದಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ಅವರಿಗೆ ಮನವಿ ಸಲ್ಲಿಸಿ ಪ್ರಮುಖ ಆರೋಪಿಗಳನ್ನು ಬಂಧಿಸಲು ಗಡುವು ನೀಡಿ ಎಚ್ಚರಿಸಿದರು.
ದೇವರಸನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷ ಸುಮತಿ ಎಂಬವರು ರಾಜೀನಾಮೆ ನೀಡಿದ್ದಾರೆ. ಜಿಲ್ಲಾಧಿಕಾರಿಗಳು ಮತ್ತು ರಾಜ್ಯ ಸರ್ಕಾರ ಮೃತ ವ್ಯಕ್ತಿ ನಂಜು0ಡಸ್ವಾಮಿ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಿ ಸೌಭಾಗ್ಯ ಎಂಬುವರಿಗೆ ಅಧ್ಯಕ್ಷ ಸ್ಥಾನ ಕಲ್ಪಿಸಿ ಕೊಡಬೇಕು. ಇನ್ನುಳಿದ ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ತಾಲ್ಲೂಕು ಉಪಾರರ ಸಂಘದ ಪದಾಧಿಕಾರಿಗಳು ಹಾಗೂ ಉಪ್ಪಾರ ಸಮುದಾಯದ ಮುಖಂಡರು ಭಾಗವಹಿಸಿದ್ದರು.