ಉಚಿತ ಜಾನುವಾರು ಮೇವು ವಿತರಣೆ

ವಿಶ್ವ ಪ್ರಸಿದ್ಧ ನಂದಿ ಗಿರಿಧಾಮಕ್ಕೆ ಪ್ರವಾಸಿಗರ ದಂಡು

ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಶ್ರೀನಿವಾಸಪುರದಲ್ಲಿ ಪ್ರತಿಭಟನೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಖಂಡನೆ

December 24, 2024

Ctv News Kannada

Chikkaballapura

ಅಂಗನವಾಡಿಗೆ ವಿತರಣೆಯಾದ ಬೆಲ್ಲದಲ್ಲಿ ಸತ್ತ ಇಲಿ!

1 min read

ಅಂಗನವಾಡಿಗೆ ವಿತರಣೆಯಾದ ಬೆಲ್ಲದಲ್ಲಿ ಸತ್ತ ಇಲಿ!
ಗರ್ಭಿಣಿಯರು, ಬಾಣಂತಿಯರಿಗೆ ವಿತರಿಸುವ ಆಹಾರ
ಅಂಗನವಾಡಿ ಕೇಂದ್ರದಲ್ಲಿ ವಿತರಿಸಿದ ಬೆಲ್ಲದಲ್ಲಿ ಸತ್ತ ಇಲಿ ಪತ್ತೆ

ವೀಕ್ಷಕರೇ, ಇದು ಸರ್ಕಾರ ವಿತರಿಸುವ ಪೌಷ್ಠಿಕ ಆಹಾರದ ಗುಣಮಟ್ಟಕ್ಕೆ ನಿದರ್ಶನ. ಅದರಲ್ಲೂ ಗರ್ಭಿಣಿಯರು, ಬಾಣಂತಿಯರು ಮತ್ತು ಹಸುಗೂಸುಗಳಿಗೆ ನೀಡುವ ಪೌಷ್ಠಿಕ ಆಹಾರವೇ ಎಷ್ಟು ಹದಗೆಟ್ಟಿದೆ ಎಂಬುದಕ್ಕೆ ಸಾಕ್ಷ್ಷಿ. ಇಂತಹ ಕಲಬೆರಿಕೆ ಆಹಾರ ಸೇವಿಸಿ, ಗರ್ಭಿಣಿಯರು, ಬಾಣಂತಿಯರು, ಎಳೆಯ ಮಕ್ಕಳ ಆರೋಗ್ಯ ಏನಾಗಲಿದೆ ಎಂಬ ಕನಿಷ್ಠ ಜ್ಞಾನವೂ ಇಲ್ಲದೆ ಪೂರೈಸಿದ ಗುತ್ತಿಗೆದಾರನ ನಿರ್ಲಕ್ಷಕ್ಕೆ ಹಿಡಿದ ಕನ್ನಡಿ. ಒಟ್ಟಾರೆಯಾಗಿ ಸರ್ಕಾರಿ ಅಧಿಕಾರಿಗಳ ಬೇಜಾವಾಬ್ದಾರಿ ತನಕ್ಕೆ ಇದೊಂದು ಸಣ್ಣ ಉದಾಹರಣೆ ಅಷ್ಟೇ, ಇಷ್ಟಕ್ಕೂ ಇಲ್ಲಿ ಆಗಿರೋದ ಏನು ಅಂತೀರಾ, ಈ ಸ್ಟೋರಿ ನೋಡಿ.

ಆತ್ಮೀಯ ವೀಕ್ಷಕರೇ, ನಿಮ್ಮ ಮನಯೆಲ್ಲಿ ಪುಟ್ಟ ಮಕ್ಕಳಿದ್ದಾರಾ, ಇದ್ದರೆ ಅವರು ಅಂಗನವಾಡಿಗಳಿಗೆ ಹೋಗುತ್ತಿದ್ದಾರಾ, ಒಂದು ವೇಳೆ ಹೋಗುತ್ತಿದ್ದರೆ, ಅಂಗನವಾಡಿಯಲ್ಲಿ ನಡಿಯುವ ಆಹಾರ ಎಷ್ಟು ಪ್ರಮಾಣಧ ಗುಣಮಟ್ಟ ಹೊಂದಿದೆ ಎಂಬುದನ್ನು ಪರಿಶೀಲಿಸಿದ ನಂತರವೇ ನೀವು ಮಕ್ಕಳಿಗೆ ಅಂಗನವಾಡಿ ಆಹಾರ ನೀಡಿ. ಇಲ್ಲವಾದರೆ ಮಕ್ಕಳ ಆರೋಗ್ಯಕ್ಕೂ ಕುತ್ತು ಬರಬಹುದು. ಯಾಕೆ ಅಂತೀರಾ, ಇಲ್ಲಿನ ಅಂಗನವಾಡಿಯೊ0ದಕ್ಕೆ ಇಲಾಖೆಯಿಂದ ಸರಬರಾಜಾದ ಬೆಲ್ಲದ ಪೊಟ್ಟಣದಲ್ಲಿ ಸತ್ತ ಇಲಿ ಪತ್ತೆಯಾಗಿದೆ. ಅದು ಸತ್ತು ಕೊಳೆತು, ಒಣಗಿಹೋಗಿದ್ದು, ಅಂತಹ ಬೆಲ್ಲ ಹಾಕಿ ಮಾಡಿದ ಪದಾರ್ಥ ಸೇವಿಸಿದ ಮಕ್ಕಳ ಆರೋಗದ್ಯ ಏನಾಗಲಿದೆ ಎಂಬುದಕ್ಕೆ ವೈಜದ್ಯಕೀಯ ತಜ್ಞರೇ ಉತ್ತರ ನೀಡಬೇಕಿದೆ.

ಗುಡಿಬಂಡೆ ತಾಲ್ಲೂಕಿನ ಹಂಪಸ0ದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗರುಡಾಚಾರ್ಲಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಇತ್ತೀಚೆಗೆ ವಿತರಿಸಿರುವ ಬೆಲ್ಲದ ಪೊಟ್ಟಣದಲ್ಲಿ ಸತ್ತ ಇಲಿ ಪತ್ತೆಯಾಗಿದೆ. ಗ್ರಾಮದ ನಿವಾಸಿ ರತ್ನಮ್ಮ ಎಂಬುವರಿಗೆ ನೀಡಿದ ಎರಡು ಆಹಾರ ಪೊಟ್ಟಣಗಳ ಪೈಕಿ ಒಂದರಲ್ಲಿ ಈ ಸತ್ತ ಇಲಿ ಕಂಡುಬ0ದಿವೆ. ಕೂಡಲೇ ಅವರು ಬೆಲ್ಲದ ಪೊಟ್ಟಣಗಳನ್ನು ಅಂಗನವಾಡಿ ಕಾರ್ಯಕರ್ತೆ ಗಮನಕ್ಕೆ ತಂದಿದ್ದಾರೆ. ಪೊಟ್ಟಣದಲ್ಲಿ ಇರುವ ಬೆಲ್ಲ ಹಾಲಿಗೆ ಬಳಸಲು, ಮಕ್ಕಳಿಗೆ ಕೊಡಲು ಭಯವಾಗುತ್ತದೆ ಎಂದು ರತ್ನಮ್ಮ ಆತಂಕ ವ್ಯಕ್ತಪಡಿಸಿದ್ದಾರೆ.

ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಮಾಡುವ ಪೊಟ್ಟಣಗಳನ್ನು ಇಲ್ಲಿ ತಯಾರು ಮಾಡುವುದಿಲ್ಲ. ನಮಗೆ ಮೂಟೆಗಳಲ್ಲಿ ಬಾಗೇಪಲ್ಲಿ ತಾಲ್ಲೂಕಿನ ಯಲ್ಲಂಪಲ್ಲಿ ಎಂಎಸ್‌ಪಿಸಿ ಯವರು ಬಾಗೇಪಲ್ಲಿ ಮತ್ತು ಗುಡಿಬಂಡೆ ತಾಲ್ಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಮಾಡುತ್ತಾರೆ. ನಾವು ಅವನ್ನು ವಿತರಿಸಿದ್ದೇವೆ ಪೊಟ್ಟಣದೊಳಗೆ ಇಲಿ ಸತ್ತಿರುವುದಕ್ಕೂ ನಮಗೂ ಸಂಬ0ಧವಿಲ್ಲ ಎಂದು ಅಂಗನವಾಡಿ ಕಾರ್ಯಕರ್ತೆ ಭಾಗ್ಯಮ್ಮ ಜಾರಿಕೊಂಡಿದ್ದಾರೆ.

ನಿಜ, ಬೆಲ್ಲದ ಪೊಟ್ಟಣದೊಳಗೆ ಸತ್ತ ಇಲಿ ಇರೋದಕ್ಕೂ ಅಂಗನವಾಡಿ ಕಾರ್ಯಕರ್ತೆಯರಿಗೂ ಯಾವುದೇ ಸಂಬ0ಧವಿಲ್ಲ. ಆದರೆ ಅದೇ ಬೆಲ್ಲದಿಂದ ತಯಾರಿಸಿದ ಪದಾರ್ಥ ಮಕ್ಕಳಿಗೆ ಬಡಿಸಿದರೆ ಆರೋಗ್ಯದ ಮೇಲೆ ಯಾವ ರೀತಿಯ ದುಷ್ಪರಿಣಾಮ ಬೀರಲಿದೆ ಎಂಬುದು ಇಲ್ಲಿ ಎದುರಾಗಿರುವ ಪ್ರಶ್ನೆಯಾಗಿದೆ. ಅಲ್ಲದೆ ಇದೇ ರೀತಿಯಲ್ಲಿ ಬೆಲ್ಲ ಮಾತ್ರವಲ್ಲದೆ, ಇತರೆ ಆಹಾರ ಪದಾರ್ಥಗಳಲ್ಲಿ ಇನ್ನೂ ಯಾವ ರೀತಿಯ ಕಲಬೆರಿಕೆ ಇದೆಯೋ ಎಂಬುದೂ ನಿಗೂಢವಾಗಿಯೇ ಇದೆ. ಇದಕ್ಕೆ ಕಾರಣ ಆಹಾರ ಸರಬರಾಜು ಮಾಡುವ ಗುತ್ತಿಗೆದಾರನದಾಗಿದ್ದು, ಅಂತಹ ಗುತ್ತಿಗೆದಾರನ ವಿರುದ್ಧ ಜಿಲ್ಲಾಡಳಿತ ಮತ್ತು ಆಹಾರ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕಿದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೂಲಕ ಅಂಗನವಾಡಿಗಳಿಗೆ ಪೂರೈಸುವ ಈ ಪೌಷ್ಟಿಕ ಆಹಾರ ಪೊಟ್ಟಣಗಳು ಬಾಗೇಪಲ್ಲಿ ತಾಲ್ಲೂಕು ಯಲ್ಲಂಪಲ್ಲಿ ಎಂಎಸ್‌ಪಿಎಸ್ ಸಂಸ್ಥೆಯಲ್ಲಿ ತಯಾರಾಗುತ್ತಿವೆ. ತಯಾರಾದ ಬೆಲ್ಲದ ಪೊಟ್ಟಣದಲ್ಲಿ ಸತ್ತ ಇಲಿ ಪತ್ತೆ ಆಗಿದೆ. ಹಾಗಾಗಿ ಸಂಬ0ಧಿಸಿದ ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸುವುದು ಸೇರಿದಂತೆ ಇಥರೆ ಕಾನೂನು ಕ್ರಮಗಳನ್ನು ಕೈಗೊಳ್ಳಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಜಿಲ್ಲಾಡಳಿತ ಮುಂದಾಗಬೇಕೆ0ದು ಪೋಷಕರು ಒತ್ತಾಯಿಸಿದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳು ಗಮನ ಹರಿಸಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ.

 

About The Author

Leave a Reply

Your email address will not be published. Required fields are marked *