ಸಂಚಾರದ ಜಾಗದಲ್ಲಿದೆ ಅಪಾಯಕಾರಿ ಓವರ್ ಹೆಡ್ ಟ್ಯಾಂಕ್
1 min readಸಂಚಾರದ ಜಾಗದಲ್ಲಿದೆ ಅಪಾಯಕಾರಿ ಓವರ್ ಹೆಡ್ ಟ್ಯಾಂಕ್
ಯಾವುದೇ ಕ್ಷಣದಲ್ಲಿ ಕುಸಿಯುವ ಆತಂಕ, ಜೀವ ಭಯದಲ್ಲಿ ಜನ
ನಂಜನಗೂಡು ತಾಲ್ಲೂಕಿನ ಗಟ್ಟವಾಡಿ ಗ್ರಾಮದಲ್ಲಿ ಕುಸಿದು ಬೀಳುವ ಸ್ಥಿತಿಯಲ್ಲಿರುವ ಓವರ್ ಹೆಡ್ ಟ್ಯಾಂಕ್ ನಿಂದ ಗ್ರಾಮಸ್ಥರು ಜೀವ ಭಯದಲ್ಲೆಯೇ ಸಂಚರಿಸುವoತಾಗಿದೆ. ಹಲವು ವರ್ಷಗಳಿಂದ ಗ್ರಾಮಕ್ಕೆ ನೀರುಣಿಸುತ್ತಿದ್ದ ಓವರ್ ಹೆಡ್ ಟ್ಯಾಂಕ್ ಶಿಥಿಲಾವಸ್ಥೆಗೆ ತಲುಪಿ ಕುಸಿದು ಬೀಳುವ ಹಂತಕ್ಕೆ ತಲುಪಿದೆ.
ನಂಜನಗೂಡು ತಾಲ್ಲೂಕಿನ ಗಟ್ಟವಾಡಿ ಗ್ರಾಮದಲ್ಲಿ ಕುಸಿದು ಬೀಳುವ ಸ್ಥಿತಿಯಲ್ಲಿರುವ ಓವರ್ ಹೆಡ್ ಟ್ಯಾಂಕ್ ನಿಂದ ಗ್ರಾಮಸ್ಥರು ಜೀವಭಯದಲ್ಲೆಯೇ ಸಂಚರಿಸುವoತಾಗಿದೆ. ಹಲವು ವರ್ಷಗಳಿಂದ ಗ್ರಾಮಕ್ಕೆ ನೀರುಣಿಸುತ್ತಿದ್ದ ಓವರ್ ಹೆಡ್ ಟ್ಯಾಂಕ್ ಶಿಥಿಲಾವಸ್ಥೆಗೆ ತಲುಪಿ ಕುಸಿದು ಬೀಳುವ ಹಂತಕ್ಕೆ ತಲುಪಿದೆ. ಟ್ಯಾಂಕಿನ ಪಿಲ್ಲರ್ ಗಳೆಲ್ಲವೂ ಸಂಪೂರ್ಣ ಬಿರುಕು ಬಿಟ್ಟು ಅದಕ್ಕೆ ಹಾಕಿದ್ದ ಸಿಮೆಂಟ್ ಕಾಂಕ್ರೀಟ್ ಕೆಳಗೆ ಉದುರಿ ಬೀಳುತ್ತಿದೆ.
ಯಾವ ಸಮಯದಲ್ಲಿಯಾದ್ರು ಟ್ಯಾಂಕ್ ಬೀಳುವ ಆತಂಕದಲ್ಲಿ ಗ್ರಾಮಸ್ಥರಿದ್ದಾರೆ. ಈ ದೃಶ್ಯದಲ್ಲಿ ಕಾಣುತ್ತಿರುವ ಓರ್ವ ಹೆಡ್ ಟ್ಯಾಂಕ್ ಅನ್ನು ಸುಮಾರು 20 ವರ್ಷಗಳ ಹಿಂದೆ ಗಟ್ಟವಾಡಿ ಗ್ರಾಮದ ಜನತಾ ಕಾಲೋನಿಯಲ್ಲಿ ಗ್ರಾಮಸ್ಥರಿಗೆ ನೀರು ಪೂರೈಸಲು ನಿರ್ಮಿಸಲಾಗಿತ್ತು. ಆದ್ರೆ ಇದೀಗ ಟ್ಯಾಂಕ್ ಗಳ ಪಿಲ್ಲರ್‌ಗಳಿಗೆ ಹಾಕಿದ್ದ ಸಿಮೆಂಟ್ ಕಾಂಕ್ರೀಟ್ ಬಿರುಕು ಬಿಟ್ಟು ಕೆಳಗೆ ಉದುರುತ್ತಿದೆ. ಟ್ಯಾಂಕ್‌ನ ಪಿಲ್ಲರ್‌ಗಳಿಗೆ ಹಾಕಿದ್ದ ಕಂಬಿಗಳು ಕಾಣುತ್ತಿದ್ದು, ತುಕ್ಕು ಹಿಡಿದು ಓವರ್ ಹೆಡ್ ಟ್ಯಾಂಕ್ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿ ಕುಸಿಯುವ ಸ್ಥಿತಿಯಲ್ಲಿದೆ.
ಪ್ರತಿ ದಿನ ಗ್ರಾಮಸ್ಥರು, ಮಕ್ಕಳು ಇದೇ ರಸ್ತೆಯಲ್ಲಿ ಓಡಾಡುತ್ತಾರೆ. ಅನಾಹುತ ಸಂಭವಿಸಿದ್ರೆ ಪ್ರಾಣ ಹಾನಿಯಾಗುತ್ತದೆ. ಈ ಟ್ಯಾಂಕಿನ ನೀರನ್ನು ಕುಡಿಯಲು ಗ್ರಾಮಸ್ಥರು ಬಳಸುತ್ತಿದ್ದಾರೆ. ಆದರೆ, ಟ್ಮಾಂಕಿನ ಮೇಲೆ ಮುಚ್ಚುಲ ಹಾಕದೆ ಹಕ್ಕಿ ಪಕ್ಷಿಗಳು ಹಿಕ್ಕೆ ಹಾಕುತ್ತಿವೆ. ಇದರಿಂದ ನೀರು ಕುಡಿಯಲು ಗ್ರಾಮಸ್ಥರು ಹಿಂದೇಟು ಹಾಕುತ್ತಿದ್ದಾರೆ. ಕುಡಿಯುವ ನೀರಿನ ಟ್ಯಾಂಕ್ ಸುತ್ತಮುತ್ತ ಅನೈರ್ಮಲ್ಯ ತಾಂಡವವಾಡುತ್ತಿದೆ.
ಕೊಳಚೆ ನೀರು ನಿಂತಲ್ಲೇ ನಿಂತಿದೆ. ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಲ್ಲಿದ್ದಾರೆ. ಈ ಬಗ್ಗೆ ದೊಡ್ಡಕವಲಂದೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಹಲವು ಬಾರಿ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪಿಡಿಒ ನಿರ್ಮಲಾ ವಿರುದ್ದ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಓವರ್ ಹೆಡ್ ಟ್ಯಾಂಕ್‌ನ್ನು ದುರಸ್ತಿ ಪಡಿಸಬೇಕು ಇಲ್ಲವಾದಲ್ಲಿ ಇದನ್ನು ತೆರವುಗೊಳಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.