ಸತತ ಮಳೆಯಿಂದಾಗಿ ರೈತರ ಬೆಳೆಗಳಿಗೆ ಹಾನಿ
1 min readಸತತ ಮಳೆಯಿಂದಾಗಿ ರೈತರ ಬೆಳೆಗಳಿಗೆ ಹಾನಿ
ಕೂಡಲೇ ಪರಿಹಾರ ನೀಡಲು ರೈತರ ಆಗ್ರಹ
ಫೆಂಗಲ್ ಚಂಡಮಾರುತ ದಿಂದ ಕೋಲಾರ ಜಿಲ್ಲೆಯಲ್ಲಿ ಸತತ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ರೈತರ ಬೆಳೆಗಳು ನಷ್ಟವಾಗಿದ್ದು, ಕೂಡಲೇ ಸರ್ಕಾರ ಇತ್ತ ಗಮನಹರಿಸಬೇಕೆಂದು ರೈತರು ಒತ್ತಾಯಿಸಿದ್ದಾರೆ.
ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದಿ0ದ ನಡೆದ ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡ ಪಿಆರ್ ಸೂರ್ಯನಾರಾಯಣ ಮಾತನಾಡಿ, ಸತತ ನಾಲ್ಕು ದಿನಗಳಿಂದ ಸುರಿಯುತ್ತಿರುವ ಜಡಿ ಮಳೆಯಿಂದಾಗಿ ಕೃಷಿ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಂಡಿವೆ. ಕೃಷಿ, ತೋಟಗಾರಿಕೆ ಬೆಳೆಗಳು ಹಾನಿಯಾಗಿದ್ದು, ಮುಂಗಾರು ಮಳೆ ಈ ವರ್ಷ ಕೈಕೊಟ್ಟ ಹಿನ್ನೆಲೆಯಲ್ಲಿ ಕೃಷಿ ಇಲಾಖೆಯ ಗುರಿಯಂತೆ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿದ ಪರಿಣಾಮ ಬಿತ್ತನೆ ಪ್ರಮಾಣ ಶೇ.೫೦ರಷ್ಟು ಮೀರಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಅಷ್ಟೋ ಇಷ್ಟೋ ಮಳೆಯ ಅಭಾವದಲ್ಲಿ ಬೆಳೆದ ನಿಂತಿದ್ದ ಬೆಳೆಗಳಾದ ರಾಗಿ ತನೆಗಳು ನೆಲಕ್ಕೆ ಬಿದ್ದು ಮೊಳಕೆ ಹೊಡೆಯುತ್ತಿವೆ. ಅವರೆ, ಟೊಮೇಟೊ ಹಾಗೂ ಆಲೂಗಡ್ಡೆ ಸೇರಿ 15 ರಿಂದ 20 ದಿನಗಳಲ್ಲಿ ಕಾಟಾವು ಮಾಡಬೇಕಿದ್ದ ಬೆಳೆಗಳು ಹಾನಿಯಾಗಿದ್ದು, ಕೂಡಲೇ ಸರ್ಕಾರ ಮಧ್ಯ ಪ್ರವೇಶ ಮಾಡಬೇಕು. ಬೆಳೆ ಹಾನಿಗೊಗೆ ಒಳಗಾದ ರೈತರಿಗೆ ಪರಿಹಾರ ನೀಡಬೇಕು, ಜಿಲ್ಲೆಯ ಅಧಿಕಾರಿಗಳು ಸ್ಪಷ್ಟವಾಗಿ ಸರ್ಕಾರಕ್ಕೆ ವರದಿ ನೀಡಬೇಕು, ಜಾನುವಾರುಗಳಿಗೆ ಪಶು ಇಲಾಖೆಯಿಂದ ಕೂಡಲೇ ಚುಚ್ಚುಮದ್ದು ಹಾಕಬೇಕು ಎಂದು ಮನವಿ ಮಾಡಿದರು.