ಶಿಕ್ಷಾ ಸಪ್ತಾಹ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು
1 min readಶಿಕ್ಷಾ ಸಪ್ತಾಹ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು
ಸರ್ಕಾರಿ ಶಾಲಾ ಮಕ್ಕಳಿಂದ ಅದ್ಧೂ ಫ್ಯಾಷನ್ ಶೋ
ಶಿಕ್ಷಣ ಮಂತ್ರಾಲಯದ ಸೂಚನೆಯಂತೆ ಶಿಕ್ಷಾ ಸಪ್ತ ಕಾರ್ಯಕ್ರಮಗಳನ್ನು ರಾಜ್ಯದ ಎಲ್ಲಾ ಶಾಲೆಗಳಲ್ಲಿ ಅನುಷ್ಠಾನಗೊಳಿಸುವಂತೆ ಸಮಗ್ರ ಶಿಕ್ಷಣ ಇಲಾಖೆ ಸೂಚನೆ ನೀಡಿದ್ದು, ಇಂದು ಬಾಗೇಪಲ್ಲಿ ಪಟ್ಟಣದ ಪಿ.ಎಂ.ಶ್ರೀ ಶಾಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರಾತಾ ಇಲಾಖೆ ಶಿಕ್ಷಾ ಸಪ್ತಾಹವನ್ನು ಆಚರಿಸಿತು.
ಶಿಕ್ಷಣ ಮಂತ್ರಾಲಯದ ಸೂಚನೆಯಂತೆ ಶಿಕ್ಷಾ ಸಪ್ತ ಕಾರ್ಯಕ್ರಮಗಳನ್ನು ರಾಜ್ಯದ ಎಲ್ಲಾ ಶಾಲೆಗಳಲ್ಲಿ ಅನುಷ್ಠಾನಗೊಳಿಸುವಂತೆ ಸಮಗ್ರ ಶಿಕ್ಷಣ ಇಲಾಖೆ ಸೂಚನೆ ನೀಡಿದ್ದು, ಇಂದು ಬಾಗೇಪಲ್ಲಿ ಪಟ್ಟಣದ ಪಿ.ಎಂ.ಶ್ರೀ ಶಾಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರಾತಾ ಇಲಾಖೆ ಶಿಕ್ಷಾ ಸಪ್ತಾಹವನ್ನು ಆಚರಿಸಿತು. ಜುಲೈ೨೨ ರಿಂದ ೨೮ ರವರೆಗೆ ಈ ಸ್ತಾಹ ನಡೆಯಲಿದ್ದು, ವಿದ್ಯಾರ್ಥಿಗಳು,ಶಿಕ್ಷಕರು ಮತ್ತು ಮಧಸ್ಥಗಾರರಲ್ಲಿ ರಾಷ್ಟಿಯ ಶಿಕ್ಷಣ ನೀತಿ ೨೦೨೦ ಪರಿಚಯಿಸಿದ ಸಹಯೋಗ ಮತ್ತು ಪರಿಣಾಮಕಾರಿ ಶೈಕ್ಷಣಿಕ ಸುಧಾರಣೆಗಳನ್ನು ಉತ್ತೇಜಿಸುವುದು ಶಿಕ್ಷಾ ಸಪ್ತಾಹದ ಗುರಿಯಾಗಿದೆ.
ವಾರದಲ್ಲಿ ಥೀಮ್ ಆಧಾರಿತ ದಿನಗಳನ್ನು ಆಚರಿಸಲಾಗುತ್ತದೆ. ಮೊದಲ ದಿನ ಬೋಧನೆ-ಕಲಿಕೆ ವಸ್ತುಗಳ ದಿನ, ಎರಡನೇ ದಿನ ಫೌಂಡೇಶನಲ್ ಸಾಕ್ಷರಾತೆ ಮತ್ತು ಸಂಖ್ಯಾಶಾಸ್ತ ದಿನ, ಮೂರನೇ ದಿನ ಕ್ರೀಡಾ ದಿನ ನಾಲ್ಕನೇ ದಿನ ಇಂದು ಸಾಂಸ್ಕೃತಿಕ ದಿನವನ್ನು ಆಚರಿಸಲಾಯಿತು. ಮುಖ್ಯ ಶಿಕ್ಷಕ ಆರ್. ಹನುಮಂತ ರೆಡ್ಡಿ ಮಾತನಾಡಿ, ಶಿಕ್ಷಾ ಶಿಕ್ಷಣ ಸಪ್ತಾಹದ ನಾಲ್ಕನೇ ದಿನವಾದ ಇಂದು ವಿದ್ಯಾರ್ಥಿಗಳಲ್ಲಿ ಏಕತೆ ಮತ್ತು ವೈವಿಧತೆಯ ಪ್ರಜ್ಞೆ ಬೆಳೆಸಲು ಸಾಂಸ್ಕೃತಿಕ ದಿನದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.
ಪಿ.ಎ.ಶ್ರೀ ಶಾಲೆಯಲ್ಲಿ ಭಾರತದ ಸಾಂಸ್ಕೃತಿಕ ವೈವಿಧತೆ ಉತ್ತೇಜಿಸಲು ಈ ದಿನವನ್ನು ಸಮರ್ಪಿಸಲಾಗಿದೆ. ಶಾಲೆಗಳು ವಿವಿಧ ಭಾಷೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು. ಉಡುಗೆ, ಆಹಾರ, ಕಲೆ, ವಾಸ್ತುಶಿಲ್ಪ, ಸ್ಥಳೀಯ ಆಟಗಳು, ಚಿತ್ರಕಲೆ, ನೃತ್ಯಗಳು, ಹಾಡುಗಳು, ರಂಗಭೂಮಿ, ಜಾನಪದ ಮತ್ತು ಸಾಂಪ್ರದಾಯಿಕ ಕಲೆಗಳು, ಬೀದಿ ನಾಟಕಗಳು, ಬೊಂಬೆ ಪ್ರದರ್ಶನಗಳು, ಕಥೆ ಹೇಳುವುದು. ಜಾನಪದ, ಪ್ರಾದೇಶಿಕ ಮತ್ತು ಸಮಕಾಲೀನ ಶೈಲಿಗಳು ಅಥವಾ ದೇಶದ ಯಾವುದೇ ಭಾಗದಿಂದ ನಾಟಕ, ಸಮುದಾಯ ಹಾಡುಗಾರಿಕೆ, ಜಾನಪದ ನೃತ್ಯಗಳು, ಶಾಸ್ತಿಯ ಮತ್ತು ಪ್ರಾದೇಶಿಕ ಜಾನಪದ ರೂಪಗಳಲ್ಲಿ ಪ್ರದರ್ಶನ ನೀಡಿದರು.
ಶಾಲಾ ಮಕ್ಕಳು ಹಾಗೂ ಶಿಕ್ಷಕರಿಂದ ಫ್ಯಾಷನ್ ಶೋ, ನೃತ್ಯದ ಮೂಲಕ ವಿದ್ಯಾರ್ಥಿಗಳು ಪ್ರತಿಭೆ ಪ್ರದರ್ಶಿಸಿದರು. ಶಾಲಾ ಮಕ್ಕಳಿಗೆ ಹಲವು ಕಲೆಗಳ ಪ್ರದರ್ಶನಕ್ಕೆ ಕಾರ್ಯಕ್ರಮ ವೇದಿಕೆಯಾಯಿತು. ವಿವಿಧ ಸ್ಪರ್ಧೆ ಏರ್ಪಡಿಸಿ ವಿಜೇತರಿಗೆ ಬಹುಮಾನ ನೀಡಲಾಯಿತು. ಶಾಲಾ ಮಕ್ಕಳು ಹಾಗೂ ಶಿಕ್ಷಕರಿಂದ ನಡೆದ ಫ್ಯಾಷನ್ ಶೋದಲ್ಲಿ ವಿಭಿನ್ನ ಬಟ್ಟೆ ತೊಟ್ಟು ಮಕ್ಕಳು ಕಂಗೊಳಿಸಿದರು ಈ ಕಾರ್ಯಕ್ರಮವನ್ನು ವೀಕ್ಷಿಸಿ ಮಕ್ಕಳು ಖುಷಿಪಟ್ಟರು.