ಉಚಿತ ಜಾನುವಾರು ಮೇವು ವಿತರಣೆ

ವಿಶ್ವ ಪ್ರಸಿದ್ಧ ನಂದಿ ಗಿರಿಧಾಮಕ್ಕೆ ಪ್ರವಾಸಿಗರ ದಂಡು

ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಶ್ರೀನಿವಾಸಪುರದಲ್ಲಿ ಪ್ರತಿಭಟನೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಖಂಡನೆ

December 24, 2024

Ctv News Kannada

Chikkaballapura

ಪ್ರಿಯಾಂಕ್ – ಸೂಲಿಬೆಲೆ ನಡುವೆ ಟೀಕಾ ಸಮರ

1 min read

ಚಿತ್ತಾಪುರ: ತಡರಾತ್ರಿ ಕಲಬುರಗಿ ಗಡಿ ಪ್ರವೇಶಿಸದಂತೆ ತಡೆದ ಪೊಲೀಸರೊಂದಿಗೆ ಗಂಟೆಗಟ್ಟಲೇ ಚಕ್ರವರ್ತಿ ಸೂಲಿಬೆಲೆ ವಾಗ್ವಾದ, ನಿರ್ಬಂಧ ಪ್ರಶ್ನಿಸಿ ಬಿಜೆಪಿ ಮುಖಂಡರಿಂದ ಕೋರ್ಟ್ ಮೊರೆ, ಸಾಮಾಜಿಕ ಜಾಲತಾಣದಲ್ಲಿ ಸೂಲಿಬೆಲೆ- ಸಚಿವ ಪ್ರಿಯಾಂಕ್ ಖರ್ಗೆ ನಡುವೆ ಪರಸ್ಪರ ಟೀಕಾ ಸಮರ, ಕೋರ್ಟ್‌ನ ಷರತ್ತುಗಳ ನಡುವೆ ರಾತ್ರಿ ನಡೆದ ಸೂಲಿಬೆಲೆ ಅವರ ನಮೋ ಭಾರತ ಭಾಷಣ…

ಚಿತ್ತಾಪುರದಲ್ಲಿ ಗುರುವಾರ ಬಿಜೆಪಿ ನಮೋ ಭಾರತ ಕಾರ್ಯಕ್ರಮ ಆಯೋಜಿಸಿತ್ತು. ಭಾಲ್ಕಿಯಿಂದ ಭಾಷಣ ಮಾಡಲು ಹೊರಟಿದ್ದ ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಅವರನ್ನು ಕಮಲಾಪುರ ತಾಲ್ಲೂಕಿನ ಕಿಣ್ಣಿ ಸಡಕ್ ಬಳಿ ಪೊಲೀಸರ ಪಡೆ ತಡೆಯೊಡ್ಡಿತ್ತು.

ಪ್ರಚೋದನಕಾರಿ ಭಾಷಣದಿಂದ ಶಾಂತಿಗೆ ಧಕ್ಕೆ ಬರುವ ಸಾಧ್ಯತೆಯ ಕಾರಣಕ್ಕೆ ಮಾರ್ಚ್‌ 4ರವರೆಗೆ ಪ್ರವೇಶ ನಿರ್ಬಂಧಿಸಿದ್ದಾಗಿ ಉಪ ವಿಭಾಗಾಧಿಕಾರಿ ರೂಪೇಂದ್ರ ಕೌರ್ ಅವರ ಆದೇಶದ ಪ್ರತಿಯನ್ನು ಪೊಲೀಸರು ತೋರಿಸಿದರು. ಇದರಿಂದ ಹುಮನಾಬಾದ್ ತಾಲ್ಲೂಕಿನ ಹಳ್ಳಿಖೇಡ (ಕೆ) ಗ್ರಾಮದಲ್ಲಿ ವಿಶ್ರಾಂತಿ ಪಡೆದರು. ಇತ್ತ ಕಲಬುರಗಿಯ ಬಿಜೆಪಿ ಮುಖಂಡರು ನಿರ್ಬಂಧ ಪ್ರಶ್ನೆಸಿ ಹೈಕೋರ್ಟ್‌ನ ಕಲಬುರಗಿ ಪೀಠದಲ್ಲಿ ಅರ್ಜಿ ಸಲ್ಲಿಸಿ, ನಿರ್ಬಂಧದ ಆದೇಶವನ್ನು ರದ್ದುಗೊಳಿಸುವಲ್ಲಿ ಯಶಸ್ವಿಯಾದರು.

ಪರಸ್ಪರ ಟೀಕಾ ಸಮರ: ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಪ್ರಿಯಾಂಕ್ ವಿರುದ್ಧ ಗುಡುಗಿದ ಸೂಲಿಬೆಲೆ, ‘ಸಚಿವ ಪ್ರಿಯಾಂಕ್ ಖರ್ಗೆ ಒಬ್ಬ ಫೈಟರ್. ಆದರೆ, ಅವರು ನಿಜವಾದ ಹಿಟ್ ಆಯಂಡ್ ರನ್ ಮಾಸ್ಟರ್ ಎಂದು ನಾನು ಭಾವಿಸಿದ್ದೇನೆ. ಕೂಟದ ಮುಂದೆ ಮಾತನಾಡುವುದು ಸುಲಭ. ಆದರೆ, ಸಮೂಹವನ್ನು ಎದುರಿಸುವುದು ಕಷ್ಟ’ ಎಂದು ಬರೆದುಕೊಂಡರು.

ಇದಕ್ಕೆ ‘ಎಕ್ಸ್‌’ನಲ್ಲೇ ತಿರುಗೇಟು ಕೊಟ್ಟ ಪ್ರಿಯಾಂಕ್ ಖರ್ಗೆ, ‘ತಪ್ಪು ಮಾಹಿತಿಯ ಮಾಸ್ಟರ್ ಚಕ್ರವರ್ತಿ ಸೂಲಿಬೆಲೆ, ನಿಮ್ಮ ನಿಷ್ಪ್ರಯೋಜಕ ವೇಳಾಪಟ್ಟಿಗಿಂತ ಪ್ರಮುಖವಾದ ಸಮಸ್ಯೆಗಳ ನಿವಾರಣೆಯತ್ತ ಗಮನ ಹರಿಸುತ್ತೇನೆ. ನಿಮ್ಮಿಂದ ಸಹಿ ಮಾಡಿ ಲಗತ್ತಿಸಲಾದ ದಾಖಲೆಯು ಬಾಡಿಗೆ ಭಾಷಣಕಾರ ಎಂಬುದು ಸ್ಪಷ್ಟಪಡಿಸುತ್ತದೆ. ವೇದಿಕೆ ಪ್ರದರ್ಶನಕ್ಕೆ ಎಷ್ಟು ಹಣ ಪಡೆಯುತ್ತೀರಿ? ಪ್ರತಿ ಸುಳ್ಳಿನ ಶುಲ್ಕ ಎಷ್ಟು? ಪ್ರಧಾನಿಯವರ ದೊಡ್ಡ ಅಭಿಮಾನಿಯಾಗಲು ಹಣ ಪಡೆಯುತ್ತೀರಿ ಎಂಬುದು ಭಕ್ತರಿಗೆ ತಿಳಿದಿದೆಯಾ’ ಎಂದು ಪ್ರಶ್ನಿಸಿ ಕಿಚಾಯಿಸಿದರು.

ಇತ್ತ ಕೋರ್ಟ್ ಮೆಟ್ಟಿಲು ಏರಿದವರು ಸೂಲಿಬೆಲೆ ಪರವಾಗಿ ಹೈಕೋರ್ಟ್ ವಕೀಲ ಅರುಣ್ ಶ್ಯಾಂ ಮತ್ತು ಕಿರಣ್ ವಾದ ಮಂಡಿಸಿದ್ದರು. ಅರ್ಜಿಯನ್ನು ತುರ್ತಾಗಿ ವಿಚಾರಣೆಗೆ ಅಂಗೀಕರಿಸಿದ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರಿದ್ದ ನ್ಯಾಯಪೀಠವು, ಕಾರ್ಯಕ್ರಮದಲ್ಲಿನ ಭಾಷಣಕ್ಕೆ ಕೆಲ ಷರತ್ತುಗಳನ್ನು ವಿಧಿಸಿ ಹಸಿರು ನಿಶಾನೆ ತೋರಿಸಿದರು. ಆ ಬಳಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಾಷಣ ಮಾಡಿದರು.

-ಶಂಕರಗೌಡ ಪಾಟೀಲ ಶಹಾಬಾದ್, ಡಿವೈಎಸ್ಪಿಶಾಂತಿ ಸುವ್ಯವಸ್ಥೆ ಪಾಲನೆಯ ದೃಷ್ಟಿಯಿಂದ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಚಿತ್ತಾಪುರದಲ್ಲಿ ಸೂಕ್ತ ಬಿಗಿ ಪೋಲಿಸ್ ಬಂದೋಬಸ್ತ್ ಮಾಡಲಾಗಿತ್ತು

►Watch LIVE: https://shashwatha.com/player.php?url=https://shashwatha.com/hls/shashwatha/ctvnews.m3u8
►CTV News : https://ctvnewskannada.com/
►Subscribe to Ctv News: https://www.youtube.com/channel/UCHtq26kA5D5anCbPD3HoURw
►Big News Big Update : https://ctvnewskannada.com/
► Download CTV Android App: https://play.google.com/store/apps/details?id=com.ctv.ctvnews
► Like us on Facebook: https://www.facebook.com/ctvnewschikkaballapura
► Follow us on Instagram: https://www.instagram.com/ctvnewschikkaballapura/
► Follow us on Twitter: https://twitter.com/ctvnewscbpura

About The Author

Leave a Reply

Your email address will not be published. Required fields are marked *