ಕೇಂದ್ರ ಸರ್ಕಾರದ ಬೆಲೆ ಏರಿಕೆ ಖಂಡಿಸಿ ಆಕ್ರೋಶ

ನಾಳೆ ನಡೆಲಿದೆಯೇ ನಗರಸಭೆ ಅಂಗಡಿಗಳ ಹರಾಜು

ಊರದೇವತೆ ಜಾಲಾರಿ ಗಂಗಮಾAಬದೇವಿ ಕರಗಮಹೋತ್ಸವ

ಚಿಕ್ಕಕಾಡಿಗೇನಹಳ್ಳಿಯಲ್ಲಿ ಅದ್ಧೂರಿ ಅಂಬೇಡ್ಕರ್ ಜಯಂತಿ

April 17, 2025

Ctv News Kannada

Chikkaballapura

ಪ್ರೇಮಲೋಕ-2 ಮಾಡಲು ಮುಂದಾದ ಕ್ರೇಜಿಸ್ಟಾರ್‌

1 min read

ಟ ರವಿಚಂದ್ರನ್‌ ಕೆಲವು ದಿನಗಳ ಹಿಂದಷ್ಟೇ “ಮುಂದಿನ ವರ್ಷ ನನ್ನ ರುದ್ರ ತಾಂಡವ ಶುರು…’ ಎನ್ನುವ ಮೂಲಕ ಹೊಸದೇನನ್ನೋ ಮಾಡುವ ಸುಳಿವು ಕೊಟ್ಟಿದ್ದರು. ಆದರೆ, ಏನೆಂದು ಹೇಳಿರಲಿಲ್ಲ. ಆದರೆ, ಈಗ ಅವರ ಕನಸಿನ ಪ್ರಾಜೆಕ್ಟ್ಗೆ ಸಿದ್ಧರಾಗಿದ್ದಾರೆ.

ಅದು “ಪ್ರೇಮಲೋಕ-2′.

ಹೌದು, ಕ್ರೇಜಿಸ್ಟಾರ್‌ ರವಿಚಂದ್ರನ್‌ “ಪ್ರೇಮಲೋಕ-2′ ಸಿನಿಮಾ ಮಾಡಲು ಮುಂದಾಗಿದ್ದಾರೆ. ಸತತ ಒಂದು ವರ್ಷದಿಂದ ಆ ಚಿತ್ರದ ಸ್ಕ್ರಿಪ್ಟ್ನಲ್ಲಿ ಬಿಝಿಯಾಗಿದ್ದಾರೆ. ಈ ಮೂಲಕ ಕನ್ನಡ ಚಿತ್ರರಂಗದಲ್ಲಿ ಮತ್ತೂಂದು ನಿರೀಕ್ಷೆಯ ಚಿತ್ರ ಮಾಡುವತ್ತ ರವಿಚಂದ್ರನ್‌ ಗಮನ ನೆಟ್ಟಿರೋದು ಸುಳ್ಳಲ್ಲ.

ನಿಮಗೆ ಗೊತ್ತಿರುವಂತೆ 1987ರಲ್ಲಿ ತೆರೆಕಂv “ಪ್ರೇಮಲೋಕ’ ಚಿತ್ರ ದೊಡ್ಡ ದಾಖಲೆ ಮಾಡಿತ್ತು. ರವಿಚಂದ್ರನ್‌ ನಿರ್ದೇಶಿಸಿ, ನಟಿಸಿದ ಈ ಸಿನಿಮಾದ ಹಾಡು ಗಳು ಎವರ್‌ಗ್ರೀನ್‌ ಸಾಂಗ್ಸ್‌ ಪಟ್ಟಿಗೆ ಸೇರಿವೆ. ಈಗ ರವಿಚಂದ್ರನ್‌ “ಪ್ರೇಮಲೋಕ-2′ ಮಾಡಲು ಮುಂದಾಗಿದ್ದಾರೆ. ಈ ಚಿತ್ರವನ್ನು ನಿರ್ದೇಶಿಸುವ ಜೊತೆಗೆ ನಟಿಸಲಿದ್ದಾರೆ. ಜೊತೆಗೆ ಅವರ ಇಬ್ಬರು ಪುತ್ರರು ಕೂಡಾ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಸಿನಿಮಾ ಯಾವಾಗ ಶುರುವಾಗುತ್ತದೆ ಸೇರಿದಂತೆ ಇತರ ಪ್ರಶ್ನೆಗಳಿಗೆ ಶೀಘ್ರದಲ್ಲಿ ಉತ್ತರ ಸಿಗಲಿದೆ.

About The Author

Leave a Reply

Your email address will not be published. Required fields are marked *