ಮೂಲ ಸೌಲಭ್ಯ ಕಲ್ಪಿಸಲು ಸಿಪಿಐಎಂನಿಮದ ಪುರಸಭೆ ಮುಂದೆ ಪ್ರತಿಭಟನೆ
1 min readಬಾಗೇಪಲ್ಲಿ ಪಟ್ಟಣದಲ್ಲಿ ಮೂಲ ಸೌಲಭ್ಯಗಳನ್ನು ಕಲ್ಪಿಸದ ಹಾಗೂ ಸರ್ಕಾರಿ ಸೇವೆಗಳನ್ನು ಜನರಿಗೆ ಹಂಚಲು ನಿರ್ಲಕ್ಷ್ಯ ವಹಿಸಿರುವ ಪುರಸಭಾ ಮುಖ್ಯಾಧಿಕಾರಿಗಳನ್ನು ವರ್ಗಾವಣೆ ಮಾಡುವಂತೆ ಆಗ್ರಹಿಸಿ ಭಾರತ ಕಮ್ಯೂನಿಸ್ಟ್ ಪಕ್ಷ ಪಟ್ಟಣ ಸ್ಥಳೀಯ ಸಮಿತಿ ನೇತೃತ್ವದಲ್ಲಿ ಬುಧವಾರ ಪುರಸಭೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದರು.
ಸಿಪಿಐ(ಎಂ) ತಾಲ್ಲೂಕು ಕಾರ್ಯದರ್ಶಿ ಎಂ.ಎನ್. ರಘುರಾಮರೆಡ್ಡಿ ಮಾತನಾಡಿ, ಪುರಸಭೆಯಲ್ಲಿ ೬ ತಿಂಗಳಿAದ ಮೀಸಲಾತಿ ವಿಚಾರವಾಗಿ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಆಗಿಲ್ಲ. ಪಟ್ಟಣದಲ್ಲಿ ಬೀದಿದೀಪ, ರಸ್ತೆಗಳು, ಕುಡಿಯುವ ನೀರು ಸಮರ್ಪಕವಾಗಿ ಕನಿಷ್ಠ ಮೂಲ ಸೌಲಭ್ಯಗಳನ್ನು ಕಲ್ಪಿಸಿಲ್ಲ. ಇ ಖಾತೆಗಳು, ನಿರೇಪೇಕ್ಷಣಾ ಪತ್ರಗಳನ್ನು ಪುರಸಭಾ ಮುಖ್ಯಾಧಿಕಾರಿಗಳು ನೀಡುತ್ತಿಲ್ಲ ಎಂದು ಆರೋಪಿಸಿದರು.
ಸಭೆ, ಸಮಾರಂಬಗಳ ಹೆಸರಿನಲ್ಲಿ ಕಚೇರಿಗೆ ಆಗಮಿಸದೇ, ಬೆಂಗಳೂರು, ಚಿಕ್ಕಬಳ್ಳಾಪುರಕ್ಕೆ ಸುತ್ತಾಡುತ್ತಿದ್ದಾರೆ. ಇದರಿಂದ ಸಾಮಾನ್ಯಜನರ ಕೆಲಸಗಳು ಆಗದೇ, ಕಚೇರಿಗಳಿಗೆ ಸುತ್ತಾಡುವಂತಾಗಿದೆ. ಜನರ ಬಳಿ ಸಮರ್ಪಕವಾದ ದಾಖಲೆಗಳು ಇದ್ದರೂ, ಇ ಖಾತೆ ಮಾಡದೇ ಅಧಿಕಾರಿಗಳು ವಿನಾಃಕಾರಣ ಜನರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಸಿಪಿಐ(ಎಂ) ಪಟ್ಟಣ ಸ್ಥಳೀಯ ಸಮಿತಿ ಕಾರ್ಯದರ್ಶಿ ವಾಲ್ಮೀಕಿಅಶ್ವಥ್ಥಪ್ಪ ಮಾತನಾಡಿ, ಕಳೆದ ೨೦೦೬ ರಲ್ಲಿ ಸಿಪಿಎಂ ನಾಯಕ ಜಿ.ವಿ.ಶ್ರೀರಾಮರೆಡ್ಡಿರವರ ನಾಯಕತ್ವದಲ್ಲಿ ಪಟ್ಟಣದ ನಿವೇಶನ, ಮನೆರಹಿತರಿಗೆ ನಿವೇಶನ, ಮನೆಗಳನ್ನು ಹಂಚುವAತೆ ಜನರು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಆದರೆ ಇಂದಿಗೂ ಪುರಸಭೆ ಅಧಿಕಾರಿಗಳು ವಿತರಣೆ ಮಾಡಿಲ್ಲ. ಒಳಚರಂಡಿ ಕಾಮಗಾರಿ ಇಂದಿಗೂ ಆಗಿಲ್ಲ. ರಸ್ತೆಗಳು ಇಲ್ಲ. ಬೀದಿದೀಪಗಳು ಇಲ್ಲದೇ ಜನರು ಕಗ್ಗತ್ತಲಿನಲ್ಲಿ ಸಂಚರಿಸುತ್ತಿದ್ದರೂ, ಅಧಿಕಾರಿಗಳು ಕನಿಷ್ಠ ಸೌಲಭ್ಯಗಳನ್ನು ನೀಡದೇ ಬೇಜಾವ್ದಾರಿಯಿಂದ ವರ್ತಿಸಿದ್ದಾರೆ. ಕೂಡಲೇ ಪಟ್ಟಣದ ಸಮಸ್ಯೆಗಳನ್ನು ಬಗೆಹರಿಸಲು ಜಿಲ್ಲಾ ಉಪವಿಭಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಪಟ್ಟಣ ಸಮಿತಿಯ ಮುಖಂಡರ ಸಭೆ ಮಾಡಬೇಕು. ಸಮಸ್ಯೆಗಳನ್ನು ಬಗೆಹರಿಸದಿದ್ದರೆ ಮುಂದಿನ ದಿನಗಳಲ್ಲಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಸಿಪಿಐ(ಎಂ) ಪಕ್ಷದ ಹಿರಿಯ ಮುಖಂಡ ಎಚ್.ಎ.ರಾಮಲಿಂಗಪ್ಪ, ಸಿಪಿಐ(ಎಂ) ಪಟ್ಟಣ ಸಮಿತಿ ಮುಖಂಡ ಗೋವರ್ಧಚಾರಿ, ಒಬಳರಾಜು, ಜಿ.ಕೃಷ್ಣಪ್ಪ, ಮುಸ್ತಾಫ, ಬಿ.ಎಚ್.ರಫೀಕ್, ಮುನಿಯಪ್ಪ, ನರಸಿಂಹರೆಡ್ಡಿ, ಇಮ್ರಾನ್, ರಶೀದ್, ರಮಣ, ಪಿ.ಎಸ್.ರಮೇಶ್ ಮತ್ತಿತರರು ಇದ್ದರು.