ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಯಲ್ಲಿ ಮುಂದುವರಿದ ನಿರ್ಲಕ್ಷ್ಯ
1 min readಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಯಲ್ಲಿ ಮುಂದುವರಿದ ನಿರ್ಲಕ್ಷ್ಯ
ಗಾಂಧಿ ಗ್ರಾಮ ಪುರಸ್ಕಾರ ಪಡೆದ ಗೂಳೂರಿನಲ್ಲಿ ನಾರುತ್ತಿರುವ ಪ್ಲಾಸ್ಟಿಕ್
ಬಾಗೇಪಲ್ಲಿ ತಾಲ್ಲೂಕಿನ ಗೂಳೂರು ಹೋಬಳಿ ಕೇಂದ್ರದಲ್ಲಿ ಗ್ರಾಮ ಪಂಚಾಯತಿ ಪ್ಲಾಸ್ಟಿಕ್ ಸೇರಿದಂತೆ ಹಲವು ತ್ಯಾಜ್ಯಗಳ ವಿಲೇವಾರಿ ಸಮರ್ಪಕವಾಗಿ ಮಾಡದೇ ನಿರ್ಲಕ್ಷ್ಯ ತೋರುತ್ತಿದ್ದು, ಇದರಿಂದ ಗಾಂಧಿ ಗ್ರಾಮ ಪುರಸ್ಕಾರ ಪಡೆದ ಗ್ರಾಮ ಅಸ್ವಚ್ಛತೆಯಿಂದ ಗಬ್ಬೆದ್ದು ನಾರುತ್ತಿದೆ.
ಬಾಗೇಪಲ್ಲಿ ತಾಲೂಕಿನ ಗೂಳೂರು ಗ್ರಾಮದ ಎರಡೂ ಬದಿಗಳಲ್ಲಿ ಎರಡು ಕೆರೆಗಳಿವೆ. ಆ ಕೆರೆಗಳಿಗೆ ನೇರವಾಗಿ ಚರಂಡಿ ನೀರು,ತ್ಯಾಜ್ಯ ಸೇರಿಸಲಾಗುತ್ತಿದೆ. ಗ್ರಾಮದಲ್ಲಿ ತ್ಯಾಜ್ಯದ ಸರಿಯಾದ ನಿರ್ವಹಣೆ ಮಾಡದೆ ಸ್ವಚ್ಛ ಭರತ್ ಅಭಿಯಾನ ಹೆಸರಿಗಷ್ಟೇ ಸೀಮಿತ ಎನ್ನುವಂತಾಗಿದೆ. ಗ್ರಾಮದ ತ್ಯಾಜ್ಯವನ್ನು ಹಾಲಿನ ಡೇರಿ ಮುಂಭಾಗ ರಸ್ತೆ ಬದಿ ರಾಶಿ ಮಾಡಿ ಬೆಂಕಿ ಹಚ್ಚಲಾಗುತ್ತದೆ. ಅದು ದಿನ ಪೂರ್ತಿ ಸುಡುತ್ತಾ ದಟ್ಟವಾದ ಹೊಗೆ ಬಿಡುತ್ತಿದೆ. ಇದರಿಂದಾಗಿ ವಾಹನಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕಸ ವಿಲೇವಾರಿ ಬಗ್ಗೆ ಪ್ರತಿ ಗ್ರಾಮ ಪಂಚಾಯತಿಗೂ ತನ್ನದೇ ಆದ ಸೂಚನೆ ಮತ್ತು ಮಾರ್ಗಸೂಚಿಗಳಿರುತ್ತವೆ. ಒಣ ಕಸ, ಹಸಿ ಕಸ ಬೇರ್ಪಡಿಸುವಿಕೆ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳುವ ಮೂಲಕ ತ್ಯಾಜ್ಯ ನಿರ್ವಹಣೆ ಮಾಡಬೇಕಿದೆ. ಅದರ ಜೊತೆಗೆ ಇತ್ತೀಚೆಗೆ ಪ್ರತಿ ಮನೆಗೊಂದರ0ತೆ ಕಸದ ಬುಟ್ಟಿಗಳ ವಿತರಣೆಯನ್ನೂ ಮಾಡಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಅವೈನಿಕ ರೀತಿಯಲ್ಲಿ ಕಸವನ್ನು ಸುಡಲಾಗುತ್ತಿದೆ.
ಪ್ಲಾಸ್ಟಿಕ್ ಮುಕ್ತ ಜಿ¯್ಲೆಯನ್ನಾಗಿಸುವ ಜಿಲ್ಲಾಡಳಿತ ಘೋಷಣೆ ಗೂಳೂರಿನವರೆಗೂ ತಲುಪಿಲ್ಲ ಎನ್ನುವಂತಾಗಿದ್ದು, ಎಲ್ಲಂದರಲ್ಲೆ ಪ್ಲಾಸ್ಟಿಕ್ ಬಿಸಾಡಲಾಗುತ್ತಿದೆ. ಪ್ಲಾಸ್ಟಿಕ್ ನಿಷೇಧದ ಬಗ್ಗೆ ತಪಾಸಣೆಗಳೂ ನಡೆಯುತ್ತಿಲ್ಲ. ಹಾಗಾಗಿ ರಾಜಾರೋಷವಾಗಿ ಪ್ಲಾಸ್ಟಿಕ್ ಬಳಕೆಯಾಗುತ್ತಿದೆ ಎಂಬುದು ವಿಪರ್ಯಾಸವಾಗಿದೆ. ದೊಡ್ಡಕೆರೆಯ ಕಟ್ಟೆಯ ಕೆಳಗೆ ರಾಶಿಗಟ್ಟಲೇ ಪ್ಲಾಸ್ಟಿಕ್ ತ್ಯಾಜ್ಯ ಸುರಿದಿದ್ದು, ಆಹಾರ ಪದಾರ್ಥಗಳನ್ನು ಸೇವಿಸುವ ಮೂಕ ಪ್ರಾಣಿಗಳ ಹೊಟ್ಟೆಗೆ ಧರಾಳವಾಗಿ ಸೇರುತ್ತಿದೆ. ಅಲ್ಲಿ ಮಲಮೂತ್ರ ವಿಸರ್ಜನೆಗಳೂ ನಡೆಯುತ್ತಿದ್ದು, ಗಬ್ಬು ನಾರುತ್ತಿದೆ. ಸುತ್ತಮುತ್ತಿಲಿನ ನಿವಾಸಿಗಳು ಸೊಳ್ಳೆಗಳ ಕಾಟದಿಂದ ಹೈರಾಣಾಗುತ್ತಿದ್ದಾರೆ. ಇನ್ನಾದರೂ ಗಾಂಧಿ ಗ್ರಾಮ ಪುರಸ್ಕಾರ ಪಡೆದ ಗ್ರಾಮ ಪಂಚಾಯತಿಯವರು ಎಚ್ಚೆತ್ತುಕೊಳ್ಳುವರೇ ಎಂಬುದನ್ನು ಕಾದು ನೋಡಬೇಕಿದೆ.