ಅಮಿತ್ ಶಾ ಹೇಳಿಕೆ ಖಂಡಿಸಿ ದಲಿತ ಸಂಘಟನೆಗಳ ಪ್ರತಿಭಟನೆ

ಶಿಡ್ಲಘಟ್ಟದಲ್ಲಿ ಅಪರಾಧ ಮಾಸಾಚರಣೆ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗುಣಮುಖರಾಗಲಿ

ರಾಗಿ, ಹುರಳಿ ಒಕ್ಕಣೆ ಕೇಂದ್ರವಾದ ರಾಜ್ಯ ಹೆದ್ದಾರಿ

December 25, 2024

Ctv News Kannada

Chikkaballapura

ಮುಂದುವರಿದ ನಗರಸಭೆ ಎಡವಟ್ಟುಗಳು

1 min read

ಮುಂದುವರಿದ ನಗರಸಭೆ ಎಡವಟ್ಟುಗಳು
ಒಂದೇ ವಾರ್ಡಿಗೆ ಅನುದಾನ ನೀಡಿದ ಅಧಿಕಾರಿಗಳು
ಸದಸ್ಯರ ಆಕ್ರೋಶ, ಕ್ರಿಯಾಯೋಜನೆ ರದ್ದು ಪಡಿಸಲು ಆಗ್ರಹ
ಹುದ್ದೆಯಿಂದ ಬಿಡುಗಡೆಯಾದ ಆಯುಕ್ತ ಮಂಜುನಾಥ್
ಕ್ರಿಯಾಯೋಜನೆಗೆ ಆಡಳಿತಾಧಿಕಾರಿ ಅನುಮೋದನೆ

ಚಿಕ್ಕಬಳ್ಳಾಪುರ ನಗರಸಭೆ ಅಧಿಕಾರಿಗಳ ಯಡವಟ್ಟುಗಳು ಮುಂದುವರಿದಿವೆ. ಆದರೆ ಈ ಬಾರಿ ಮಾಡಿದ ಯಡವಟ್ಟಿನಿಂದ ಚಿಕ್ಕಬಳ್ಳಾಪುರ ನಗರದ ೩೦ ವಾರ್ಡುಗಳ ಸದಸ್ಯರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಆದರೆ ಸಮಸ್ಯೆ ಸೃಷ್ಟಿಯಾಗುತ್ತಲೇ ನಗರಸಭೆ ಆ? ಉಕ್ತರಾಗಿದ್ದ ಮಂಜುನಾಥ್ ಅವರು ಸೇವೆಯಿಂದ ಬಿಡುಗಡೆಯಾಗಿದ್ದಾರೆ. ಇದರಿಂದ ನಗರಸಭಾ ಸದಸ್ಯರ ಆಕ್ರೋಶ ಇನ್ನೂ ತೀವ್ರವಾಗಿದ್ದು, ಅನುಮೋದನೆ ನೀಡಿದ ಕ್ರಿಯಾ ಯೋಜನೆ ರದ್ದು ಕೋರಿ ಮನವಿಯನ್ನೂ ಸಲ್ಲಿಸಿದ್ದಾರೆ. ಇಷ್ಟಕ್ಕೂ ಏನು ಸಮಸ್ಯೆ ಅಂತೀರಾ? ಈ ಸ್ಟೋರಿ ನೋಡಿ.

ಮೊನ್ನೆ ತಾನೇ ಚರಂಡಿ ಸ್ವಚ್ಛತೆ ನೆಪದಲ್ಲಿ ಕೊಳಚೆ ಪ್ರದೇಶದಲ್ಲಿದ್ದ ಬಡವರ ಮನೆ ನೆಲಸಮ ಮಾಡಿ ವಿವಾದಕ್ಕೆ ಈಡಾಗಿದ್ದ ನಗರಸಭೆ ಅಧಿಕಾರಿಗಳು ಇದೀಗ ಹೊಸ ಸಮಸ್ಯೆ ಸೃಷ್ಟಿ ಮಾಡಿದ್ದಾರೆ. ಆದರೆ ಈ ಬಾರಿ ಸಮಸ್ಯೆ ಉಂಟು ಮಾಡಿರೋದು ಅಭಿವೃದ್ಧಿ ವಿಚಾರದಲ್ಲಿ. ನಗರಸಭೆ ಅಧಿಕಾರಿಗಳ ಈ ನಡೆಯಿಂದ ನಗರದ ಒಟ್ಟು 31 ವಾರ್ಡುಗಳಲ್ಲಿ 30 ಮಂದಿ ಸದಸ್ಯರು ಕೋಪಗೊಂಡಿದ್ದಾರೆ. ಆಯುಕ್ತರ ಕ್ರಿಯಾಯೋಜನೆ ರದ್ದು ಕೋರಿ ಜಿಲ್ಲಾಧಿಕಾರಿಗದಳಿಗೆ, ಶಾಸಕರಿಗೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಗಳು ಸಲ್ಲಿಸುತ್ತಿದ್ದಾರೆ. ಆದರೆ ಸಮಸ್ಯೆ ಬಗೆಹರಿಯಲಿದೆಯಾ, ಗೊತ್ತಿಲ್ಲ.

ಈ ಹಿಂದೆ ಬಿಜೆಪಿ ಸರ್ಕಾರ ಇತ್ತಲ್ಲ, ಆಗ ನಗರದ ಎಲ್ಲಾ ವಾರ್ಡುಗಳ ವಿವಿಧ ಅಭಿವೃದ್ಧಿಗಾಗಿ ನಗರೋತ್ಥಾನ ಅನುದಾನ ಬಿಡುಗಡೆ ಮಾಡಿತ್ತು. ಆದರೆ ಆ ಕಾಮಗಾರಿಗಳಿಗೆ ಟಎಂಡರ್ ಕರೆದು ಕ್ರಿಯಾಯೋಜನೆ ಸಿದ್ಧಪಡಿಸುವುದಕ್ಕೂ ಮುನ್ನವೇ ವಿಧಾನಸಭಾ ಚುನಾವಣೆಗಳು ಬಂದವು. ಚುನಾವಣೆಯಲ್ಲಿ ನೂತನ ಶಾಸಕರು ಗೆದ್ದು, ರಾಜ್ಯ ಸರ್ಕಾರವೂ ಬದಲಾಯಿತು. ಪರಿಣಾಮ ಈ ಹಿಂದಿನ ಸರ್ಕಾರ ಮಾಡಿದ್ದ ಆದೇಶಗಳೆಲ್ಲವೂ ರದ್ದಾಯಿತು. ಆದರೆ ನಗರೋತ್ಥಾನ ಅನುದಾನವನ್ನೂ ನಗರದ ಹೊರವಲಯದ ರಸ್ತೆಗಳ ಅಭಿವೃದ್ಧಿಗೆ ಬಳಸಲು ತೀರ್ಮಾನಿಸಲಾಗಿತ್ತು.

ನಗರೋತ್ಥಾನ ಅನುದಾನ ರಸ್ತೆ ಅಭಿವೃದ್ಧಿಗೂ ಬಳಸಲಿಲ್ಲ, ನಗರ ಅಭಿವೃದ್ಧಿಗೂ ಬಳಸಲಿಲ್ಲ. ಇದರಿಂದ ಸದಸ್ಯರ ಅಸಮಾಧಾನ ಹೊಗೆಯಾಡಿತ್ತು. ಈ ಪರಿಸ್ಥಿತಿಯಲ್ಲಿಯೇ ನೂತನ ಸರ್ಕಾರ ಕಳೆದ ಜನವರಿಯಲ್ಲಿ ೧೫ನೇ ಹಣಕಾಸು ಯೋಜನೆಯ ವಿವಿಧ ಕಾಮಗಾರಿಗಳ ಟೆಂಡರ್ ಕರೆದು, ನುಮೋದನೆಯೂ ಆಗಿ, ವರ್ಕ್ ಆರ್ಡರ್ ನೀಡಬೇಕಿತ್ತು. ಅದೇ ಸಮಯಕ್ಕೆ ಲೋಕಸಭಾ ಚುನಾವಣೆಗಳು ಬಂದವು. ನೀತಿಸಂಹಿತೆ ನೆಪ ಹೇಳಿ ವರ್ಕ್ ಆರ್ಡರ್ ನೀಡಲಿಲ್ಲ. ಈಗ ನೀತಿಸಂಹಿತೆ ಮುಗಿದು ತಿಂಗಳೇ ಆದರೂ ಈವರೆಗೂ ವರ್ಕ್ ಆರ್ಡರ್ ನೀಡಲಿಲ್ಲ. ಇದು ಸದಸ್ಯರ ಅಸಮಾಧಾನವನ್ನು ಮತ್ತಷ್ಟು ಹೆಚ್ಚಿಸಿತು.

ಇದು ಹೀಗಿರುವಾಗಲೇ ಜೂನ್ 13ರಂದು 2024-25ನೇ ಸಾಲಿನ 15ನೇ ಹಣಕಾಸು ಯೋಜನೆಯಲ್ಲಿ ಅನುದಾನ ಬಂದಿದ್ದು, ಈ ಹಣಕ್ಕೆ ಸಂಬoಧಿಸಿ ಕಾಮಗಾರಿಗಳ ಕ್ರಿಯಾಯೋಜನೆ ಸಿದ್ಧಪಡಿಸುವಂತೆ ಆಯುಕ್ತರನ್ನು ಕೋರಲಾಗಿದೆ. ನಗರಸಭೆ ಆಯುಕ್ತರು ಯಾವುದೇ ಸದಸ್ಯರ ಅಭಿಪ್ರಾಯ ಪಡೆಯದೆ, ಈ ಅನುದಾನವನ್ನು ಹಂಚಿಕೆ ಮಾಡಿ ಕ್ರಿಯಾಯೋಜನ ಎ ಸಿದ್ಧಪಡಿಸಿದ್ದು, ಈ ಕ್ರಿಯಾಯೋಜನೆಗೆ ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿಗಳ ಅನುಮೋದನೆಯೂ ಲಭಿಸಿದೆ. ಇದು ಈಗ ಸದಸ್ಯರನ್ನು ಕೆರಳಿಸಿದೆ.

2024-25ನೇ ಸಾಲಿನ ೧೫ನೇ ಹಣಕಾಸು ಯೋಜನೆಯಲ್ಲಿ ಒಟ್ಟು 3027 ಕೋಟಿ ಹಣ ಮಂಜೂರಾಗಿದೆ. 2024-25ನೇ ಸಾಲಿನ ೧೫ನೇ ಹಣಕಾಸು ಯೋಜನೆಯ ನಿರ್ಬಂಧಿತ ಅನುದಾನ ಶೇ.೬೦ರಷ್ಟಯ ಅಂದರೆ 196.26 ಲಕ್ಷ, ಅನಿರ್ಬಂಧಿತ ಅನುದಾನ ಶೇ.40 ಅಂದರೆ 130.80 ಲಕ್ ಸೇರಿ ಒಟ್ಟು 3.27 ಕೋಟಿ ಅನುದಾನ ಬಂದಿದೆ. ಇದರಲ್ಲಿ ನೀರು ಸರಬರಾಜಿಗಾಗಿ ಶೇ.30 ರಷ್ಟು ಅಂದರೆ 98.10 ಲಕ್ಷ, ಘನ ತ್ಯಾಜ್ಯ ನಿರ್ವಹಣೆಗಾಗಿ 98.10 ಲಕ್ಷ ಸೇರಿ ಒಟ್ಟು 196.20 ಲಕ್ಷ ಮತ್ತು ಅನಿರ್ಬಂಧಿತ ಅನುದಾನ ಶೇ.40 ರಂತೆ 139.80 ಲಕ್ಷ ಅನುದಾನ ಚಿಕ್ಕಬಳ್ಳಾಪುರ ನಗರಸಭೆಗೆ ಬಂದಿದೆ.

ಈ ಅನುದಾನದಲ್ಲಿ ಚಿಕ್ಕಬಳ್ಳಾಪುರ ನಗರಸಭೆ ವ್ಯಾಪ್ತಿಯಲ್ಲಿ ವಾಟರ್ ಮೀಟರ್ ಅಳವಡಿಸಲು 98.10 ಲಕ್ಷ, ಮಿನಿ ಟಿಪ್ಪರ್ ಖರೀದಿಗೆ 46.10 ಲಕ್ಷ, ರಸ್ತೆ ಗುಡಿಸುವ ವಾಹನ ಖರೀದಿಗೆ 41.05 ಲಕ್ಷ ಹಣ ನಿಗಧಿ ಮಾಡಿ ಆಯುಕ್ತರು ಕ್ರಿಯಾಯೋಜನೆ ಸಿದ್ಧಪಡಿಸಿದ್ದಾರೆ. ಅಲ್ಲದೆ ಟ್ರಾಕ್ಟರ್ ಖರೀದಿಗೆ 10.05 ಲಕ್ಷ ಸೇರಿ 98.10 ಲಕ್ಷ ಮೀಸಲಿತಿಸಲಾಗಿದೆ. ಇದರ ಜೊತೆಗೆ 4ನೇ ವಾರ್ಡಿನ ಖಾಸಗಿ ಬಡಾವಣೆಗೆ ಸೇರಿದ್ದು ಎನ್ನಲಾದ ವಿವಿಧ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ 1.3 ಕೋಟಿ ನೀಡಿ ಕ್ರಿಯಾ ಯೋಜನೆಯನ್ನು ಆಯುಕ್ತರು ಸಿದ್ಧಪಡಿಸಿದ್ದು, ಈ ಕ್ರಿಯಾಯೋಜನೆಗೆ ಸಂಬoಧಿಸಿ ಯಾವುದೇ ಸದಸ್ಯರನ್ನು ಸಂಪರ್ಕಿಸದೆ ಮಾಡಿದ್ದಾರೆ ಎಂಬುದು ಸದಸ್ಯರ ಆರೋಪವಾಗಿದೆ.

ಇಡೀ ನಗರದ ಅಭಿವೃದ್ಧಿಗಾಗಿ ಬಂದಿರುವ ಹಣದಲ್ಲಿ ೪ನೇ ವಾರ್ಡ್ ಒಂದಕ್ಕೇ 1.3 ಕೋಟಿ ಅನುದಾನ ನೀಡಲಾಗಿದೆ. ಅದರಲ್ಲೂ ಈ ಅನುದಾನ ಖಾಸಗಿ ಬಡಾವಣೆಗೆ ಸೇರಿದ ರಸ್ತೆಗಳ ಅಭಿವೃದ್ಧಿ ಹೆಸರಿನಲ್ಲಿ ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ ಎಂದು ಇತರೆ ನಗರಸಭಾ ಸದಸ್ಯರು ಆರೋಪಿಸಿದ್ದಾರೆ. ಇರುವ ಅನುದಾನವೆಲ್ಲಾ ಒಂದೇ ವಾರ್ಡಿಗೆ ನೀಡಿದರೆ, ಉಳಿದ 30 ವಾರ್ಡುಗಳ ಸ್ಥಿತಿ ಏನು, ಅದರಲ್ಲೂ ಖಾಸಗಿ ಬಡಾವಣೆ ರಸ್ತೆ ಅಭಿವೃದ್ಧಿಗೆ ನಗರಸಭೆಯ ಎಲ್ಲಾ ಅನುದಾನ ನೀಡಿ, ಇಡೀ ನಗರಕ್ಕೆ ಅನ್ಯಾಯ ಮಾಡಲಾಗಿದೆ ಎಂದು ಸದಸ್ಯರು ತಮ್ಮ ಆಕ್ರೋಶ ವ್ಯಕ್ತಪಡಿಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಆದರೆ ಈಗಾಗಲೇ ಕ್ರಿಯಾಯೋಜನೆಗೆ ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿಗಳು ಅನುಮೋದನೆ ನೀಡಿದ್ದು, ಅವರು ಕ್ರಿಯಾಯೋಜನೆ ರದ್ದು ಪಡಿಸಲಿದ್ದಾರಾ, ಇಲ್ಲವಾ ಎಂಬ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲಿಯೇ ಚಿಕ್ಕಬಳ್ಳಾಪುರ ನಗರಸಭೆ ಆಯುಕ್ತರಾಗಿದ್ದ ಮಂಜುನಾಥ್ ಅವರು ಆಯುಕ್ತ ಹುದ್ದೆಯಿಂದ ಶುಕ್ರವಾರ ಸಂಜೆಯೇ ಬಿಡುಗಡೆಯಾಗಿದ್ದಾರೆ ಎನ್ನಲಾಗಿದೆ. ಇದರಿಂದ ಚಿಕ್ಕಬಳ್ಳಾಪುರ ನಗರಸಭೆಗೆ ಪ್ರಸ್ತುತ ಆಯುಕ್ತರೂ ಇಲ್ಲವಾಗಿದ್ದು, ಪ್ರಸ್ತುತ ಎದುರಾಗಿರುವ ಸಮಸ್ಯೆಗೆ ಪರಿಹಾರ ಸಿಕ್ಕಿ, ಕ್ರಿಯಾಯೋಜನೆ ಮತ್ತೆ ಬದಲಾಗಲಿದೆಯಾ, ಇಲ್ಲವೇ ಅದೇ ಕ್ರಿಯಾ ಯೋಜನೆ ಮುಂದುವರಿಯಲಿದೆಯಾ ಎಂಬುದು ಅರ್ಥವಾಗದೆ ಸದಸ್ಯರು ತಲೆ ಚಚ್ಚಿಕೊಳ್ಳುವಂತಾಗಿದೆ.

ಇನ್ನು ಈ ವೇಳೆಗಾಗಲೇ ಹರಾಜು ಆಗಬೇಕಿದ್ದ ನಗರಸಭೆ ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆ ಮುಂದೂಡಲಾಗಿದೆ. ಇದಕ್ಕೆ ಕಾರಣ ಈ ಹಿಂದೆ ಆಯುಕ್ತರಾಗಿದ್ದ ಮಂಜುನಾಥ್ ಅವರ ವಿರುದ್ಧ ಕೋರ್ಟಿನ ಆದೇಶ ಇದೆ ಎಂಬ ನೆಪ ಹೇಳಿ ಜಿಲ್ಲಾಧಿಕಾರಿಗಳೇ ಹರಾಜು ಪ್ರಕ್ರಿಯೆಯನ್ನು ಮುಂದೂಡಿದ್ದರು. ಆದರೆ ಈಗ ಕ್ರಿಯಾಯೋಜನೆ ಸಿದ್ಧಪಡಿಸಲು ಅದೇ ಆಯುಕ್ತರಿಗೆ ಯಾವ ಅಧಿಕಾರ ಇದೆ ಎಂದು ಸದಸ್ಯರು ಪ್ರಶ್ನೆ ಮಾಡುತ್ತಿದ್ದು, ಅರ್ಹರಲ್ಲದ ಆಯುಕ್ತರು ಸಿದ್ಧಪಡಿಸಿರುವ ಕ್ರಿಯಾಯೋಜನೆ ರದ್ದುಪಡಿಸಲು ಕೋರಿ, ನ್ಯಾಯಾಲಯದ ಮೆಟ್ಟಿಲು ಹತ್ತಲೂ ಸದಸ್ಯರು ಸಿದ್ಧತೆ ನಡೆಸುತ್ತಿರುವುದಾಗಿ ತಿಳಿದುಬಂದಿದೆ.

About The Author

Leave a Reply

Your email address will not be published. Required fields are marked *