ನ.30 ರಂದು ನಂಜನಗೂಡಿನಲ್ಲಿ ಸಂವಿಧಾನ ಸಮರ್ಪಣ ದಿನ
1 min readನ.30 ರಂದು ನಂಜನಗೂಡಿನಲ್ಲಿ ಸಂವಿಧಾನ ಸಮರ್ಪಣ ದಿನ
ಬೃಹತ್ ಜನಜಾಗೃತಿ ಸಮಾವೇಶ, ಪ್ರಚಾರ ರಥಕ್ಕೆ ಚಾಲನೆ
ಸಂವಿಧಾನ ಸಮರ್ಪಣ ದಿನದ ಪ್ರಯುಕ್ತ ನಂಜನಗೂಡು ನಗರದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸಂವಿಧಾನ ದಿನಾಚರಣೆ ಆಚರಿಸಲಾಯಿತು. ನಂತರ ಸಂವಿಧಾನ ಸಮರ್ಪಣ ದಿನದ ಅಂಗವಾಗಿ ನ.30 ರಂದು ನಂಜನಗೂಡಿನಲ್ಲಿ ನಡೆಯುವ ಜನಜಾಗೃತಿ ಸಮಾವೇಶದ ಪ್ರಚಾರ ರಥಕ್ಕೆ ನಂಜನಗೂಡು ನಗರಸಭಾ ಅಧಕ್ಷ ಶ್ರೀಕಂಠಸ್ವಾಮಿ ನೀಲಿ ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ಸಂವಿಧಾನ ಸಮರ್ಪಣ ದಿನದ ಪ್ರಯುಕ್ತ ನಂಜನಗೂಡು ನಗರದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸಂವಿಧಾನ ದಿನಾಚರಣೆ ಆಚರಿಸಲಾಯಿತು. ದಲಿತ ಸಂಘಟನೆಗಳ ಸಮನ್ವಯ ಸಮಿತಿ ಅಧಕ್ಷ ಮಂಜು ಶಂಕರಪುರ ಮಾತನಾಡಿ, ಜನರಿಗೆ ಸಂವಿಧಾನದ ಬಗ್ಗೆ ತಿಳಿಸಲು ಈ ಬಾರಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ನ.30 ರಂದು ಶನಿವಾರ ನಂಜನಗೂಡಿನ ಅಂಬೇಡ್ಕರ್ ಭÀವನದಲ್ಲಿ ಸಂವಿಧಾನ ಸಮರ್ಪಣ ದಿನದ ಅಂಗವಾಗಿ ಬೃಹತ್ ಜನ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ ಮಹದೇವಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶಾಸಕ ದರ್ಶನ್ ಧ್ರನಾರಾಯಣ್, ಸಂಸದ ಸುನೀಲ್ ಬೋಸ್, ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ, ಡಾ.ವಿಠ್ಠಲ ವಗ್ಗನ್, ಮಾಜಿ ಶಾಸಕ ಬಿ.ಹರ್ಷವರ್ಧನ್ , ಕಳಲೆ ಕೇಶವಮೂರ್ತಿ, ನಗರಸಭಾ ಅಧಕ್ಷ ಶ್ರೀಕಂಠ ಸ್ವಾಮಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಪ್ರಚಾರ ರಥ ತಾಲ್ಲೂಕಿನ ಎಲ್ಲಾ ಗ್ರಾಮಗಳಲ್ಲಿ ಸಂಚರಿಸಲಿದೆ. ಈ ಕಾರ್ಯಕ್ರಮಕ್ಕೆ ಸುಮಾರು 5 ಸಾವಿರಕ್ಕೂ ಹೆಚ್ಚು ಜನರು ಆಗಮಿಸುವ ನಿರೀಕ್ಷೆ ಇದ್ದು, ತಾಲ್ಲೂಕಿನ ಎಲ್ಲಾ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು. ಗೀಕಹಳ್ಳಿ ಮಹದೇವಸ್ವಾಮಿ, ಎಂ. ರಾಜಶೇಖರ್, ಬಸವಟ್ಟಿಗೆ ನಾಗೇಂದ್ರ , ಅಲತ್ತೂರು ಶಿವರಾಜು, ಜೆ. ಮಹದೇವಕುಮಾರ್ ಇದ್ದರು.