ಉಚಿತ ಜಾನುವಾರು ಮೇವು ವಿತರಣೆ

ವಿಶ್ವ ಪ್ರಸಿದ್ಧ ನಂದಿ ಗಿರಿಧಾಮಕ್ಕೆ ಪ್ರವಾಸಿಗರ ದಂಡು

ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಶ್ರೀನಿವಾಸಪುರದಲ್ಲಿ ಪ್ರತಿಭಟನೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಖಂಡನೆ

December 23, 2024

Ctv News Kannada

Chikkaballapura

ದೆಹಲಿಯಲ್ಲಿ ಪ್ರತಿಭಟನೆಗೆ ತೆರಳಿದ ಕಾಂಗ್ರೆಸ್ ಶಾಸಕರು ವಿಮಾನ ನಿಲ್ದಾಣದಲ್ಲಿ ಮಾಹಿತಿ ನೀಡಿದ ಶಾಸಕರು

1 min read

ನಮ್ಮ ರಾಜ್ಯದ ಪಾಲು ಕೇಳಲು ದೆಹಲಿಗೆ ಹೋಗುತ್ತಿರುವುದಾಗಿ ಕಾಂಗ್ರೆಸ್ ಶಾಸಕರು ತಿಳಿಸಿದ್ದಾರೆ. ದೆಹಲಿಗೆ ತೆರಳುವಾಗ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅವರು ಮಾತನಾಡಿದರು.

ಶಾಸಕ ಹ್ಯಾರೀಸ್ ಮಾತನಾಡಿ, ನಮ್ಮ ರಾಜ್ಯದ ಜನರ ತೆರಿಗೆ ಪಾಲು ಕೇಳಲು ಹೋಗುತ್ತಿದ್ದೇವೆ. ಡೈಲಾಗ್ ಹೊಡೆತಿರೋ ಬಿಜೆಪಿ ಯವರು ನಮ್ಮ ಜೊತೆ ಬಂದು ಹೋರಾಟ ಮಾಡಲಿ. ದುಡ್ಡು ತಂದು ನಮ್ಮ ಜೊತೆ ಇಲ್ಲಿ ಬಂದು ಹಣ ತಗೊಳ್ಳಿ. ಇದು ಕಾಂಗ್ರೆಸ್ ಬಿಜೆಪಿ ಫೈಟ್ ಅಲ್ಲ. ಇದು ಕರ್ನಾಟಕ್ಕಾಗಿ ಮಾಡ್ತಿರೋ ಹೋರಾಟ ಎಂದರು.

ಇಲ್ಲಿ ಕೂತ್ಕೊಂಡು ಬೇಕಾದರೆ ಕೇಳಲಿ, ಕೇಂದ್ರ ಸರ್ಕಾರ ನಮಗೆ ಕೊಡಬೇಕಾಗಿರುದು ಕೊಡಲಿ. ನಮ್ಮ ಶೇರ್ ಕೇಳ್ತಾ ಇದ್ದೀವಿ. ಬಿಜೆಪಿಯವರು ಸಪೋರ್ಟ್ ಮಾಡಲಿ, ಸಂಸದರಿಗೆ ಚುನಾವಣೆಯಲ್ಲಿ ಸರಿಯಾದ ಪಾಠ ಕಲಿಸಲಿದ್ದಾರೆ, ಸಂಸದರು ಕೇಳಿದ್ರೆ ನಾವ್ ಯಾಕೆ ದೆಹಲಿಗೆ ಹೋಗ್ತೀದ್ದವಿ ಎಂದರು.

ಸಚಿವ ಚಲುವರಾಯ ಸ್ವಾಮಿ ಹಾಗೂ ಶಾಸಕ ಗಣಿಗ ರವಿ, ಮಾತನಾಡಿ, ಪ್ರ‍್ರಜಪ್ರಭುತ್ವ ವ್ಯವಸ್ಥೆಯಲ್ಲಿ ದೆಹಲಿಗೆ ತೆರಳಿ ಸರ್ಕಾರ ಪ್ರತಿಭಟನೆ ಮಾಡಿ ತೆರಿಗೆ ಕೇಳೋ ಪರಿಸ್ಥಿತಿ ಬಂದಿದೆ, ನಾಲ್ಕು ತಿಂಗಳಿನಿAದ ಬರಗಾಲದ ಹಿನ್ನಲೆ ಕೇಂದ್ರ ದಿಂದ ಬರ ಪರಿಹಾರ ಸರಿಯಾಗಿ ಬರಲಿಲ್ಲ, 26 ಸಂಸದರು ಬಿಜೆಪಿಯಲ್ಲಿ ಗೆದ್ದಿದ್ದಾರೆ, ಇವರು ಏನ್ ಕೆಲಸ ಮಾಡ್ತಿದ್ದಾರೆ, ನಮ್ಮ ರಾಜ್ಯದ ಹಣ ನಮಗೆ ಕೊಡಿ ಅಂತಾ ಕೇಳುತ್ತಿದ್ದೇವೆ, ಅದಕ್ಕೆ ರಾಜ್ಯ ಬಿಜೆಪಿಯವರು ಸ್ಪಂಧಿಸಿ ಅವರು ಕೂಡ ನಮ್ಮ ಜೊತೆ ಭಾಗವಹಿಸಲಿ, ಇಲ್ಲ ಅಂದ್ರೆ ರಾಜ್ಯದ ಜನ ಸರಿಯಾಗಿ ಬುದ್ದಿ ಕಲಿಸಲಿದ್ದಾರೆ ಎಂದರು.

ಸಚಿವ ಎಂ.ಬಿ. ಪಾಟೀಲ್ ಮಾತನಾಡಿ, ಯಾವ ರಾಜ್ಯಗಳು ಶಿಸ್ತಿನಿಂದ ತೆರಿಗೆ ಕಟ್ಟಿದೆ ಆ ರಾಜ್ಯಗಳಿಗೆ ಉತ್ತಮ ಅನುಧಾನ ನೀಡಬೇಕು. ಆದ್ರೆ ನೀವು ಅದನ್ನ ಮಾನದಂಡವಾಗಿ ಇಟ್ಟುಕೊಳ್ಳಬೇಕು. ಹೆಚ್ಚು ತೆರಿಗೆ ಕಟ್ಟಿದವರಿಗೆ ಅನ್ಯಾಯ ಮಾಡಿ ಉಳಿದ ರಾಜ್ಯಗಳಿಗೆ ನೀಡಿದ್ರೆ ಇದು ರಾಜಕೀಯ. ನಮಗೆ ಬರಬೇಕಾದ ಅನುಧಾನದ ಬಗ್ಗೆ ಜನರಿಗೆ ತಿಳಿಸಬೇಕು, ನಮಗೆ ಬರಬೇಕಾದ ಹಣ ಬಂದ್ರೆ ಗ್ಯಾರಂಟಿ ಜೊತೆಗೆ ಅಭಿವೃದ್ದಿಗೂ ಹಣ ಸಿಗುತ್ತೆ. ಒಂದು ಕಡೆ ಅಪಪ್ರಚಾರ ಮಾಡುವುದು ಇವರೆ ಹಣ ಬರದ ಹಾಗೆ ಮಾಡುವವರು ಇವರೆ. ನಮ್ಮ ಎಂಪಿಗಳು ಕೇಂದ್ರ ಸಚಿವರು ಬಾಯಿ ತೆಗೆಯುತ್ತಲೆ ಇಲ್ಲ. ಇವರಿಗೆಲ್ಲ ರಾಜ್ಯದ ಹಿತದೃಷ್ಟಿಬೇಕಾಗಿಲ್ಲ. ಬಿಜೆಪಿ ಎಂಪಿಗಳು ಪಾರ್ಲಿಮೆಂಟ್ ನಲ್ಲಿ ಇವರು ಸಹಿ ಹಾಕಲಿಕ್ಕೆ ಸೀಮಿತರಾಗಿದ್ದಾರೆ. ಎಂದರು.

ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ನಮ್ಮ ತಂದೆ. ಎಲ್ಲ ರಾಜ್ಯದ ಸಿಎಂ ಗಳು ಅವರ ಮಕ್ಕಳಿದ್ದಂತೆ. ಆದ್ರೆ ನಮಗೆ ಕೊಡಬೇಕಾದ ಪಾಲು ಕೊಡದೆ ಮೋಸ ಮಾಡ್ತಿದ್ದಾರೆ. ಹಾಗಾಗಿ ನಮ್ಮ ಪಾಲು ಕೇಳಲು ನಾವ್ ದೆಹಲಿಗೆ ಹೋಗ್ತಿದ್ದೇವೆ ಎಂದರು.

About The Author

Leave a Reply

Your email address will not be published. Required fields are marked *