ಅಮಿತ್ ಶಾ ಹೇಳಿಕೆ ಖಂಡಿಸಿ ದಲಿತ ಸಂಘಟನೆಗಳ ಪ್ರತಿಭಟನೆ

ಶಿಡ್ಲಘಟ್ಟದಲ್ಲಿ ಅಪರಾಧ ಮಾಸಾಚರಣೆ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗುಣಮುಖರಾಗಲಿ

ರಾಗಿ, ಹುರಳಿ ಒಕ್ಕಣೆ ಕೇಂದ್ರವಾದ ರಾಜ್ಯ ಹೆದ್ದಾರಿ

December 26, 2024

Ctv News Kannada

Chikkaballapura

ಕ್ರಿಮಿನಲ್​ ಕಾನೂನುಗಳ ಬಗೆಗಿನ ಹೇಳಿಕೆಯನ್ನು ಸಮರ್ಥಿಸಿಕೊಂಡ ಕಾಂಗ್ರೆಸ್​ ನಾಯಕ ಪಿ.ಚಿದಂಬರಂ

1 min read

ಮೂರು ಹೊಸ ಕ್ರಿಮಿನಲ್ ಕಾನೂನುಗಳನ್ನು ಅಸಮರ್ಥರು ರಚಿಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿದ್ದರು. ಅವರ ಆಕ್ಷೇಪಾರ್ಹ ಮತ್ತು ಮಾನಹಾನಿಕರ ಹೇಳಿಕೆಯನ್ನು ಹಿಂಪಡೆಯುವಂತೆ ಉಪಾಧ್ಯಕ್ಷ ಜಗದೀಪ್ ಧನ್​ಖರ್​​ ಮನವಿ ಮಾಡಿದ್ದರು.

ಆದರೆ ನಿರ್ಣಾಯಕ ಕ್ರಿಮಿನಲ್​ ಬಿಲ್​ಗಳನ್ನು ಕಾನೂನು ಆಯೋಗಕ್ಕೆ ಒಪ್ಪಿಸಿಬೇಕಿತ್ತು ಎಂದು ಹೇಳುವ ಮೂಲಕ ಪಿ.ಚಿದಂಬರಂ ಅವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಎಂಎಚ್​ಎ ಕ್ರಿಮಿನಲ್​ ಕಾನೂನಗಳ ಸುಧಾರಣೆಗಾಗಿ ಮೇ 2020ರಲ್ಲಿ ಸಮಿತಿಯೊಂದನ್ನು ರಚಿಸಿತು. ಈ ಸಮಿತಿಯು ಅಧ್ಯಕ್ಷರು, ಸಂಚಾಲಕರು ಮತ್ತು ಸದಸ್ಯರನ್ನು ಹೊಂದಿತ್ತು. ಸಮಿತಿಯಲ್ಲಿನ ಸದಸ್ಯರನ್ನು ಪದೇಪದೆ ಬದಲಾಯಿಸಲಾಯಿತು. ಅಂತಿಮವಾಗಿ ಸಮಿತಿಯು ಸಂಚಾಲಕ ಮತ್ತು ಐದು ಸದಸ್ಯರನ್ನು ಒಳಗೊಂಡಿತ್ತು. ಆದರೆ ಆ ಸಮಿತಿಯಲ್ಲಿ ನೇಮಕಗೊಂಡವರಲ್ಲಿ ಒಬ್ಬರನ್ನು ಹೊರತುಪಡಿಸಿ ಎಲ್ಲರೂ ವಿವಿಧ ವಿಶ್ವವಿದ್ಯಾನಿಲಯಗಳ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು. ಈ ಸಮಿತಿಯಲ್ಲಿ ಅರೆಕಾಲಿಕ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ಅರೆಕಾಲಿಕ ಕೆಲಸ ಮಾಡುವ ಸದಸ್ಯರ ಸಮಿತಿಯು ಮೂರು ಹೊಸ ಕ್ರಿಮಿನಲ್ ಕಾನೂನುಗಳ ಕರಡುಗಳನ್ನು ಸಲ್ಲಿಸಸಿತು, ಅಂತಿಮವಾಗಿ ಸಂಸತ್ತು ಕಾನೂನುಗಳನ್ನು ಅಂಗೀಕರಿಸಿತು ಎಂದು ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್​ನಲ್ಲಿ ತಿಳಿಸಿದ್ದಾರೆ.

ಇಂತಹ ನಿರ್ಣಾಯಕ ವಿಧೇಯಕಗಳ ಕರಡು ರಚನೆಯ ಜವಾಬ್ದಾರಿಯನ್ನು ಕಾನೂನು ಆಯೋಗಕ್ಕೆ ವಹಿಸಬೇಕಾಗಿತ್ತೆ ಹೊರತು ಅರೆಕಾಲಿಕ ಸೇವೆ ಸಲ್ಲಿಸುವ ಹಾಗೂ ಇತರೆ ಜವಾಬ್ದಾರಿ ಹೊಂದಿರುವ ಸಮಿತಿಗಲ್ಲ ಎಂದು ಹೇಳಿದ್ದಾರೆ. ಮೂರು ಹೊಸ ಕ್ರಿಮಿನಲ್ ಕಾನೂನುಗಳಾದ ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ 2023, ಭಾರತೀಯ ನ್ಯಾಯ ಸಂಹಿತಾ 2023, ಮತ್ತು ಭಾರತೀಯ ಸಾಕ್ಷಿ ಅಧಿನಿಯಮ 2023 ಜುಲೈ 1 ರಂದು ಜಾರಿಗೆ ಬಂದವು.ಕಳೆದ ವರ್ಷ ಚಳಿಗಾಲದ ಅಧಿವೇಶನದಲ್ಲಿ ಈ ಮಸೂದೆಗಳನ್ನು ಸಂಸತ್ತಿನಲ್ಲಿ ಅಂಗೀಕರಿಸಲಾಗಿತ್ತು. (ಏಜೆನ್ಸೀಸ್​​)

See alsoVIDEO| ಪುಟ್ಟ ಬಾಲಕನ ಸಾಹಸ ಕಂಡು ಬೆಚ್ಚಿದ ನೆಟ್ಟಿಗರು! ಈತನಿಗೆ ಹಾವಿನ ಜತೆ ಆಟ..

#ctvnews #ctvNews #ctv
Top News: Latest Trending in India, Buzz, World Trending News, Hot on Social Media, What is Trending in the World, Trending on Social Media.

►Watch LIVE: https://shashwatha.com/player.php?url=https://shashwatha.com/hls/shashwatha/ctvnews.m3u8
►CTV News : https://ctvnewskannada.com/
►Subscribe to Ctv News: https://www.youtube.com/channel/UCHtq26kA5D5anCbPD3HoURw
►Big News Big Update : https://ctvnewskannada.com/
► Download CTV Android App: https://play.google.com/store/apps/details?id=com.ctv.ctvnews
► Like us on Facebook: https://www.facebook.com/ctvnewschikkaballapura
► Follow us on Instagram: https://www.instagram.com/ctvnewschikkaballapura/
► Follow us on Twitter: https://twitter.com/ctvnewscbpura

-news #ctv #ctvnewskannada #ctvchikkaballapura #ctvnewsmedia #ctvlive#ctvnewsupdate #todaynews #latestnewstoday

About The Author

Leave a Reply

Your email address will not be published. Required fields are marked *