ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪಕ್ಕೆ ಕಾಂಗ್ರೆಸ್ ಗರಂ, ಮಾಜಿ ಸಚಿವ ಶಿವರಾಂಗೆ ನೋಟಿಸ್ ಸಾಧ್ಯತೆ!
1 min read
ಆಡಳಿತಾರೂಢ ರಾಜ್ಯ ಕಾಂಗ್ರೆಸ್ ಸರ್ಕಾರದ (Congress government) ವಿರುದ್ಧ ಭ್ರಷ್ಟಾಚಾರದ (corruption) ಆರೋಪ ಮಾಡಿದ್ದ ಮಾಜಿ ಸಚಿವ ಬಿ. ಶಿವರಾಂ (Former Minister B. Shivaram) ವಿರುದ್ಧ ಕಾಂಗ್ರೆಸ್ ನಾಯಕರು ಗರಂ ಆಗಿದ್ದಾರೆ. ಬಿಜೆಪಿ (BJP) 40% ಆರೋಪಕ್ಕಿಂತ ಹೆಚ್ಚಿನ ಕಮಿಷನ್ ದಂಧೆ ಹಾಸನದಲ್ಲಿ (Hassan) ನಡೆಯುತ್ತಿದೆ.
ನಮ್ಮ ಜಿಲ್ಲೆಯಲ್ಲಿ 40% ಮೀರಿ ಲಂಚ ನಡೆಯುತ್ತಿದೆ. ನಾವು ಅಧಿಕಾರಕ್ಕೆ ಬರುವಾಗ ಬಿಜೆಪಿ 40% ಲಂಚ ಅಂತಾ ಆರೋಪ ಮಾಡಿದ್ದೇವು. ಆದರೆ ಈಗ ಅದಕ್ಕಿಂತ ಹೆಚ್ಚಾಗಿದೆ ಅದಕ್ಕೆ ಕಡಿವಾಣ ಹಾಕಿ ಎಂದು ನಾನೇ ಹೇಳಿದ್ದೇನೆ ಅಂತ ಹೇಳಿದ್ದರು. ಬಿ. ಶಿವರಾಂ ಹೇಳಿಕೆಯಿಂದ ಪಕ್ಷಕ್ಕೆ ಮುಜುಗರವಾಗಿದ್ದು, ಅವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಲಾಗಿತ್ತು. ಇದೀಗ ಇಂದು ಸಂಜೆಯೊಳಗೆ ನೋಟಿಸ್ ನೀಡಲು ಕೆಪಿಸಿಸಿ (KPCC) ನಿರ್ಧರಿಸಿದೆ.
ಬಿ. ಶಿವರಾಂಗೆ ಇಂದು ಸಂಜೆಯೊಳಗೆ ನೋಟಿಸ್ ಸಾಧ್ಯತೆ
ಪಕ್ಷಕ್ಕೆ ಮುಜುಗರ ತರುವ ಹೇಳಿಕೆ ನೀಡಿದ ಹಿನ್ನೆಲೆ ಮಾಜಿ ಸಚಿವ ಗಂಡಸಿ ಶಿವರಾಂಗೆ ಶೋಕಾಸ್ ನೋಟಿಸ್ ಜಾರಿ ಮಾಡಲು ರಾಜ್ಯ ಕಾಂಗ್ರೆಸ್ ನಿರ್ಧರಿಸಿದೆ. ಇಂದು ಸಂಜೆಯೊಳಗೆ ಕಾರಣ ಕೇಳಿ ಕೆಪಿಸಿಸಿಯಿಂದ ನೋಟಿಸ್ ಜಾರಿಗಯಾಗುವ ಸಾಧ್ಯತೆ ಇದೆ.
ಕ್ರಮ ಕೈಗೊಳ್ಳುವಂತೆ ಡಿಕೆಶಿಗೆ ಸಿಎಂ ಸೂಚನೆ
ನೋಟೀಸ್ ಜಾರಿ ಸಂಬಂಧ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್‌ಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಪಕ್ಷಕ್ಕೆ ಡ್ಯಾಮೇಜ್ ಆಗುವ ರೀತಿ ಹೇಳಿಕೆ ಕೊಡುತ್ತಿದ್ದಾರೆ. ಇವತ್ತು ಕೂಡ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಹೀಗಾಗಿ ಪಕ್ಷದಿಂದ ಅವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಡಿಕೆಶಿಗೆ ಸಿಎಂ ದೂರವಾಣಿ ಕರೆ ಮಾಡಿದ್ದಾರೆ ಎನ್ನಲಾಗಿದೆ.
ಸರ್ಕಾರದ ವಿರುದ್ಧ ಆರೋಪಿಸಿದ್ದ ಶಿವರಾಂ
ಕಾಂಗ್ರೆಸ್ ಹಿರಿಯ ನಾಯಕರೂ ಆಗಿರುವ ಮಾಜಿ ಸಚಿವ ಶಿವರಾಂ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಭ್ರಷ್ಟಚಾರದ ಆರೋಪ ಮಾಡಿದ್ದರು. ಬಿಜೆಪಿ 40% ಆರೋಪಕ್ಕಿಂತ ಹೆಚ್ಚಿನ ಕಮಿಷನ್ ದಂದೆ ಹಾಸನದಲ್ಲಿ ನಡೆಯುತ್ತಿದೆ. ನಮ್ಮ ಜಿಲ್ಲೆಯಲ್ಲಿ 40% ಮೀರಿ ಲಂಚ ನಡೆಯುತ್ತಿದೆ. ನಾವು ಅಧಿಕಾರಕ್ಕೆ ಬರುವಾಗ ಬಿಜೆಪಿ 40% ಲಂಚ ಅಂತಾ ಆರೋಪ ಮಾಡಿದ್ದೇವು. ಆದರೆ ಈಗ ಅದಕ್ಕಿಂತ ಹೆಚ್ಚಾಗಿದೆ ಅದಕ್ಕೆ ಕಡಿವಾಣ ಹಾಕಿ ಎಂದು ನಾನೇ ಹೇಳಿದ್ದೇನೆ ಅಂತ ಶಿವರಾಂ ಹೇಳಿದ್ದರು.
ಸಿದ್ದರಾಮಯ್ಯ ಎದುರಲ್ಲೇ ಹೇಳಿದ್ದೆ ಎಂದಿದ್ದ ಶಿವರಾಂ
ನಾನು ಸಿಎಂ ಸಿದ್ದರಾಮಯ್ಯ ಎದುರೇ ಹಾಸನ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಹೇಳಿದ್ದೆ. ನಮ್ಮ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿದೆ ಎಂದೂ ಎಚ್ಚರಿಸಿದ್ದೆ ಎಂದು ಶಾಸಕ ಶಿವಲಿಂಗೇಗೌಡ, ವಿರುದ್ಧ ಬಿ ಶಿವರಾಂ ಪರೋಕ್ಷ ವಾಗ್ದಾಳಿ ನಡೆಸಿದ್ದರು.