ಕಾಂಗ್ರೆಸ್ ಭೂತ್ ಮಟ್ಟದ ಎಜೆಂಟೆರುಗಳ ಸಮಾವೇಶ
1 min readಚಿಕ್ಕಬಳ್ಳಾಪುರ ನಗರದ ಶ್ರೀದೇವಿ ಪ್ಯಾಲೇಸ್ ಲ್ಲಿ ಕಾಂಗ್ರೇಸ್ ಪಕ್ಷದ ಭೂತ್ ಮಟ್ಟದ ಏಜೆಂಟರು ಮುಖಂಡರು ಕಾರ್ಯಕರ್ತರ ಸಮಾವೇಶ ಹಮ್ಮಿಕೊಳ್ಳಲಾಗಿತ್ತು.
ಸಮಾವೇಶದಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾರ್ಯಕರ್ತರು ಕಾರ್ಯನಿರ್ವಹಿಸಬೇಕು ಅದಕ್ಕೂ ಮೊದಲು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿಗಳ ಬಗ್ಗೆ ಮನೆಮನೆಗೂ ಅರಿವು ಮೂಡಿಸಬೇಕು ಜಾತ್ಯಾತೀತ ಹಾಗು ಧರ್ಮಾತೀತ ಪಕ್ಷ ಕಾಂಗ್ರೇಸ್ ಗೆಲುವಿಗೆ ಕಾಯಾವಾಚಾ ದುಡಿಯಬೇಕೆಂದು ಮಾಜಿ ಸಂಸದ ವೀರಪ್ಪಮೊಯಿಲಿ ಕರೆ ನೀಡಿದರು.
ಸಭೆಯ ನಂತರ ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಕಾರ್ಯಕರ್ತರ ಮೇಲೆ ನಂಬಿಕೆ ಇಟ್ಟಿರುವ ಪಕ್ಷ ಕಾಂಗ್ರೇಸ್, ಬಿಎಲ್ ಎ ಗಳು ಭೂತ ಮಟ್ಟದ ಕಾರ್ಯಕರ್ತರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಗೆಲುವಿಗೆ ಹೇಗೆ ಕೆಲಸ ಮಾಡಬೇಕು. ಮತದಾರರನ್ನ ಸೆಳೆಯಲು ಪಕ್ಷ ಸಂಘಟನೆ ಬಗ್ಗೆ ಚರ್ಚೆ ಮಾಡಲಾಗಿದೆ ಈ ಭಾರಿ ಕರ್ನಾಟಕದಲ್ಲಿ ಅತಿ ಹೆಚ್ಚು ಸಂಸದರನ್ನ ಕಾಂಗ್ರೇಸ್ ಪಕ್ಷ ಗೆದ್ದುಕೊಳ್ಳಲಿದೆ ಹಾಗು ಕೇಂದ್ರದಲ್ಲಿಯೂ ಇಂಡಿಯಾ ರೂಲಿಂಗ್ ಮಾಡಲಿದೆ ಎಂದರು.