ಹಣಕಾಸು ವಿಚಾರಕ್ಕೆ ಸ್ನೇಹಿತರ ನಡುವೆ ಕಲಹ
1 min readಹಣಕಾಸು ವಿಚಾರಕ್ಕೆ ಸ್ನೇಹಿತರ ನಡುವೆ ಕಲಹ
ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಿಕೊಂಡ ಗೆಳೆಯರು
ಚಾಕುವಿನಿಂದ ಇರಿದು ವ್ಯಕ್ತಿಯ ಕೊಲೆ ಯತ್ನ
ಕುಡಿದ ಅಮಲಿನಲ್ಲಿ ಯುವಕನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಲು ಯತ್ನಿಸಿರುವ ಘಟನೆ ಬುಧವಾರ ತಡರಾತ್ರಿ ನಡೆದಿದೆ.
ಚಿಂತಾಮಣಿ ತಾಲೂಕಿನ ಶಿಡ್ಲಘಟ್ಟ ರಸ್ತೆಯ ನಿರ್ಜನ ಪ್ರದೇಶದಲ್ಲಿ ನಡೆದಿದೆ.
ಚಿಂತಾಮಣಿ ತಾಲೂಕಿನ ಶಿಡ್ಲಘಟ್ಟ ರಸ್ತೆಯ ಆರ್ ಟಿ ಓ ಆಫೀಸ್ ಕೂಗಲತೆ ದೂರದ ನಿರ್ಜನ ಪ್ರದೇಶದಲ್ಲಿ ಬುಧವಾರ ತಡರಾತ್ರಿ ಚಾಕುವಿನಿಂದ ಇರಿದು ವ್ಯಕ್ತಿಯ ಕೊಲೆಗೆ ಯತ್ನಿಸಲಾಗಿದೆ. ಚಿಂತಾಮಣಿ ಮೂಲದ ಸುರೇಶ್. ಚಿಕ್ಕಬಳ್ಳಾಪುರ ತಾಲೂಕು ಸೊಪ್ಪಲ್ಲಿ ಗ್ರಾಮದ ಚಂದ್ರು ಹಾಗೂ ಬೆಂಗಳೂರು ಮೂಲದ ಆನಂದ್ ಎಂಬುವರ ಮಧ್ಯೆ ಹಣ ನೀಡುವ ವಿಚಾರಕ್ಕೆ ಜಗಳವಾಗಿದೆ.
ಘಟನೆ ವಿಕೋಪಕ್ಕೆ ತಿರುಗಿ ಆನಂದ್ ಗೆ ಚಾಕುವಿನಿಂದ ಎದೆಗೆ ತಿವಿದು ಕೊಲೆ ಮಾಡಲು ಯತ್ನಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಗ್ರಾಮಾಂತರ ಪೊಲೀಸ್ ಠಾಣೆ ಸರ್ಕಲ್ ಇನ್ಸ್ ಪೆಕ್ಟರ್ ಶಿವರಾಜ್ ಆಗಮಿಸಿ, ಗಾಯಗೊಂಡಿದ್ದ ಆನಂದ್ ನನ್ನು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದಾರೆ.
ಗಂಭೀರ ಗಾಯಗೊಂಡಿದ್ದ ಆನಂದ್ ರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವ ಆನಂದ್ ವಿಚಾರಣೆ ಮಾಡಿ, ಮುಂದಿನ ಕಾನೂನು ಕ್ರಮ ಜರಿಗಿಸಲಾಗುತ್ತಿದೆ. ಈ ಸಂಬ0ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರಃ ಆರೋಪಿಗಳ ಪತ್ತೆಗೆ ತಂಡ ರಚಿಸಿರುವದಾಗಿ ಪೊಲೀಸರು ತಿಳಿಸಿದ್ದಾರೆ