ಮಹಿಳಾ ಪ್ರಯಾಣಿಕರ ಜೊತೆ ನಿರ್ವಾಹಕನ ಅನುಚಿತ ವರ್ತನೆ
1 min readಮಹಿಳಾ ಪ್ರಯಾಣಿಕರ ಜೊತೆ ನಿರ್ವಾಹಕನ ಅನುಚಿತ ವರ್ತನೆ
ಮಹಿಳೆಯ ವಿಡಿಯೋ ಚಿತ್ರೀಕರಣ ಮಾಡಿ ಆರೋಪ
ಪ್ರಯಾಣಿಕ ಮಹಿಳೆಯಿಂದ ಡಿಪೋ ಮ್ಯಾನೇಜರ್‌ಗೆ ದೂರು
ಮಹಿಳಾ ಪ್ರಯಾಣಿಕರೊಂದಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಿರ್ವಾಹಕ ಅನುಚಿತ ವರ್ತನೆ ತೋರಿದ್ದಾನೆ ಎಂದು ಆರೋಪಿಸಿ, ಡಿಪೋ ಮ್ಯಾನೇಜರ್‌ಗೆ ಸಂಘಟಕರು ದೂರು ನೀಡಿದ ಘಟನೆ ಇಂದು ನಡೆದಿದೆ.
ನಂಜನಗೂಡಿನಿ0ದ ಚಿಕ್ಕಬರಗಿ ಗ್ರಾಮಕ್ಕೆ ತೆರಳುವ ಬಸ್ ಚಾಲಕ ಹಾಗೂ ನಿರ್ವಾಹಕ ಮಂಜುನಾಥ್ ವಿರುದ್ದ ಅದೇ ಬಸ್‌ನಲ್ಲಿ ಪ್ರಯಾಣಿಸಿದ ಮಹಿಳೆಯೊಬ್ಬರು ಡಿಪೋ ಮ್ಯಾನೇಜರ್‌ಗೆ ದೂರು ನೀಡಿದ್ದು, ಮಹಿಳೆಯೊಬ್ಬರೊಂದಿಗೆ ಮಾತನಾಡುವಾಗ ಅಶ್ಲೀಲ ಪದ ಬಳಸಿ, ಆಕೆಯ ಪೋಟೋ ಹಾಗೂ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ಹಾಗಾಗಿ ಕಾನೂನು ಕ್ರಮ ಜರುಗಿಸುವಂತೆ ಮಹಿಳೆ ದೂರು ನೀಡಿದ್ದಾರೆ.
ಡಿಸೆಂಬರ್ 20 ರಂದು ಸರ್ಕಾರಿ ಬಸ್ ಹೆಡಿಯಾಲ ಗ್ರಾಮಕ್ಕೆ ತೆರಳಲು ಸರ್ಕಾರಿ ಶಾಲೆ ಮುಂಭಾಗ ಸಾಗಿದೆ. ಬಸ್‌ಗಾಗಿ ಕಾದಿದ್ದ ಮಹಿಳಾ ಪ್ರಯಾಣಿಕರೊಬ್ಬರು ನಿಲ್ಲಿಸುವಂತೆ ಕೈ ತೋರಿಸಿದ್ದಾರೆ. ಚಾಲಕ ಸ್ವಲ್ಪದೂರ ಸಾಗಿ ಬಸ್ ನಿಲ್ಲಿಸಿದ್ದಾನೆ. ಈ ಬಗ್ಗೆ ಪ್ರಶ್ನಿಸಿದಾಗ ಮಹಿಳೆ ಎಂದು ಪರಿಗಣಿಸದೆ ಅಶ್ಲೀಲ ಪದ ಬಳಕೆ ಮಾಡಿ ನಿಂದಿಸಿದ್ದಾನೆ. ನಂತರ ಬಸ್ ನಿಂತ ಮೇಲೆ ಮಹಿಳಾ ಪ್ರಯಾಣಿಕರ ಪೋಟೋ ಮತ್ತು ವಿಡಿಯೋವನ್ನು ಮೊಬೈಲ್‌ನಲ್ಲಿ ನಿರ್ವಾಹಕ ಚಿತ್ರೀಕರಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಈ ವಿಚಾರ ತಿಳಿದ ಸಂಘಟಕರು ನಂಜನಗೂಡು ಬಸ್ ಡಿಪೋ ಮ್ಯಾನೇಜರ್‌ಗೆ ದೂರು ನೀಡಿದ್ದಾರೆ. ಸಾರಿಗೆ ಬಸ್ ನಿರ್ವಾಹಕ ಮಂಜುನಾಥ್‌ಗೆ ಚಾಲಕನೂ ಸಹಕರಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದ್ದು, ಇಬ್ಬರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಆಗ್ರಹಿಸಿದ್ದಾರೆ. ಸಭ್ಯ ಡಿಪೋ ಮ್ಯಾನೇಜರ್ ನಿರ್ವಾಹಕ ಮಂಜುನಾಥ್‌ನ ಮೊಬೈಲ್ ವಶಕ್ಕೆ ಪಡೆದಿದ್ದು, ಪರಿಶೀಲನೆ ನಂತರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.