ಉಚಿತ ಜಾನುವಾರು ಮೇವು ವಿತರಣೆ

ವಿಶ್ವ ಪ್ರಸಿದ್ಧ ನಂದಿ ಗಿರಿಧಾಮಕ್ಕೆ ಪ್ರವಾಸಿಗರ ದಂಡು

ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಶ್ರೀನಿವಾಸಪುರದಲ್ಲಿ ಪ್ರತಿಭಟನೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಖಂಡನೆ

December 23, 2024

Ctv News Kannada

Chikkaballapura

ಸರ್ಕಾರಿ ಶಾಲೆಗಳಿಗೆ ಕಂಪ್ಯೂಟರ್ ವಿರತಣಾ ಸಮಾರಂಭ

1 min read

ಸರ್ಕಾರಿ ಶಾಲೆಗಳಿಗೆ ಕಂಪ್ಯೂಟರ್ ವಿರತಣಾ ಸಮಾರಂಭ
ಕAಪ್ಯೂಟರ್ ಶಿಕ್ಷಣ ಪಡೆದು ತಂತ್ರಜ್ಞಾನದಲ್ಲಿ ಬೆಳೆಯಲು ಸಲಹೆ

ಬಯಲುಸೀಮೆ ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲ ವಿಧ್ಯಾರ್ಥಿಗಳು ತಂತ್ರಜ್ಞಾನದ ಮೂಲಕ ಉನ್ನತ ಶಿಕ್ಷಣ ಪಡೆದು, ಎಂಜನಿಯರ್‌ಗಳು, ವೈದ್ಯರಾಗಿ ಹೊರಹೊಮ್ಮಬೇಕು. ಅದಕ್ಕೆ ಅಗತ್ಯವಿರುವ ತಾಂತ್ರಿಕ ಶಿಕ್ಷಣ ಕಲಿಯಲು ಸಮಾನ ಮನಸ್ಕರ ಪ್ರಕೃತಿ ಸಂರಕ್ಷಣಾ ವೇದಿಕೆಯಿಂದ ಸರ್ಕಾರಿ ಶಾಲೆಗಳಿಗೆ ಕಂಪ್ಯೂಟರ್ ವಿತರಣೆ ಮಾಡುತಿರುವುದಾಗಿ ವೇದಿಕೆ ಸದಸ್ಯ ಸಿ ಪ್ರಕಾಶ್ ತಿಳಿಸಿದರು.

ಚಿಕ್ಕಬಳ್ಳಾಪುರ ನಗರದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಗರದ ಐದು ಶಾಲೆಗಳಿಗೆ ಸಮಾನ ಮನಸ್ಕರ ಪ್ರಕೃತಿ ಸಂರಕ್ಷಣಾ ವೇದಿಕೆ ಹಾಗು ರಯಾನ್ ಪೌಂಡೇಶನ್ ನಿಂದ ಉಚಿತ ಕಂಪ್ಯೂಟರ್ ವುತರಣಾ ಸಮಾರಂಭಹಮ್ಮಿಕೊಳ್ಳಲಾಗಿತ್ತು. ಸಮಾರಂಭದ ನಂತರ ಸಿ ಟಿವಿಯೊಂದಿಗೆ ಮಾತನಾಡಿದ ಸಮಾನ ಮನಸ್ಕರ ವೇದಿಕೆ ಸದಸ್ಯ ಸಿ ಪ್ರಕಾಶ್, ಕಳೆದ ಎಂಟತ್ತು ವರ್ಷಗಳಿಂದ ನಮ್ಮ ಸಂಘ ಗಿಡ ನಡುವುದ, ಶಾಲಾ ಮಕ್ಕಳಿಗೆ ಕಲಿಕಾ ಸಾಮಗ್ರಿಗಳ ವಿತರಣೆ ಮಾಡುತ್ತಿದ್ದು, ಬದಲಾದ ಜಗತ್ತಿನಲ್ಲಿ ವಿದ್ಯಾರ್ಥಿಗಳು ಕಂಪ್ಯೂಟರ್ ಶಿಕ್ಷಣ ಪಡೆಯುವುದು ಅತ್ಯಗತ್ಯ ಎಂಬುದನ್ನರಿತು ಕಂಪ್ಯೂಟರ್ ವಿತರಣೆ ಮಾಡುತ್ತಿರುವುದಾಗಿ ಹೇಳಿದರು.
ರಯಾನ್ ಪೌಂಡೇಶನ್ ಅಧ್ಯಕ್ಷ ಬಿ ಎಸ್ ರಫೀಉಲ್ಲಾ, ಹೊಟೆಲ್ ರಾಮಣ್ಣ, ಹೆನ್ರಿ ಪ್ರಸನ್ನಕುಮಾರ್, ಬಿಇಒ ಇಂಚಾರ್ಜ್ ಅರುಣ್ ಕುಮಾರ್, ಸರ್ಕಾರಿ ನೌಕರರ ಸಂಘದ ಪದಾದಿಕಾರಿ ಸುನಿಲ್, ಇಬ್ರಾಹಿಂ, ಕಲೀಲ್ ಇದ್ದರು.

About The Author

Leave a Reply

Your email address will not be published. Required fields are marked *