ನಾಗಾರ್ಜುನಾ ತಾಂತ್ರಿಕ ಕಾಲೇಜಿನಲ್ಲಿ ಪ್ರಾರಂಭ-2024
1 min read
ನಾಗಾರ್ಜುನಾ ತಾಂತ್ರಿಕ ಕಾಲೇಜಿನಲ್ಲಿ ಪ್ರಾರಂಭ-2024
ದೇಶಕ್ಕಾಗಿ ದುಡಿಯುವ ಪಣ ತೊಟ್ಟು ಮುಂದುವರಿಯಲು ಸಲಹೆ
ವಿದ್ಯಾರ್ಥಿಗಳು ಮೊಬೈಲ್‌ನಿಂದ ದೂರವಿರಲು ಸಲಹೆ
ಬಿಇ ಮಾಡಿದವರೆಲ್ಲಾ ಎಂಜಿನಿಯರ್‌ಗಳೇ ಆದರೂ ನೂತನ ಸಂಶೋಧನೆ ಮೂಲಕ ಸಮಾಜಕ್ಕೆ ಒಳಿತು ಮಾಡಲು ಮುಂದಾಗುವವರೇ ನಿಜಾರ್ಥದಲ್ಲಿ ಉತ್ತಮ ಎಂಜಿನಿಯರ್ ಆಗಲಿದ್ದಾರೆ. ನಿಮ್ಮೆಲ್ಲರ ಚಿತ್ತ ಈದಿಕ್ಕಿನೆಡೆಗಿರಲಿ ಎಂದು ಐಐಎಂನ ಎನ್‌ಎಸ್‌ಆರ್‌ಸಿಇಎಲ್ ಮೆಂಟರ್ ಗೋಪಾಲ್‌ರಾವ್ ಅಡ್ಡಂಕಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಚಿಕ್ಕಬಳ್ಳಾಪುರ ಹೊರವಲಯದ ನಾಗಾರ್ಜುನ ತಾಂತ್ರಿಕ ಕಾಲೇಜಿನಲ್ಲಿ ಇಂದು ಪ್ರಥಮವರ್ಷದ ಬಿಇ ವಿದ್ಯಾರ್ಥಿ ಗಳಿಗಾಗಿ ಏರ್ಪಡಿಸಿದ್ದ ಪ್ರಾರಂಭ-2024 ಕಾರ್ಯಕ್ರಮದಲ್ಲಿ ಮಾತನಾಡಿದ ಐಐಎಂನ ಎನ್‌ಎಸ್‌ಆರ್‌ಸಿಇಎಲ್ ಮೆಂಟರ್ ಗೋಪಾಲ್‌ರಾವ್ ಅಡ್ಡಂಕಿ, ಎಂಜಿನಿಯರಿ0ಗ್ ಶಿಕ್ಷಣ ಕೇವಲ ಕೊಠಡಿಗಳಿಗೆ ಸೀಮಿತವಲ್ಲ. ಬಹಳಷ್ಟು ಶ್ರಮ ವಹಿಸಿ ಆಳವಾದ ಅಧ್ಯಾಯನ ಮಾಡಬೇಕು. ಇದರ ನಡುವೆ ನಿಮಗೆ ಆಳವಾದ ಆಲೋಚನೆಗಳು ಬರುತ್ತವೆ. ಇಂತಹ ಆಲೋಚನೆಗಳೇ ನಿಮ್ಮನ್ನು ಇನ್ನಷ್ಟು ಅಧ್ಯಾಯನ ಮಾಡಲು ಪ್ರೇರಣೆ ನೀಡುತ್ತವೆ ಎಂದರು.
ತಾ0ತ್ರಿಕ ಶಿಕ್ಷಣ ದೇಶದ ಪ್ರಗತಿಯಲ್ಲಿ ತನ್ನದೇ ಆದ ಪಾತ್ರ ನಿರ್ವಹಿಸುತ್ತಿದೆ ಎಂಬ ಅರಿವು ನಿಮಗಿರಬೇಕು. ಆಗ ಮಾತ್ರ ನನ್ನ ಕಾಣಿಕೆ ಏನಾಗಿರಬೇಕು ಎಂಬ ಬಗ್ಗೆ ಸ್ಪಷ್ಟತೆ ಮೂಡುತ್ತದೆ.ದೇಶ ಎದುರಿಸುತ್ತಿರುವ ನೈಜ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಲು ಸಾಧ್ಯವಾಗಲಿದೆ. ಮೌಲ್ಯಯುತ ಶಿಕ್ಷಣ, ನೂತನ ಅವಿಷ್ಕಾರಗಳಿಗೆ ಜಗತ್ತು ಸದಾ ಬೆಂಬಲಿಸಿದೆ. ಕೌಶಲ್ಯಕ್ಕನುಗುಣವಾದ ಸಂಪಾಧನೆಯನ್ನೂ ಕೊಟ್ಟಿದೆ ಎಂಬುದು ಸತ್ಯ ಎಂದರು.
ಕಾರ್ಗಿಲ್ ಯುದ್ಧದಲ್ಲಿ ಕ್ಯಾಪ್ಟನ್ ಆಗಿದ್ದ ನವೀನ್ ನಾಗಪ್ಪ ಮಾತನಾಡಿ, ಎಂಜಿನಿಯರಿ0ಗ್ ವಿದ್ಯಾರ್ಥಿಗಳಲ್ಲಿ ದೇಶಸೇವೆ ಮಾಡಬೇಕು ಎನ್ನುವ ಆಸೆಯಿದ್ದರೆ, ಜನ್ಮಭೂಮಿಯ ಋಣ ತೀರಿಸಬೇಕು ಎಂಬ ತುಡಿತ್ತಿದ್ದರೆ ಖಂಡಿತವಾಗಿ ತಡಮಾಡದೆ ರಕ್ಷಣಾ ಪಡೆಗೆ ಸೇರಿಕೊಳ್ಳಿ. ಹೆಜ್ಜೆಯಿಟ್ಟ ಮರುಗಳಿಗೆ ಸ್ವಾರ್ಥ ದೂರವಾಗಿ ಸಮಾಜಕ್ಕೆ ಏನಾದರೂ ಕೊಡುಗೆ ಕೊಡಬೇಕು ಎಂಬ ಸದ್ಭಾವ ಮೂಡುತ್ತದೆ ಎಂದರು.
ಯುದ್ಧದಲ್ಲಿ ವೀರಮರಣ ಅಪ್ಪುವ ಸಂದರ್ಭ ಎದುರಾದರೂ ಅಧೀರನಾಗದೆ ಹೋರಾಡಿದ ಪರಿಣಾಮ ಅಂಗವಿಕಲನಾಗಿ ಸೇವೆಯಿಂದ ನಿವೃತ್ತನಾಗುವ ಸಂಧರ್ಭ ಎದುರಾಗಿದೆ. ಆದರೂ ದೇಶಕ್ಕಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿದ ಹೆಮ್ಮೆಯಿದೆ. ದೇಶಸೇವೆ ಮಾಡಲು ಪ್ರಾಣಾರ್ಪಣೆ ಆದರೂ ಚಿಂತೆಯಿಲ್ಲ ಎಂಬ ಪ್ರಮಾಣವಚನ ಸ್ವೀಕರಿಸಿ ಸೇನೆಗೆ ಸೇರುವ ಯುವಕರು ತಮ್ಮ ಮುಂದಿನ ಗುರಿಯತ್ತ ಮುನ್ನುಗ್ಗಬೇಕು. 527 ವೀರಯೋಧವುದಿಲ್ಲ. ತ್ಯಾಗ ಸೇವಾಗುಣವಿದ್ದರೆ ಮಾತ್ರ ಇಂತಹ ಸತ್ಕಾರ್ಯಗಳಿಗೆ ಬನ್ನಿ, ನಿಮಗೆ ಬೇಕಾದ ಮಾರ್ಗದರ್ಶನ ನೀಡಲು ಸದಾಸಿದ್ದ ಎಂದು ವಿದ್ಯಾರ್ಥಿಗಳಲ್ಲಿ ಭರವಸೆ ತುಂಬಿದರು.
ನಾಗಾರ್ಜುನ ತಾಂತ್ರಿಕ ಕಾಲೇಜಿನ ನಿರ್ದೇಶಕ ಡಾ. ಗೋಪಾಲಕೃಷ್ಣ ಮಾತನಾಡಿ, ಕಾಲೇಜಿನಲ್ಲಿ ಉತ್ತಮ ಸ್ನೇಹಬಳಗ ಸಾಧನೆಗೆ ನೀರೆರೆದರೆ, ಕೆಟ್ಟವರ ಸಂಘ ಬಂಗಾರದAತಹ ಭವಿಷ್ಯಕ್ಕೆ ಕೊಳ್ಳಿಯಿಡಲಿದೆ. ಯಾವುದೇ ಕಾರಣಕ್ಕೂ ಋಣಾತ್ಮಕ ಚಿಂತನೆಯುಳ್ಳವರ ಸಹವಾಸ ಮಾಡಲೇಬೇಡಿ ಎಂದು ಎಚ್ಚರಿಸಿದರು. ಮೊಬೈಲ್ ಬಳಕೆ ಮಿತವಾಗಿದ್ದಷ್ಟು ನಿಮ್ಮ ಕನಸುಗಳಿಗೆ ಬೆಳಕಾಗಲಿದೆ. ಅತಿಯಾದ ಬಳಕೆ ಅಪಾಯಕ್ಕೆ ಆಹ್ವಾನ ನೀಡಲಿದೆ. ಪೋಷಕರು ನಿಮ್ಮ ಮಕ್ಕಳಿಗೆ ಕೇಳಿದಷ್ಟು ಹಣಕೊಡುವ ಬದಲು ಕಾಲೇಜಿಗೆ ಬಂದು ಮಾಹಿತಿ ಪಡೆದು ನೀಡುವುದು ಒಳಿತು ಎಂದು ಹೇಳಿದರು.
ಪ್ರಾಂಶುಪಾಲ ಡಾ.ಬಿ.ವಿ ರವಿಶಂಕರ್ ಮಾತನಾಡಿ, ಪ್ರತಿ ಯಶಸ್ಸಿನ ಹಿಂದೆ ಅಪಾರ ತ್ಯಾಗವಿದೆ. ತ್ಯಾಗವಿಲ್ಲದೆ ಯಾವ ಯಶಸ್ಸೂ ಬರುವುದಿಲ್ಲ. ನಾವು ಪಡೆದ ವಿದ್ಯೆ ಜ್ಞಾನದ ಜತೆಗೆ ಸಂಸ್ಕಾರವನ್ನು ಕಲಿಸಬೇಕು. ಸರಳತೆಗೆ ಮನಸ್ಸು ತೆರೆದುಕೊಳ್ಳಬೇಕು. ಕಲಿಕೆಯೆನ್ನುವುದು ನಿರಂತರ ಕ್ರಿಯೆ. ಸಾಧಕರಾಗಬೇಕು ಎಂದು ಕನಸು ಕಾಣುವವರು ಖಂಡಿತವಾಗಿ ಮೊಬೈಲ್ ಬಳಕೆ ಕಡಿಮೆ ಮಾಡಿ ಎಂದು ಸಲಹೆನೀಡಿದರು.