ಮುಡಾ ಹುನ್ನಾರದ ಇಂಚಿಂಚೂ ಮಾಹಿತಿ ಬಿಚ್ಚಿಟ್ಟ ಸಿಎಂ ಸಿದ್ದರಾಮಯ್ಯ : ವಿಪಕ್ಷಗಳ ವಿರುದ್ಧ ಆಕ್ರೋಶ
1 min readಬೆಂಗಳೂರು,ಜು.26–ಮುಡಾ ನಿವೇಶನ ಹಂಚಿಕೆಯಲ್ಲಿ ಯಾವುದೇ ಅಕ್ರಮಗಳು ನಡೆಯದೇ ಇದ್ದರೂ ತಮ ಹೆಸರಿಗೆ ಮಸಿ ಬಳಿಯಲು ಬಿಜೆಪಿ ಮತ್ತು ಜೆಡಿಎಸ್ ಹುನ್ನಾರ ನಡೆಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಧಾನಸೌಧದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾವು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿರುವುದನ್ನು ಸಹಿಸಿಕೊಳ್ಳಲು ವಿಪಕ್ಷಗಳಿಗೆ ಸಾಧ್ಯವಾಗುತ್ತಿಲ್ಲ.
ಇದಕ್ಕಾಗಿ ಸುಳ್ಳು ಮಾಹಿತಿಯೊಂದಿಗೆ ಜನರನ್ನು ದಾರಿ ತಪ್ಪಿಸಿ ಅಪಪ್ರಚಾರ ಮಾಡುತ್ತಿವೆ ಎಂದು ಕಿಡಿಕಾರಿದರು.
ಭೂಮಿಯ ಮೂಲ ಒಡೆತನ ಹರಾಜು ಮೂಲಕ ಖರೀದಿ ಮಾಡಿದ್ದಾಗಿದ್ದು, ದೇವರಾಜ ಅವರಿಂದ ತಮ ಭಾವಮೈದುನ ಕಾನೂನುಬದ್ಧವಾಗಿ ಖರೀದಿ ಮಾಡಿದ್ದಾರೆ. ಹೀಗಾಗಿಪಿಟಿಸಿಎಲ್ ಕಾಯ್ದೆ ವ್ಯಾಪ್ತಿಗೆ ಭೂಮಿ ಬರುವುದಿಲ್ಲ.ನಿಂಗ ಅವರ ಕುಟುಂಬದ ಸದಸ್ಯರು ಒಪ್ಪಿಗೆಯೊಂದಿಗೆ ದೇವರಾಜ ಅವರಿಗೆ ಭೂಮಿಯ ಮಾಲಿಕತ್ವ ದಕ್ಕಿದೆ. ಹೀಗಾಗಿ ಈಗ ಮಂಜುನಾಥಸ್ವಾಮಿಯವರಿಂದ ಬಿಜೆಪಿಯವರು ದೂರು ಕೊಡಿಸಿ ಮನೆಮುರುಕ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಡಾ ವಿಚಾರಕ್ಕೆ ಸಂಬಂಧಪಟ್ಟಂತೆ ರಾಜ್ಯಪಾಲರು ವಿವರಣೆ ಕೇಳಿದರೆ ಸರ್ಕಾರ ವರದಿ ನೀಡಲು ಸಿದ್ಧವಿದೆ ಎಂದು ಹೇಳಿದ ಮುಖ್ಯಮಂತ್ರಿಯವರು ಮುಡಾದಲ್ಲಿ ವಿರೋಧಪಕ್ಷಗಳ ಬೇರೆ ಬೇರೆ ನಾಯಕರು ಪಡೆದಿರುವ ನಿವೇಶನಗಳ ಮಾಹಿತಿಗಳನ್ನು ಬಹಿರಂಗಪಡಿಸಿದರು.
ಈಗಾಗಲೇ ರಚನೆ ಮಾಡಲಾಗಿರುವ ನ್ಯಾಯಾಂಗ ಸಮಿತಿ ಮುಡಾದಲ್ಲ ನಡೆದಿರುವ ನಿವೇಶನ ಹಂಚಿಕೆ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಪರಿಶೀಲನೆ ನಡೆಸಲಿದೆ ಎಂದು ಸ್ಪಷ್ಟಪಡಿಸಿದರು.ಇದೇ ವೇಳೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್‌ನ ಸಾ.ರಾ.ಮಹೇಶ್, ಜಿ.ಟಿ.ದೇವೇಗೌಡ ಹಾಗೂ ಇತರರಿಗೆ ಬದಲಿ ನಿವೇಶನ ಹಂಚಿಕೆ ಮಾಡಿರುವ ಕುರಿತು ಮುಖ್ಯಮಂತ್ರಿ ದಾಖಲೆಗಳನ್ನು ಬಿಡುಗಡೆ ಮಾಡಿದರು.
ಸೇಡಿನ ರಾಜಕಾರಣದಿಂದ ಪ್ರತಿಪಕ್ಷಗಳಿಂದ ಮಸಿ ಬಳಿಯುವ ಯತ್ನ
ತಮ ರಾಜಕೀಯ ಜೀವನ ತೆರೆದ ಪುಸ್ತಕವಾಗಿದ್ದು, ಒಂದೇ ಒಂದು ಕಪ್ಪು ಚುಕ್ಕೆಯಿಲ್ಲ. ಬಿಜೆಪಿ-ಜೆಡಿಎಸ್ ಪಕ್ಷಗಳು ದುರುದ್ದೇಶಪೂರಕವಾಗಿ ಸೇಡಿನ ರಾಜಕಾರಣದಿಂದ ಮಸಿ ಬಳಿಯುವ ಯತ್ನ ನಡೆಸುತ್ತಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ವಿಧಾನಸಭೆ ಮತ್ತು ವಿಧಾನಮಂಡಲದಲ್ಲಿ ಜೆಡಿಎಸ್-ಬಿಜೆಪಿ ಪಕ್ಷಗಳು ಆಧಾರ ರಹಿತವಾಗಿ ಕಾನೂನು ಬಾಹಿರವಾದ ನಿಲುವಳಿ ಸೂಚನೆ ತಂದಿದ್ದರು. ನಿಲುವಳಿ ಚರ್ಚೆಯಾಗಬೇಕಾದರೆ ನಿಯಮಗಳ ಅನುಸಾರ ಇರಬೇಕು. ಆದರೆ ಬಿಜೆಪಿಯವರು ನೀಡಿದ್ದ ನಿಲುವಳಿ ಸೂಚನೆ ನಿಯಮಗಳ ವಿರುದ್ಧವಾಗಿತ್ತು. ಅದನ್ನು ಚರ್ಚೆ ಮಾಡಲು ಅವಕಾಶ ಇರಲಿಲ್ಲ. ಹಾಗಾಗಿ ನಿಯಾಮವಳಿ ವಿರುದ್ಧವಾಗಿದ್ದ ಸೂಚನೆ ಕುರಿತು ವಿಧಾನ ಸಭಾಧ್ಯಕ್ಷರು, ವಿಧಾನ ಪರಿಷತ್ ಸಭಾಪತಿ ಕಾನೂನು ರೀತಿಯ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಿದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 135 ಸ್ಥಾನಗಳನ್ನು ಗೆದ್ದ ಮೇಲೆ ಬಿಜೆಪಿ, ಜೆಡಿಎಸ್‌ನವರು ರಾಜಕೀಯವಾಗಿ ಹತಾಶರಾಗಿದ್ದಾರೆ. ರಾಜಕೀಯ ಪ್ರೇರಿತ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಮುಖ್ಯಮಂತ್ರಿ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬಂದಿರುವುದನ್ನು ಹಾಗೂ ನಾನು ಎರಡನೇ ಬಾರಿ ಮುಖ್ಯಮಂತ್ರಿಯಾಗಿರುವುದನ್ನು ಸಹಿಸಿಕೊಳ್ಳಲು ಅವರಿಗೆ ಸಾಧ್ಯವಾಗುತ್ತಿಲ್ಲ. ಸರ್ಕಾರ ಎರಡು ವಾರ ವಿಧಾನ ಸಭಾಧಿವೇಶನ ನಡೆಸಿತ್ತು. ಅಷ್ಟೂ ದಿನ ಒಂದೇ ವಿಚಾರ ಪ್ರಸ್ತಾಪವಾಗಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಅವ್ಯವಹಾರವನ್ನು ಮಾತ್ರ ಬಿಜೆಪಿಯವರು ಚರ್ಚೆ ಮಾಡಿದ್ದಾರೆ. ರಾಜ್ಯದ ಸಮಸ್ಯೆಗಳ ಬಗ್ಗೆ ಚಕಾರ ಎತ್ತಿಲ್ಲ ಎಂದು ಆಕ್ಷೇಪಿಸಿದರು.
ರಾಜ್ಯದಲ್ಲಿ ಅತಿವೃಷ್ಟಿಯಿಂದ ಪ್ರವಾಹ ಬಂದಿರುವುದರ ಬಗ್ಗೆ ಕಾಂಗ್ರೆಸ್ ಶಾಸಕರು ಮಾತ್ರ ಚರ್ಚೆ ಮಾಡಿದ್ದಾರೆ. ವಿರೋಧ ಪಕ್ಷಗಳ ಶಾಸಕರು ಆ ಚರ್ಚೆಯಲ್ಲಿ ಭಾಗವಹಿಸಲಿಲ್ಲ. ಇದನ್ನು ನೋಡಿದರೆ ಮುಖ್ಯಮಂತ್ರಿ ವ್ಯಕ್ತಿತ್ವಕ್ಕೆ ಹಾಗೂ ಕಾಂಗ್ರೆಸ್ ಸರ್ಕಾರದ ವರ್ಚಸ್ಸಿಗೆ ಮಸಿ ಬಳಿಯುವ ಪ್ರಯತ್ನವನ್ನು ಎರಡು ಸದನಗಳಲ್ಲಿ ವಿರೋಧ ಪಕ್ಷಗಳು ನಡೆಸಿವೆ ಎಂದು ದೂರಿದರು.
ನಾನು ಮೊದಲ ಬಾರಿಗೆ 1983ರಲ್ಲಿ ಶಾಸಕನಾಗಿ, 1984ರಲ್ಲಿ ಸಚಿವನಾದವನು. ಉಪಮುಖ್ಯಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ 40ವರ್ಷ ರಾಜಕೀಯದಲ್ಲಿದ್ದೇನೆ. ಸಚಿವನಾಗಿಯೇ 40 ವರ್ಷವಾಗಿದೆ. ಇವತ್ತಿನವರೆಗೆ ನನ್ನ ಮೇಲೆ ಒಂದು ಕಪ್ಪು ಚುಕ್ಕೆ ಇಲ್ಲ.
ನನ್ನ ರಾಜಕೀಯ ಜೀವನ ಪರಿಶುದ್ಧವಾಗಿದೆ. ಬಿಜೆಪಿ ಮತ್ತು ಜೆಡಿಎಸ್‌ನಿಂದ ಸೇಡಿನ ರಾಜಕಾರಣ ನಡೆಯುತ್ತಿದೆ. ಅವರು ಜನರ ವಿಶ್ವಾಸ ಕಳೆದುಕೊಂಡಿದ್ದಾರೆ. ಕಳೆದ ವಿಧಾನಸಭೆಯಲ್ಲಿ ಸೋಲನ್ನನುಭವಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಎರಡು ಪಕ್ಷಗಳು ಮೈತ್ರಿ ಮಾಡಿಕೊಂಡರೂ ಹೆಚ್ಚು ಸ್ಥಾನ ಗೆಲ್ಲಲಾಗಿಲ್ಲ. ತೀವ್ರ ಹಿನ್ನಡೆ ಅನುಭವಿಸಿದ್ದಾರೆ. ವಿಧಾನಸಭೆ ಚುನಾವಣೆಗಿಂತ ಲೋಕಸಭೆ ಚುನಾವಣೆಯಲ್ಲಿ ಶೇ.13.5ರಷ್ಟು ಕಾಂಗ್ರೆಸ್ ಹೆಚ್ಚು ಮತ ಗಳಿಸಿದೆ. ಬಿಜೆಪಿ-ಜೆಡಿಎಸ್‌ನವರು ಜನರ ವಿಶ್ವಾಸ ಕಳೆದುಕೊಂಡಿದ್ದು, ಅದನ್ನು ಮರು ಗಳಿಸಲು ವಾಮಮಾರ್ಗ ಅನುಸರಿಸುತ್ತಿದ್ದಾರೆ ಎಂದು ಅವರು ಟೀಕಿಸಿದರು.
ಈಗ ಮುಡಾ ಪ್ರಕರಣವನ್ನು ಮುಂದಿಟ್ಟುಕೊಂಡು ಅನಗತ್ಯವಾಗಿ ಪ್ರಚಾರ ಮಾಡುತ್ತಿದ್ದಾರೆ. ಇದರ ಹಿಂದೆ ಯಾರಿದ್ದಾರೆ ಎಂಬುದು ಹಂತ ಹಂತವಾಗಿ ಬಹಿರಂಗಗೊಳ್ಳಲಿದೆ ಎಂದು ಹೇಳಿದರು.
ಆರಂಭದಿಂದ ಪರಭಾರೆವರೆಗೂ ಸಮಗ್ರ ವಿವರ ನೀಡಿದ ಸಿಎಂ
ಮುಡಾ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪತ್ರಿಕಾಗೋಷ್ಠಿ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಭೂಮಿಯ ಮೂಲ ಆರಂಭದಿಂದ ಹಿಡಿದು ಇತ್ತೀಚಿನ ಪರಭಾರೆವರೆಗೂ ಸಮಗ್ರವಾದ ವಿವರಗಳನ್ನು ಜನತೆಯ ಮುಂದಿಟ್ಟಿದ್ದಾರೆ. ಈ ಮೊದಲು ಸಿಟಿ ಇಂಪ್ರೂವ್‌ಮೆಂಟ್ ಟ್ರಸ್ಟ್ ಬೋರ್ಡ್ (ಸಿಐಟಿಬಿ)ಗಳು ಜಾರಿಯಲ್ಲಿದ್ದವು. 1985ರಲ್ಲಿ ಕಾನೂನು ತಿದ್ದುಪಡಿ ಮಾಡಿ ರಾಜ್ಯದೆಲ್ಲೆಡೆ ನಗರಾಭಿವೃದ್ಧಿ ಪ್ರಾಧಿಕಾರಗಳನ್ನು ರಚಿಸಲಾಯಿತು. ಅಂದಿನಿಂದ ಸಾವಿರಾರು ಎಕರೆ ಸ್ವಾಧೀನ ಮಾಡಿಕೊಂಡು, ನಿವೇಶನ ರಚನೆ ಮಾಡಿ ಹಂಚಲಾಗಿದೆ.
ಮುಡಾ ಸರ್ವೆ ನಂಬರ್ 464ರಲ್ಲಿ 3 ಎಕರೆ 16 ಗುಂಟೆ ಭೂಮಿಯನ್ನು ಬಿ.ಎಂ.ಮಲ್ಲಿಕಾರ್ಜುನ ಸ್ವಾಮಿ 2004ರಲ್ಲಿ ಕ್ರಯ ಮಾಡಿಕೊಂಡಿದ್ದಾರೆ. ಈ ಜಮೀನು ಪಿಟಿಸಿಎಲ್ ಕಾಯ್ದೆಗೆ ಒಳಪಡಲಿದೆ ಎಂದು ಬಿಜೆಪಿ-ಜೆಡಿಎಸ್ ಶಾಸಕರು ಆರೋಪಿಸುತ್ತಿದ್ದಾರೆ. ಆದರೆ ದಲಿತರಿಗೆ ಸರ್ಕಾರದಿಂದ ಜಮೀನು ಮಂಜೂರು ಆಗಿದ್ದರೆ, ಅಲ್ಲಿ ಕೆಲ ನಿಬಂಧನೆಗಳನ್ನು ಹಾಕಿರುತ್ತಾರೆ. ಅವು ಉಲ್ಲಂಘನೆಯಾಗಿದ್ದರೆ ಪಿಟಿಸಿಎಲ್ ಕಾಯ್ದೆ ಒಳಪಡಲಿದೆ, ಇದು ಪಿರ್ತಾಜಿತ ಆಸ್ತಿ. ಹಾಗಾಗಿ ಪಿಟಿಸಿಎಲ್ ಕಾಯ್ದೆಗೆ ಒಳಪಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಜಮೀನಿನ ಪೂರ್ವದಲ್ಲಿ ನಿಂಗ ಬಿನ್ ಜವರ 1935ರಲ್ಲಿ ಮೈಸೂರು ತಾಲ್ಲೂಕು ಕಚೇರಿಗೆ ಅರ್ಜಿ ನೀಡಿದ್ದಾರೆ. ಆಗ ಹರಾಜು ನಡೆಯುತ್ತದೆ. 26-9-1930ರಲ್ಲಿ ಹರಾಜು ನೋಟಿಸ್ ನೀಡಲಾಗಿದೆ. 3-10-1935 ಹರಾಜಿನಲ್ಲಿ ಭಾಗವಹಿಸಿ ಒಂದು ರೂಪಾಯಿಗೆ ನಿಂಗ ಕೂಗುತ್ತಾರೆ. ಬೇರೆ ಯಾರು ಇಲ್ಲದ ಕಾರಣ ನಿಂಗ ಬಿನ್ ಜವರ ಅವರಿಗೆ ಒಂದು ರೂಪಾಯಿಗೆ ಕ್ರಯ ಆಗುತ್ತದೆ. 13-10-1935ರಲ್ಲಿ ಅವರಿಗೆ ಹರಾಜಿನಲ್ಲಿ ಖರೀದಿ ಖಚಿತವಾಗುತ್ತದೆ ಎಂದು ವಿವರಿಸಿದರು.
ಜಮೀನು ಹರಾಜಿನ ಮೂಲಕ ಬಂದಿದ್ದು, ಸ್ವಯಾರ್ಜಿತ ಆಸ್ತಿ. ಕೆಸರೆ ಗ್ರಾಮದ ಸರ್ವೆ ನಂ.464 ರಲ್ಲಿನ 3.16 ಎಕರೆಯನ್ನು ಒಂದು ರೂಪಾಯಿಗೆ ಖರೀದಿಯಾಗಿದೆ. ಬಿಜೆಪಿ-ಜೆಡಿಎಸ್ ಜನರಿಗೆ ತಪ್ಪು ಮಾಹಿತಿ ನೀಡಲು ಕುಟೀಲ ಹರ ಸಾಹಸ ನಡೆಸುತ್ತಿದ್ದಾರೆ. ಗ್ರಾಂಟ್ ಆಗದಿದ್ದರೂ, ಸ್ವಯಾರ್ಜಿತ ಆಸ್ತಿಯಾಗಿದ್ದರೂ ಪಿಟಿಸಿಲ್ ಕಾಯ್ದೆಗೆ ಒಳಪಡಲಿದೆ ಎಂದು ಹೇಳುತ್ತಿದ್ದಾರೆ ಎಂದು ಟೀಕಿಸಿದರು.
ನಿಂಗ ಬಿನ್ ಜವರ ಅವರಿಗೆ ಮೂರು ಜನ ಮಕ್ಕಳು. ಮಲ್ಲಯ್ಯ, ಮೈಲಾರಯ್ಯ, ದೇವರಾಜ ಎಂಬುವರಿದ್ದು, ಮಲ್ಲಯ್ಯನಿಗೆ ವಾರಸುದಾರರಿಲ್ಲದೆ ಪವತಿಯಾಗಿದ್ದಾರೆ. ಮೈಲಾರಯ್ಯನ ಪತ್ನಿ ಪುಟ್ಟಗೌರಮ ಅವರ ಮಗ ಎಂ.ಮಂಜುನಾಥಸ್ವಾಮಿ ಇದ್ದರು. ಮಲ್ಲಯ್ಯ ಸೇರಿದಂತೆ ವಂಶವೃಕ್ಷಕ್ಕೆ ಮೂರು ಜನ ಸಹಿ ಮಾಡಿದ್ದಾರೆ.
ಸದರಿ ಭೂಮಿಯನ್ನು ದೇವರಾಜಯ್ಯನಿಗೆ ಖಾತೆ ಮಾಡಿಕೊಡಲು ನಮ್ಮ ವಿರೋಧ ಇಲ್ಲ ಎಂದು ಕುಟುಂಬದ ಸದಸ್ಯರು ಸರ್ಕಾರಕ್ಕೆ ಬರೆದುಕೊಡುತ್ತಾರೆ. ಮಲ್ಲಯ್ಯ, ಪುಟ್ಟಗೌರಮ, ಮಂಜುನಾಥಸ್ವಾಮಿ ಸಹಿ ಮಾಡಿದ್ದಾರೆ. ಇತ್ತೀಚೆಗೆ ಮಂಜುನಾಥಸ್ವಾಮಿಯನ್ನು ಬಿಜೆಪಿಯವರು ಪುಸಲಾಯಿಸಿ ದೂರು ಕೊಡಿಸಿದ್ದಾರೆ. ಇಷ್ಟೆಲ್ಲಾ ಇದ್ದರೂ ಬಿಜೆಪಿ ಸುಳ್ಳು ಹೇಳುವುದರಲ್ಲಿ ಬಿಜೆಪಿ ನಿಸ್ಸೀಮರು ಎಂದು ವಾಗ್ದಾಳಿ ನಡೆಸಿದರು.
ದೇವರಾಜು ಹೆಸರಿಗೆ ಮ್ಯೂಟೆಷನ್ ಹಾಗೂ ಪಹಣಿ ಆಗಿದೆ. ಇದಕ್ಕೆ ಕುಟುಂಬದ ಎಲ್ಲಾ ಸದಸ್ಯರು ಲಿಖಿತ ಹೇಳಿಕೆಗೆ ಸಹಿ ಹಾಕಿದ್ದಾರೆ. 20 ವರ್ಷ ಇಲ್ಲದ ತಕರಾರನ್ನು ಈಗ ಸೃಷ್ಟಿಸಲಾಗಿದೆ. ಬಿಜೆಪಿಯವರು ಮಲ್ಲಿಕಾರ್ಜುನಸ್ವಾಮಿಯನ್ನು ಎತ್ತಿ ಕಟ್ಟಿ ಚಿತಾವಣೆ ಮಾಡಿ ಹೇಳಿಕೆ ಕೊಡಿಸಿರುವ ಬಿಜೆಪಿಯವರಿಗೆ ನಾಚಿಕೆ ಮಾನ ಮರ್ಯಾದೆ ಇದ್ಯಾ ಎಂದು ಕಿಡಿಕಾರಿದರು. ಮುಡಾ ಈ ಜಮೀನು ಸ್ವಾಧೀನ ಪಡಿಸಿಕೊಳ್ಳಲು 1992ರಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು. 1997ರಲ್ಲಿ ಅಂತಿಮ ಅಧಿಸೂಚನೆಯಾಗಿದೆ. 13-08-1996ರಲ್ಲಿ ದೇವರಾಜಯ್ಯ ಅರ್ಜಿ ಕೊಟ್ಟು ನನಗೆ ಕೆಸರೆ ಗ್ರಾಮದಲ್ಲಿ ಎರಡು ಸರ್ವೆ ನಂ.ಗಳಿಂದ ತಮಗೆ 4.18 ಎಕರೆ ಪಿರ್ತಾಜಿತ ಆಸ್ತಿ ಇದ್ದು ಹಾಲಿ ನನ್ನ ಸ್ವಾದೀನದಲ್ಲಿದೆ, ಈ ಕೃಷಿ ಭೂಮಿ ನಂಬಿ ಜೀವನ ಮಾಡುತ್ತಿದ್ದೇನೆ. ಇದನ್ನು ಬಿಟ್ಟು ಬೇರೆ ಜಮೀನು ಇಲ್ಲ. ನನಗೆ ನಾಲ್ಕು ಗಂಡು ಮಕ್ಕಳಿದ್ದಾರೆ. ಅಲ್ಲಿ ಸಾಕಷ್ಟು ಮರಗಳಿವೆ. ನಗರಾಭಿವೃದ್ಧಿ ಉದ್ದೇಶದ ಸ್ವಾಧೀನಕ್ಕೆ ಕೈ ಬಿಟ್ಟು ಕೃಷಿ ಮುಂದುವರೆಸಲು ಅನುಕೂಲ ಮಾಡಿಕೊಳ್ಳಬೇಕು ಎಂದು ಅರ್ಜಿ ಬರೆದಿದ್ದರು.
ಆಗ ಡಿ-ನೋಟಿಫಿಕೇಷನ್ ಮಾಡಲು ವಿ.ಬಾಲಸುಬ್ರಹಣ್ಯ ನೇತೃತ್ವದಲ್ಲಿ ಒಂದು ಸಮಿತಿ ಇರುತ್ತದೆ. ನಗರಾಭಿವೃದ್ಧಿ ಇಲಾಖೆ ಉಪಕಾರ್ಯದರ್ಶಿ ವಿ.ಗೋವಿಂದರಾಜು, ಕಾನೂನು ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಕೆ.ಎಂ.ತಮಯ್ಯ ಸದಸ್ಯರಾಗಿದ್ದರು.
24-07-1977 ಸಭೆಯಲ್ಲಿ ಡಿ-ನೋಟಿಫಿಕೇಷನ್ ಪ್ರಕ್ರಿಯೆಯಿಂದ ಕೈ ಬಿಡಲು ಶಿಫಾರಸ್ಸು ಮಾಡಲಾಗಿದೆ. ಸದರಿ ಭೂಮಿಯಲ್ಲಿ ನೀರು ಸರಬರಾಜು ಹಾಗೂ ಒಳ ಚರಂಡಿ ಯೋಜನೆ ನಡೆಯದಿರುವುದರಿಂದ ಭೂಸ್ವಾಧೀನದಿಂದ ಕೈ ಬಿಡಬಹುದು ಎಂದು ಚರ್ಚಿಸಿ ಸಮಿತಿಯವರು ಮುಡಾ ಶಿಫಾರಸ್ಸು ಆಧರಿಸಿ ತೀರ್ಮಾನ ತೆಗೆದುಕೊಳ್ಳುತ್ತಾರೆ. ಭೂ ಸ್ವಾದೀನಕ್ಕೆ ಈವರೆಗೂ ಯಾವುದೇ ಪರಿಹಾರ ಪಾವತಿಸಿಲ್ಲ ಎಂದರು.
ಅಂದಿನ ಸಭೆಯಲ್ಲಿ ಮೈಸೂರಿನ ಎರಡು ಜಾಗ ಸೇರಿ, ರಾಜ್ಯದ 19 ಕಡೆಗಳ ಭೂಮಿಯನ್ನು ಭೂ ಸ್ವಾದೀನದಿಂದ ಕೈ ಬಿಡಲಾಗಿದೆ 1998ರಲ್ಲಿ ಡಿ-ನೋಟಿಫಿಕೇಷನ್ ಆಗಿದೆ ಎಂದು ವಿವರಿಸಿದರು.
ಮಲ್ಲಿಕಾರ್ಜುನ ಸ್ವಾಮಿ ಹೆಸರಿಗೆ ದೇವರಾಜ ಅವರಿಂದ 25-08-2004ರಲ್ಲಿ ಖರೀದಿ ಕರಾರು ಆಗಿದೆ. ದೇವರಾಜು ಅವರ ಪತ್ನಿ ಮತ್ತು ಮಕ್ಕಳು ಖರೀದಿ ಕರಾರಿಗೆ ಸಹಿ ಹಾಕಿದ್ದಾರೆ. 15-07-2005ರಲ್ಲಿ ಮಲ್ಲಿಕಾರ್ಜುನಸ್ವಾಮಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳಲು ಪರಿವರ್ತನೆ ಮಾಡಿಸಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ವಿವರಿಸಿದ್ದಾರೆ.ನಮ್ಮ ಮಾವನಿಗೆ ಮೂರು ಜನ ಮಕ್ಕಳು. ಮಲ್ಲಿಕಾರ್ಜುನ ಸ್ವಾಮಿ, ಪಾರ್ವತಿ, ಜಗದೀಶ್. ಅವರು ಭಾಗವಾದಾಗ 6-10-2010ರಲ್ಲಿ ದಾನಪತ್ರದ ಮೂಲಕ ನನ್ನ ಪತ್ನಿ ಅವರಿಗೆ 3 ಎಕರೆ 16 ಗುಂಟೆ ಭೂಮಿ ನೀಡುತ್ತಾರೆ. 2013-14ರಲ್ಲಿ ಮುಡಾ ಅಕ್ರಮವಾಗಿ ಸ್ವಾಧೀನ ತೆಗೆದುಕೊಂಡು ನಿವೇಶನ ಹಾಗೂ ಪಾರ್ಕ್ ಮಾಡಿ ಹಂಚಿದ್ದಾರೆ ಎಂದು ಗೊತ್ತಾಯಿತು. 2014ರಲ್ಲಿ ಅರ್ಜಿ ನೀಡಿ, ನಮ್ಮ ಜಮೀನನ್ನು ಅಕ್ರಮವಾಗಿ ಬಳಸಿಕೊಂಡಿದ್ದೀರಾ ? ನಮ್ಮಗೆ ಪರ್ಯಾಯ ಜಮೀನು ಕೊಡಿ ಎಂದು ಮನವಿ ಸಲ್ಲಿಸಲಾಯಿತು ಎಂದು ವಿವರಿಸಿದರು.
ಮುಡಾ ನಿವೇಶನ ಹಂಚಿಕೆ ಕಾನೂನು ಬದ್ಧ : ರಾಜ್ಯಪಾಲರಿಗೆ ವರದಿ ಸಲ್ಲಿಕೆ
ಮುಡಾ ಪ್ರಕರಣದಲ್ಲಿ ರಾಜ್ಯಪಾಲರಿಗೆ ಸರ್ಕಾರ ವರದಿ ನೀಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಖಾಸಗಿ ವ್ಯಕ್ತಿಯೊಬ್ಬರು ರಾಜ್ಯಪಾಲರಿಗೆ ದೂರು ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಾಜ್ಯಪಾಲರು ವಿವರಣೆ ಕೇಳಿದರೆ ವರದಿ ನೀಡಲಾಗುವುದು.ಮುಡಾ ತಮಗೆ ನಿವೇಶನ ಹಂಚಿಕೆ ಮಾಡಿರುವುದು ಸಂಪೂರ್ಣ ಕಾನೂನು ಬದ್ಧವಾಗಿದೆ. ಇದನ್ನು ರಾಜ್ಯಪಾಲರಿಗೆ ತಿಳಿಸಲಾಗುವುದು ಎಂದು ಹೇಳಿದರು.
ಪರ್ಯಾಯ ನಿವೇಶನ ಪಡೆಯುವಲ್ಲಿ ನನ್ನ ಪತ್ನಿ, ಭಾವಮೈದುನನ ಪಾತ್ರವಿಲ್ಲ
ಬೆಂಗಳೂರು,ಜು.26- ಮುಡಾದಿಂದ ಪರ್ಯಾಯ ನಿವೇಶನ ಪಡೆಯುವ ಪ್ರಕರಣದಲ್ಲಿ ನನ್ನದಾಗಲೀ, ತಮ ಪತ್ನಿ ಪಾರ್ವತಿಯದಾಗಲೀ, ಭಾವಮೈದುನ ಮಲ್ಲಿಕಾರ್ಜುನ ಸ್ವಾಮಿಯದ್ದಾಗಲೀ ಯಾವುದೇ ಪಾತ್ರವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸ್ಪಷ್ಟಪಡಿಸಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ತಮ ತಪ್ಪನ್ನು ಒಪ್ಪಿಕೊಂಡು ಬದಲಿ ನಿವೇಶನವನ್ನು ನೀಡಿದೆ ಎಂದು ಹೇಳಿದರು.
ಮುಡಾ ಭೂಮಿಯನ್ನು ಅಕ್ರಮವಾಗಿ ಬಳಸಿಕೊಂಡ ಕಾರಣಕ್ಕೆ 2014 ಮತ್ತು 2021 ರಲ್ಲಿ ತಮ ಪತ್ನಿ ಪಾರ್ವತಿಯವರು ಎರಡು ಬಾರಿ ಪತ್ರ ಬರೆದು ಬದಲಿ ನಿವೇಶನ ನೀಡುವಂತೆ ಮನವಿ ಮಾಡಿದ್ದರು.2014ರ ಜೂನ್ 23 ರಂದು ಮೊದಲ ಬಾರಿ ಪತ್ರ ಬರೆಯಲಾಗಿತ್ತು. ಆಗ ನಾನು ಮುಖ್ಯಮಂತ್ರಿಯಾಗಿದ್ದೆ. ನನ್ನ ಪತ್ನಿ ಅರ್ಜಿ ಸಲ್ಲಿಸಿರುವುದನ್ನು ಗಮನಕ್ಕೆ ತಂದಾಗ ನಾನು ಅಧಿಕಾರದಲ್ಲಿರುವುದರಿಂದ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಬದಲಿ ನಿವೇಶನವನ್ನೂ ನೀಡುವುದಿಲ್ಲ. ಅಧಿಕಾರವಧಿ ಮುಗಿದ ಬಳಿಕ ಮುಡಾದವರು ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಲಿ ಎಂದು ಹೇಳಿದ್ದೆ. ಮತ್ತೆ ಈ ವಿಚಾರವನ್ನು ನನ್ನ ಗಮನಕ್ಕೆ ತರುವುದು ಬೇಡ ಎಂದು ಸೂಚಿಸಿದ್ದಾಗಿ ತಿಳಿಸಿದರು.ನಂತರ 2021 ರಲ್ಲಿ ಮತ್ತೊಮೆ ಅರ್ಜಿ ಸಲ್ಲಿಸಲಾಗಿತ್ತು ಎಂದು ಮುಖ್ಯಮಂತ್ರಿ ಹೇಳಿದರು.
2017 ರ ಡಿಸೆಂಬರ್ 15 ರಂದು ಮುಡಾ ಸಭೆಯಲ್ಲಿ ಚರ್ಚೆ ಮಾಡಿ ಕೆಸರೆ ಗ್ರಾಮದ 464ರ ಸರ್ವೆ ನಂ.ನಲ್ಲಿ 3 ಎಕರೆ 16 ಗುಂಟೆ ಭೂಮಿಯನ್ನು ಭೂಸ್ವಾಧೀನದಿಂದ ಕೈಬಿಡಲಾಗಿದ್ದರೂ ಅದನ್ನು ಬಳಕೆ ಮಾಡಿಕೊಂಡು ನಿವೇಶನ ಹಂಚಿಕೆ ಮಾಡಿ ಮಾರಾಟ ಮಾಡಿರುವುದು ತಪ್ಪಾಗಿದೆ. ಜಮೀನಿನ ಮಾಲೀಕರು ಸಲ್ಲಿಸಿರುವ ಅರ್ಜಿಯನ್ನು ಪರಿಗಣಿಸಿ ಸಮಾನಾಂತರವಾಗಿ ಪರಿವರ್ತನೆಯಾಗದೇ ಇರುವ ಭೂಮಿ ನೀಡಬೇಕೆಂದು ನಿರ್ಣಯ ಕೈಗೊಳ್ಳಲಾಯಿತು.
ನಂತರ 2021ರಲ್ಲಿ ಎರಡನೇ ಬಾರಿ ಅರ್ಜಿ ಸಲ್ಲಿಸಿದಾಗ ತಮ ಜಮೀನನ್ನು ಉಪಯೋಗಿಸಿಕೊಂಡಿರುವ ಬಾಬ್ತು ಯಾವುದೇ ಪರಿಹಾರ ನೀಡಿಲ್ಲ. ಭೂಮಿಗೆ ಭೂಮಿ ನೀಡುವುದು ಬೇಡ. ಶೇ.50:50ರ ಅನುಪಾತದಲ್ಲಿ ನಿವೇಶನ ನೀಡುವಂತೆ ಮನವಿ ಸಲ್ಲಿಸಲಾಗಿತ್ತು.
ನಾವು ಇಂತಹ ಕಡೆಯೇ ಜಾಗ ಕೊಡಿ ಎಂದು ಕೇಳಿರಲಿಲ್ಲ. ಮುಡಾದವರು ವಿಜಯನಗರದ 3 ಮತ್ತು 4 ನೇ ಹಂತದ ಬಡಾವಣೆಯಲ್ಲಿ ನಿವೇಶನ ನೀಡಿದ್ದಾರೆ. ನಮ್ಮ ಒಟ್ಟು 3 ಎಕರೆ 16 ಗುಂಟೆಯಿಂದ 1,48,000 ಚದರ ಅಡಿ ಜಾಗ ವಿಸ್ತೀರ್ಣವಿದ್ದು, ಮುಡಾ ಬದಲಿಯಾಗಿ ನೀಡಿರುವುದು 38,588 ಚದರ ಅಡಿ ಮಾತ್ರ. ಮುಡಾ ನಿರ್ಣಯದಲ್ಲಿ ಅರ್ಜಿದಾರರು ಒಪ್ಪುವ ಜಾಗದಲ್ಲೇ ನಿವೇಶನ ನೀಡಬೇಕು ಎಂದು ನಿರ್ಣಯ ಕೈಗೊಳ್ಳಲಾಗಿದೆ ಎಂದರು.ಮುಡಾ ಸಭೆಯಲ್ಲಿ ಜೆಡಿಎಸ್ ಶಾಸಕರಾದ ಜಿ.ಟಿ.ದೇವೇಗೌಡ, ಮರಿತಿಬ್ಬೇಗೌಡ, ಬಿಜೆಪಿಯ ಎಸ್.ಎ.ರಾಮದಾಸ್, ಅದೇ ಪಕ್ಷದ ನಾಗೇಂದ್ರ ಭಾಗವಹಿಸಿದ್ದರು.
ಸುಂದರಮ್ಮ ಪ್ರಕರಣ :
ಇದೇ ರೀತಿ ಮುಡಾ ಸುಂದರಮ್ಮ ಎಂಬುವರ ಜಮೀನನ್ನು ಅಕ್ರಮವಾಗಿ ಬಳಸಿಕೊಂಡಿತ್ತು. ಅದರಲ್ಲೂ ತಪ್ಪು ಒಪ್ಪಿಕೊಂಡು ಬದಲಿ ನಿವೇಶನ ನೀಡಲು ಮುಡಾ ನಿರ್ಣಯಿಸಿತ್ತು. ಆದರೆ ಸುಂದರಮ ಮುಡಾದ ಪ್ರಸ್ತಾಪವನ್ನು ಒಪ್ಪಿಕೊಳ್ಳಲಿಲ್ಲ. ಬದಲಾಗಿ ಹೈಕೋರ್ಟ್ ಮೆಟ್ಟಿಲೇರಿದಾಗ ಸ್ವಾಧೀನಪಡಿಸಿಕೊಳ್ಳಲಾದ ಜಾಗದಷ್ಟೇ ಬದಲಿ ಭೂಮಿ ನೀಡುವ ಆದೇಶ ನೀಡಲಾಗಿತ್ತು. ಆದರೆ ನಮ್ಮ ಪ್ರಕರಣದಲ್ಲಿ 50:50 ಅನುಪಾತಕ್ಕೆ ಒಪ್ಪಿಕೊಂಡಿದ್ದೇವೆ. ಇದರಲ್ಲಿ ಲೋಪ ಏನಾಗಿದೆ? ಎಂದು ಮುಖ್ಯಮಂತ್ರಿ ಪ್ರಶ್ನಿಸಿದರು.
ಬಿಜೆಪಿಯವರ ಮನೆ ಮುರುಕ ರಾಜಕಾರಣ : ಸಿಎಂ ಸಿದ್ದು ಆಕ್ರೋಶ..
ಬೆಂಗಳೂರು,ಜು.26- ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ತಮ ಹೆಸರಿಗೆ ಮಸಿ ಬಳಿಯುವ ದುರುದ್ದೇಶದಿಂದ ಬಿಜೆಪಿಯವರು ಮನೆಮುರುಕ ರಾಜಕಾರಣ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿಂಗ ಬಿನ್ ಜವರ ಅವರ ಕುಟುಂಬದ ಸದಸ್ಯರು ಒಪ್ಪಂದದ ಮೇರೆಗೆ ಕೆಸರೆ ಗ್ರಾಮದ 3 ಎಕರೆ 16 ಗುಂಟೆಯನ್ನು ನಿಂಗ ಅವರ ಕೊನೆಯ ಪುತ್ರ ದೇವರಾಜ ಅವರ ಹೆಸರಿಗೆ ಬಿಟ್ಟುಕೊಟ್ಟಿದ್ದರು. ತಮ ಪಾಲಿನ ಭೂಮಿಯನ್ನು ದೇವರಾಜ ಪರಭಾರೆ ಮಾಡಿದ್ದಾರೆ.
ತಮ ಭಾವಮೈದುನ ಮಲ್ಲಿಕಾರ್ಜುನ ಸ್ವಾಮಿ ಖರೀದಿಸಿ ಭೂಪರಿವರ್ತನೆ ಮಾಡಿಸಿಕೊಂಡಿದ್ದಾರೆ. ತಮ ಪತ್ನಿಯ ಹೆಸರಿಗೆ ದಾನಪತ್ರ ನೀಡಿದ್ದಾರೆ. ಇತ್ತೀಚೆಗೆ ವಿವಾದ ಮಾಡಿದ ಬಿಜೆಪಿಯವರು ಮಂಜುನಾಥಸ್ವಾಮಿ ಎಂಬುವರಿಂದ ಜಿಲ್ಲಾಧಿಕಾರಿಗೆ ದೂರು ಕೊಡಿಸಿ ತಮಗೂ ಪಾಲು ಬರಬೇಕೆಂದು ಪ್ರತಿಪಾದನೆ ಮಾಡಿಸಲು ಯತ್ನಿಸುತ್ತಿದ್ದಾರೆ.
ಕಳೆದ 24 ವರ್ಷಗಳಿಂದಲೂ ಈ ಭೂಮಿ ವಿಷಯವಾಗಿ ಯಾವುದೇ ತಗಾದೆಗಳು, ವ್ಯಾಜ್ಯಗಳು ಇರಲಿಲ್ಲ. ಪಾಲುದಾರಿಕೆ ಕೂಡ ಕುಟುಂಬದಲ್ಲಿ ಸಮರ್ಪಕವಾಗಿ ನಡೆದಿತ್ತು. ಆದರೆ ರಾಜಕೀಯ ಕಾರಣಕ್ಕಾಗಿ ದೂರು ಕೊಡಿಸಿ ಕುಟುಂಬದಲ್ಲಿ ಮನೆಮುರುಕ ಕೆಲಸವನ್ನು ಬಿಜೆಪಿಯವರು ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಆರಂಭದಿಂದ ಪರಭಾರೆವರೆಗೂ ಸಮಗ್ರ ವಿವರ ನೀಡಿದ ಸಿಎಂ
ಬೆಂಗಳೂರು,ಜು.26- ಮುಡಾ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪತ್ರಿಕಾಗೋಷ್ಠಿ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಭೂಮಿಯ ಮೂಲ ಆರಂಭದಿಂದ ಹಿಡಿದು ಇತ್ತೀಚಿನ ಪರಭಾರೆವರೆಗೂ ಸಮಗ್ರವಾದ ವಿವರಗಳನ್ನು ಜನತೆಯ ಮುಂದಿಟ್ಟಿದ್ದಾರೆ. ಈ ಮೊದಲು ಸಿಟಿ ಇಂಪ್ರೂವ್‌ಮೆಂಟ್ ಟ್ರಸ್ಟ್ ಬೋರ್ಡ್ (ಸಿಐಟಿಬಿ)ಗಳು ಜಾರಿಯಲ್ಲಿದ್ದವು. 1985ರಲ್ಲಿ ಕಾನೂನು ತಿದ್ದುಪಡಿ ಮಾಡಿ ರಾಜ್ಯದೆಲ್ಲೆಡೆ ನಗರಾಭಿವೃದ್ಧಿ ಪ್ರಾಧಿಕಾರಗಳನ್ನು ರಚಿಸಲಾಯಿತು. ಅಂದಿನಿಂದ ಸಾವಿರಾರು ಎಕರೆ ಸ್ವಾಧೀನ ಮಾಡಿಕೊಂಡು, ನಿವೇಶನ ರಚನೆ ಮಾಡಿ ಹಂಚಲಾಗಿದೆ.
ಜೀವನದಲ್ಲೇ ಕಾಣದಷ್ಟು ಕೆಟ್ಟ ರಾಜಕಾರಣ
ಬಿಜೆಪಿ- ಜೆಡಿಎಸ್ ಪಕ್ಷಗಳು ನನ್ನ ಜೀವನದಲ್ಲೇ ಕಾಣದಷ್ಟು ಕೆಟ್ಟ ರಾಜಕಾರಣವನ್ನು ಮಾಡುತ್ತಿದ್ದು, ವೈಯಕ್ತಿಕವಾಗಿ ತೇಜೋವಧೆ ಮಾಡುವ ಹುನ್ನಾರ ನಡೆಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.ಕರ್ನಾಟಕದಲ್ಲಿ ಕುಸಿದು ಹೋಗುತ್ತಿರುವ ಜನಪ್ರಿಯತೆಯನ್ನು ಮರುಸ್ಥಾಪಿಸಿಕೊಳ್ಳಲು ಸಾವಿರ ಸಲ ಸುಳ್ಳು ಹೇಳಿದರೆ ನಿಜವಾಗುತ್ತದೆ ಎಂಬ ಹಿಟ್ಲರ್ ವಾದವನ್ನು ಅನುಸರಿಸುತ್ತಿದ್ದಾರೆ. ಪೇಶ್ವೆವಾದಿ ಮನಸ್ಥಿತಿಯನ್ನು ಪ್ರತಿಪಾದಿಸುತ್ತಿದ್ದಾರೆ.
ಈ ಹಿಂದೆ ದೇವರಾಜ ಅರಸು ವಿಚಾರದಲ್ಲೂ ಇದೇ ರೀತಿ ಅಪಪ್ರಚಾರ ನಡೆಸಲಾಯಿತು. ಧರ್ಮಸಿಂಗ್ ಬಗ್ಗೆಯೂ ಸಂಚುಗಳು ನಡೆದವು. ಕಲ್ಯಾಣದ ಬಿಜ್ಜಳನನ್ನು ಇದೇ ಮನಸ್ಥಿತಿಯ ಜನರೇ ಕೊಲೆ ಮಾಡಿದರು. ಗಮನಿತ ವರ್ಗಗಳ ಜನಸಮುದಾಯದಿಂದ ಬಂದವರು ರಾಜಕಾರಣ ಮಾಡಬಾರದು ಎಂಬ ನಿಲುವು ಇವರದು. ಮುಡಾ ವಿಚಾರದಲ್ಲಿ ಗುಲಗಂಜಿಯಷ್ಟೂ ನ್ಯೂನತೆ ಇಲ್ಲದೇ ಇದ್ದರೂ ದೊಡ್ಡದಾಗಿ ಚರ್ಚೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಚಿನ ಹಿಂದೆ ನಿಂತು ಆಟ ಆಡುತ್ತಿರುವ ಸೈದ್ಧಾಂತಿಕ ಗುರುಗಳಿಗೆ ಕರ್ನಾಟಕದ ಜನರ ಮನಸ್ಥಿತಿ ಅರ್ಥವಾಗುತ್ತಿದೆ. ಜನ ಅವರಿಂದ ದೂರವಾಗುತ್ತಿದ್ದಾರೆ. ಅದಕ್ಕಾಗಿ ಕಾಗಕ್ಕ, ಗೂಬಕ್ಕನ ಕಥೆ ಕಟ್ಟಿ ಜನರನ್ನು ನಂಬಿಸಲು ಹೊರಟಿದ್ದಾರೆ. ಬಿಜೆಪಿ-ಜೆಡಿಎಸ್‌ನವರ ಮೆದುಳು ಖಾಲಿಯಾಗಿದೆ. ಭೌತಿಕವಾಗಿ ದಿವಾಳಿಯಾಗಿದ್ದಾರೆ ಎಂದು ಮುಖ್ಯಮಂತ್ರಿ ಕಿಡಿಕಾರಿದ್ದಾರೆ.
ತನಿಖೆಗೆ ನ್ಯಾಯಾಂಗ ಆಯೋಗ
ಮುಡಾದಲ್ಲಿ ನಿವೇಶನ ಹಂಚಿಕೆ ಸೇರಿದಂತೆ ಇತರ ವಿಚಾರಗಳಲ್ಲಿ ತನಿಖೆ ನಡೆಸಲು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಪಿ.ಎನ್.ದೇಸಾಯಿ ಅವರ ಏಕಸದಸ್ಯ ಆಯೋಗವನ್ನು ರಚಿಸಲಾಗಿದ್ದು, ತನಿಖೆಯ ಚೌಕಟ್ಟಿನ ಮಾರ್ಗಸೂಚಿಗಳನ್ನು ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
2006 ರಿಂದ 2024 ರ ನಡುವೆ ಮುಡಾ ಎಷ್ಟು ಬಡಾವಣೆಗಳನ್ನು ರಚಿಸಿದೆ. ಡಿ ನೋಟಿಫಿಕೇಷನ್ ಆಗಿರುವ ಎಷ್ಟು ಭೂಮಿಯನ್ನು ನಿವೇಶನಗಳನ್ನಾಗಿ ಮಾಡಲು ಬಳಕೆ ಮಾಡಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಪಾಲಿಸಿರುವ ನಿಯಮಗಳ್ಯಾವುವು, ಉಲ್ಲಂಘಿಸಿರುವ ನಿಯಮಗಳ್ಯಾವುವು ಎಂಬುದನ್ನು ಪರಿಶೀಲನೆ ನಡೆಸಿ ವರದಿ ನೀಡಲು 6 ತಿಂಗಳ ಕಾಲಾವಕಾಶ ಇದೆ ಎಂದು ಹೇಳಿದರು.
Top News: Latest Trending in India, Buzz, World Trending News, Hot on Social Media, What is Trending in the World, Trending on Social Media.
►Watch LIVE: https://shashwatha.com/player.php?url=https://shashwatha.com/hls/shashwatha/ctvnews.m3u8
►CTV News : https://ctvnewskannada.com/
►Subscribe to Ctv News: https://www.youtube.com/channel/UCHtq26kA5D5anCbPD3HoURw
►Big News Big Update : https://ctvnewskannada.com/
► Download CTV Android App: https://play.google.com/store/apps/details?id=com.ctv.ctvnews
► Like us on Facebook: https://www.facebook.com/ctvnewschikkaballapura
► Follow us on Instagram: https://www.instagram.com/ctvnewschikkaballapura/
► Follow us on Twitter: https://twitter.com/ctvnewscbpura
-news #ctv #ctvnewskannada #ctvchikkaballapura #ctvnewsmedia #ctvlive#ctvnewsupdate #todaynews #latestnewstoday #ctv -news #ctv #ctvnewskannada #ctvchikkaballapura #ctvnewsmedia #ctvlive#ctvnewsupdate #todaynews #latestnewstoday #rtodaybreakingnews #chikkaballapuranews #flashnews #liveupdatenews @ctv-news