ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ
1 min readವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ
ಬಿಜೆಪಿಯವರು ನುಡಿದಂತೆ ನಡೆದಿಲ್ಲ ಎಂದು ಆರೋಪಿಸಿದ ಸಿಎಂ
ನುಡಿದ0ತೆ ನಡೆದ ಏಕೈಕ ಸರ್ಕಾರ ಸಿದ್ದರಾಮಯ್ಯ ಸರ್ಕಾರ ಎಂದ ಸಿಎಂ
೫೦೧.೮೧ ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಂಕು ಸ್ಥಾಪನೆ ಜೊತೆಗೆ ಹಲವು ಕಾಮಗಾರಿಗಳ ಉದ್ಘಾಟನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ನೆರವೇರಿಸಿದರು. ನಗು ನಗುತ್ತಲೇ ಸಾರ್ವಜನಿಕರಿಂದ ಸನ್ಮಾನ ಸ್ವೀಕರಿಸಿದ ಸಿಎಂ, ಜನರು ತಂದ ಹಾರ ಪೋಟೊ ಪಡೆದು, ಸ್ಥಳಿಯರಿಂದ ಹಾರ ಹಾಕಿಸಿಕೊಂಡು ನಗು ನಗುತ್ತ ಪೋಟೋಗೆ ಪೋಸ್ ನೀಡಿದರು.
ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದ ನಂತರ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿಯವರು ನುಡಿದಂತೆ ನಡೆದಿದ್ದಾರಾ, ನರೇಂದ್ರ ಮೋದಿ, ಯಡಿಯೂರಪ್ಪ, ಬೊಮ್ಮಾಯಿ ಯಾವತ್ತಾದರೂ ನುಡಿದಂತೆ ನಡೆದಿದ್ದಾರಾ ಎಂದು ಪ್ರಶ್ನಿಸಿದರು. ಬಿಜೆಪಿ ಮತ್ತು ಕುಮಾರಸ್ವಾಮಿ ಮಾಡಿದ್ದು ಬರೀ ಲೂಟಿ ಸರಕಾರ. ಈಗ ಅವರಿಗೆಲ್ಲಾ ಹೊಟ್ಟೆ ಉರಿ ಶುರುವಾಗಿದೆ, ಹಿಂದುಳಿದ ವರ್ಗಕ್ಕೆ ಸೇರಿದವನು ಎರಡನೇ ಬಾರಿ ಸಿಎಂ ಆಗಿದ್ದನ್ನು ತಡೆಯಲು ಬಿಜೆಪಿ ಕೈಯಲ್ಲಿ ಆಗುತ್ತಿಲ್ಲ ಎಂದು ಆರೋಪಿಸಿದರು.
ನಾನು ಅಭಿವೃದ್ಧಿ ಕೆಲಸ ಮಾಡೋದೆ ತಪ್ಪಾ, ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೇ ನನ್ನ ತಪ್ಪಾ, ಸಾಮಾಜಿಕ ನ್ಯಾಯಕ್ಕೆ, ಬಡವರಿಗೆ, ಹಿಂದುಳಿದ ವರ್ಗದವರಿಗೆ ಬಿಜೆಪಿ ಯಾವತ್ತಿಗೂ ವಿರೋಧ. ಕೊಟ್ಟ ಮಾತಿನಂತೆ ನಡೆದು ಕೊಂಡಿದ್ದೇವೆ ಎಂದು ಮೋದಿ, ಅಮಿತ್ ಶಾ, ಯಡಿಯೂರಪ್ಪ ಹೇಳಲಿ ನೋಡೋಣಾ. ರಾಜ್ಯಕ್ಕೆ ಕೇಂದ್ರ ಹಣಕಾಸಿನ ತಾರತಮ್ಯ ಮಾಡುತ್ತಿದೆ. ತೆರಿಗೆ ಕಟ್ಟುವವರು ನಾವು. ನಾವು ನಮ್ಮ ಹಣ ನಮಗೆ ವಾಪಾಸ್ ಕೊಡಿ ಅಂತಾ ಭಿಕ್ಷೆ ಬೇಡಬೇಕಾ ಎಂದು ಕಿಡಿ ಕಾರಿದರು.
ಉತ್ತರ ಭಾರತಕ್ಕೆ ಒಂದು ನ್ಯಾಯ, ಕರ್ನಾಟಕಕ್ಕೆ ಒಂದು ನ್ಯಾಯನಾ, ನಾವೇನು ಪಾಪಾ ಮಾಡಿದ್ದೇವೆ. ಹೆಚ್ಚು ತೆರಿಗೆ ಕಟ್ಟುತ್ತಿರುವುದೆ ತಪ್ಪಾ, ನಮ್ಮ ಪಾಲಿನ ಹಣ ನಮಗೆ ಕೊಡಿಸುವ ವಿಚಾರದಲ್ಲಿ ಬಿಜೆಪಿ, ಜೆಡಿಎಸ್ ನವರು ಬಾಯಿ ಬಿಡುತ್ತಿಲ್ಲ. 15ನೇ ಹಣಕಾಸಿನ ಯೋಜನೆಯಲ್ಲಿ ಕರ್ನಾಟಕಕ್ಕೆ ಭಾರೀ ಅನ್ಯಾಯವಾಗ್ತಿದೆ. ನಾನು ಎರಡು ಬಾರಿ ಸಿಎಂ ಆಗಲು ವರುಣ ಕ್ಷೇತ್ರದ ಆಶೀರ್ವಾದ ದೊಡ್ಡದಿದೆ. 2018 ರಲ್ಲಿ ನಾನೇ ಈ ಕ್ಷೇತ್ರದಲ್ಲಿ ಸ್ಪರ್ಧ ಮಾಡಲಿಲ್ಲ. ವರುಣ ಕ್ಷೇತ್ರ ಕಾಂಗ್ರೆಸ್ `ಭದ್ರಕೋಟೆ. ವರುಣ ಕ್ಷೇತ್ರದ ಎಲ್ಲಾ ಮತದಾರರಿಗೆ `ಧನ್ಯವಾದಗಳು ಎಂದರು.
ವರುಣ ಕ್ಷೇತ್ರದ ಉಪಕಾರ ಯಾವತ್ತೂ ಮರೆಯಲು ಸಾಧ್ಯವಿಲ್ಲ. ವರುಣ ಕ್ಷೇತ್ರದ ಅಭಿವೃದ್ಧಿ ಗೆ ಹೆಚ್ಚು ಒತ್ತು ನೀಡಿ ಕೆಲಸ ಮಾಡಿದ್ದೇನೆ. ಗ್ಯಾರಂಟಿ ಯೋಜನೆ ಘೋಷಿಸಿದಾಗ ಮೋದಿ, ಬಿಜೆಪಿ, ಜೆಡಿಎಸ್ ನವರು ವಿರೋಧ ಮಾಡಿದ್ದರು. ಗ್ಯಾರಂಟಿ ಯೋಜನೆ ಮಾಡಿದರೂ ಕರ್ನಾಟಕ ದಿವಾಳಿ ಆಗಲಿಲ್ಲ. ಲೋಕಸಭ ಚುನಾವಣೆ ಆದ ಮೇಲೆ ಗ್ಯಾರಂಟಿ ಯೋಜನೆ ನಿಲ್ಲಿಸುತ್ತಾರೆ ಎಂದು ಬಿಜೆಪಿ ಸುಳ್ಳು ಹೇಳಿತು ಎಂದು ಹೇಳಿದರು.
ಗೃಹಲಕ್ಷ್ಮಿ ಯೋಜನೆಯಿಂದ ಅತ್ತೆ ಸೊಸೆ ನಡುವೆ ಜಗಳ ತಂದಿಟ್ಟರು ಎಂದು ಸುಳ್ಳು ಹೇಳಿದರು. ಸಿದ್ದರಾಮಯ್ಯ ಬಡವರಿಗೆ ಅನ್ಯಾಯ ಮಾಡಿದ್ದನಾ, ಕಳೆದ ೪೨ ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ನಿಮ್ಮಿಂದ ಒಂದು ರೂಪಾಯಿ ಲಂಚ ಪಡೆದಿದ್ದೇನಾ, ಸಿದ್ದರಾಮಯ್ಯ ಮೇಲೆ ಮಾಡುತ್ತಿರುವ ಆರೋಪ ನೀವು ಸಹಿಸಿ ಕೊಳ್ತಿರಾ, ನನ್ನ ಜೀವನ ತೆರೆದ ಪುಸ್ತಕ. ಮುಡಾ ಪ್ರಕರಣ, ಮುಡಾ ಪ್ರಕರಣ ಎಂದು ಹೇಳುತ್ತಾರೆ. ನನ್ನ ಭಮೈದ ತೆಗೆದುಕೊಂಡು ಜಮೀನನ್ನ ತನ್ನ ತಂಗಿಗೆ ಕೊಟ್ಟಿದ್ದೇನೆ. ಅದಕ್ಕೆ ಸೈಟ್ ಬಂದಿದ್ದವು. ಅದನ್ನೆ ದೊಡ್ಡ ವಿವಾದ ಮಾಡಿದರು ಎಂದರು.
ಅದೇ ಕಾರಣಕ್ಕೆ ಬೇಡವೆ ಬೇಡ ಅಂತಾ ವಾಪಸ್ ಕೊಟ್ಟೆವು. ಒಬ್ಬ ಸಿಎಂ ಆಗಿ ನಾನು ಈಗ ಮೈಸೂರಿನಲ್ಲಿ ಮನೆ ಕಟ್ಟುತ್ತಿದ್ದೇನೆ. 40 ವರ್ಷದಿಂದ ಸ್ವಂತ ಮನೆ ಇಲ್ಲ, ನಾನು ಈಗ ಇರುವ ಮನೆ ಮರಿಸ್ವಾಮಿ ಎಂಬುವವರದು. ಒಬ್ಬ ಸಿಎಂ ಆದವನು ಬಾಡಿಗೆ ಮನೆಯಲ್ಲಿದ್ದೇನೆ. ನೀವೇ ನನ್ನ ಮಾಲೀಕರು, ನೀವೇ ನನ್ನ ಯಜಮಾನರು ಅದಕ್ಕೆ ಇದನ್ನು ಹೇಳ್ತಿದ್ದೇನೆ. ಮೂರು ವರ್ಷದಿಂದ ಮನೆ ಕಟ್ಟಿಸುತ್ತಿದ್ದೇನೆ. ಅದು ಇನ್ನೂ ಮುಗಿದಿಲ್ಲ. ನನ್ನ ಮೇಲೆ ಗೂಬೆ ಕೂರಿಸುವ ಕೆಲಸ ಆಗುತ್ತಿದೆ. ವರ್ಚಸ್ಸು ಕುಗ್ಗಿಸುವ ಕೆಲಸ ಆಗುತ್ತಿದೆ. ವರ್ಚಸ್ಸು ಕೊಡುವವರು ಜನರು. ನನಗೆ ನಿಮ್ಮ ಆಶೀರ್ವಾದ ಬೇಕು. ನಾನು ಪ್ರಾಮಾಣಿಕವಾಗಿ ಕೆಲಸ ಮಾಡ್ತಿದ್ದೇನೆ ಎಂದರು.
ನನ್ನ ಕಂಡರೆ ಕುಮಾರಸ್ವಾಮಿ, ಯಡಿಯೂರಪ್ಪ, ಅಶೋಕ್, ವಿಜೇಯೇಂದ್ರ, ಪ್ರಹ್ಲಾದ್ ಜೋಶಿಗೆ ಹೊಟ್ಟೆ ಉರಿ. ನಾನು ಯಾವುದೇ ಕಾರಣಕ್ಕೂ ಧÀÈತಿಗೇಡಲ್ಲ. ಜನರ ಆಶೀರ್ವಾದ ಇರೋವರೆಗೂ ಬಿಜೆಪಿ, ಜೆಡಿಎಸ್‌ನ್ನು ಈ ಸಿದ್ದರಾಮಯ್ಯ ಎದುರಿಸುತ್ತಾನೆ. ನಾನು ಯಾರಿಗೂ ಜಗ್ಗಲ್ಲ, ಬಗ್ಗಲ್ಲ. ಸತ್ಯಕ್ಕೆ ಯಾವಾಗಲೂ ಜಯ ಸಿಗುತ್ತದೆ. ಕಾನೂನು, ನ್ಯಾಯಾಲಯದ ಮೇಲೆ ಗೌರವ ಇದೆ. ನ್ಯಾಯ ಸಿಗುತ್ತದೆ. ನಾನು ಎಲ್ಲಿಯವರೆಗೆ ಇರುತ್ತೇನೋ ಅಲ್ಲಿಯವರೆಗೂ ಬಡವರ ಪರ ಇರುತ್ತೇನೆ. ಸಾಮಾಜಿಕ ನ್ಯಾಯದ ಪರ ಕೆಲಸ ಮಾಡುತ್ತೇನೆ ಎಂದರು.