ರಾಷ್ಟಿಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಸ್ಪಷ್ಟನೆ
1 min readಹೆದ್ದಾರಿ ನಿಯಮಾನುಸಾರ ಎಂಜಿ ರಸ್ತೆ ವಿಸ್ತರಣೆ
ರಾಷ್ಟಿಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಸ್ಪಷ್ಟನೆ
ನಗರದದಲ್ಲಿ 100 ಅಡಿ ರಸ್ತೆ ನಿರ್ಮಾಣಕ್ಕೆ ಸಂಘಟನೆಗಳ ಒತ್ತಾಯ
ರಾಷ್ಟಿಯ ಹೆದ್ದಾರಿ 69ರ ಅಭಿವೃದ್ಧಿ ಎಷ್ಟು ಅಡಿ, ಯಾವ ಮಾನದಂಡದಲ್ಲಿ ರಸ್ತೆ ಅಭಿವೃದ್ಧಿ ಮಾಡಲಾಗುತ್ತಿದೆ. ರಸ್ತೆಯ ಗಡಿ ಭಾಗಕ್ಕೆ ಚರಂಡಿ ನಿರ್ಮಾಣ ಮಾಡಿ, ಅವೈನಿಕ ಕಾಮಗಾರಿ ನಿಲ್ಲಿಸಿ ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಕರವೇ ಕಾರ್ಯಕರ್ತರು, ರೈತ ಸಂಘ, ಮತ್ತು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.
ಗೌರಿಬಿದನೂರು ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಕೆಲ ಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಕರವೇ ಅಧ್ಯಕ್ಷ ಜಿ.ಎಲ್. ಅಶ್ವತ್ಥನಾರಾಯಣ್ ಮಾತನಾಡಿ, ನಗರದ ಹಿರೇಬಿದನೂರು ಮತ್ತು ಗುಂಡಾಪುರ ರಸ್ತೆಯಲ್ಲಿ ಚರಂಡಿಯನ್ನು ರಸ್ತೆಗಿಂತಲೂ ಎತ್ತರ ನಿರ್ಮಾಣ ಮಾಡಲಾಗುತ್ತಿದೆ, ಎಷ್ಟು ಅಡಿ ರಸ್ತೆ ಅಭಿವೃದ್ಧಿ ಪಡಿಸಲಾಗುತ್ತಿದೆ, ಸರ್ವೀಸ್ ರಸ್ತೆ ನಿರ್ಮಾಣ ಮಾಡದೇ ಚರಂಡಿ ನಿರ್ಮಾಣ ಮಾಡಲಾಗುತ್ತಿದೆ, ರಾಷ್ಟೀಯ ಹೆದ್ದಾರಿ ನಿಯಮಾನುಸಾರ ರಸ್ತೆ ಅಭಿವೃದ್ಧಿ ಪಡಿಸಿ ಎಂದು ಆಗ್ರಹಿಸಿದರು.
ರಸ್ತೆ ಗಡಿಭಾಗದಲ್ಲಿ ಚರಂಡಿ ನಿರ್ಮಾಣ ಮಾಡಿ, ನಿಮ್ಮ ಅವೈನಿಕ ರಸ್ತೆ ಅಭಿವೃದ್ಧಿ ಕಾಮಗಾರಿಯಿಂದ ರಸ್ತೆಯ ಇಕ್ಕೆಲೆಗಳಲ್ಲಿನ ಮನೆ ಮತ್ತು ಹೊಲಗಳಲ್ಲಿ ನೀರು ನುಗ್ಗುವಂತಾಗುತ್ತಿದೆ, ಪೈಪ್ಲೆಲೈನ್ ಹಾಳಾಗುತ್ತಿದೆ ಹೆದ್ದಾರಿ ಪ್ರಾಧಿಕಾರದವರು ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಕಾಮಗಾರಿ ಮಾಡಿ ಎಂದು ಹೇಳಿದರು. ಯೋಜನಾ ಪ್ರಾಧಿಕಾರದ ನಿವೃತ್ತ ಅಧಿಕಾರಿ ರಘುನಾಥರೆಡ್ಡಿ ಮಾತನಾಡಿ, ರಸ್ತೆ ಅಭಿವೃದ್ಧಿಗೂ ಮುನ್ನ ಮಾಡಿರುವ ಡಿಪಿಆರ್ ಬಹಿರಂಗ ಪಡಿಸಿ ಸಾರ್ವಜನಿಕರಿಗೆ ಮಾಹಿತಿ ನೀಡಿ, ರಾಜ್ಯ ಮತ್ತು ರಾಷ್ಟಿಯ ಹೆದ್ದಾರಿ ನಿಯಾವಳಿ ಪ್ರಕಾರ ಅಭಿವೃದ್ಧಿ ಪಡಿಸಿ ಇಲ್ಲವಾದರೆ ಕಾಮಗಾರಿ ನಿಲ್ಲಿಸಿ ಎಂದು ಆಗ್ರಹಿಸಿದರು.
ನಗರ ಹೊರವಲಯದಲ್ಲಿ ಬೈಪಾಸ್ ರಸ್ತೆ ಅಭಿವೃದ್ಧಿಗೆ ಭಸ್ವಾಧೀನ ಮಾಡಿಕೊಂಡಿರುವ ಕೆಲ ರೈತರಿಗೆ ಈವರೆಗೂ ಪರಿಹಾರ ನೀಡಿಲ್ಲ ಅದನ್ನು ಪ್ರಶ್ನಿಸಿದರೆ ನನಗೇ ನೋಟಿಸ್ ಜಾರಿ ಮಾಡಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು. ರೈತ ಸಂಘದ ಅಧ್ಯಕ್ಷ ಲೋಕೇಶ್‌ಗೌಡ ಮಾತನಾಡಿ, ರೈತರ ಜಮೀನು ಸ್ವಾಧೀನ ಪಡಿಸಿಕೊಂಡು ಅವೈನಿಕ ಕಾಮಗಾರಿ ಮಾಡಲಾಗುತ್ತಿದೆ, ನಗರದಲ್ಲಿ 100 ಅಡಿ ರಸ್ತೆ ಅಭಿವೃದ್ಧಿ ಮಾಡಿ, ಇಲ್ಲವಾದಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸಭೆಯಲ್ಲಿ ತಹಸೀಲ್ದಾರ್ ಮಹೇಶ್ ಎಸ್.ಪತ್ರಿ, ನಗರಸಭೆ ಪೌರಾಯುಕ್ತೆ ಡಿ.ಎಂ.ಗೀತಾ, ತಾ.ಪಂ. ಇಒ ಹೊನ್ನಪ್ಪ ಜಿ.ಕೆ. ನಗರಸಭ ಸದಸ್ಯರು, ಕನ್ನಡ ಪರ ಸಂಘಟನೆಗಳ ಮುಖಂಡ ಇದ್ದರು.