ಭ್ರಷ್ಟಾಚಾರ ಮುಕ್ತ ಆಡಳಿತಕ್ಕಾಗಿ ಕೆಆರ್‌ಎಸ್ ಪಣ

ಸರ್ಕಾರದ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ಸಿಗಲಿ

3.7 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ

ಚಿಂತಾಮಣಿಯಲ್ಲಿ ಮುಂದುವರಿದ ಫುಟ್‌ಪಾತ್ ಒತ್ತುವರಿ ತೆರುವು

December 28, 2024

Ctv News Kannada

Chikkaballapura

ಸತತ ಮಳೆಯಿಂದ ಮುಂಜಾಗ್ರತ ಕ್ರಮಗಳತ್ತ ನಗರಸಭೆ

1 min read

ಸತತ ಮಳೆಯಿಂದ ಮುಂಜಾಗ್ರತ ಕ್ರಮಗಳತ್ತ ನಗರಸಭೆ
ಚರಂಡಿಗಳ ಸ್ವಚ್ಛತೆಗೆ ಮುಂದಾದ ಅಧ್ಯಕ್ಷ, ಉಪಾಧ್ಯಕ್ಷರು
ರಾಜಕಾಲುವೆ, ಬೃಹತ್ ಕಾಲುವೆಗಳ ತ್ಯಾಜ್ಯ ತೆರವು

ಮೂರು ದಿನಗಳಿಂದ ಸತತ ಮಳೆಯಾಗುತ್ತಿದೆ. ಇದರಿಂದ ಇಡೀ ಜಿಲ್ಲೆ ಕೆಸರು ಮಯವಾಗಿದ್ದು, ಎಲ್ಲಿ ನೋಡಿದರೂ ಕೆಸರು ಗದ್ದೆಗಳಂತಾಗಿದೆ. ಇನ್ನು ಚರಂಡಿಗಳ0ತೂ ಪ್ಲಾಸ್ಟಿಕ್ ಸೇರಿದಂತೆ ಇತರೆ ತ್ಯಾಜ್ಯದಿಂದ ತುಂಬಿಕೊ0ಡು ನೀರು ಸರಾಗವಾಗಿ ಹರಿಯದೆ ನಿಂತಲ್ಲೇ ನಿಂತಿದೆ. ಇನ್ನೂ ಹಲವು ದಿನಗಳು ಮಳೆ ಮುಂದುವರಿಯುವ ಸೂಚನೆ ಹವಾಮಾನ ಇಲಾಖೆ ನೀಡಿರುವ ಹಿನ್ನೆಲೆಯಲ್ಲಿ ಮುಂದೆ ಯಾವುದೇ ಅವಾಂತರ ಸೃಷ್ಟಿಯಾಗದಂತೆ ನಗರಸಭೆೆ ಅಧ್ಯಕ್ಷ, ಉಪಾಧ್ಯಕ್ಷರು ಮುಂಜಾಗ್ರತಾ ಕ್ರಮಗಳಿಗೆ ಮುಂದಾಗಿದ್ದಾರೆ.

ಹೌದು, ಸಣ್ಣ ಮಳೆಯಾದರೂ ಚಿಕ್ಕಬಳ್ಳಾಪುರ ನಗರದ ತಗ್ಗು ಪ್ರದೇಶಗಳ ಮನೆಗಳಿಗೆ ಮಳೆ ನೀರು ಮಾತ್ರವಲ್ಲದೆ, ಚರಂಡಿ ನೀರು ನುಗ್ಗಿ ಅವಾಂತರಗಳು ಸೃಷ್ಟಿಯಾಗುವುದು ಸಾಮಾನ್ಯ, ಕಳೆದ ಮೂರು ದಿನಗಳಿಂದ ಸತತವಾಗಿ ಮಳೆಯಾಗುತ್ತಿದ್ದು, ಪ್ರಸ್ತುತ ಯಾವುದೇ ಮನೆಗಳಿಗೆ ನೀರು ನುಗ್ಗಿಲ್ಲ ಎಂಬುದು ಸಮಾಧನದ ವಿಷಯವಾಗಿದೆ. ಆದರೆ ಈ ಜಡಿ ಮಳೆ ಇನ್ನಷ್ಟು ದಿನಗಳು ಮುಂದುವರಿಯುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿರುವ ಹಿನ್ನೆಲೆಯಲ್ಲಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರು ಎಚ್ಚೆತ್ತುಕೊಂಡು ಮುಂಜಾಗ್ರತಾ ಕ್ರಮಗಳತ್ತ ಮುಖ ಮಾಡಿದ್ದಾರೆ.

ನಗರದಲ್ಲಿ ಎಲ್ಲೆಲ್ಲಿ ಸಮಸ್ಯೆಗಳು ಎದುರಾಗಲಿದೆ ಎಂಬುದು ನಗರಸಭೆ ಅಧಿಕಾರಿಗಳಿಗೆ ತಿಳಿದ ಸ್ಪಷ್ಟ ಮಾಹಿತಿಯಾಗಿದ್ದು, ಅಂತಹ ಜಾಗಗಳಲ್ಲಿ ಕಟ್ಟಿಕೊಂಡಿರುವ ಚರಂಡಿಗಳ ಸ್ವಚ್ಛತೆಗೆ ನಗರಸಭೆ ಅಧ್ಯಕ್ಷ ಗಜೇಂದ್ರ ಮತ್ತು ಉಪಾಧ್ಯಕ್ಷ ನಾಗರಾಜ್ ಇಂದು ಮುಂದಾಗಿದ್ದಾರೆ. ರಾಜ ಕಾಲುವೆ, ಬೃಹತ್ ಗಾತ್ರದ ಕಾಲುವೆಗಳ ಅಕ್ಕ ಪಕ್ಕ ಗಿಡ ಗಂಟಿಗಳು ಬೆಳೆದು, ಚರಂಡಿಗಳಲ್ಲಿ ಪ್ಲಾಸ್ಟಿಕ್ ಸೇರಿದಂತೆ ಇತರೆ ತ್ಯಾಜ್ಯ ಸೇರಿ ನೀರು ಮುಂದೆ ಸಾಗಲು ಸಾಧ್ಯವಾಗದಂತೆ ಕಟ್ಟಿಕೊಂಡ ಮೋರಿಗಳು ಚಿಕ್ಕಬಳ್ಳಾಪುರದಲ್ಲಿ ಅವೆಷ್ಟೋ ಇವೆ.

ಹಾಗೆ ತ್ಯಾಜ್ಯದಿಂದ ಕಟ್ಟಿಕೊಂಡಿರುವ ಚರಂಡಿಗಳನ್ನು ಗುರ್ತಿಸಿ, ಜೆಸಿಬಿಗಳ ಮೂಲಕ ತ್ಯಾಜ್ಯ ತೆರವುಗೊಳಿಸಲು ಇಂದು ಚಾಲನೆ ನೀಡಿದ್ದಾರೆ. ನಗರದ ತಗ್ಗು ಪ್ರದೇಶಗಳು ಮತ್ತು ಮನೆಗಳಿಗೆ ನೀರು ನುಗ್ಗುವ ಪ್ರದೇಶಗಳು, ರಾಜ ಕಾಲುವೆಗಳು ಹಾದುಹೋಗಿರುವ ಪ್ರದೇಶಗಳಲ್ಲಿ ಕಟ್ಟಿಕೊಂಡಿರುವ ತ್ಯಾಜ್ಯವನ್ನು ಜೆಸಿಬಿಗಳ ಮೂಲಕ ತೆರವು ಮಾಡಿ, ಚರಂಡಿ ನೀರಿನ ಜೊತೆಗೆ ಮಳೆಯ ನೀರೂ ಸರಾಗವಾಗಿ ಹರಿದುಹೋಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಇದರಿಂದ ಮುಂದಿನ ದಿನಗಳಲ್ಲಿ ಮಳೆ ಹೆಚ್ಚಿನ ಪ್ರಮಾಣದಲ್ಲಿ ಆದರೂ ಆ ಮಳೆಯ ನೀರು ತಗ್ಗು ಪ್ರದೇಶದ ಮನೆಗಳಿಗೆ ನುಗ್ಗುವುದಕ್ಕೆ ಕಡಿವಾಣ ಬೀಳಲಿದೆ ಎಂಬ ಮುಂದಾಲೋಚನೆಯಿ0ದ ನಗರಸ`É ಅಧ್ಯಕ್ಷ, ಉಪಾಧ್ಯಕ್ಷರು ಸ್ವಚ್ಛತೆಗೆ ಮುಂದಾಗಿದ್ದಾರೆ. ಅಲ್ಲದೆ ನಗರದ ಸಣ್ಣ ಚರಂಡಿಗಳ ಸ್ವಚ್ಛತೆಯನನೂ ಮಾಡುತ್ತಿದ್ದು, ಪ್ರತಿ ಚಂರಡಿಯೂ ಸ್ವಚ್ಛಗೊಳಿಸಲಾಗುವುದು ಮತ್ತು ಚರಂಡಿಗಳಿAದ ನಾಗರಿಕರಿಗೆ ಯಾವುದೇ ರೀತಿಯ ತೊಂದರೆಯಾಗದ0ತೆ ಮುಂಜಾಗ್ರತೆ ವಹಿಸಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.

ನಗರದ ಎಂಜಿ ರಸ್ತೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮುಂಭಾಗದಲ್ಲಿ ಚರಂಡಿ ಕಟ್ಟಿಕೊಂಡು ಸದಾ ದುರ್ನಾತ ಬೀರುತ್ತಿದೆ. ಈ ಚರಂಡಿ ನೀರಿನೊಂದಿಗೆ ಮಳೆಯ ನೀರು ಸೇರಿ ಕೊಳಚೆ ಪ್ರದೇಶ ಸೇರಿದಂತೆ ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗುವುದು ಸಾಮಾನ್ಯವಾಗಿತ್ತು. ಅಲ್ಲದೆ ರಾಷ್ಟಿಯ ಹೆದ್ದಾರಿ 234ಕ್ಕೆ ಹೊಂದಿಕೊ0ಡೇ ಈ ಬೃಹತ್ ಚರಂಡಿ ಇದ್ದು, ಇದಕ್ಕೆ ಮುಚ್ಚಳ ಇಲ್ಲದೆ ಈ ಹಿಂದೆ ವ್ಯಕ್ತಿಯೊಬ್ಬರು ಚರಂಡಿಗೆ ಬಿದ್ದು ಮೃತಪಟ್ಟಿದ್ದರು. ಮತ್ತೊಬ್ಬ ಬೈಕ್ ಸವಾರರರು ಇದೇ ತೆರೆದ ಚರಂಡಿಗೆ ಬಿದ್ದು ಗಾಯಗೊಂಡ ನಿದರ್ಶನಗಳೂ ಇವೆ.

ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದ ನಂತರ ಮಾತನಾಡಿದ ನಗರಸಬೆ ಅಧ್ಯಕ್ಷ ಗಜೇಂದ್ರ, ಕಳೆದ ಮೂರು ದಿನಗಳಿಂದ ಸತತ ಮಳೆಯಾಗುತ್ತಿರುವ ಕಾರಣ ಚರಂಡಿಗಳು ಮುಚ್ಚಿಕೊಂಡು ನೀರು ಹೊರ ಹರಿಯುವ ಆತಂಕ ಎದುರಾಗಿದೆ. ರಾಜಕಾಲುವೆ ಸೇರಿದಂತೆ ಇತರೆ ದೊಡ್ಡ ಚರಂಡಿಗಳ ಚೆರವು ಕಾರ್ಯಕ್ಕೆ ಇಂದು ಚಾಲನೆ ನೀಡಲಾಗಿದೆ. ಎರಡು ಮೂರು ದಿನಗಳಲ್ಲಿ ನಗರದ ಎಲ್ಲ ಚರಂಡಿಗಳ ಸ್ವಚ್ಛತೆ ಮಾಡಲಾಗುವುದು, ಮುಂದಿನ 15 ದಿನಗಳಲ್ಲಿ ಮುಚ್ಚಿಹೋಗಿರುವ ರಾಜಕಾಲುವೆಗಳು ಸೇರಿದಂತೆ ಎಲ್ಲ ಚರಂಡಿಗಳ ಸ್ವಚ್ಛತೆ ಮಾಡುವುದಾಗಿ ಹೇಳಿದರು.

ಉಪಾಧ್ಯಕ್ಷ ನಾಗರಾಜ್ ಮಾತನಾಡಿ, ಚರಂಡಿ ಸ್ವಚ್ಛತಾ ಕಾರ್ಯವನ್ನು ನಗರದಲ್ಲಿ ಇಂದು ಆರಂಭಿಸಲಾಗಿದೆ. ಕಳೆದ ಮೂರು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಇನ್ನು ನಾಲ್ಕೆದು ದಿನಗಳ ಕಾಲ ಮಳೆಯಾಗುವ ಮುನಿಚನೆ ಇದೆ. ಹಾಗಾಗಿ ಚರಂಡಿಗಳಲ್ಲಿ ನೀರು ಕಟ್ಟಿಕೊಂಡು ನಾಗರಿಕರಿಗೆ ಸಮಸ್ಯೆ ಆಗದಂತೆ ಮುಂಜಾಗ್ರತಾ ಕ್ರಮವಾಗಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದೆ. ಚರಂಡಿಗಳಲ್ಲಿ ಕಟ್ಟಿಕೊಂಡಿರುವ ತ್ಯಾಜ್ಯ ಸ್ವಚ್ಛಗೊಳಿಸುವ ಜೊತೆಗೆ ಚರಂಡಿಗಳ ಅಕ್ಕ ಪಕ್ಕ ಬೆಳೆದಿರುವ ಗಿಡ ಗಂಟಿಗಳ ಸ್ವಚ್ಛತೆಯನ್ನೂ ಮಾಡಲಾಗುತ್ತಿದೆ ಎಂದು ಹೇಳಿದರು.

ಒಟ್ಟಿನಲ್ಲಿ ಮಳೆ ಬಂದರೆ ಮನೆಗಳಿಗೆ ನೀರು ನುಗ್ಗಿ ತಗ್ಗು ಪ್ರದೇಶದ ಜನರು ತೀವ್ರ ಸಂಕಷ್ಟ ಎದುರಿಸುವ ಜೊತೆಗೆ ನಗರಸಭೆಗೆ ಶಾಪ ಹಾಕುವ ಕಾಲ ಈ ಹಿಂದೆ ಇತ್ತು, ಇದೀಗ ನಗರಸಭೆಯ ಆಡಳಿತ ಮಂಡಳಿ ಮುಂಜಾಗ್ರತಾ ಕ್ರಮವಾಗಿ ನಾಗರಿಕರ ಹಿತ ಕಾಯುವ ಜಾಗೃತಿ ಕೈಗೊಳ್ಳುತ್ತಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದ್ದು, ಇವರ ಈ ಮುಂಜಾಗ್ರತಾ ಕ್ರಮಗಳು ಒಂದು ದಿನಕ್ಕೆ ಸೀಮಿಕತವಾಗದೆ ನಿರಂತರವಾಗಿ ಮುಂದುವರಿಯಲಿ ಎಂದು ನಾಗರಿಕರು ಕೋರಿದ್ದಾರೆ.

 

About The Author

Leave a Reply

Your email address will not be published. Required fields are marked *