ಚಿತ್ರಾವತಿ ನದಿಗೆ ಬೇಕಿದೆ ನೈರ್ಮಲ್ಯದ ಚಿಕಿತ್ಸೆ
1 min readಚಿತ್ರಾವತಿ ನದಿಗೆ ಬೇಕಿದೆ ನೈರ್ಮಲ್ಯದ ಚಿಕಿತ್ಸೆ
ತ್ಯಾಜ್ಯ ನದಿಗೆ ಸುರಿಯುತ್ತಿದ್ದರೂ ಅಧಿಕಾರಿಗಳು ಮೌನ
ರೋಗ ಹರಡುವ ಭೀತಿಯಲ್ಲಿ ಸ್ಥಳೀಯರು
ಬಾಗೇಪಲ್ಲಿ ಪಟ್ಟಣದ ಮೂಲಕ ಹರಿದು ಆಂಧ್ರಪ್ರದೇಶಕ್ಕೆ ಸಾಗುವ ಚಿತ್ರಾವತಿ ನದಿ ನೈರ್ಮಲ್ಯ ಕಾಣದೆ ಗಬ್ಬುನಾರುವ ಸ್ಥಿತಿ ನಿರ್ಮಾಣವಾಗಿದೆ. ನದಿ ದಡದ ಕೆಲ ಹೋಟೆಲ್, ಗ್ಯಾರೇಜ್ ಸೇರಿದಂತೆ ಹಲವು ಅಂಗಡಿಗಳ ತ್ಯಾಜ್ಯ ನೀರು, ಪ್ಲಾಸ್ಟಿಕ್ ನದಿ ಪಾತ್ರ ಸೇರುತ್ತಿದೆ. ಇದರಿಂದಾಗಿ ನದಿಯಲ್ಲಿನ ನೀರು ಮಲಿನಗೊಳ್ಳುತ್ತಿದೆ.
ನದಿಗೆ ಅಪಾರ ಪ್ರಮಾಣಧಲ್ಲಿ ತ್ಯಾಜ್ಯ ಸೇರಿತ್ತಿರುವ ಪರಿಣಾಮ ಹಲವು ರೋಗಗಳನ್ನು ಹರಡುವ ಭೀತಿ ಸ್ಥಳೀಯ ವಸತಿ ಪ್ರದೇಶದ ನಿವಾಸಿಗಳು ಎದುರಿಸುತ್ತಿದ್ದಾರೆ. ಇರುವ ಏಕೈಕ ನದಿ ಎನಿಸಿಕೊಂಡಿರುವ ಚಿತ್ರಾವತಿಯನ್ನು ಬರನಾಡಿನ ಜನತೆ ಸಮರ್ಪಕವಾಗಿ ರಕ್ಷಿಸಿಕೊಳ್ಳುತ್ತಿಲ್ಲ. ನದಿಯ ದಡದಲ್ಲಿ ಮುಳ್ಳುಗಂಟಿಗಳು, ಪೊದೆಗಳು ಅರಳಿಕೊಂಡಿವೆ. ಅಲ್ಲದೆ ಬಹಳಷ್ಟು ತ್ಯಾಜ್ಯ ಸುರಿಯುವ ಹಳ್ಳದಂತಾಗಿದ್ದು, ನದಿಯ ಜಲಚರಗಳಿಗೂ ಹಾನಿಯಾಗುತ್ತಿದೆ. ಈ ಬಗ್ಗೆ ಪುರಸಭೆ ಕ್ರಮ ಕೈಗೊಂಡು ಪಟ್ಟಣ ವ್ಯಾಪ್ತಿಯ ನದಿ ದಡ ಪ್ರದೇಶದಲ್ಲಿ ಉತ್ತಮ ಉದ್ಯಾನ ಹಾಗೂ ವಾಯು ವಿಹಾರಿಗಳಿಗೆ ಅನುಕೂಲವಾಗುವಂತೆ ಸುಂದರಗೊಳಿಸಬೇಕಿದೆ.
ಇತ್ತೀಚಿಗೆ ಚಿತ್ರಾವತಿ ಮೇಲು ಸೇತುವೆಯಲ್ಲಿ ಸಾರ್ವಜನಿಕರು ಹಾಗೂ ಮೀನುಗಾರರು, ಸೇತುವೆ ನದಿಯಲ್ಲಿ ಇರುವ ಮೀನು ಹಿಡಿದು ತಿನ್ನುತ್ತಿದ್ದಾರೆ, ಸಾರ್ವಜನಿಕರು ಈ ಸೇತುವೆ ತುಂಬಾ ತ್ಯಾಜ್ಯ ಪದಾರ್ಥಗಳು ಸುರಿಸಿದ್ದು, ಈ ತ್ಯಾಜ್ಯ ಪದಾರ್ಥಗಳನ್ನು ಮೀನುಗಳು ತಿಂದು ಜೀವಿಸುತ್ತಿವೆ, ಜನರು ಮೀನು ಹಿಡಿದು ತಿನ್ನುತ್ತಿದ್ದು ಇದರಿಂದ ಸಾರ್ವಜನಿಕರಿಗೆ ಸಾಂಕ್ರಾಮಿಕ ರೋಗ ಹರಡುವ ಪರಿಸ್ಥಿತಿ ಎದುರಾಗಿದೆ. ಇದರಿಂದ ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕಾಗಿದೆ.
ನದಿ ದಡದಲ್ಲಿ ತಂತಿಯ ರಕ್ಷಣಾ ಜಾಲ ನಿರ್ಮಿಸಬೇಕಿದೆ. ಇದರಿಂದಾಗಿ ನದಿಗೆ ತ್ಯಾಜ್ಯ ಎಸೆಯುವವರು ಸುಮ್ಮನಾಗಿ ನದಿ ಮಲಿನ ಮುಕ್ತವಾಗುತ್ತದೆ. ಈ ಬಗ್ಗೆ ಸಿಪಿಎಂ ಮುಖಂಡ ಚನ್ನರಾಯಪ್ಪ ಮಾತನಾಡಿ, ಐತಿಹಾಸಿಕ ಚಾರಿತ್ರ ಹೊಂದಿರುವ ಚಿತ್ರಾವತಿ ನದಿಯ ಪಾತ್ರವೂ ಪಟ್ಟಣದ ತ್ಯಾಜ್ಯ ನೀರು ಸೇರುತ್ತಿರುವುದರಿಂದ ಸಂಪೂರ್ಣ ಕಲುಷಿತಗೊಂಡಿದೆ. ಜೊತೆಗೆ ಇದೇ ನದಿಯಲ್ಲಿ ಬಡಬಗ್ಗರು ಮೀನು ಹಿಡಿಯುತ್ತಿದ್ದು, ಅವನ್ನು ಸೇವಿಸುತ್ತಿರುವುದರಿಂದಾಗಿ ರೋಗರುಜುನೆಗಳಿಗೆ ತುತ್ತಾಗುತ್ತಿದ್ದಾರೆ. ಆದರೆ ಈ ಬಗ್ಗೆ ಸಂಬ0ಧಪಟ್ಟ ಪುರಸಭೆ ಅಧಿಕಾರಿಗಳಾಗಲಿ ಅಥವಾ ಜನಪ್ರತಿನಿಧಿಗಳಾಗಲಿ, ನದಿ ಪಾತ್ರವನ್ನು ಸ್ವಚ್ಛಗೊಳಿಸುವ ಗೋಜಿಗೆ ಹೋಗುತ್ತಿಲ್ಲ. ಜೊತೆಗೆ ತ್ಯಾಜ್ಯ ನದಿಗೆ ಬಿಡುತ್ತಿರುವುದನ್ನು ತಡೆಯುವಂತಹ ಯಾವೊಂದು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದರು.