ನೆಲಮಂಗಲದಲ್ಲಿ ಮಕ್ಕಳ ಗ್ರಾಮಸಭೆ ಯಶಸ್ವಿ
1 min read
ನೆಲಮಂಗಲದಲ್ಲಿ ಮಕ್ಕಳ ಗ್ರಾಮಸಭೆ ಯಶಸ್ವಿ
ಕೇಂದ್ರ ಸರ್ಕಾರದ ಬೇಟಿ ಬಚಾವೋ ಬೇಟಿ ಪಡಾವೋ
ಮಕ್ಕಳ ಹಕ್ಕು ಅರಿಯಲು ಗ್ರಾಮಸಭೆ ಸಹಕಾರಿ
ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಬೇಟಿ ಬಚಾವೋ ಬೇಟಿ ಪಡಾವೋ ಅಭಿಯಾನದಡಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತ್ಯಾಮಗೊಂಡ್ಲು ಹೋಬಳಿಯ ಕಳಲುಘಟ್ಟ ಗ್ರಾಮ ಪಂಚಾಯತಿಯಲ್ಲಿ ಆಯೋಜಿಸಿದ್ದ 2024-25ನೇ ಸಾಲಿನ ಮಕ್ಕಳ ಗ್ರಾಮಸಭೆ ವಿಭಿನ್ನವಾಗಿತ್ತು.
ಮಕ್ಕಳ ಗ್ರಾಮ ಸಭೆಯಲ್ಲಿ ಮಕ್ಕಳನ್ನೇ ಅಧ್ಯಕ್ಷ-ಉಪಾಧ್ಯಕ್ಷ ಹುದ್ದೇ ನೀಡಿ, ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಅಧ್ಯಕ್ಷ ರಾಮು ಜೋಗಿಹಳ್ಳಿ, ಪಂಚಾಯತಿ ಅಧ್ಯಕ್ಷೆ ಸೌಮ್ಯ, ಪಿಡಿಒ ಗೀತಾ ಮಣಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸುಜಾತ ಮಕ್ಕಳಿಗೆ ಕೇಂದ್ರ ಸರಕಾರ ಮಕ್ಕಳ ಹಕ್ಕುಗಳ ಒಡಂಬಡಿಕೆ ಬಗ್ಗೆ ತಿಳಿಸಿದರು. ಇದೇ ವೇಳೆ ಮಕ್ಕಳು ಜಾನಪದ ನೃತ್ಯ ಹಾಗೂ ಶಾಲೆಗಳಿಗೆ ಪಂಚಾಯತಿಯಿ0ದ ಧ್ವನಿವರ್ಧಕಗಳನ್ನು ವಿತರಿಸಲಾಯಿತು.
ನಂತರ ಕಳಲುಘಟ್ಟ ಗ್ರಾ.ಪಂ.ಸದಸ್ಯ ಹರೀಶ್ ಮಾತನಾಡಿ, ಮಕ್ಕಳಿಗೆ ಗ್ರಾಮಸಭೆಯ ಅವಶ್ಯಕತೆ ಹೆಚ್ಚಿದೆ, 14 ವರ್ಷದೊಳಗಿನ ಮಕ್ಕಳಿಗೆ ಎಲ್ಲಾ ಹಕ್ಕುಗಳನ್ನು ತಿಳಿಸಿ, ಗ್ರಾ.ಪಂನಿ0ದ ನೀಡಿದ ಡಿಜಿಟಲ್ ಲೈಬ್ರರಿ, ಶುದ್ಧ ಕುಡಿಯುವ ನೀರಿನ ಘಟಕದ ಇತ್ಯಾದಿ ಸೌಲಭ್ಯಗಳ ಬಗ್ಗೆ ವಿವರಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಸುಜಾತ ಮಾತನಾಡಿ, ಇಂದಿನ ಮಕ್ಕಳೆ ಮುಂದಿನ ಪ್ರಜೆಗಳಾಗಬೇಕು, ಮಕ್ಕಳಿಗೆ ಅವರ ಹಕ್ಕುಗಳ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ಪ್ರತಿ ಪಂಚಾಯತಿ ಗ್ರಾಮಸಭೆಯಿಂದ ಸಾಧ್ಯವಾಗುತ್ತದೆ, ಮಕ್ಕಳ ರಕ್ಷಣೆ, ಶಿಕ್ಷಣ, ಭಾಗವಹಿಸುವಿಕೆ ಹಾಗೂ ವಿಕಸನದ ಹಕ್ಕುಗಳಿಗೆ ಬದ್ಧವಾಗಿ ಗ್ರಾಪಂ ಕೆಲಸ ನಿರ್ವಹಿಸುತ್ತಿದೆ, ಇದು ಪ್ರತಿಯೊಬ್ಬರಿಗೂ ಮಾದರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಅಧ್ಯಕ್ಷರಾದ ರಾಮು ಜೋಗಿಹಳ್ಳಿ, ಗ್ರಾ.ಪಂ. ಅಧ್ಯಕ್ಷೆ ಸೌಮ್ಯ ಆಂಜನಮೂರ್ತಿ, ಗ್ರಾ.ಪಂ. ಸದಸ್ಯರಾದ ಹರೀಶ್, ನರಸಿಂಹಮೂರ್ತಿ, ಮೇಲ್ವಿಚಾರಕಿ ಸುಜಾತ, ಸಿಆರ್‌ಪಿ. ಸುಕನ್ಯಾ, ಕಾರ್ಯದರ್ಶಿ ನಾಚಾರಮ್ಮ ಇದ್ದರು.