ಸೈಬರ್ ಅಪರಾಧದ ಬಗ್ಗೆ ಮಕ್ಕಳಿಗೆ ಜಾಗೃತಿ ಅಗತ್ಯ
1 min readಸೈಬರ್ ಅಪರಾಧದ ಬಗ್ಗೆ ಮಕ್ಕಳಿಗೆ ಜಾಗೃತಿ ಅಗತ್ಯ
ಚಿಂತಾಮಣಿಯಲ್ಲಿ ತಕಾನೂನು ಅರಿವು ಕಾರ್ಯಕ್ರಮ
ಸೈಬರ್ ಅಪರಾಧಗಳ ಬಗ್ಗೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಬೇಕು. ಆಗ ಸೈಬರ್ ಅಪರಾಧ ತಡೆಯಲು ಸಾಧ್ಯ ಎಂದು ಚಿಂತಾಮಣಿ ಗ್ರಾಮಾಂತರ ಠಾಣೆ ಪಿಎಸ್‌ಐ ಮಮತಾ ಹೇಳಿದರು.
ಚಿಂತಾಮಣಿ ನಗರದ ಸರ್ಕಾರಿ ಬಾಲಕರ ಪ್ರೌಢ ಶಾಲೆಯಲ್ಲಿ ಆಯೋಜಿಸಿದ್ದ ಮಕ್ಕಳ ದಿನಾಚರಣೆ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಮಾತನಾಡಿದ ಚಿಂತಾಮಣಿ ಗ್ರಾಮಾಂತರ ಠಾಣೆ ಪಿಎಸ್‌ಐ ಮಮತಾ, ಸೈಬರ್ ನಿಯಮ ಮತ್ತು ಸಂಚಾರ ನಿಯಮಗಳನ್ನು ಉಲ್ಲಂಘಿಸಲಾಗುತ್ತಿದೆ.ಇವೆರಡು ನಿಯಂತ್ರಣವಾಗಲು ಯುವಜನರು ಜಾಗೃತಗೊಳ್ಳಬೇಕು. ಚಿಕ್ಕಂದಿನಿAದಲೇ ಮಕ್ಕಳಲ್ಲಿ ಸಂಚಾರ ನಿಯಮಗಳ ಬಗ್ಗೆ ಮತ್ತು ಸೈಬರ್ ಅಪರಾಧಗಳ ಬಗ್ಗೆ ಅರಿವು ಮೂಡಿಸಬೇಕು. ಆಗ ರಸ್ತೆ ಅಪಘಾತಗಳು ಕಡಿಮೆಯಾಗುತ್ತವೆ. ಸೈಬರ್ ಅಪರಾಧವೂ ನಿಯಂತ್ರಣವಾಗುತ್ತದೆ ಎಂದರು.
ಪ್ಯಾನಲ್ ವಕೀಲ ವಿ. ಮಂಜುನಾಥ್ ಮಕ್ಕಳ ಹಕ್ಕುಗಳ ಬಗ್ಗೆ ಮಾತನಾಡಿ, ಮಕ್ಕಳು ತಮ್ಮ ಹಕ್ಕು ಹಾಗೂ ಸಾಮಾಜಿಕ ಕಾರ್ಯ ಕೈಗೊಳ್ಳಲು ಕಾನೂನಿನ ಸಾಮಾನ್ಯ ಜ್ಞಾನ ಅಗತ್ಯ ಎಂದರು. ಶಿಕ್ಷಣ ಮಕ್ಕಳ ಸರ್ವಾಂಗೀಣ ಅಭಿವದ್ಧಿಗೆ ಪೂರಕವಾಗಿದೆ ಎಂಬ ಬಗ್ಗೆ ಇಂದಿನ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡುವ ಅಗತ್ಯವಿದೆ. ವಿದ್ಯಾಥಿಗಳಿಗೆ ಸಾಧಕರ ಜೀವನದ ಬಗ್ಗೆ ಆಸಕ್ತಿ ಮೂಡಿಸುವ ಕಾರ್ಯ ಕೈಗೊಳ್ಳಬೇಕು. ವಿದ್ಯಾರ್ಥಿ ಜೀವನದಲ್ಲಿ ಮಾನವೀಯ ವೌಲ್ಯಗಳನ್ನು ಮೆಗೂಡಿಸಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಬಿ ಶ್ರೀನಿವಾಸ್, ಉಪಾಧ್ಯಕ್ಷ ಜಿ ಶಿವಾನಂದ, ಕಾರ್ಯದರ್ಶಿ ಶ್ರೀನಾಥ್, ಜಂಟಿ ಕಾರ್ಯದರ್ಶಿ ಕೆಎನ್ ಮಂಜುನಾಥ್, ಶಾಲೆ ಮುಖ್ಯೋಪಾಧ್ಯಾಯ ರಮೇಶ್, ಪ್ಯಾನಲ್ ವಕೀಲೆ ವಿದ್ಯಾ ಇದ್ದರು.