ಚಿಕ್ಕಬಳ್ಳಾಪುರದಲ್ಲಿ ಸಂಸದ ಡಾ.ಕೆ. ಸುಧಾಕರ್‌ಗೆ ಅದ್ಧೂರಿ ಅಭಿನಂದನಾ ಕಾರ್ಯಕ್ರಮ
1 min read
ಚಿಕ್ಕಬಳ್ಳಾಪುರದಲ್ಲಿ ಸಂಸದ ಡಾ.ಕೆ. ಸುಧಾಕರ್‌ಗೆ ಅದ್ಧೂರಿ ಅಭಿನಂದನಾ ಕಾರ್ಯಕ್ರಮ
ಸಂಸದ ಡಾ.ಕೆ. ಸುಧಾಕರ್‌ಗೆ ಅಭಿನಂದನೆ
ವಿಪಕ್ಷ ನಾಯಕ ಆರ್. ಅಶೋಕ್ ಭಾಗಿ
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕಾರ್ಯಕ್ರಮದಲ್ಲಿ ಭಾಗಿ
ನೂತನ ಸಂಸದ ಡಾ.ಕೆ. ಸುಧಾಕರ್ ಅವರಿಗೆ ಅವರ ಅಭಿಮಾನಿಗಳು ಮತ್ತು ಬಿಜೆಪಿ, ಜೆಡಿಎಸ್ ಕಾರ್ಯಕರ್ತರಿಂದ ಇಂದು ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು. ಕಾರ್ಯಕ್ರಮಕ್ಕೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ವಿಪಕ್ಷ ನಾಯಕ ಆರ್. ಅಶೋಕ್, ಜೆಡಿಎಸ್ ವರಿಷ್ಠ ನಿಖಿಲ್ ಕುಮಾರಸ್ವಾಮಿ, ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
ಚಿಕ್ಕಬಳ್ಳಾಪುರದ ಹರ್ಷೋದಯ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಸಂಸದರ ಅಭಿನಂದನಾ ಕಾರ್ಯಕ್ರಮಕ್ಕೆ ಆಗಮಿಸಿದ ನೂತನ ಸಂಸದ ಡಾ ಕೆ ಸುಧಾಕರ್ ಹಾಗೂ ವಿಪಕ್ಷ ನಾಯಕ ಆರ್. ಅಶೋಕ್ ಅವರಿಗೆ ಅದ್ದೂರಿ ಸ್ವಾಗತ ಕೋರಲಾಯಿತು. ಹೂ ಮಾಲೆ ಹಾಕಿ ಅಭಿಮಾನಿಗಳು ಸ್ವಾಗತ ಕೋರಿದರು. ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಎನ್‌ಡಿ ಎ ಮೈತ್ರಿಕೂಟದ ಶಾಸಕರು, ಮುಖಂಡರು ಭಾಗಿಯಾಗಿದ್ದರು.
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕಾರ್ಯಕ್ರಮದಲ್ಲಿ ಮಾತನಾಡಿ, ಆರ್. ಅಶೋಕ್ ಅವರಿಗೆ ಏನೋ ಬೆಳಕು ಕಾಣುತ್ತಿದೆ, ಅದಕ್ಕೆ ತೀಕ್ಷವಾಗಿ ಅಟ್ಯಾಕ್ ಮಾಡ್ತಿದ್ದಾರೆ, ರಾಜ್ಯದಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿಗೆ ಉತ್ತಮ ಭವಿಷ್ಯ ಇದೆ. ರಾಜ್ಯದಲ್ಲಿ ಎನ್‌ಡಿಎ ಅಧಿಕಾರಕ್ಕೆ ಬರುವ ವಿಶ್ವಾಸವನ್ನು ಬೊಮ್ಮಾಯಿಯವರು ಪರೋಕ್ಷವಾಗಿ ವ್ಯಕ್ತಪಡಿಸಿದರು. ಸಂಸದ ಡಾ.ಕೆ ಸುಧಾಕರ್ ಅವರನ್ನು ಹಾಡಿ ಹೊಗಳಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಸಂವಿಧಾನವನ್ನ ಬುಡಮೇಲು ಮಾಡಲು ಕಾಂಗ್ರೆಸ್ ಮುಂದಾಗಿತ್ತು ಎಂದು ಗಂಭೀರ ಆರೋಪ ಮಾಡಿದರು.
ಲೋಕಸಭೆ ಚುನಾವಣೆಯಲ್ಲಿ ಕೇವಲ ಎರಡು ಶಾಸಕರಿದ್ದರು. ಆದರೆ ಜನ ಶಕ್ತಿಯಿಂದ ಡಾ ಕೆ ಸುಧಾಕರ್ ಗೆದ್ದಿದ್ದಾರೆ. ಕಳ್ಳರು ಪೊಲೀಸರಿಗೆ ಬುದ್ದಿ ಹೇಳ್ತಾರೆ ಅನ್ನೋದು ವಿಶೇಷ. ಆದರೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಜನ ಹಾಗೆ ಮಾಡಲಿಲ್ಲ, ಇಡೀ ಚಿಕ್ಕಬಳ್ಳಾಪುರ ಸಮಗ್ರ ಅಭಿವೃದ್ದಿಗಾಗಿ ಸುಧಾಕರ್ ಗೆಲ್ಲಬೇಕಾಯಿತು, ರಾಜಕೀಯ ಜೀವನವನ್ನೇ ಅಡ ಇಟ್ಟು ಮೆಡಿಕಲ್ ಕಾಲೇಜು ತಂದರು. ಮೆಡಿಕಲ್ ಕಾಲೇಜಿಗೆ ಕಾಂಗ್ರೆಸ್ ಬಣ್ಣ ಹಾಕಲಿಲ್ಲ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ದಿವಾಳಿಯಾಗಿದೆ, ಮುಂದಿನ ದಿನಗಳಲ್ಲಿ ಸರ್ಕಾರಿ ನೌಕರರಿಗೆ ಸಂಬಳ ಕೊಡಲೂ ಹಣ ಇಲ್ಲದ ಸ್ಥಿತಿ ಎದುರಾಗಬಹುದು ಎಂದರು.
ರಾಜ್ಯ ಸರ್ಕಾರ ರೈತಾಪಿ ವರ್ಗವನ್ನು ಸರ್ವ ನಾಶ ಮಾಡುತ್ತಿದೆ. ಅಧಿಕಾರದ ಅಮಲಿನಲ್ಲಿ ರೈತರನ್ನು ಬಲಿ ಕೊಡಲಾಗುತ್ತಿದೆ. ಇಂತಹ ಭ್ರಷ್ಟ ಸರ್ಕಾರವನ್ನು ನಾನು ಜೀವನದಲ್ಲಿ ಕಂಡಿಲ್ಲ, ರೈತ ಒಮ್ಮೆ ಹಿಂದೆ ಹೋದರೆ ದೇಶ ಹಿಂದಕ್ಕೆ ಹೋಗುತ್ತೆ, ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ಕೊಡುತ್ತಿದ್ದಿವಿ. ಅದನ್ನು ನಿಲ್ಲಿಸಿದ್ದಾರೆ. , ಮೀನುಗಾರರ ಮಕ್ಕಳಿಗೆ ವಿದ್ಯಾರ್ಥಿ ವೇತನ ನಿಲ್ಲಿಸಿದ್ದಾರೆ. ರದ್ದು ಮಾಡೋದ್ರಲ್ಲಿ ಕಾಂಗ್ರೆಸ್ ಸರಕಾರ ಎತ್ತಿದ ಕೈ ಎಂದು ಬೊಮ್ಮಾಯಿ ವಾಗ್ದಾಳಿ ನಡೆಸಿದರು.
ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ಕಾಂಗ್ರೆಸ್ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು. ಚಿಕ್ಕಬಳ್ಳಾಪುರ ಕ್ಷೇತ್ರದ ಜನ ನೋವು ಅನುಭವಿಸಿದ್ದಾರೆ. ಡಾ ಕೆ ಸುಧಾಕರ್ ಅವರಿಗೆ ಅನಿರೀಕ್ಷಿತ ಸೋಲಾಗಿತ್ತು, ಡಾ ಕೆ ಸುಧಾಕರ್ ಗೆಲುವು ಚಿಕ್ಕಬಳ್ಳಾಪುರ ಜನರ ಗೆಲುವು, ವಿಶ್ವಾಸಭೆ ಚುನಾವಣೆಯಲ್ಲಿ ನಾವು ಒಂದಾಗಿದ್ರೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನ ದುರ್ಬೀನು ಹಾಕಿ ಹುಡುಕಬೇಕಿತ್ತು. ಕಾಂಗ್ರೆಸ್ ಪಕ್ಷ ಐದು ಗ್ಯಾರೆಂಟಿ ಕೊಡ್ತೀವಿ ಅಂತ ಹೇಳಿತ್ತು. ಆದರೆ ಗ್ಯಾರೆಂಟಿಗಳು ವರ್ಕೌಟ್ ಅಗಿಲ್ಲ, ಗ್ಯಾರೆಂಟಿಗಳನ್ನು ರದ್ದು ಮಾಡಲು ಕಾಂಗ್ರೆಸ್ ನಾಯಕರು ಸಿದ್ದತೆ ನಡೆಸಿದ್ದಾರೆ, 150 ಜನ ಶಾಸಕರಿಗೆ ಒಂದು ಬಿಡಿಗಾಸು ಕೊಟ್ಟಿಲ್ಲ. ಗ್ಯಾರೆಂಟಿಗಳನ್ನು ಮುಂದುವರೆಸಲು ಹಾಲಿನ ಧರ ಏರಿಕೆ ಮಾಡಿದ್ದಾರೆ ಎಂದು ಆರೋಪಿಸಿದರು. ಅಲ್ಲದೆ ಕಳೆದ ಒಂಬತ್ತು ತಿಂಗಳಿನಿoದ ಹೈನು ರೈತರಿಗೆ ಹಾಲಿನ ಪ್ರೋತ್ಸಾಹ ಧನ ನೀಡಿಲ್ಲ, ಕೂಡಲೇ ಹಾಲಿಗೆ ಪ್ರೋತ್ಸಾಹ ಧನ ಕೊಡಬೇಕು ಎಂದು ನಿಖಿಲ್ ಕುಮಾರಸ್ವಾಮಿ ಆಗ್ರಹಿಸಿದರು.
ನೂತನ ಸಂಸದ ಡಾ.ಕೆ. ಸುಧಾಕರ್ ಅಭಿನಂದನೆ ಸ್ವಿಕರಿಸಿ ಮಾತನಾಡಿ, ನಾನು ಸೋತಾಗ ನನ್ನ ತಂದೆ ತಾಯಿಯನ್ನೇ ಕಳೆದುಕೊಂಡಷ್ಟು ನೋವಾಗಿತ್ತು. ಲೋಕಸಭೆಗೆ ಟಿಕೆಟ್ ಕೊಡ್ತಾರೋ ಇಲ್ಲವೋ ಅಂದುಕೊoಡಿದ್ದೆ. ಆದರೆ ಬಸವರಾಜ ಬೊಮ್ಮಾಯಿ ಮತ್ತು ಅಶೋಕ್ ನನಗೆ ಟಿಕೆಟ್ ಸಿಗಲು ಶಕ್ತಿ ತುಂಬಿದ್ರು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹತ್ತು ಸಾವಿರ ಮತಗಳ ಅಂತರದಿoದ ಸೋತಿದ್ದೆ, ಲೋಕಸಭೆಯಲ್ಲಿ ನನಗೆ ಇಪ್ಪತೈದು ಸಾವಿರ ಮತಗಳ ಅಂತರದಲ್ಲಿ ಗೆದ್ದಿದ್ದೇನೆ ಎಂದು ಹರ್ಷ ವ್ಯಕ್ತಪಡಿಸಿದರು.
ಕಾಂಗ್ರಸ್ ಸರ್ಕಾರಕ್ಕೆ ಜಗನ್ ಸರ್ಕಾರಕ್ಕೆ ಬಂದ ಸ್ಥಿತಿ ಬರುತ್ತೆ, 35ನೇ ಸ್ಥಾನಕ್ಕೆ ಇಳಿಯುವುದು ನಿಶ್ಚಯ. ಸರ್ಕಾರಿ ವೈದ್ಯಕೀಯ ಕಾಲೇಜು ಪ್ರಾರಂಭ ಮಾಡಲಿಲ್ಲ, ಕಾಲೇಜು ಪ್ರಾರಂಭ ಮಾಡಲು ನಾನು ಹೋರಾಟ ಮಾಡಲು ಸಿದ್ಧ, ಎಚ್‌ಎನ್ ವ್ಯಾಲಿ ಮೂರನೆ ಹಂತದ ಶುದ್ದೀಕರಣಕ್ಕಾಗಿ ಬಜೆಟ್ ನಲ್ಲಿ ಹಣ ಮೀಸಲಿಟ್ಟಿದ್ವಿ, ಆದರೆ ಎಚ್ ಎನ್ ವ್ಯಾಲಿ ಶುದ್ದೀಕರಣದ ಬಗ್ಗೆ ಕಾಂಗ್ರೆಸ್ ಚಕಾರ ಎತ್ತಲಿಲ್ಲ.
ಕುಡಿಯಲು ಯೋಗ್ಯವಾದ ನೀರು ಕೊಡಲು ಈ ಸರ್ಕಾರದಿಂದ ಆಗ್ತಿಲ್ಲ ಎಂದು ಕಿಡಿ ಕಾರಿದರು.
ಬಜೆಟ್‌ನಲ್ಲಿ ಅಪ್ಪಿ ತಪ್ಪಿ ಚಿಕ್ಕಬಳ್ಳಾಪುರ ಕಾಣ್ತಿಲ್ಲ, 17 ವರ್ಷಗಳ ಹಿಂದೆ ಕುಮಾರಸ್ವಾಮಿ ಜಿಲ್ಲೆ ಸ್ಥಾಪನೆ ಮಾಡಿದ್ರು, ಕೋಲಾರ ಒಕ್ಕೂಟ ಚೀಮುಲ್ ಮಾಡಿದ್ರೆ ಚೀಮುಲ್ ರದ್ದು ಮಾಡಿ ಮತ್ತೆ ಕೋಚಿಮುಲ್‌ಗೆ ಸೇರಿಸಿದ್ದಾರೆ. ಬಜೆಟ್ ಸಭೆಯಲ್ಲಿ ಸಚಿವ ಸುಧಾಕರ್ ಇದ್ರು
ಯಾಕೆ ಮಾತನಾಡಲಿಲ್ಲ ನಿಮಗೆ ಚಿಕ್ಕಬಳ್ಳಾಪುರ ಜಿಲ್ಲೆ ಯಾಕೆ ಬೇಕು ಎಂದು ಉಸ್ತುವಾರಿ ಸಚಿವ ಡಾ ಎಂ ಸಿ ಸುಧಾಕರ್ ವಿರುದ್ದ ಸಂಸದ ಡಾ.ಕೆ ಸುದಾಕರ್ ವಾಗ್ದಾಳಿ ನಡೆಸಿದರು.
ನಾನೇನಾದ್ರೂ ನಿಮ್ಮ ಸ್ಥಾನದಲ್ಲಿ ಇದ್ದಿದ್ರೆ ರಾಜೀನಾಮೆ ಬಿಸಾಕಿ ಬರ್ತಿದ್ದೆ, ಒಂದು ದಿನ ಬದುಕಿದ್ರೆ ಸಿಂಹದoತೆ ಬದುಕಬೇಕು. ಅಧಿಕಾರಕ್ಕಾಗಿ ಅಂಟಿಕೊoಡು ಇದ್ದೀರಲ್ಲ ನಾಚಿಕೆ ಆಗಲ್ವಾ, ನಾವ್ ಕೊಟ್ಟಿರುವ ನಿವೇಶನಗಳಿಗೆ ನಿಮ್ಮ ಪೋಟೋ ಹಾಕಿಸಿಕೊಳ್ತೀರಲ್ಲಾ ನಾಚಿಕೆ ಆಗಲ್ವಾ, ನೀವು ಗಂಡಸರಾಗಿದ್ದರೆ ಪ್ರತಿ ಕ್ಷೇತ್ರದಲ್ಲೂ 25 ಸಾವಿರ ನಿವೇಶನಗಳನ್ನ ನೀಡಿ, ಆಗ ನಿಮ್ಮನ್ನ ಗಂಡಸರು ಎಂದು ನಿರೂಪಿಸಿಕೊಳ್ಳಿ ಸುಧಾಕರ್ ವಾಗ್ದಾಳಿ ನಡೆಸಿದರು.
ವಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿ, ರಾಜ್ಯ ಸರ್ಕಾರ ಬಹಳ ದಿನ ಉಳಿಯಲ್ಲ ಮುಖ್ಯಮಂತ್ರಿ ಬದಲಾವಣೆ ಮಾಡಿ ಅಂತ ಒಕ್ಕಲಿಗ ಸ್ವಾಮೀಜಿ ಕಿಡಿ ಹೊತ್ತಿಸಿದ್ದಾರೆ. ಇದೆಲ್ಲ ಮಾಡಿರೋದು ಕಾಂಗ್ರೆಸ್ ಪಕ್ಷದವರೇ.. ಬಿಜೆಪಿ ಜೆಡಿಎಸ್ ನವರಲ್ಲ. ಮೂವರು ಡಿಸಿಎಂ ಮಾಡಬೇಕು ಅಂತ ಜಗಳ ತಾರಕಕ್ಕೆ ಏರಿದೆ. ಕಾಂಗ್ರೆಸ್ ಪಕ್ಷದಲ್ಲಿ ಒಡಕು ಮೂಡಿದೆ. ಲೋಕಸಭಾ ಚುನಾವಣೆ ನಂತರ ಈ ವಿವಾದ ತಾರಕಕ್ಕೆ ಏರಿದೆ ಎಂದರು.
ಸಿಎo ಬದಲಾವಣೆ, ಡಿಸಿಎಂ ಸ್ಥಾನಗಳ ಸೃಷ್ಟಿಯಲ್ಲೇ ಸರ್ಕಾರ ಮುಳುಗಿದೆ. ಅಭಿವೃದ್ಧಿ ಕಾರ್ಯ ಶೂನ್ಯ ಹಣವೂ ಇಲ್ಲ. ಜಗಳದಲ್ಲಿ ಸರ್ಕಾರ ಬದುಕಿದ್ದರೆ ಸತ್ತಂತೆ ಕೋಮಾ ಐಸಿಯು ನಲ್ಲಿರುವ ಸರ್ಕಾರ ಇದು. ಕಾಲರಾ ಡೆಂಗ್ಯೂ ಬಂದರೂ ಸರ್ಕಾರ ಏನೂ ಮಾಡುತ್ತಿಲ್ಲ. ಸಿದ್ದರಾಮಯ್ಯ ತೆಗೆದು ಡಿಕೆಶಿ ಸಿಎಂ ಮಾಡಬೇಕು ಎಂಬುದು ಅವರಲ್ಲೇ ಗೊಂದಲವಿದೆ. ಈಗ ಲಿಂಗಾಯತ ಸ್ವಾಮೀಜಿಗಳು ಹಾಗೂ ಕುರುಬ ಸಮುದಾಯದ ಸ್ವಾಮೀಜಿಗಳು ಶುರು ಮಾಡ್ತಾರೆ ಎಂದು ವ್ಯಂಗ್ಯವಾಡಿದರು.
ಕಾoಗ್ರೆಸ್ ಸರ್ಕಾರ ಯಾರನ್ನ ಬೇಕಾದರೂ ಸಿಎಂ ಮಾಡಿಕೊಳ್ಳಲಿ ಜಾತಿ ಜಾತಿಗಳ ನಡುವೆ ವಿಷ ಬಿತ್ತುವ ಕೆಲಸ ಕಾಂಗ್ರೆಸ್ ಮಾಡ್ತಿದೆ. ಜಾತಿ ಹೊಡೆಯೋದ್ರಲ್ಲಿ ಸಿದ್ದರಾಮಯ್ಯ ಎಕ್ಸ್ಸ್ವರ್ಟ್ರ. ಜಾತಿಗಳ ತರೋದು ಅಕ್ಷಮ್ಯ ಅಪರಾಧ. ಅಧಿಕಾರ ಹಂಚಿಕೆಯಲ್ಲಿ ಸರ್ಕಾರ ಮುಳುಗಿದ್ದು, ಈ ಸರ್ಕಾರ ಬಹಳ ದಿನ ಉಳಿಯಲ್ಲ ಎಂದರು. ರಾಜ್ಯ ಕಾಂಗ್ರೆಸ್ ಸರ್ಕಾರ ಪಾಪರ್ ಸರ್ಕಾರ. ಈಗ ಕೇಂದ್ರ ಸರ್ಕಾರದ ಬಳಿ ಹಣ ಕೊಡಿ ಎಂದು ಕೇಳಲು ಹೋಗ್ತಿದ್ದಾರೆ ಎಂದು ಲೇವಡಿ ಮಾಡಿದರು.
ರಾಜ್ಯ ಸರ್ಕಾರ ಕೇಂದ್ರದ ಬಳಿ ಗೌರವ ಇಟ್ಟುಕೊಂಡಿರಬೇಕು, ಕೇಂದ್ರ ಹಾಗೂ ರಾಜ್ಯ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು.
ನಾವು ಭಾರತ, ಚೀನಾ ಅಲ್ಲ, ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಮೇಲೂ ದ್ವೇಷ ಭಾವನೆ ಹೊಂದಿದೆ. ದೆಹಲಿಯಲ್ಲಿ ಕಾಟಾಚಾರದ ಎಂಪಿ ಸಭೆ ಮಾಡಿದ್ದಾರೆ. ಕೇಂದ್ರ ಸರ್ಕಾರ ಯೋಜನೆ ಜಾರಿ ಮಾಡಿದ್ರೂ ಮ್ಯಾಚಿಂಗ್ ಗ್ರಾರೆಟ್ ಹಣ ಕೊಡಲು
ರಾಜ್ಯ ಸರ್ಕಾರದ ಬಳಿ ಹಣ ಇಲ್ಲ. ಕಾಂಗ್ರೆಸ್ ಸರ್ಕಾರ ಬಂದು ರಾಜ್ಯ ಅರ್ಥಿಕವಾಗಿ ಹಾಳಾಗಿ ಹೋಗಿದೆ ಎಂದು ಅಸಮಾಧಾನ ಹೊರಹಾಕಿದರು.
ರಾಜ್ಯ ಸರ್ಕಾರ ಬಡವರ ರಕ್ತ ಹೀರುವ ಕೆಲ ಮಾಡ್ತಿದೆ. ಉಚಿತ ಗ್ಯಾರಂಟಿ ಎಂದು ಕಾಂಗ್ರೆಸ್ ಸರ್ಕಾರ ಜನರಿಗೆ ತೆರಿಗೆ ಹೊರೆ ಹೇರುತ್ತಿದ್ದಾರೆ. 2 ಸಾವಿರ ರೂಪಾಯಿಗೆ ನಾವು ಯಾಕೆ ಅರ್ಜಿ ಹಾಕಿದಿವಿ ಅಂತ ಜನರಿಗೆ ಬೇಸರ ಆಗಿದೆ. 2 ಸಾವಿರ ರೂಪಾಯಿ ಕೊಟ್ಟು ಜನರಿಂದ 10 ಸಾವಿರ ದರೋಡೆ ಮಾಡ್ತಿದ್ದಾರೆ. ಈ ಸರ್ಕಾರ ಬೇಕಾ ಅಂತ ಜನ ಯೋಚನೆ ಮಾಡುತ್ತಿದ್ದಾರೆ. ಹಾಲಿನ ದರವನ್ನ ಪದೇ ಪದೇ ಹೆಚ್ಚಳ ಮಾಡುತ್ತಿದ್ದಾರೆ. ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಿಂದ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿ ಸಾಮಾನ್ಯರು ಬದುಕುವುದೇ ಕಷ್ಟಕರವಾಗಿ ಪರಿಣಮಿಸಿದೆ ಎಂದು ಆರೋಪಿಸಿದರು.
ಕರುಣೆ ಇಲ್ಲದೆ ಜನರ ಮೇಲೆ ಬಾಯಿಗೆ ಬಂದ ಹಾಗೆ ಬರೆ ಹಾಕ್ತಿದ್ದಾರೆ. ರಾಜ್ಯದಲ್ಲಿ ಮುಂದೆ ಬಸ್ ದರ ಏರಿಕೆ ಆಗಲಿದೆ.. ಮದ್ಯದ ದರ ಏರಿಕೆಯೂ ಆಗಲಿದೆ. ಹಾಲಿನ ಜೊತೆ ಆಲ್ಕೋಹಾಲ್ ಬೆಲೆಯೂ ಏರಿಕೆ ಮಾಡಲಿದ್ದಾರೆ. ಕಾಂಗ್ರೆಸ್ ನವರು ಚೆಂಬು ತೋರಿಸಿ ಜನರಿಗೆ ಈಗ ಚೊಂಬು ಕೊಡ್ತಿದ್ದಾರೆ. ಜನರ ಜೀವ ಹಿಂಡುವ ಕಾಂಗ್ರೆಸ್ ಸರ್ಕಾರ ತೊಲಗುವವರಗೂ ಬೆಲೆ ಏರಿಕೆ ನಿಲ್ಲಲ್ಲ, ರಾಜ್ಯ ಉದ್ದಾರ ಆಗಲ್ಲ ಎಂದು ಅಶೋಕ್ ವಾಗ್ದಾಳಿ ನಡೆಸಿದರು.