ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಕ್ರಿಸ್ಮಸ್ ಸಂಭ್ರಮ
1 min readಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಕ್ರಿಸ್ಮಸ್ ಸಂಭ್ರಮ
ಚರ್ಚ್ ಗಳಲ್ಲಿ ಸಾಮೂಹಿಕ ಪ್ರಾರ್ಥನೆ, ಶುಭಾಶಯ ವಿನಿಮಯ
ವಿದ್ಯುತ್ ದೀಪಾಲಂಕಾರದಿ0ದ ಕಂಗೊಳಿಸುತ್ತಿರುವ ಚರ್ಚ್ಗಳು
ಕ್ರಿಸ್ ಮಸ್ ಕ್ರೆಸ್ತರ ಏಕೈಕ ಹಬ್ಬ, ಅಷ್ಟೇ ಅಲ್ಲ ಶಾಂತಿ ಭೂತ ಕ್ರಿಸ್ತನ ಜನ್ಮದಿನವೂ ಹೌದು. ಪ್ರವಾದಿ ಯೇಸುವಿನ ಜನ್ಮದಿನವನ್ನು ಕ್ರೆಸ್ತರು ಅತ್ಯಂತ ಸಂಭ್ರಮದಿ0ದ ಆಚಿರಸೋದು ರೂಢಿ. ಇಂದು ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಕ್ರೆಸ್ತರ ಪ್ರಾರ್ಥನಾ ಮಂದಿರಗಳಿಗೆ ಭೇಟಿ ನೀಡಿದ ಜನರು ಸಾಮೂಹಿಕ ಪ್ರಾರ್ಥನೆ ಮಾಡಿ, ಯೇಸುವಿನ ಸ್ಮರಣೆ ಮಾಡಿದರು.
ಚಿಕ್ಕಬಳ್ಳಾಪುರ ನಗರದಲ್ಲಿರುವ ಸಿಎಸ್ಐ ಚರ್ಚ್ ಮತ್ತು ಕ್ಯಾಥೋಲಿಕ್ ಚರ್ಚುಗಳಿಗೆ ವಿಶೇಷ ದೀಪಾಲಂಕಾರ ಮಾಡಲಾಗಿತ್ತು. ಚರ್ಚುಗಳ ಜೊತೆಗೆ ಕ್ರೆಸ್ತರ ಮನೆಗಳು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದ್ದು, ಗಮನ ಸೆಳೆಯುತ್ತಿವೆ. ಇನ್ನು ಕ್ರಿಸ್ಮಸ್ ಗೋದಲಿ, ನಕ್ಷತ್ರಗಳ ಸಾಲು ಎಲ್ಲೆಡೆ ರಾರಾಜಿಸುತ್ತಿವೆ. ವಿಶೇಷ ತಿನಿಸುಗಳಾದ ಕೇಕ್, ಮಾಂಸದ ಊಟಗಳನ್ನು ಏರ್ಪಡಿಸಲಾಗಿದೆ. ಕ್ರೆಸ್ತರ ಮನೆಗಳ ಮುಂಭಾಗದಲ್ಲಿ ಗೋದಲಿಗಳು ನಿರ್ಮಿಸಲಾಗಿದ್ದು, ಮನೆಯಂಗಳದಲ್ಲಿ ನಕ್ಷತ್ರಗಳು ಮಿನುಗುತ್ತಿವೆ.
ಗೋದಲಿ, ಕ್ರಿಸ್ಮಸ್ ಟ್ರೀಗಳು ಎಲ್ಲೆಲ್ಲೂ ರಾರಾಜಿಸುತ್ತಿದ್ದು, ಘಂಟೆ ಗಳ ಸಾಲು, ಸಾಂತಕ್ಲಾಸ್ ವೇಷಭೂಷಣ ಮಾರಾಟ ಜೋರಾಗಿದೆ. ಹಬ್ಬಕ್ಕಾಗಿ ಸಮುದಾಯದವರು ಎರಡು ದಿನಗಳ ಹಿಂದಿನಿ0ದಲೇ ಸಿದ್ಧತೆಯಲ್ಲಿ ತೊಡಗಿದ್ದು, ಸಂಭ್ರಮಾಚರಣೆ ಇಂದು ಮುಗಿಲು ಮುಟ್ಟಿದೆ. ಚರ್ಚ್ ಹಾಗೂ ಮನೆಗಳಲ್ಲಿ ಅಂತಿಮ ತಯಾರಿ ನಡೆಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಯೇಸು ಹುಟ್ಟಿನ ಸಂದೇಶದ ದ್ಯೋತಕವಾಗಿ ಬಣ್ಣ ಬಣ್ಣದ ನಕ್ಷತ್ರಗಳು, ಆಕಾಶ ಬುಟ್ಟಿಗಳು, ಕ್ರಿಸ್ಮಸ್ ಟ್ರೀಗಳು ಚರ್ಚ್, ಪ್ರಾರ್ಥನಾ ಮಂದಿರಗಳ ಮಹಡಿಯನ್ನು ಅಲಂಕರಿಸಿವೆ.
ಕ್ರಿಸ್ಮಸ್ ಸಂಭ್ರಮ, ಆಡಂಬರದ ಅಚರಣೆಯ ಹೊರತಾಗಿ ಪ್ರೀತಿ, ದಯೆ, ಕರುಣೆ, ಕ್ಷಮೆ, ಸೇವೆ ಮುಂತಾದ ಮಾನವೀಯ ಮತ್ತು ದೈವೀ ಮೌಲ್ಯಗಳನ್ನು ಬದುಕಿಗೆ ಅಳವಡಿಸಿಕೊಳ್ಳುವ ಒಂದು ಶ್ರೇಷ್ಠ ಆಚರಣೆಯಾಗಲಿ ಎಂದು ಸಂತ ಪ್ರಾನ್ಸಿಸ್ ದೇವಾಲಯದ ದರ್ ಜೂಲಿಯಸ್ ಹಾರೈಸಿದರು. ಮನುಷ್ಯನ ಅಂತರಾತ್ಮದಲ್ಲಿ ಮಾನವೀಯ ಮೌಲ್ಯಗಳು ಕ್ರಿಸ್ತನ ಜನನದಲ್ಲಿ ಮತ್ತೆ ಮತ್ತೆ ಮೂಡಿಬರಲಿ. ವಿಶ್ವದ ಸಮಸ್ತ ಜನರು ಕೌಟುಂಬಿಕವಾಗಿ ಮತ್ತು ಸಾಮಾಜಿಕವಾಗಿ ಪ್ರೀತಿ, ಶಾಂತಿ ನೆಮ್ಮದಿಯೊಂದಿಗೆ ಸಹಾಯ, ಸಹಕಾರ ಸಹಬಾಳ್ವೆಯೊಂದಿಗೆ ಇಡೀ ಮನುಕುಲ ಒಂದು ವಿಶ್ವ ಕುಟುಂಬವಾಗಿ ಜೀವಿಸಲು ಈ ಕ್ರಿಸ್ತ ಜಯಂತಿ ಸರ್ವರಿಗೂ ಸ್ಪೂರ್ತಿ ಹಾಗೂ ಪ್ರೇರಣೆಯಾಗಲಿ ಎಂದು ಹೇಳಿದರು.