ಚಿಕ್ಕಬಳ್ಳಾಪುರ ವಕೀಲರ ಸಂಘದ ಚುನಾವಣೆ
1 min readಚಿಕ್ಕಬಳ್ಳಾಪುರ ವಕೀಲರ ಸಂಘದ ಚುನಾವಣೆ
ಭಾರೀ ಪೈಪೋಟಿ ನಡುವೆ ಮತದಾನ
ನಾನೂರ ಇಪ್ಪತ್ತು ಮತದಾರರು, ೩೫ ಅಭ್ಯರ್ಥಿಗಳು ಕಣದಲ್ಲಿ
ಎರಡು ವರ್ಷಕ್ಕೊಮ್ಮೆ ನಡೆಯುವ ಚಿಕ್ಕಬಳ್ಳಾಪುರ ವಕೀಲರ ಸಂಘದ ಚುನಾವಣೆ ಇಂದು ನಡೆಯಿತು. 420 ಮಂದಿ ಮತದಾರರಿರುವ ಚಿಕ್ಕಬಳ್ಳಾಪುರ ವಕೀಲರ ಸಂಘದಲ್ಲಿ 35 ಮಂದಿ ವಿವಿ ಪದಾಧಿಕಾರಿಗಳ ಹುದ್ದೆಗಳಿಗೆ ಅಭ್ಯರ್ಥಿಗಳಾಗಿ ಕಣದಲ್ಲಿದ್ದಾರೆ. ತೀವ್ರ ಪೈಪೋಟಿ ನಡುವೆ ಮತದಾನ ನಡೆದಿದ್ದು, ಫಲಿತಾಂಶ ಪ್ರಕಟವಾಗಲಿದೆ.
ಚಿಕ್ಕಬಳ್ಳಾಪುರ ವಕೀಲರ ಸಂಘದ ಚುನಾವಣೆ ಇಂದು ಜಿದ್ದಾಜಿದ್ದಿನಿಂದ ನಡೆಯಿತು. 420 ಮಂದಿ ಮತದಾರರಿರುವ ವಕೀಲರ ಸಂಘದಲ್ಲಿ 35 ಮಂದಿ ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಪ್ರಸ್ತುತ ವೀಲರ ಸಂಘದಲ್ಲಿ ಮೂರು ಬಣಗಳು ಏರ್ಪಟ್ಟಿದ್ದು, ವಕೀಲರು ಸಂಘದ ಅಧಿಕಾರ ಹಿಡಿಯಲು ತೀವ್ರ ಕಸರತ್ತು ನಡೆಸಿದ್ದಾರೆ. ಕೆ.ಹೆಚ್. ತಮ್ಮೇಗೌಡ, ಗೋವಿಂದರೆಡ್ಡಿ ಅವರ ಹಿರಿಯರ ಬಣಕ್ಕೆ ಇದೇ ಮೊದಲಬಾರಿಗೆ ಯುವ ವಕೀಲಕರ ಬಣ ಪೈಪೋಟಿ ನೀಡಿರುವುದು ವಿಶೇಷ.
ಯುವ ವಕೀಲರ ತಂಡದಲ್ಲಿ ಕೆ.ವಿ.ಅಬಿಲಾಷ್ ನೇತೃತ್ವದ ಬಣ ತೀವ್ರ ಪೈಪೋಟಿ ನೀಡುತ್ತಿರುವುದಾಗಿ ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಅಧ್ಯಕ್ಷ ಸ್ಥಾನಕ್ಕೆ ಕೆ.ಹೆಚ್. ತಮ್ಮೇಗೌಡ, ಗೋವಿಂದರೆಡ್ಡಿ, ಕೆ.ವಿ. ಅಭಿಲಾಷ್ ಹಾಗೂ ಸ್ವತಂತ್ರ ಅಭ್ಯರ್ಥಿಯಾಗಿ ಆರ್. ಮಟಮಪ್ಪ ಅಭ್ಯರ್ಥಿಗಳಾಗಿದ್ದಾರೆ. ಚಿಕ್ಕಬಳ್ಳಾಪುರ ನ್ಯಾಯಾಲಯ ಆವರಣದಲ್ಲಿ ನಡೆಯುತ್ತಿರುವ ಚುನಾವಣೆ ಬೆಳಗಿನಿಂದಲೇ ಬಿರುಸಿನಿಂದ ಸಾಗಿತು. ನ್ಯಾಯಾಲಯ ಕಲಾಪಗಳನ್ನ ಬದಿಗೊತ್ತಿ ವಕೀಲರು ಚುನಾವಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ವಕೀಲರ ಸಂಘದಲ್ಲಿ ಸದಸ್ಯರಾಗಿ ಒಂದು ವರ್ಷ ಮುಕ್ತಾಯವಾದವರಿಗೆಲ್ಲೆ ಮತದಾನದ ಹಕ್ಕು ನೀಡಲಾಗಿದೆ. ಬಹುತೇಕ ವಕೀಲರು ವೃತ್ತಿ ಮಾಡ್ತಿಲ್ಲ. ಅವರಿಗೆಲ್ಲೆ ಮತದಾನದ ಹಕ್ಕು ನೀಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ನ್ಯಾಯಾಲಯದ ಎಲ್ಲಾ ಪ್ರವೇಶ ದ್ವಾರಗಳನ್ನು ಬಂದ್ ಮಾಡಿ ಒಂದೇ ಪ್ರವೇಶ ದ್ವಾರದಲ್ಲಿ ವಕೀಲರು ಮತ್ತು ವಾಹನಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಕೋರ್ಟ್ ಆವರಣದ ತುಂಬಾ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳ ಫ್ಲೆಕ್ಸ್ಗಳಿಂದ ತುಂಬಿ ತುಳುಕುತ್ತಿದೆ. ಈ ಬಾರಿ ಯುವಕರು ಮತ್ತು ಹಿರಿಯರ ನಡುವೆ ಹಣಾಹಣಿ ನಡೆಯುತ್ತಿದ್ದು, ಗೆಲುವು ಯಾರಿಗೆ ಎಂಬುದನ್ನು ಕಾದು ನೋಡಬೇಕಿದೆ.