ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಗ್ರಹಚಾರ ಸಮೀಪಿಸಿದೆ
1 min readಮುಖ್ಯಮಂತ್ರಿ ಸಿದ್ದರಾಮಯ್ಯಗೆ ಗ್ರಹಚಾರ ಸಮೀಪಿಸಿದೆ
ನೈತಿಕ ಹೊಣೆ ಹೊತ್ತು ಕೂಡಲೇ ರಾಜಿನಾಮೆ ನೀಡಲಿ
ಸಿ ಎಂ ಸಿದ್ದರಾಮಯ್ಯಗೆ ಕಿಂಚತ್ತಾದರೂ ಮಾನ ಮರ್ಯಾದೆ ಇದ್ದರೆ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಲಿ, ಇಲ್ಲವಾದ್ರೆ ರಾಜ್ಯದ್ಯಾಂತ ಮತ್ತೆ ಅತ್ಯುಗ್ರ ಹೋರಾಟ ಎದುರಿಸಬೇಕಾಗುತ್ತದೆ ಎಚ್ಚರ ಎಂದು ಬಿಜೆಪಿ ರಾಜ್ಯ ವಕ್ತಾರ ಎಚ್. ಎನ್. ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದರು.
ಚಿಕ್ಕಬಳ್ಳಾಪುರ ನಗರದ ಜಿಲ್ಲೆ ಪತ್ರಕರ್ತರ `ಭವನದಲ್ಲಿ ಬಿಜೆಪಿ ಮುಖಂಡರು ಸುದ್ದಿಗೋಷ್ಟಿ ನಡೆಸಿ ಸಿಎಂ ಸಿದ್ದರಾಮಯ್ಯ ರಾಜಿನಾಮೆಗೆಒತ್ತಾಯಿಸಿದ್ದಾರೆ. ರಾಜ್ಯ ವಕ್ತಾರ ಹೆಚ್ ಎನ್ ಚಂದ್ರಶೇಖರ್ ಮಾತನಾಡಿ, ನ್ಯಾಯಾಲಯ ರಾಜ್ಯಪಾಲರ ಪ್ರಸಿಕ್ಯೂಷನ್ ಒಪ್ಪಿಕೊಂಡಿದೆ. ಸಿದ್ದರಾಮಯ್ಯರ ಅರ್ಜಿಯನ್ನ ತಿರಸ್ಕರಿಸಿದೆ. ನೈತಿಕ ಹೊಣೆ ಹೊತ್ತು ಕೂಡಲೆ ರಾಜಿನಾಮೆ ನೀಡಿತನಿಖೆ ಎದುರಿಸಿ ಎಂದು ಸವಾಲು ಹಾಕಿದರು.
ನೀವು ಉಳಿದು ಕೊಂಡರುವುದು ಎರಡು ಮೂರು ತಿಂಗಳು ಅಷ್ಟೆ, ಹೈಕೋರ್ಟ್ ನಿಂದ ಸುಪ್ರೀಂ ಕೋರ್ಟ್ ಗೆ ಹೋಗ್ತೀರಾ ಅಧಿಕಾರಕ್ಕೋಸ್ಕರ ಇಷ್ಟೊಂದು ಕೀಳು ಮಟ್ಟಕ್ಕೆ ಇಳಿಯಬೇಡಿ, ನೀವು ಅಧಿಕಾರಕ್ಕೆ ಬಂದು ಒಂದೂವರೆ ವರ್ಷವಾದ್ರು ಈವರೆಗೂ ರಾಜ್ಯದಲ್ಲಿ ಒಂದೆ ಒಂದು ಬಿಡಿಗಾಸು ಅಭಿವೃದ್ದಿಯಾಗಿಲ್ಲ. ಇಡೀ ರಾಜ್ಯ ದಿವಾಳಿ ಎದ್ದಿದೆ, ದಯಮಾಡಿ ರಾಜಿನಾಮೆ ಕೊಟ್ಟು ಸಿಎಂ ಸ್ಥಾನಕ್ಕಿರುವ ಮರ್ಯಾದೆ ಉಳಿಸಿ ಇಲ್ಲಾ0ದ್ರೆ ಜನರೆ ದಂಗೆ ಏಳುವ ಪರಿಸ್ಥಿತಿ ತಂದುಕೊಳ್ಳಬೇಡಿ ಎಂದು ಸಲಹೆ ನೀಡಿದರು. ಮೊದಲೆ ರಾಜಿನಾಮೆ ಕೊಡಿ, ನೀವು ತಪ್ಪಿತಸ್ತರಲ್ಲ ಎಂದು ಸಾಬೀತಾದ ಮೇಲೆ ಮತ್ತೆ ಅದೆ ಸ್ಥಾನಕ್ಕೆ ಬನ್ನಿ, ನಮ್ಮದೇನು ಅಭ್ಯ0ತರವಿಲ್ಲ ನಿಮಗೆ ನೀವೆ ಹೇಳೋ ಬಾಷೆಯಲ್ಲಿ ಹೇಳುಬೇಕು ಅಂದ್ರೆ ನಾಚಿಕೆ ಮಾನ ಮರ್ಯಾದೆ ಇದ್ರೆ ರಾಜಿನಾಮೆ ಕೊಡಿ ಎಂದರು.
ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ, ಪ್ರಧಾನ ಕಾರ್ಯದರ್ಶಿ ಮರಳುಕುಂಟೆಕೃಷ್ಣಮೂರ್ತಿ, ರಾಜ್ಯ ಕಾರ್ಯಾಧ್ಯಕ್ಷ ಕೊಂಡೇನಹಳ್ಳಿ ಮುರುಳಿ, ಎ ವಿ ಬೈರೇಗೌಡ, ರಾಮಾಂಜಿನಪ್ಪ ಹಾಗು ಮಾಧ್ಯಮ ವಕ್ತಾರ ಮದುಚಂದ್ರ ಇದ್ದರು.