ವಸತಿ ಶಾಲೆ ಮಕ್ಕಳಿಗೆ ಊಟದಲ್ಲಿ ಮೋಸ
1 min readವಸತಿ ಶಾಲೆ ಮಕ್ಕಳಿಗೆ ಊಟದಲ್ಲಿ ಮೋಸ ಕವಡೆ ಕಾಸಿಗೆ ಕೈಚಾಚಿ ಅಮಾನತುಗೊಂಡಿದ್ದ ಪ್ರಿನ್ಸಿಪಾಲ್ ಮತ್ತು ವಾರ್ಡನ್
ಸಂಘಟಕರ ಜೊತೆ ವಸತಿ ಶಾಲೆಗೆ ಭೇಟಿ ನೀಡಿದ ಪೋಷಕರು
ವಸತಿ ಶಾಲೆಯಲ್ಲಿ ಮಕ್ಕಳಿಗೆ ಸಮರ್ಪಕ ಊಟ ತಿಂಡಿ ನೀಡದೆ ಅನ್ಯಾಯ ಎಸಗಲಾಗುತ್ತಿದೆ ಎಂದು ಪೋಷಕರು ಆರೋಪಿಸಿದ್ದಾರೆ.
ಕೆಲ ತಿಂಗಳ ಹಿಂದೆ ನಂಜನಗೂಡು ತಾಲೂಕಿನ ಮುಳ್ಳೆ ಗುಡ್ಡದ ಬಳಿ ಇರುವ ಮುರಾರ್ಜಿ ವಸತಿ ಶಾಲೆಯ ಪ್ರಾಂಶುಪಾಲ ಮತ್ತು ವಾರ್ಡನ್ ನಿರ್ಲಕ್ಷ್ಯಕ್ಕೆ ಅದೇ ವಸತಿ ಶಾಲೆಯಲ್ಲಿ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದವರ ಮಗ ವಿದ್ಯುತ್ತಿಗೆ ಸಿಲುಕಿ ಬಲಿಯಾಗಿದ್ದರು.
ಈ ಘಟನೆ ಮಾಸುವ ಮುನ್ನವೇ ಇದೇ ವಸತಿ ಶಾಲೆಯಲ್ಲಿ ಕಂಪ್ಯೂಟರ್ ರಿಪೇರಿ ಮಾಡುತ್ತಿರುವ ಕಾರ್ಮಿಕನಿಂದ ಕಮಿಷನ್ ಹಣಕ್ಕೆ ಕೈಚಾಚಿ ಹಾಲಿ ಪ್ರಿನ್ಸಿಪಾಲ್ ಮಂಜಯ್ಯ ಮತ್ತು ವಾರ್ಡನ್ ಜಕಾತಿ ಲೋಕಾಯುಕ್ತ ಬಲೆಗೆ ಸಿಲುಕಿ ಅಮಾನತುಗೊಂಡಿದ್ದರು.
ವಿದ್ಯುತ್ ಅವಗಡ ಸಂಭವಿಸಿದ ಬಳಿಕ ಪ್ರಿನ್ಸಿಪಾಲ್ ಮಲ್ಲಿಕಾರ್ಜುನ ಮತ್ತು ವಾರ್ಡನ್ ಮಂಜುನಾಥ್ ರನ್ನು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ನಿರ್ದೇಶಕರು ಅಮಾನತುಗೊಳಿಸಿದ್ದರು. ಪ್ರಿನ್ಸಿಪಾಲ್ ಮಂಜಯ್ಯ ಮತ್ತು ವಾರ್ಡನ್ ಜಕಾತಿ ವಸತಿ ಶಾಲೆಯ ಮೆನು ಪ್ರಕಾರ ಮಕ್ಕಳಿಗೆ ಉಟ ನೀಡುತ್ತಿಲ್ಲ ಮಕ್ಕಳ ಹೆಸರಿನಲ್ಲಿ ಮೋಸ ಮಾಡುತ್ತಿದ್ದಾರೆ ಎಂದು ಪೋಷಕರು ಗಂಭೀರ ಆರೋಪ ಮಾಡಿದ್ದಾರೆ.
ಗುರುವಾರ ಸಂಘಟಕರ ಜೊತೆಗೋಡಿ ವಸತಿ ಶಾಲೆಗೆ ಭೇಟಿ ನೀಡಿ ಪ್ರಿನ್ಸಿಪಾಲ್ ಮತ್ತು ವಾರ್ಡನ್ ದುರ್ವರ್ತನೆ ನೋಡಿ ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ವಾರ್ಡನ್ ಮತ್ತು ಪ್ರಿನ್ಸಿಪಾಲ್ ಹಾಗೂ ಅಡುಗೆ ಸಹಾಯಕರನ್ನು ವರ್ಗಾವಣೆಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ವಸತಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಪೋಷಕರು ಸಾಕಷ್ಟು ಬಾರಿ ಕಳಪೆ ಊಟ ನೀಡುತ್ತಿರುವ ಬಗ್ಗೆ ಪ್ರಿನ್ಸಿಪಾಲ್ ಮತ್ತು ವಾರ್ಡನ್ ಜೊತೆ ಮಾತುಕತೆ ಆಡಿದ್ದಾರೆ ಆದರೂ ಮಕ್ಕಳ ಅನ್ನದ ಹೆಸರಿನಲ್ಲಿ ಮೋಸ ಮಾಡುತ್ತಿರುವ ವಸತಿ ಶಾಲೆಯ ಪ್ರಿನ್ಸಿಪಾಲ್ ಮತ್ತು ವಾರ್ಡನ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಪಡಿಸಿದ್ದಾರೆ.
ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದಲ್ಲಿ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಸಂಘಟಕರು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ನಿರ್ದರ್ಶಕರಿಗೆ ಎಚ್ಚರಿಸಿದ್ದಾರೆ.