ಚೌಡಪ್ಪ, ರಘು, ಶಿವ ಅಕ್ರಮಗಳ ತನಿಖೆಗೆ ಆಗ್ರಹ
1 min readಚೌಡಪ್ಪ, ರಘು, ಶಿವ ಅಕ್ರಮಗಳ ತನಿಖೆಗೆ ಆಗ್ರಹ
ಬಾಗೇಪಲ್ಲಿ ತಾಲೂಕಿನ ಪಾತಪಾಳ್ಯದ ಗ್ರಾಮಸ್ಥರ ವಿರುದ್ಧ ಆರೋಪ
ಅಂಕಾಲಮೊಡಗು ಭಾಸ್ಕರ್ ಅವರಿಂದ ಒತ್ತಾಯ
ಪಾತಪಾಳ್ಯ ಗ್ರಾಮದ ಎ.ಆರ್.ಚೌಡಪ್ಪ ಮತ್ತು ಅವರ ಮಕ್ಕಳಾದ ಶಿವ, ರಘು ಎಂಬುವರ ಅಕ್ರಮಗಳ ವಿರುದ್ಧ ದೂರು ನೀಡಿದರೂ ಪ್ರಕರಣ ದಾಖಲಿಸದ ಬಟ್ಲಹಳ್ಳಿ ಠಾಣೆ ಪೊಲೀಸರ ಕ್ರಮ ಖಂಡಿಸಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡುವುದಾಗಿ ಸಮಾಜ ಸೇವಕ ಅಂಕಾಲಮೊಡಗು ಭಾಸ್ಕರ್ ಹೇಳಿದರು.
ಚಿಕ್ಕಬಳ್ಳಾಪುರ ನಗರದ ಪತ್ರಕರ್ತರ ಭವನದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಾಜ ಸೇವಕ ಅಂಕಾಲ ಮಡಗು ಭಾಸ್ಕರ್, ಅಕ್ಟೋಬರ್ 28ರಂದು ಬಟ್ಲಹಳ್ಳ್ಳಿ ಪೊಲೀಸ್ ಠಾಣೆಯಲ್ಲಿ ಪಾತಪಾಳ್ಯ ಗ್ರಾಮದ ಎ.ಆರ್. ಚೌಡಪ್ಪ ಮತ್ತು ಅವರ ಮಕ್ಕಳಾದ ಶಿವ, ರಘು ಎಂಬುವರ ಅಕ್ರಮಗಳ ವಿರುದ್ಧ ದೂರು ನೀಡಿದ್ದು, ಈ ಸಂಬ0ಧ ಠಾಣಾಧಿಕಾರಿಗಳಿಗೆ ಪೋನ್ ಮೂಲಕ ಮಾಹಿತಿ ನೀಡಿದರೂ ಅಲ್ಲಿಗೆ ಬರದೆ, ರೈಟರ್‌ಗೆ ದೂರು ಸ್ವೀಕರಿಸಲು ಹೇಳದೆ ಕಾಲಹರಣ ಮಾಡಿದ್ದಾರೆ. ಅಲ್ಲದೆ ದೂರುದಾರನಾದ ತಮ್ಮನ್ನು ಅನುಮಾನದಿಂದ ನೋಡುವ ಮೂಲಕ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿದರು.
ತಾವು ನೀಡಿದ ದೂರಿನಲ್ಲಿ 54 ಅಂಶಗಳಿದ್ದು, ಇವು ಈ ವ್ಯಕ್ತಿಗಳ ಕ್ರಿಮಿನಲ್ ಕೆಲಸವನ್ನು ಜಗಜ್ಜಾಹೀರು ಮಾಡುತ್ತವೆ. ಈ ಕುಟುಂಬ ಮಾಡುವ ಎಲ್ಲಾ ಅಕ್ರಮಗಳ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ ಸುಧಾಕರ್ ಅವರ ಆಶೀರ್ವಾದವಿದೆ ಎಂದು ಹೇಳಿಕೊಂಡು ಓಡಾಡುತ್ತಿರುವುದರಿಂದಲೇ ಯಾರೂ ಇವರ ಕರ್ಮಕಾಂಡದ ವಿರುದ್ದ ತಿರುಗಿ ಬಿದ್ದಿಲ್ಲ, ದೂರುಕೊಡುವ ದೈರ್ಯವನ್ನೂ ಮಾಡಿಲ್ಲ. ನಾನು ನನ್ನ ಕುಟುಂಬ ಸಮಾಜಕ್ಕಾಗಿ ಏನಾದರೂ ಕೊಡುಗೆ ಕೊಡಬೇಕು, ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬೇಕು ಎಂದು ಶ್ರಮಿಸುತ್ತಿರುವ ಕುಟುಂಬವಾದ ಕಾರಣ, ಇವರ ಅಕ್ರಮಗಳನ್ನು ದಾಖಲೆ ಸಮೇತ ಬಹಿರಂಗ ಮಾಡಲು ಮಾಧ್ಯಮದ ಮುಂದೆ ಬಂದಿದ್ದೇನೆ. ಈವಿಚಾರದಲ್ಲಿ ನನಗೆ ಮತ್ತು ನಮ್ಮ ಕುಟುಂಬಕ್ಕೆ ಜೀವಬೆದರಿಕೆಯಿದೆ. ನಮಗೇನಾದರೂ ಆದರೆ ಅದಕ್ಕೆ ಚೌಡಪ್ಪ ಕುಟುಂಬವೇ ಕಾರಣ ಎಂದು ಹೇಳಿದರು.