ಮಹಾಕಾಳಿ ದೇವಾಲಯದ ಚತುರ್ಧಶ ವಾರ್ಷಿಕೋತ್ಸವ
1 min readಮಹಾಕಾಳಿ ದೇವಾಲಯದ ಚತುರ್ಧಶ ವಾರ್ಷಿಕೋತ್ಸವ
ಮಹಾಕಾಳಿ ದೇಗುಲದ ಪಂಚಮ ಕಲ್ಯಾಣೋತ್ಸವ ಆರಂಭ
ಒoದು ವಾರದ ಕಾಲ ನಡೆಯಲಿರುವ ಧಾರ್ಮಿಕ ಕಾರ್ಯಕ್ರಮಗಳು
ಚಿಕ್ಕಬಳ್ಳಾಪುರ ನಗರದ ಮಹಾಕಾಳಿ ರಸ್ತೆಯಲ್ಲಿರುವ ಮಹಾಕಾಳಿ ಅಮ್ಮನವರ ದೇವಾಲಯದ ಚತುರ್ಧಶ ವಾರ್ಷಿಕೋತ್ಸವ ಮತ್ತು ಪಂಚಮ ಕಲ್ಯಾಣೋತ್ಸವ ಕಾರ್ಯಕ್ರಮಗಳು ಇಂದಿನಿoದ ಅದ್ಧೂರಿಯಾಗಿ ಆರಂಭವಾದವು. ಇಂದು ಆರಂಭವಾದ ದೇವಾಲಯ ಧಾರ್ಮಿಕ ಕಾರ್ಯಕ್ರಮಗಳು ಸತತವಾಗಿ ಜುಲೈ 20 ರವರೆಗೂ ನಡೆಯಲಿದೆ.
ಚಿಕ್ಕಬಳ್ಳಾಪುರ ನಗರದ ಮಹಾಕಾಳಿ ರಸ್ತೆಯಲ್ಲಿರುವ ಮಹಾಕಾಳಿ ಅಮ್ಮನವರ ದೇವಾಲಯದ ಚತುರ್ಧಶ ವಾರ್ಷಿಕೋತ್ಸವ ಮತ್ತು ಪಂಚಮ ಕಲ್ಯಾಣೋತ್ಸವ ಕಾರ್ಯಕ್ರಮಗಳು ಇಂದಿನಿoದ ಅದ್ಧೂರಿಯಾಗಿ ಆರಂಭವಾದವು. ಇಂದು ಆರಂಭವಾದ ದೇವಾಲಯ ಧಾರ್ಮಿಕ ಕಾರ್ಯಕ್ರಮಗಳು ಸತತವಾಗಿ ಜುಲೈ 20 ರವರೆಗೂ ನಡೆಯಲಿದೆ. ಲೋಕ ಕಲ್ಯಾಣಾರ್ಥವಾಗಿ ಮಹಾಕಾಳಿ ಸನ್ನಿಧಿಯಲ್ಲಿ ನಿವಾರಣೆ, ವಾಮಾಚಾರ ದೋಷ ಪರಿಹಾರ, ದುಷ್ಟಗ್ರಹ ಪೀಡೆ ಪರಿಹಾರ, ಅಭಿಚಾರ ದೋಷ ಪರಿಹಾರ ಸೇರಿದಂತೆ ವಿವಿಧ ಹೋಮ ಮತ್ತು ಹವನಗಳು ನಡೆಯಲಿವೆ.
ಅಲ್ಲದೆ ಗಿರಿಜಾ ಕಲ್ಯಾಣೋತ್ಸವ ಸುಬ್ರಹ್ಮಣ್ಯೇಶ್ವರ ಕಲ್ಯಾಣೋತ್ಸವ, ಸೀತಾರಾಮ ಕಲ್ಯಾಣೋತ್ಸವ, ಲಕ್ಷ್ಮೀ ವೆಂಕಟರಮಣ ಸ್ವಾಮಿ ಕಲ್ಯಾಣೋತ್ಸವ, ಲಕ್ಷ್ಮೀ ನರಸಿಂಹಸ್ವಾಮಿ ಕಲ್ಯಾಣೋತ್ಸವಗಳು ಪ್ರತಿನಿತ್ಯ ನಡೆಯಲಿವೆ. ಜೊತೆಗೆ ಪ್ರತಿ ದಿನ ಬೆಳಗ್ಗೆ ಮಹಾಕಾಳಿ ಅಮ್ಮನವರಿಗೆ ವಿಶೇಷ ಪಂಚಾಮೃತ ಅಭಿಷೇಕ, ವಿಶೇಷ ಹೂವಿನ ಅಲಂಕಾರ, ಪೂಜೆ, ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ.
ಇಂದು ಬೆಳಗ್ಗೆ ಮಹಾಕಾಳಿ ಅಮ್ಮನವರಿಗೆ ವಿಶೇಷ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರದ ಜೊತೆಗೆ ಗಿರಿಜಾ ಕಲ್ಯಾಣೋತ್ಸವ ನಡೆಯಿತು. ಜುಲೈ 16ರಂದು ಸುಬ್ರಹ್ಮಣ್ಯೇಶ್ವರ ಸ್ವಾಮಿ ಕಲ್ಯಾಣೋತ್ಸವ, 17ರಂದು ಸೀತಾರಾಮ ಕಲ್ಯಾಣೋತ್ಸವ, 18 ರಂದು ಲಕ್ಷ್ಮೀವೆಂಕಟೇಶ್ವರ ಸ್ವಾಮಿ ಕಲ್ಯಾಣೋತ್ಸವ, 19 ರಂದು ಲಕ್ಷ್ಮೀ ನರಸಿಂಹಸ್ವಾಮಿ ಕಲ್ಯಾಣೋತ್ಸವ ನಡೆಯಲಿದೆ. 20 ರಂದು ಶನಿವಾರ ಬೆಂಗಳೂರಿನ ಪ್ರಸಿದ್ಧ ರವಿಶಂಕರ್ ತಂಡದಿoದ ತಮಟೆ ವಾದ್ಯ, ಡೊಳ್ಳು ಕುಣಿತ, ವೀರಗಾಸೆ, ಸೇರಿದಂತೆ ವಿವಿಧ ಜಾನಪದ ಕಲಾ ಮೇಳಗಳು ಪ್ರದರ್ಶನ ನಡೀಲಿವೆ.