ಸಮತಾ ಸೈನಿಕ ದಳದ ಶತಮಾನೋತ್ಸವ ಸಂಭ್ರಮ
1 min read
ಸಮತಾ ಸೈನಿಕ ದಳದ ಶತಮಾನೋತ್ಸವ ಸಂಭ್ರಮ
ಚಿಕ್ಕಬಳ್ಳಾಪುರದಲ್ಲಿ ವಿನೂತನ ಕಾರ್ಯಕ್ರಮಗಳು
ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಚಿಂತನೆಗಳಿ0ದ ಪ್ರೇರಿತವಾಗಿ ಸ್ಥಾಪಿತವಾದ ಸಮತಾ ಸೈನಿಕ ದಳ ನೂರು ವರ್ಷ ಪೂರೈಸಿದ ಸಂತಸ ದೇಶಾದ್ಯಂತ 100 ಸ್ಥಳಗಳಲ್ಲಿ ವಿಜೃಂಭಣೆಯಿAದ ಆಚರಿಸುತ್ತಿದ್ದು, ಇಂದು ಚಿಕ್ಕಬಳ್ಳಾಪುರ ನಗರದಲ್ಲಿಯೂ 100ನೇ ವರ್ಷದ ಸಂಭ್ರಮಾಚರಣೆ ಅದ್ದೂರಿಯಾಗಿ ಆಚರಿಸಾಗುತ್ತಿದೆ.
ಚಿಕ್ಕಬಳ್ಳಾಪುರ ನಗರದ ಅಂಬೇಡ್ಕರ್ ಭವನದಿಂದ ಒಕ್ಕಲಿಗರ ಕಲ್ಯಾಣ ಮಂಟಪದವರೆಗೂ ಅಂಬೇಡ್ಕರ್ ಇರುವ ಫಲ್ಲಕ್ಕಿಗಳೊಂದಿಗೆ ಡೊಳ್ಳು ಕುಣಿತ, ವೀರಗಾಸೆ, ಬೊಂಬೆಯಾಟ, ತಮಟೆ ವಾದ್ಯಗಳೊಂದಿಗೆ ಪಟಾಕಿ ಸಿಡಿಸುತ್ತಾ ಅಂಬೇಡ್ಕರ್ ಅವರಿಗೆ ಜೈಕಾರ ಕೂಗುತ್ತಾ ಅದ್ದೂರಿ ಮೆರವಣಿಗೆ ಸಾಗಿದ್ದು ಎಲ್ಲರನ್ನು ಆಕರ್ಷಿಸಿತು. ಚಿಕ್ಕಬಳ್ಳಾಪುರದಲ್ಲಿ ಸಮತಾ ಸೈನಿಕ ದಳದಿಂದ ನೂರು ವರ್ಷಗಳ ಸಂಭ್ರಮಾಚರಣೆ ಅದ್ಧೂರಿಯಾಗಿ ನಡೆಯುತ್ತಿದೆ.
ಸಂವಿಧಾನ ಸಮರ್ಪಣೆಯಾಗಿ 75 ವರ್ಷ ಹಾಗೂ ಸಮತ ಸೈನಿಕ ದಳ ಸ್ಥಾಪನೆಯಾಗಿ, ೧೦೦ ವರ್ಷಗಳು ಕಳೆದಿದ್ದು, ಈ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ವೇದಿಕೆ ಕಾರ್ಯಕ್ರಮದಲ್ಲಿ ರಾಜ್ಯದ ಪ್ರಮುಖ ನಾಯಕರು, ವಿವಿಧ ರಾಜ್ಯಗಳಿಂದ ಬರುವ ಗಣ್ಯಾತಿಗಣ್ಯರು, ಸಂವಿಧಾನ ತಜ್ಞರು ಹಾಗೂ ಬುದ್ಧಿಜೀವಿಗಳು ಭಾಗವಹಿಸುತ್ತಿದ್ದು, ಅಂಬೇಡ್ಕರ್ ಹಾಗೂ ಸಮತ ಸೈನಿಕ ದಳದ ಕುರಿತು ಮಾಹಿತಿ ನೀಡಲಿದ್ದಾರೆ ಎಂದು ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ವೆಂಕಟರಮಣಪ್ಪ ಮಾಹಿತಿ ನೀಡಿದ್ದಾರೆ.