ಮಹಿಳಾ ದಸರಾದಲ್ಲಿ ಮಹಿಳಾಮಣಿಗಳ ಸಂಭ್ರಮ
1 min read
ಮಹಿಳಾ ದಸರಾದಲ್ಲಿ ಮಹಿಳಾಮಣಿಗಳ ಸಂಭ್ರಮ
ಮಹಿಳೆಯರಿಗಾಗಿಯೇ ವಿವಿಧ ಕ್ರೀಡೆಗಳ ಆಯೋಜನೆ
ನಾಡಡಹಬ್ಬ ಮೈಸೂರು ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ದಸರಾ ಉಪ ಸಮಿತಿಯಿಂದ ಮೈಸೂರಿನ ಜೆಕೆ ಗ್ರೌಂಡ್ ಮೈದಾನದಲ್ಲಿ ಮಹಿಳಾ ದಸರಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ವಿಶ್ವ ಪ್ರಸಿದ್ಧ ಮೈಸೂರು ದಸರಾದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಬಸವರಾಜು ನೇತೃತ್ವದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮೂಢನಂಬಿಕೆಗಳ ಕುರಿತು ಆಚರಣೆಗಳ ಬಗ್ಗೆ ನೈಜತೆಯನ್ನು ಪರಿಚಯಿಸಲು ಡಾ. ಹುಲಿಕಲ್ ನಟರಾಜ್ ಅವರಿಂದ ಪ್ರಾತ್ಯಕ್ಷಿಕತೆ ನಡೆಸಲಾಯಿತು. ಬಿಳಿಗೆರೆ ಮತ್ತು ನಂಜನಗೂಡು ತಾಲ್ಲೂಕಿನ ಮಹಿಳೆಯರಿಂದ ಜಾನಪದ ನೃತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮಹಿಳೆಯರಿಗೆ ಮೆಮೊರಿ ಟೆಸ್ಟ್ ಗೇಮ್, ಬಲೂನ್, ಕುಂಟೆಬಿಲ್ಲೆ , ಹಗ್ಗ ಜಗ್ಗಾಟ ಸೇರಿದಂತೆ ವಿವಿಧ ಮನೋರಂಜನ ಆಟಗಳನ್ನು ಏರ್ಪಡಿಸಲಾಗಿತ್ತು. ಇನ್ನು ಇತ್ತೀಚಿನ ದಿನಗಳಲ್ಲಿ ಮಕ್ಕಳ ಮೇಲೆ ಪರಿಣಾಮ ಬೀರಿರುವ ಮೊಬೈಲ್ ಗೀಳನ್ನು ತಪ್ಪಿಸಲು ಗಟ್ಟವಾಡಿ ಚೆಲುವಮ್ಮ ಮತ್ತು ಮಹೇಶ್ವರಿ ತಂಡದಿAದ ವಿನೂತನವಾದ ನಾಟಕ ಪ್ರದರ್ಶನ ಮಾಡಲಾಯಿತು. ನಾಟಕ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಈ ಸಂದರ್ಭದಲ್ಲಿ ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿ ಭವ್ಯಶ್ರೀ, ಮಂಜುಳಾ, ಮಹಿಳಾ ಮಕ್ಕಳ ಹಕ್ಕುಗಳ ಹೋರಾಟಗಾರ್ತಿ ಸಾವಿತ್ರಿ ಮಜುಂದಾರ, ಪ್ರೊ. ಎಸ್ ಎಸ್ ಮಾಲಿನಿ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಮಹಿಳೆಯರು ಭಾಗವಹಿಸಿದ್ದರು.