ಜಾತಿ ವ್ಯವಸ್ಥೆ ಯಾವುದೇ ದೇವರು ಸೃಷ್ಟಿಸಿದ್ದಲ್ಲ
1 min readಜಾತಿ ವ್ಯವಸ್ಥೆ ಯಾವುದೇ ದೇವರು ಸೃಷ್ಟಿಸಿದ್ದಲ್ಲ
ತಮ್ಮ ಸ್ವಾರ್ಥಕ್ಕಾಗಿ ಕೆಲ ಮನುಷ್ಯರೇ ಸೃಷ್ಟಿಸಿದ್ದು
ಅಂಬೇಡ್ಕರ್ ಜಯಂತಿಯಲ್ಲಿ ಸಿಎಂ ಸಿದ್ದರಾಮಯ್ಯ
ಬ್ರಿಟೀಷರಿಂದ ಬಿಡುಗಡೆಗೊಂಡು ರಾಜಕೀಯವಾಗಿ ಸ್ವತಂತ್ರಗೊoಡಿದ್ದ ಶೋಷಿತ ಸಮುದಾಯಗಳ ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ ಕೊಡಿಸಲು ಅಂಬೇಡ್ಕರ್ ಹೋರಾಟ ಮುಂದುವರೆಸಿದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬ್ರಿಟೀಷರಿಂದ ಬಿಡುಗಡೆಗೊಂಡು ರಾಜಕೀಯವಾಗಿ ಸ್ವತಂತ್ರಗೊoಡಿದ್ದ ಶೋಷಿತ ಸಮುದಾಯಗಳ ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ ಕೊಡಿಸಲು ಅಂಬೇಡ್ಕರ್ ಹೋರಾಟ ಮುಂದುವರೆಸಿದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ನಂಜನಗೂಡಿನಲ್ಲಿ ದಲಿತ ಮತ್ತು ಸಾಮಾಜಿಕ ಹೋರಾಟಗಾರರು ಆಯೋಜಿಸಿದ್ದ ಅಂಬೇಡ್ಕರ್ ಜಯಂತಿ ಮತ್ತು ನಮ್ಮ ನಡಿಗೆ ಸಂವಿಧಾನದ ಕಡೆಗೆ ಅಭಿಯಾನ ಉದ್ಘಾಟಿಸಿ ಪ್ರತಿಧಾನ್ವಿತ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಿಸಿ ಅವರು ಮಾತನಾಡಿದರು.
ಮನುಷ್ಯ ತಾರತಮ್ಯ ಆಚರಿಸುವ ಚಾತುರ್ವರ್ಣ ಮತ್ತು ಜಾತಿ ವ್ಯವಸ್ಥೆಯನ್ನು ದೇವರು ಸೃಷ್ಟಿಸಿದ್ದಲ್ಲ. ತಮ್ಮ ಸ್ವಾರ್ಥಕ್ಕಾಗಿ ಕೆಲ ಮನುಷ್ಯರೇ ಸೃಷ್ಟಿಸಿದ್ದು. ಈ ತಾರತಮ್ಯವನ್ನು ಅಳಿಸುವುದೇ ಅಂಬೇಡ್ಕರ್ ಅವರ ಹೋರಾಟದ ಉದ್ದೇಶವಾಗಿತ್ತು. ಈ ಉದ್ದೇಶಕ್ಕಾಗಿ ಹೋರಾಟ ಮುಂದುವರೆಸುವುದೇ ನಾವು ಅಂಬೇಡ್ಕರ್ ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದರು. ಅಂಬೇಡ್ಕರ್ ಅವರು ಈ ರೀತಿಯ ಸಂವಿಧಾನ ಕೊಡದಿದ್ದರೆ ನಾನು ಮುಖ್ಯಮಂತ್ರಿ ಆಗಲು ಸಾಧ್ಯವೇ ಆಗುತ್ತಿರಲಿಲ್ಲ. ನರೇಂದ್ರ ಮೋದಿಯವರು ಪ್ರಧಾನಿ ಆಗಲು ಸಾಧ್ಯವಾಗುತ್ತಿರಲಿಲ್ಲ ಎಂದರು.
ಅoಬೇಡ್ಕರ್ ಅವರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಪ್ರತಿಯೊಬ್ಬರೂ ಸ್ವಾಭಿಮಾನದಿಂದ ನಡೆದುಕೊಳ್ಳಬೇಕು. ಸಾವಿರಾರು ವರ್ಷಗಳ ಅಕ್ಷರ ಸಂಸ್ಕೃತಿಯಿoದ ವಂಚಿತರಾಗಿದ್ದ ಶೂದ್ರ, ದಲಿತರು ಮತ್ತು ಮಹಿಳೆಯರಿಗೆ ಅಂಬೇಡ್ಕರ್ ಅವರ ಸಂವಿಧಾನ ಶಿಕ್ಷಣದ ಹಕ್ಕನ್ನು ಒದಗಿಸಿಕೊಟ್ಟಿತು. ಅದಕ್ಕೂ ಮೊದಲು ಮೇಲು ಜಾತಿಯ ಮಹಿಳೆಯರಿಗೂ ಶಿಕ್ಷಣ ಕಲಿಯುವ ಅವಕಾಶ ಇರಲಿಲ್ಲ ಎಂದರು. ಈ ಇತಿಹಾಸವನ್ನು ಪ್ರತಿಯೊಬ್ಬರೂ ತಿಳಿಯಬೇಕು. ಯಾರಿಗೆ ಇತಿಹಾಸ ಗೊತ್ತಿರುವುದಿಲ್ಲವೋ ಅವರು ಭವಿಷ್ಯವನ್ನೂ ರೂಪಿಸಲಾರರು ಎನ್ನುವ ಅಂಬೇಡ್ಕರ್ ಅವರ ಮಾತನ್ನು ಪ್ರಸ್ತಾಪಿಸಿದರು.
ಗುತ್ತಿಗೆಯಲ್ಲಿ ದಲಿತ ಸಮುದಾಯಕ್ಕೆ ಮೀಸಲಾತಿ ತಂದಿದ್ದು, ದಲಿತ ಜನಸಂಖ್ಯೆ ಅನುಪಾತಕ್ಕೆ ಅನುಗುಣವಾಗಿ ಅಭಿವೃದ್ಧಿ ಆಯವ್ಯಯದಲ್ಲಿ ಹಣ ದಲಿತರ ಅಭಿವೃದ್ಧಿಗೆ ಮೀಸಲಿಟ್ಟು ಕಾಯ್ದೆ ಮಾಡಿರುವುದು ಕರ್ನಾಟಕ ಕಾಂಗ್ರೆಸ್ ಸರ್ಕಾರ ಮಾತ್ರ. ಬಿಜೆಪಿ ಅಧಿಕಾರದಲ್ಲಿರುವ ಯಾವ ರಾಜ್ಯಗಳಲ್ಲೂ ಇದು ಜಾರಿಯಲ್ಲಿಲ್ಲ ಎಂದರು. ಸಂವಿಧಾನ ಬದಲಾವಣೆಯ ಕೂಗನ್ನು ಕೆಲವರು ಹಾಕುತ್ತಿದ್ದಾರೆ. ಸಂವಿಧಾನ ಬದಲಾದರೆ ನಂತರದ ಧಾರುಣ ಬದುಕನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಇದಕ್ಕೆ ನಾವು ಅವಕಾಶ ಕೊಡುವುದಿಲ್ಲ ಎಂದರು. ಸಚಿವ ಹೆಚ್.ಸಿ.ಮಹದೇವಪ್ಪ, ಶಾಸಕ ದರ್ಶನ್ ದ್ರುವನಾರಾಯಣ್ ಸೇರಿ ಜಿಲ್ಲೆಯ ಶಾಸಕರು, ವಿಧಾನ ಪರಿಷತ್ ಸದಸ್ಯರು ಉಪಸ್ಥಿತರಿದ್ದರು.