ಸ್ಪರ್ಧಿಗಳು ಯಾವಾಗ ಬೇಕಾದ್ರೂ ಬಿಗ್ ಬಾಸ್ ಮನೆ ಬಿಟ್ಟು ಹೋಗಬಹುದೇ? ಷರತ್ತು ಕೇಳಿ
1 min readಕಲರ್ಸ್ ಕನ್ನಡದ ರಿಯಾಲಿಟಿ ಶೋ ಬಿಗ್ ಬಾಸ್‌ನಲ್ಲಿ ಶನಿವಾರ, ಭಾನುವಾರ ಕಿಚ್ಚನ ಪಂಚಾಯಿತಿ ನಡೆಯುತ್ತಿದೆ. ಈ ಬಾರಿ ಈ ಪಂಚಾಯಿತಿ ಭಾರಿ ಕುತೂಹಲ ಮೂಡಿಸಿದೆ. ಅದಕ್ಕೆ ಕಾರಣ ಭಾನುವಾರ (ನವೆಂಬರ್ 12) ರಂದು ಬಿಡುಗಡೆಯಾಗಿರುವ ಪ್ರೋಮೊ. ಇದರಲ್ಲಿ ಸೇಫ್ ಆಗಿರುವ ವರ್ತೂರು ಸಂತೋಷ್ ಮನೆ ಬಿಟ್ಟು ಹೋಗುವ ವಿಚಾರ ಮಾತನಾಡಿದ್ದಾರೆ.
ಕಿಚ್ಚನ ಪಂಚಾಯಿತಿಯ ಭಾನುವಾರ ಈ ಬಾರಿ ಮನೆ ಬಿಟ್ಟು ಹೋಗುವವರು ಯಾರು ಎಂಬುದು ತಿಳಿಯುತ್ತದೆ. ಈ ಬಾರಿ ಏಳು ಮಂದಿ ಎಲಿಮಿನೇಷನ್‌ಗೆ ನಾಮಿನೇಟ್ ಆಗಿದ್ದರು. ಅದರಲ್ಲಿ ತುಕಾಲಿ ಸಂತೂಷ್, ಕಾರ್ತಿಕ್ ಮಹೇಶ್ ಮತ್ತು ನಮ್ರತಾ ಸೇಫ್ ಆಗಿದ್ದು, ನೀತು, ವರ್ತೂರ್ ಸಂತೋಷ್, ಸ್ನೇಹಿತ್ ಗೌಡ ಮತ್ತು ಇಶಾನಿ ಇನ್ನೂ ಡೇಂಜರ್ ಝೋನ್‌ನಲ್ಲಿ ಇದ್ದರು. ಪ್ರೋಮೋ ಪ್ರಕಾರ ವರ್ತೂರು ಸೇಫ್ ಆಗಿದ್ದಾರೆ. ಇಂತ ಸಮಯದಲ್ಲಿ ವರ್ತೂರು ಸಂತೋಷ್ ಮನೆ ಬಿಟ್ಟು ಹೋಗಲು ರೆಡಿಯಾಗಿದ್ದು, ಕಿಚ್ಚನ ಮುಂದೆ ಮನವಿ ಮಾಡಿದ್ದಾರೆ. ಹಾಗಾದ್ರೆ ದೊಡ್ಮನೆಯಿಂದ ಅಷ್ಟು ಸಲೀಲಾಗಿ ವಾಪಸ್ ಬರುವುದು ಸಾಧ್ಯವೆ ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ. ಅದಕ್ಕೆ ಉತ್ತರ ಕಂಡು ಹಿಡಿಯುವ ಕೆಲಸ ಇಲ್ಲಿದೆ.
ಬಿಗ್ ಬಾಸ್ ಮನೆಗೆ ಹೋಗುವ ಮೊದಲು ಒಪ್ಪಂದ
ಬಿಗ್ ಬಾಸ್ ಮನೆಗೆ ಯಾರು ಯಾರನ್ನೋ ಸುಮ್ಮನೆ ಕರೆಸಿಕೊಳ್ಳುವುದಿಲ್ಲ. ಅದಕ್ಕೆ ಒಂದು ನಿಯಮಗಳಿವೆ. ಸ್ಪರ್ಧಿಗಳ ಜೊತೆಗೆ ಒಪ್ಪಂದ ಮಾಡಿಕೊಳ್ಳಲಾಗುತ್ತದೆ. ಒಪ್ಪಂದ ಉಲ್ಲಂಘನೆಯಾದರೇ ಅದಕ್ಕೆ ದಂಡ ಮತ್ತು ಇತರ ನಿಯಮಗಳು ಇವೆ. ಇಲ್ಲಿ ಮುಖ್ಯವಾಗಿ ಐದು ಒಪ್ಪಂದಗಳ ಬಗ್ಗೆ ತಿಳಿಸಲಾಗಿದೆ. ಮನೆಯನ್ನು ಪ್ರವೇಶಿಸುವ ಮೊದಲು, ಎಲ್ಲಾ ಸ್ಪರ್ಧಿಗಳು ಕಲರ್ಸ್ ಚಾನಲ್‌ನೊಂದಿಗೆ ಸುಮಾರು 120-ಪುಟಗಳ ದೀರ್ಘ ಒಪ್ಪಂದಕ್ಕೆ ಸಹಿ ಮಾಡಬೇಕಾಗುತ್ತದೆ.
BBK 10: ಮನೆಯಿಂದ ಹೊರ ಕಳಿಸಿ ಎಂದು ಕಣ್ಣೀರಿಟ್ಟ ವರ್ತೂರು.. ” ಬ್ರೋ ಹೊರಗೆ ಬರ್ಬೇಡಿ” ಎಂದ ನೆಟ್ಟಿಗರು
1. ಮನೆಗೆ ಹೋಗಲು ಕನ್ಫರ್ಮ್ ಆದ ಬಿಗ್ ಬಾಸ್ ಸ್ಪರ್ಧಿಗಳ ಹೆಸರನ್ನು ಕೊನೆಯ ಕ್ಷಣದವರೆಗೂ ಯಾರಿಗೂ ತಿಳಿಸುವಂತಿಲ್ಲ. ದೊಡ್ಮನೆ ಪ್ರವೇಶಿಸುವ ಮುನ್ನ ಸ್ಪರ್ಧಿಗಳು ತಾವು ದೃಢಪಟ್ಟಿದ್ದೇವೆ ಎಂಬುದನ್ನು ಬಹಿರಂಗಪಡಿಸುವಂತಿಲ್ಲ. ಹಾಗೆ ಮಾಡಿದರೆ ಅವರು ತಮ್ಮ ಎಲ್ಲಾ ಹಣವನ್ನು ಕಳೆದುಕೊಳ್ಳುತ್ತಾರೆ.
2. ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಸ್ಪರ್ಧಿ ಗಳಿಸಿದ ಮೊತ್ತವು ಅವರು ಎಲಿಮಿನೇಟ್ ಆದ ತಕ್ಷಣ ಅವರ ಖಾತೆಗೆ ಬರುವುದಿಲ್ಲ. ಅದರ ಹಿಂದೆ ದೊಡ್ಡ ಪ್ರಕ್ರಿಯೆ ಇದೆ. ಎಲ್ಲಾ ರೀತಿಯ ತೆರಿಗೆಗಳನ್ನು ಕಡಿತಗೊಳಿಸಿದ ನಂತರವೇ ಸ್ವರ್ಧಿಗಳು ಹಣವನ್ನು ಸ್ವೀಕರಿಸುತ್ತಾರೆ.
3. ಯಾವುದೇ ಸ್ಪರ್ಧಿಗೆ ಏನಾದರೂ ಆರೋಗ್ಯ ಸಮಸ್ಯೆಗಳು ಇದ್ದರೇ ಮೊದಲೇ ಕಾರ್ಯಕ್ರಮ ತಂಡಕ್ಕೆ ಮಾಹಿತಿ ನೀಡಿರಬೇಕು. ವೈದ್ಯರ ಪ್ರಿಸ್ಕ್ರಿಪ್ಷನ್ ಆಧಾರದ ಮೇಲೆ ಮಾತ್ರ ಔಷಧಿಗಳನ್ನು ತೆಗೆದುಕೊಂಡು ಹೋಗಲು ಅವರಿಗೆ ಅನುಮತಿ ಇದೆ. ಎಲ್ಲಾ ಸ್ಪರ್ಧಿಗಳು ಫಿಟ್‌ನೆಸ್ ಪ್ರಮಾಣಪತ್ರವನ್ನು ನೀಡಬೇಕಾಗುತ್ತದೆ.
4. ಬಿಬಿ ಮನೆಯಲ್ಲಿ ದೈಹಿಕ ಹಿಂಸೆ ಮಾಡುವಂತಿಲ್ಲ. ಹೊಡೆದಾಡುವ ಹಂತಕ್ಕೆ ಹೋಗುವುದು ನಿಯಮ ಉಲ್ಲಂಘನೆಯಾಗುತ್ತದೆ. ಸ್ಪರ್ಧಿಗಳು ಯಾವುದೇ ಜಗಳದ ಮೇಲೆ ಚುಚ್ಚಬಹುದಾದಂತಹ (ಚಾಕು, ಚೂರಿ) ವಸ್ತುಗಳನ್ನು ಬಳಸುವುದನ್ನು ಸಹ ನಿಷೇಧಿಸಲಾಗಿದೆ.
5. ಒಪ್ಪಂದದ ಅವಧಿ: ಬಿಗ್ ಬಾಸ್ ನಡೆಯುವುದು 100 ದಿನಗಳು ಅಥವಾ ಸ್ಪರ್ಧಿಗಳು ಮನೆಯೊಳಗೆ ಇರುವ ಅಷ್ಟು ಸಮಯ ಅವರು ಬಿಗ್ ಬಾಸ್ ಸ್ಪರ್ಧಿಗಳು. ಸ್ಪರ್ಧಿಗಳು ಪ್ರೋಮೋ ಶೂಟ್‌ಗಳು, ಪ್ರಚಾರ ಮತ್ತು ಸಂದರ್ಶನಗಳಿಗೆ ಲಭ್ಯವಿರಬೇಕು ಎಂದು ಒಪ್ಪಂದವು ಉಲ್ಲೇಖಿಸುತ್ತದೆ.
ಒಪ್ಪಂದದ ಉಲ್ಲಂಘನೆ ಮಾಡಿದರೇ ಭಾರಿ ದಂಡ!
ಬಿಗ್ ಬಾಸ್ ಒಪ್ಪಂದದ ಉಲ್ಲಂಘನೆ ಮಾಡುವಂತಿಲ್ಲ. ಎಲಿಮಿನೇಟ್ ಆಗದ ಹೊರತು ಸ್ಪರ್ಧಿ ಮನೆಯಲ್ಲಿಯೇ ಇರಬೇಕಾಗುತ್ತದೆ ಎಂಬುದನ್ನೂ ಒಂದು ಷರತ್ತು ಉಲ್ಲೇಖಿಸುತ್ತದೆ. ಈ ನಿಯಮವನ್ನು ಉಲ್ಲಂಘಿಸಿದರೆ, ಸ್ಪರ್ಧಿ ಚಾನೆಲ್‌ಗೆ 2 ಕೋಟಿ ರೂಪಾಯಿಗಳ ಭಾರಿ ದಂಡವನ್ನು ಪಾವತಿಸಬೇಕಾಗುತ್ತದೆ. ಹೀಗಾಗಿಯೇ ವರ್ತೂರು ಸಂತೋಷ್ ಭವಿಷ್ಯ ಏನಾಗಲಿದೆ ಎಂಬುದು ಕಿಚ್ಚನ ಪಂಚಾಯಿತಿಯಲ್ಲಿ ತೀರ್ಮಾನವಾಗಲಿದೆ.