ಬಾಲ್ಯ ವಿವಾಹ ಮುಕ್ತ ಭಾರತ ಮಾಡಲು ಕರೆ
1 min readಬಾಲ್ಯ ವಿವಾಹ ಮುಕ್ತ ಭಾರತ ಮಾಡಲು ಕರೆ
ಬಾಲ್ಯ ವಿವಾಹದಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ
ಮಕ್ಕಳ ಸಹಾಯ ವಾಣಿಗೆ ಕರೆ ಮಾಡಿ ಮಾಹಿತಿ ನೀಡಲು ಮನವಿ
ಬಾಲ್ಯ ವಿವಾಹ ಮುಕ್ತ ಭಾರತ ಮಾಡಲು ಎಲ್ಲರೂ ಶ್ರಮಿಸಬೇಕೆಂದು ಚಿಂತಾಮಣಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಪಿ.ಎಂ. ಪ್ರಕಾಶ್ ಕರೆ ನೀಡಿದರು. ಚಿಂತಾಮಣಿ ನಗರದ ಬಾಗೇಪಲ್ಲಿ ವೃತ್ತದಲ್ಲಿರುವ ಎಸ್‌ಆರ್‌ಇಟಿ ಶಾಲೆಯಲ್ಲಿ ಇಂದು ನಡೆದ ಬಾಲ್ಯ ವಿವಾಹ ಮುಕ್ತ ಭಾರತ ಪ್ರಚಾರದ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಚಿಂತಾಮಣಿ ನಗರದ ಬಾಗೇಪಲ್ಲಿ ವೃತ್ತದಲ್ಲಿರುವ ಎಸ್‌ಆರ್‌ಇಟಿ ಶಾಲೆಯಲ್ಲಿ ಇಂದು ನಡೆದ ಬಾಲ್ಯ ವಿವಾಹ ಮುಕ್ತ ಭಾರತ ಪ್ರಚಾರದ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿದ ಚಿಂತಾಮಣಿ ಜೆ ಎಂ ಎ ಸಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಪಿ.ಎಂ. ಪ್ರಕಾಶ್ ಅವರು ಮಾತನಾಡಿ, ವಿಶ್ವದಲ್ಲಿ ಬಾಲ್ಯ ವಿವಾಹ ಮಾಡುವುದರಲ್ಲಿ ಬಿಹಾರ್, ಜಾರ್ಖಂಡ್. ರಾಜಸ್ಥಾನ್ ಮೊದಲ ಸ್ಥಾನದಲ್ಲಿವೆ ಎಂದರು.
ಬಡತನ. ಒಳ್ಳೆಯ ವರ. ಮೂಢನಂಬಿಕೆ. ಶಿಕ್ಷಣದ ಕೊರತೆಯಿಂದ ಬಾಲ್ಯ ವಿವಾಹ ಮಾಡಿ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರಿ ತೊಂದರೆ ಆಗುತ್ತಿದೆ. ಇದರಿಂದ ಅನಿಷ್ಠ ಪದ್ದತಿ. ದೇಶ ಆರ್ಥಿಕವಾಗಿ ಹಿಂದುಳಿಯುತ್ತಿದೆ ಮಕ್ಕಳು ಶಿಕ್ಷಣ ಜೀವಿಸುವ ಹಕ್ಕಿನಿಂದ ವಂಚಿತರಾಗುತ್ತಿದ್ದಾರೆ. ಬಾಲ್ಯ ವಿವಾಹ ಮಾಡುತ್ತಿರುವುದು ಗಮನಕ್ಕೆ ಬಂದರೆ ಹತ್ತಿರದ ಪೊಲೀಸ್ ಠಾಣೆ. ಶಿಕ್ಷಕರಿಗೆ. ಸಿಡಿಪಿಒ ಅಧಿಕಾರಿಗಳಿಗೆ ದೂರು ನೀಡುವಂತೆ ಕೋರಿದರು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಡಿ. ಕಣ್ಣಪ್ಪ ಮಾತನಾಡಿ, ಬಾಲ್ಯ ವಿವಾಹ ನಡೆದರೆ ಮಕ್ಕಳ ಸಹಾಯವಾಣಿಗೆ ದೂರು ನೀಡಿ, ಮಾಹಿತಿ ಗೌಪ್ಯವಾಗಿ ಇರಿಸಿ ಕ್ರಮ ಜರಗಿಸಲಾಗುತ್ತದೆ. ಪ್ರತಿ ಮೂರು ತಿಂಗಳಗೊಮ್ಮೆ ಜಿಲ್ಲಾಧಿಕಾರಿಗಳು ಬಾಲ್ಯ ವಿವಾಹ ಅವರಿಗೆ ಹೇಗೆ ಪುನರ್ವಸತಿ ನೀಡುತ್ತಿರುವ ಮಾಹಿತಿ ಪಡೆಯುತ್ತಾರೆ. ಈ ಹಿಂದೆ ಚಿಕ್ಕಬಳ್ಳಾಪುರ ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿದ್ದ ಅನಿರುದ್ಧ್ ಶ್ರವಣ್ ಅವಧಿಯಲ್ಲಿ ಶಿಡ್ಲಘಟ್ಟ ತಾಲೂಕಿನಲ್ಲಿ ನಡೆದ ಬಾಲ್ಯ ವಿವಾಹ ತಡೆದು ಪುರ್ನ ವಸತಿ ಕೇಂದ್ರದಲ್ಲಿ ಇರಿಸಿದ್ದ ಹೆಣ್ಣು ಮಗುವನ್ನು ವಿಚಾರಣೆ ಮಾಡಿ ಮುಂದೆ ಏನಾಗಬೇಕೆಂದು ಬಯಸಿದ್ದೀಯಾ ಕೇಳಿದಾಗ ಉನ್ನತ ವ್ಯಾಸಂಗ ಮಾಡಬೇಕೆಂದು ಹೇಳಿದಾಗ ಆ ಮಗುವಿಗೆ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಟ್ಟು ಈಗ ಪ್ರಸ್ತುತ ಆ ಮಗು ಎಂಎಸ್‌ಸಿ ಪದವಿ ಪಡೆದು ಅತ್ಯುನ್ನತ ಎಂಜಿನಿಯರ್‌ಆಗಿ 1.30 ಲಕ್ಷ ಸಂಬಳ ಪಡಿದು ಸರ್ಕಾರಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಆಗಿನ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಸೇವೆ ನೆನಪಿಸಿಕೊಂಡರು.
ರಾಘವೇ0ದ್ರ ಎಜುಕೇಶನ್ ಟ್ರಸ್ಟಿನ ಪ್ರಾಂಶುಪಾಲ ಚೌಡರೆಡ್ಡಿ. ವಕೀಲರ ಸಂಘದ ಅಧ್ಯಕ್ಷ ಬಿ. ಶ್ರೀನಿವಾಸ್. ಉಪಾಧ್ಯಕ್ಷ ಜಿ. ಶಿವಾನಂದ. ಖಜಾಂಚಿ ಎಂ.ಎಸ್. ಚೌಡಪ್ಪ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಅಧಿಕಾರಿಗಳಾದ ನಿರ್ಮಲ. ರಾಧಮ್ಮ. ವಕೀಲರಾದ ಶ್ರೀನಾಥ್. ಕೆ.ಎನ್. ಮಂಜುನಾಥ್, ಹಿರಿಯವಕೀಲ ಆರ್. ಚಂದ್ರಶೇಖರ್. ರಾಯಪಲ್ಲಿ ಮಂಜುನಾಥ್ ಇದ್ದರು