ಸಿ ಟಿ.ವಿ. ನ್ಯೂಸ್ ಗೆ ಸಿಕ್ಕಿದ ಫಲಶ್ರುತಿ
1 min readವಿಜಯಪುರ ಪಟ್ಟಣದ ೧ ಮತ್ತು ೯ನೇ ವಾರ್ಡಿನ ಜನತೆ ಕುಡಿಯುವ ನೀರಿಗಾಗಿ ನೆನ್ನೆ ತಾನೆ ಪುರಸಭೆ ಮುಂದೆ ನೀರು ಕೊಡಿ ಸ್ವಾಮಿ, ನೀರು ಕೊಡಿ ಎಂದು ಪ್ರತಿಭಟನೆ ಮಾಡಿರುವ ಸುದ್ದಿ ನಿಮ್ಮ ಸಿಟಿವಿ ನ್ಯೂಸ್ ನಲ್ಲಿ ಪ್ರಸಾರಮಾಡಲಾಗಿತ್ತು, ಇ ಸುದ್ದಿಗೆ ಎಚ್ಚೆತ್ತುಕೊಂಡ ಮುಖ್ಯ ಅಧಿಕಾರಿ ಸಂತೋಷ್ ವಾರಕ್ಕೆ ಎರಡು ಟ್ಯಾಂಕರ್ ನೀರು, ವಿದ್ಯುತ್ ದೀಪ ರಿಪೇರಿ, ಸ್ವಚ್ಛತಾ ಆದ್ಯತೆ ನೀಡುವುದಾಗಿ ಜನತೆಗೆ ಭರವಸೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿ, ನಿನ್ನೆ ಪಟ್ಟಣದ ಜನತೆ ಸಮಸ್ಯೆ ಇದೆ ಎಮದು ಮನವಿ ನೀಡಿದ್ದು, ಆ ಸುದ್ದಿ ಸಿ ಟಿವಿಯಲ್ಲಿ ಪ್ರಸಾರವಾಗಿದ್ದು, ಇಂದು ಆ ಸ್ಥಳ ಪರಿಶೀಲನೆ ಮಾಡಿ ಜನತೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುತ್ತೇವೆ, ಅದು ನಮ್ಮ ಕರ್ತವ್ಯವಾಗಿದೆ. ಅದರಂತೆ ಮೂಲಭೂತ ಸೌಕರ್ಯಗಳಾದ ನೀರು ಸ್ವಚ್ಛತೆ ಬೀದಿ ದೀಪ ಇವುಗಳ ವ್ಯವಸ್ಥೆಯನ್ನು ಇಂದೆ ರೀಪೇರಿ ಮಾಡಲಾಗುತ್ತದೆ ಎಂದು ಹೇಳಿದರು.
ಈ ವೇಳೆ ಪುರಸಭೆಯ ಇಂಜಿನಿಯರ್ ವೆಂಕಟೇಶ್ ಹಾಗೂ ವಾಟರ್ ಮ್ಯಾನ್ ಗಳು ನಾಗರಿಕರು ಹಾಜರಿದ್ದರು.