2030ಕ್ಕೆ ಜಪಾನ್, ಜರ್ಮನಿ ಹಿಂದಿಕ್ಕಿ ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಭಾರತ
1 min read2030ಕ್ಕೆ ಜಪಾನ್ ಮತ್ತು ಜರ್ಮನಿ ಆರ್ಥಿಕತೆಗಳನ್ನು ಹಿಂದಿಕ್ಕಲಿರುವ ಭಾರತ ಏಷ್ಯಾದ 2ನೇ ಅತಿದೊಡ್ಡ ಆರ್ಥಿಕತೆ ಆಗಲಿದೆ. ಇದೇ ವೇಳೆ ಅಮೆರಿಕವನ್ನು ಹಿಂದಿಕ್ಕಿ ಚೀನಾ ವಿಶ್ವದಲ್ಲೇ ಮೊದಲ ಸ್ಥಾನಕ್ಕೆ ಜಿಗಿಯಲಿದ್ದರೆ, ಭಾರತದ ಮೂರನೇ ಸ್ಥಾನಕ್ಕೆ ಏರಲಿದೆ. ಜಾಗತಿಕ ರೇಟಿಂಗ್ ಏಜೆನ್ಸಿಯಾದ ‘ಎಸ್ ಆ್ಯಂಡ್ ಪಿ ಗ್ಲೋಬಲ್’ ತನ್ನ ಇತ್ತೀಚಿನ ವರದಿಯಲ್ಲಿ ಈ ವಿಷಯಗಳನ್ನು ತಿಳಿಸಿದೆ.
ಈಗಾಗಲೇ ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆ ಎಂಬ ಹಿರಿಮೆಗೆ ಪಾತ್ರವಾಗಿರುವ ಭಾರತ 2030ರ ವೇಳೆಗೆ ಜಪಾನ್‌ನ್ನು ಹಿಂದಿಕ್ಕಿ ಏಷ್ಯಾದ 2ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ. ಇದೇ ವೇಳೆ ವಿಶ್ವದಲ್ಲಿ ಮೂರನೇ ಸ್ಥಾನಕ್ಕೇರಲಿದೆ. ಇದಾಗುವ ಹೊತ್ತಿಗೆ ಚೀನಾ ದೇಶವು ಅಮೆರಿಕವನ್ನು ಹಿಂದಿಕ್ಕಿ ವಿಶ್ವದ ಅತಿದೊಡ್ಡ ಆರ್ಥಿಕತೆ ಎನಿಸಲಿದೆ ಎಂದು ಜಾಗತಿಕ ರೇಟಿಂಗ್ ಏಜೆನ್ಸಿಯಾದ ‘ಎಸ್ ಆ್ಯಂಡ್ ಪಿ ಗ್ಲೋಬಲ್’ ತನ್ನ ಇತ್ತೀಚಿನ ವರದಿಯಲ್ಲಿ ಹೇಳಿದೆ.
2021 ಮತ್ತು 2022ರಲ್ಲಿ ಉತ್ತಮ ಆರ್ಥಿಕ ಪ್ರಗತಿ ದಾಖಲಿಸಿರುವ ಭಾರತ 2023ನೇ ಹಣಕಾಸು ವರ್ಷದಲ್ಲೂ ತನ್ನ ಬೆಳವಣಿಗೆಯನ್ನು ಮುಂದುವರಿಸಲಿದೆ. 2024ರ ಮಾರ್ಚ್‌ಗೆ ಕೊನೆಗೊಳ್ಳಲಿರುವ ಹಣಕಾಸು ವರ್ಷದಲ್ಲಿ ಭಾರತ ಶೇ. 6.2 ರಿಂದ 6.3ರಷ್ಟು ಜಿಡಿಪಿ ಬೆಳವಣಿಗೆ ಸಾಧಿಸುವ ನಿರೀಕ್ಷೆ ಇದೆ. ಈ ಮೂಲಕ ಅತಿವೇಗದ ಬೆಳವಣಿಗೆ ಸಾಧಿಸಿದ ಆರ್ಥಿಕತೆ ಎಂಬ ಹಿರಿಮೆಗೆ ಪಾತ್ರವಾಗಲಿದೆ.
2022ರಲ್ಲಿ 287 ಲಕ್ಷ ಕೋಟಿ ರೂ. (3.5 ಟ್ರಿಲಿಯನ್ ಡಾಲರ್) ಜಿಡಿಪಿ ಹೊಂದಿದ್ದ ಭಾರತ 2030ರ ವೇಳೆಗೆ 600 ಲಕ್ಷ ಕೋಟಿ ರೂ. (7.3 ಟ್ರಿಲಿಯನ್ ಡಾಲರ್) ಅನ್ನು ತಲುಪಲಿದೆ. ಈ ಮೂಲಕ ಜಪಾನ್ ಆರ್ಥಿಕತೆಯನ್ನು ಭಾರತವು ಹಿಂದಿಕ್ಕಿ ಏಷ್ಯಾದ 2ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ ಎಂದು ವರದಿಯು ಅಂದಾಜಿಸಿದೆ.