ಸಾದಲಿಯ ಶ್ರೀ ಸಾದಲಮ್ಮ ದೇವಿಯ ಬ್ರಹ್ಮರಥೋತ್ಸವ.
1 min readಶಿಡ್ಲಘಟ್ಟ ತಾಲ್ಲೂಕಿನ ಸಾದಲಿ ಗ್ರಾಮದಲ್ಲಿನ ಹೆಸರಾದ ತಾಯಿ ಸಾದಲಮ್ಮ, ಈಕೆಯು ನಂಬಿಕೆಯ ಭಕ್ತರಿಗೆ ಆರಾಧ್ಯ ದೇವಿಯಾಗಿದ್ದಾಳೆ, ಈ ಭಾಗದ ಸುತ್ತಮುತ್ತಲ ಭಕ್ತರು ಇಲ್ಲಿಗೆ ನಿರಂತರವಾಗಿ ಆಗಮಿಸಿ ತಮ್ಮ ಕೋರಿಕೆಗಳನ್ನು ಈ ದೇವಿಯ ಮುಂದೆ ಸಮರ್ಪಿಸಿಕೊಂಡು ತಮ್ಮ ಹರಕೆಗಳನ್ನು ತೀರಿಸಿಕೊಳ್ಳುತ್ತಾರೆ. ಅದರಂತೆ ಈ ದೇವಿಯ ಬ್ರಹ್ಮೋತ್ಸವ ವಿಜೃಂಭಣೆಯಿAದ ನಡೆಯುತ್ತದೆ. ಇನ್ನು ಈ ಬ್ರಹ್ಮರಥೋತ್ಸವದ ಅಂಗವಾಗಿ ಹೂವುಗಳಿಂದ ಅಲಂಕರಿಸಿದ್ದ ರಥದಲ್ಲಿ ದೇವರನ್ನು ಕೂಡಿಸಿ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ವಿವಿಧ ಕಲಾ ತಂಡಗಳು ಮತ್ತು ವಿವಿಧ ಅಂಗಡಿಗಳ ಸಾಲುಸಾಲು ಎಲ್ಲರ ಆಕರ್ಷಣೆಯಾಗಿತ್ತು. ವಿಶೇಷ ಹೂವಿನ ಅಲಂಕಾರ ಮಾಡಿದ್ದ ಬ್ರಹ್ಮರಥೋತ್ಸವದ ತೇರನ್ನು ದೇವಸ್ಥಾನದ ಸುತ್ತಲೂ ಎಳೆದ ಭಕ್ತರು ಬಾಳೆಹಣ್ಣು, ದವನವನ್ನು ತೇರಿನ ಕಳಶಕ್ಕೆ ಎಸೆದು ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಭಗವಂತನನ್ನು ಕೋರಿಕೊಂಡರು.
ರಥೋತ್ಸವಕ್ಕೆ ಗ್ರೇಡ್ ೨ ತಹಶೀಲ್ದಾರ್ ಶ್ರೀನಿವಾಸಲುನಾಯ್ಡು ಚಾಲನೆ ನೀಡಿದರು.
ಸುತ್ತಮುತ್ತಲಿನ ಗ್ರಾಮಗಳು ಹಾಗೂ ತಾಲ್ಲೂಕಿನ ವಿವಿಧ ಭಾಗಗಳಿಂದ ನೂರಾರು ಭಕ್ತರು ಆಗಮಿಸಿ ದೇವರ ಪೂಜೆಯಲ್ಲಿ ಪಾಲ್ಗೊಂಡರು. ಬ್ರಹ್ಮರಥೋತ್ಸವದಲ್ಲಿ ಪಾಲ್ಗೊಂಡ ಕಾಂಗ್ರೆಸ್ ಮುಖಂಡ ರಾಜೀವ್‌ಗೌಡ ಮಾತನಾಡಿ ಗ್ರಾಮಸ್ಥರ ಮತ್ತು ದೇವಾಲಯ ಸಮಿತಿಯ ಸದಸ್ಯರ ಸಹಕಾರ ಪಡೆದು ದೇವಸ್ಥಾನವನ್ನು ಮತ್ತಷ್ಟು ಅಭಿವೃದ್ಧಿಗೊಳಿಸಲು ಎಲ್ಲಾ ರೀತಿಯ ಸಹಕಾರ ಮತ್ತು ನೆರವು ನೀಡುವುದಾಗಿ ಭರವಸೆ ನೀಡಿದರು. ನಾಡಿನಾಧ್ಯಂತ ಖ್ಯಾತಿ ಹೊಂದಿರುವ ಶ್ರೀ ಸಾದಲಮ್ಮ ದೇವಿಯ ಆಶೀರ್ವಾದ ಕ್ಷೇತ್ರದ ಜನರ ಮೇಲಿರಲಿ ಎಂದು ಆಶಿಸಿದರು.
ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಶಶಿಕಲಾ ಸುರೇಶ್, ಗ್ರಾಮದ ಮುಖಂಡರು, ಪ್ರಧಾನ ಅರ್ಚಕ ದೇವರಾಜ್ ಸೇರಿದಂತೆ ಮತ್ತಿತರರು ರಥೋತ್ಸವದಲ್ಲಿ ಭಾಗವಹಿಸಿದರು.