ಕೆವಿ ಕ್ಯಾಂಪಸ್‌ನಲ್ಲಿ ದಾಖಲೆ ಮಟ್ಟದಲ್ಲಿ ರಕ್ತ ಸಂಗ್ರಹ
1 min readಕೆವಿ ಕ್ಯಾಂಪಸ್‌ನಲ್ಲಿ ದಾಖಲೆ ಮಟ್ಟದಲ್ಲಿ ರಕ್ತ ಸಂಗ್ರಹ
ಪ್ರತಿ ವರ್ಷ ಹೆಚ್ಚುತ್ತಲೇ ಇರುವ ರಕ್ತದಾನಿಗಳ ಸಂಖ್ಯೆ
ಸಿವಿವಿ ದತ್ತಿ ದಿನಾಚರಣೆ ಅಂಗವಾಗಿ ರಕ್ತದಾನ ಶಿಬಿರ
ಹಳೆಯ ದಾಖಲೆ ಮುರಿಯುವತ್ತ ಈ ಬಾರಿ ರಕ್ತ ಸಂಗ್ರಹ
ಚಿಕ್ಕಬಳ್ಳಾಪುರದ ತಜ್ಞ ಸಿ.ವಿ. ವೆಂಕಟರಾಯಪ್ಪ ಅವರ ಜಯಂತಿ ಹಾಗೂ ಕೆವಿ ಸಂಸ್ಥೆಗಳ ದತ್ತಿ ದಿನಾಚರಣೆ ಅಂಗವಾಗಿ ಪ್ರತಿ ವರ್ಷ ಆಯೋಜಿಸುವ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಈ ಬಾರಿ ದಾಖಲೆಯಾಗಿದೆ. ಈ ಹಿಂದೆ ಇದೇ ಸಂಸ್ಥೆಯಿoದ ಇದ್ದ ರಕ್ತ ಸಂಗ್ರಹ ದಾಖಲೆ ಮುರಿದು ಈ ಬಾರಿ ಹೊಸ ದಾಖಲೆ ಸ್ಥಾಪಿಸಲಾಗಿದೆ. ಸುಮಾರು 2 ಸಾವಿರಕ್ಕೂ ಹೆಚ್ಚು ಯೂನನಿಟ್ ರಕ್ತ ಸಂಗ್ರಹ ಮಾಡುವ ಮೂಲಕ ರಾಜ್ಯದಲ್ಲಿಯೇ ಅತಿ ಹೆಚ್ಚು ರಕ್ತ ಸಂಗ್ರಹ ಮಾಡಿದ ಸಂಸ್ಥೆಯ ಸಾಲಿನಲ್ಲಿ ಈ ಬಾರಿ ಕೆವಿ ಸಂಸ್ಥೆಗಳು ಮೊದಲ ಸಾಲಿನಲ್ಲಿ ನಿಂತಿವೆ.
ಹೌದು, ಕೆವಿ ಸಂಸ್ಥೆಗಳೆoದರೆ ಸೇವೆ, ಕೆವಿ ಸಂಸ್ಥೆಗಳೆoದರೆ, ಕೆವಿ ಸಂಸ್ಥೆಗಳೆoದರೆ ದಾನ. ವಿದ್ಯಾದಾನ, ಆರೋಗ್ಯ ದಾನ, ಹಣ ದಾನ ಮಾತ್ರವಲ್ಲದೆ ರಕ್ತದಾನದಲ್ಲಿಯೂ ಕೆವಿ ಸಂಸ್ಥೆಗಳು ಮೊದಲು ಎಂಬುದು ಮತ್ತೆ ಸಾಬೀತಾಗಿದೆ. 1,754 ಯೂನಿಟ್ ರಕ್ತ ಸಂಗ್ರಹಣೆ ಮಾಡುವ ಮೂಲಕ ರಾಜ್ಯದಲ್ಲಿಯೇ ಅತಿ ಹೆಚ್ಚು ರಕ್ತ ಸಂಗ್ರಹ ಮಾಡಿದ ಸಂಸ್ಥೆಯಾಗಿ ಈಗಾಗಲೇ ದಾಖಲೆ ಮಾಡಿದ್ದ ಕೆವಿ ಸಂಸ್ಥೆಗಳು ಇದೀಗ ೨ ಸಾವಿರಕ್ಕೂ ಹೆಚ್ಚು ರಕ್ತ ಸಂಗ್ರಹ ಮಾಡುವ ಮೂಲಕ ತಮ್ಮ ದಾಖಲೆಯನ್ನು ತಾವೇ ಮುರಿದು, ಹೊಸ ದಾಖಲೆ ಬರೆಯುವಲ್ಲಿ ಯಶಸ್ವಿಯಾಗಿದೆ.
ಸಿ.ವಿ. ವೆಂಕಟರಾಯಪ್ಪನವರ ಜಯಂತಿ ಹಾಗೂ ಕೆವಿ ಸಂಸ್ಥೆಗಳ ದತ್ತಿ ದಿನಾಚರಣೆ ಅಂಗವಾಗಿ ಚಿಕ್ಕಬಳ್ಳಾಪುರ ಹೊರವಲಯದಲ್ಲಿರುವ ಕೆವಿ ಕ್ಯಾಂಪಸ್‌ನಲ್ಲಿ ಕಳೆದ 20 ದಿನಗಳಿಂದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕ್ರೀಡಾಕೂಟಗಳು, ವಿವಿಧ ಸ್ಪಧೆಗಳು ಸೇರಿದಂತೆ ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನೂ ನಡೆಸಲಾಗುತ್ತಿದೆ. ಅದರ ಅಂಗವಾಗಿ ಪ್ರತಿ ವರ್ಷ ಕೆವಿ ಕ್ಯಾಂಪಸ್‌ನಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗುತ್ತದೆ.
ಇಂದು ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಸುಮಾರು 2 ಸಾವಿರಕ್ಕೂ ಹೆಚ್ಚು ಯೂನಿಟ್ ರಕ್ತ ಸಂಗ್ರಹ ಮಾಡುವ ಮೂಲಕ ಹೊಸ ದಾಖಲೆ ಬರೆಯಲಾಗಿದೆ. ಕೆವಿ ಕ್ಯಾಂಪಸ್ ಸೇವೆಗೆ ಖ್ಯಾತಿ ಪಡೆದಿದ್ದು, ನವೀನ್ ಕಿರಣ್ ಅವರ ಅಭಿಮಾನಿಗಳು ಮತ್ತು ಅವರ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ ಹಳೆಯ ವಿದ್ಯಾರ್ಥಿಗಳ ಬಳಗವೇ ಇದೆ. ಪ್ರತಿ ವರ್ಷ ಈ ಸಂಸ್ಥೆಯಲ್ಲಿ ನಡೆಯುವ ರಕ್ತದಾನ ಶಿಬಿರಕ್ಕೆ ನವೀನ್ ಕಿರಣ್ ಅಭಿಮಾನಿಗಳು ಸಾಗರೋಪಾದಿಯಲ್ಲಿ ಆಗಮಿಸಿ ರಕ್ತದಾನ ಮಾಡುವುದು ಸಾಮಾನ್ಯ ಎಂಬoತಿದೆ.
ಹಾಗಾಗಿಯೇ ಪ್ರತಿ ವರ್ಷ ದಾಖಲೆ ಪ್ರಮಾಣದ ರಕ್ತ ಸಂಗ್ರಹ ಆಗುತ್ತಿದೆ. ಮುಂದಿನ ವರ್ಷ ಮೆಗಾ ರಕ್ತದಾನ ಶಿಬಿರ ಆಯೋಜಿಸಲು ಕೆವಿ ಸಂಸ್ಥೆಗಳ ಕೆ.ವಿ. ನವೀನ್ ಕಿರಣ್ ಯೋಚಿಸಿದ್ದು, ಈವರೆಗೆ 3.034 ಯೂನಿಟ್ ರಕ್ತ ಸಂಗ್ರಹ ಮಾಡುವ ಮೂಲಕ ಗಿನ್ನಿಸ್ ಬುಕ್ ಆಫ್ ವರ್ಲ್್ಡ ರೆಕಾರ್ಡ್ನಲ್ಲಿ ಸ್ಥಾನ ಪಡೆದಿದೆ. ಮುಂದಿನ ಸಾಲಿನ ದತ್ತಿ ಜಯಂತಿ ವೇಳೆಗೆ ಅದಕ್ಕಿಂತ ಹೆಚ್ಚು ರಕ್ತ ಸಂಗ್ರಹ ಮಾಡುವ ಮೂಲಕ ಗಿನ್ನೀಸ್ ಬುಕ್ ಆಫ್ ವರ್ಲ್್ಡ ರೆಕಾರ್ಡ್ನಲ್ಲಿ ಮೊದಲ ಸ್ಥಾನ ಪಡೆಯುವ ಗುರಿ ಹೊಂದಿರುವುದಾಗಿ ನವೀನ್ ಕಿರಣ್ ತಿಳಿಸಿದ್ದಾರೆ.
ಸೇವೆಯಲ್ಲಿ ದಾಖಲೆ ಮಾಡುವ ಕನಸು ಹೊತ್ತಿರುವ ಕೆ.ವಿ. ನವೀನ್ ಕಿರಣ್ ಅವರ ಕನಸು ನನಸಾಗಲೀ ಮತ್ತು ಅವರ ಸೇವೆ ಮತ್ತಷ್ಟು ವಿಸ್ತರಣೆಯಾಗಲಿ. ಅಲ್ಲದೆ ಈಗಾಗಲೇ ಸಾಮಾಜಿಕ ಸೇವೆಯಲ್ಲಿ ತೊಡಗಿರುವ ಕೆವಿ ಸoಸ್ಥೆಗಳ ಸೇವೆ ಮತ್ತಷ್ಟು ವಿಸ್ತಾರವಾಗಲೀ ಎಂದು ಹಾರೈಸೋಣ ಅಲ್ಲವೇ.